ಚಲೇ ಜಾವ್‌ನಿಂದ ಹುತಾತ್ಮದವರೆಗೆ: ಕೊಗನೂರಿನ ಸ್ವಾತಂತ್ರ್ಯ ಹೋರಾಟದ ರೋಚಕ ಇತಿಹಾಸ

Date:

ಮೈಲಾರಪ್ಪನವರ ನೇತೃತ್ವದಲ್ಲಿ ನಡೆದ ಚಳವಳಿ ಇಡೀ ದೇಶದ ಜನರನ್ನು ಬಡಿದೆಬ್ಬಿಸಿತ್ತು. ಅವರ ದೇಶಭಕ್ತಿ, ರಾಷ್ಟ್ರಾಭಿಮಾನ, ತ್ಯಾಗ, ಬಲಿದಾನಗಳು ಮತ್ತು ಆದರ್ಶಗಳು ನಮ್ಮೆಲ್ಲರಿಗೂ ಅನುಕರಣೀಯ. ತಮ್ಮ ಅಮೋಘ ಹೋರಾಟದ ಮೂಲಕ ಶಿರಹಟ್ಟಿ ತಾಲೂಕು ಭಾರತ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸದಲ್ಲಿ ಕೊಗನೂರಿನ ಈ ಅಪರೂಪದ ಹೋರಾಟಗಾರರನ್ನು ಇತಿಹಾಸ ಪುಟಗಳಲ್ಲಿ ದಾಖಲಿಸಬೇಕಿದೆ.

ದೇಶವನ್ನು ಬ್ರಿಟಿಷರ ಆಡಳಿತದಿಂದ ಮುಕ್ತಗೊಳಿಸಲು ಹಲವೆಡೆ ನಡೆದ ಸ್ವಾತಂತ್ರ್ಯ ಸಂಗ್ರಾಮದಂತೆ ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಕೊಗನೂರಿನ ಸ್ವಾತಂತ್ರ್ಯ ಹೋರಾಟವೂ ರೋಚಕವಾಗಿದ್ದು, ಸ್ಥಳೀಯರ ಸ್ವಾಭಿಮಾನದಿಂದಾಗಿ ಈ ಕೊಗನೂರು ಸ್ವಾತಂತ್ರ್ಯ ಯೋಧರ ಗ್ರಾಮವೆಂದೇ ಪ್ರಸಿದ್ಧಿ ಪಡೆದಿದೆ.

- Advertisement -

ಮೈಲಾರ ಮಹದೇವಪ್ಪ‌ಅವರು ಸ್ವಾತಂತ್ರ್ಯ ಚಳವಳಿಯನ್ನು ಕಟ್ಟಲು ಹಳ್ಳಿ ಹಳ್ಳಿಗಳಿಗೆ ಹೋಗುತ್ತಿದ್ದರು. ಶಿರಹಟ್ಟಿ ತಾಲೂಕಿನ ಕೊಗನೂರು ಗ್ರಾಮಕ್ಕೆ ಭೇಟಿ ನೀಡುತ್ತಿದ್ದ ಅವರು, ಸ್ವಾತಂತ್ರ್ಯದ ಕುರಿತು ಭಾಷಣ ಮಾಡುತ್ತಿದ್ದರು. ಅವರ ಭಾಷಣದಿಂದ ಪ್ರೇರಣೆಗೊಂಡ ಕೊಗನೂರು ಗ್ರಾಮದ 19 ಮಂದಿ ಮೈಲಾರ ಮಹದೇವಪ್ಪ ಅವರೊಟ್ಟಿಗೆ ಕೈಜೋಡಿಸಿ ಸ್ವಾತಂತ್ರ್ಯ ಹೋರಾಟದಲ್ಲಿ ಧುಮುಕಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

SIR | ‘ಫಾರ್ಮ್ 7’ ದುರ್ಬಳಕೆ – ಅಕ್ರಮ:...

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾಗರಿಕನಿಗೆ ಇರುವ ಅತ್ಯಂತ ಮೂಲಭೂತ ಮತ್ತು ಶಕ್ತಿಶಾಲಿ ಅಸ್ತ್ರ - ಮತದಾನದ ಹಕ್ಕು. ಆದರೆ, ಇತ್ತೀಚಿನ ದಿನಗಳಲ್ಲಿ ಚುನಾವಣಾ ಆಯೋಗದ ನಿರ್ಲಜ್ಜತನ ಮತ್ತು ನಿಯಮಗಳಲ್ಲಿನ ಲೋಪದೋಷಗಳನ್ನು ಬಳಸಿಕೊಂಡು, ಮತದಾರರ ಪಟ್ಟಿಯಿಂದ...

ಬೆಳ್ಳಿತೆರೆಯ ಮೇಲಿನ ಬಣ್ಣ: ಚಿತ್ರ ಚೌಕಟ್ಟಿನಲ್ಲಿ ರಂಗಿನಾಟ

ಸಿನೆಮಾ ಪರದೆಯ ಮೇಲಿನ ಬಣ್ಣವು ಸೌಂದರ್ಯಪ್ರಜ್ಞೆಯಷ್ಟೇ ಅಲ್ಲ, ತಾಂತ್ರಿಕ ಮಿತಿ ಮತ್ತು ರಾಜಕೀಯದ ಭಾಗವೂ ಹೌದು. ಆರಂಭದ ಕಪ್ಪು-ಬಿಳುಪಿನ ನೆರಳುಗಳಿಂದ ಇಂದಿನ ಅಲ್ಟ್ರಾ-ಸ್ಯಾಚುರೇಟೆಡ್ ಪರದೆಯವರೆಗೆ, ಸಿನೆಮಾದ ಸೌಂದರ್ಯ, ತಂತ್ರಜ್ಞಾನ ಮತ್ತು ಅಧಿಕಾರ ರಾಜಕಾರಣವನ್ನು...

‘ಪಿತೃಪ್ರಭುತ್ವವನ್ನು ಧ್ವಂಸ ಮಾಡಿ’: ಮನುವಾದ ಮತ್ತು ಫ್ಯಾಸಿಸಂ ವಿರುದ್ಧ...

ಸ್ವತಂತ್ರ ಭಾರತ 80 ವರ್ಷಗಳನ್ನು ಪೂರೈಸುತ್ತಿರುವಾಗ, ನಾವು ಕೇಳಬೇಕಾಗಿದೆ, ಆ ಮನಸ್ಥಿತಿ ಹೋಗಿದೆಯೇ? ಇಲ್ಲ. ಪುಸ್ತಕವನ್ನು ಸುಡಲಾಗಿರಬಹುದು, ಆದರೆ ಮನುಸ್ಮೃತಿಯ ಮನಸ್ಥಿತಿ, ಮನುವಾದ, ಹೆಚ್ಚು ಅತ್ಯಾಧುನಿಕ ಮತ್ತು ಅದೃಶ್ಯ ರೂಪಗಳಲ್ಲಿ ಅಸ್ತಿತ್ವದಲ್ಲಿದೆ.  ಪುಣೆಯಲ್ಲಿ ನಡೆದ...

1942ರಲ್ಲಿ ಗಾಂಧೀಜಿಯವರ ನೇತೃತ್ವದಲ್ಲಿ ನಡೆದ ‘ಚಲೇ ಜಾವ್‌ ಚಳವಳಿ’ ನಡೆಯಿತು. ಈ ಚಳುವಳಿಯಲ್ಲಿ ಮೈಲಾರ ಮಹಾದೇವಪ್ಪನವರ ನಾಯಕತ್ವದಲ್ಲಿ ಕೊಗನೂರಿನ 19 ಮಂದಿ ಭಾಗವಹಿಸಿ ದೇಶಪ್ರೇಮ ಮೆರೆದಿರುವುದು ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ.

1930ರಲ್ಲಿ ನಡೆದ ಉಪ್ಪಿನ ಸತ್ಯಾಗ್ರಹದಲ್ಲಿ ಕರ್ನಾಟಕದಿಂದ ಸ್ವಯಂ ಪ್ರೇರಿತರಾಗಿ ಭಾಗವಹಿಸಿದ ಏಕೈಕ ಪ್ರತಿನಿಧಿ ಮೈಲಾರ ಮಹಾದೇವಪ್ಪನವರು ಎಂಬುದು ಹೆಮ್ಮೆಯ ವಿಷಯ.

ಮೈಲಾರಪ್ಪ ಮಹದೇವ ಅವರ ನೇತೃತ್ವದಲ್ಲಿ ಕೊಗನೂರು ಗ್ರಾಮದ 18 ಮಂದಿ ಹೋರಾಟಗಾರರನ್ನು ಒಗ್ಗೂಡಿಸಿಕೊಂಡು ಬ್ರಿಟಿಷರ ನೆಲೆಗಳನ್ನು ನಾಶ ಮಾಡಿ, ಬ್ರಿಟಿಷರಿಗೆ ಸಂಬಂಧಿಸಿದ ಟಪಾಲುಗಳನ್ನು, ಸಂಗ್ರಹಿಸಿದ ಕಂದಾಯ ಹಣವನ್ನು ಬಸ್‌ ಮುಖಾಂತರ ಮಾಗಡಿ-ಮುಳಗುಂದ ಮಾರ್ಗದಲ್ಲಿ ಸಾಗಣೆ ಮಾಡುತ್ತಿದ್ದಾಗ ಲೂಟಿ ಮಾಡಿ ರೈತರಿಗೆ ಹಂಚುತ್ತಿದ್ದರು. ಗುಡಗೇರಿಯಲ್ಲಿ ಬಸ್ ತಡೆದು ಟಪಾಲು ಅಪಹರಣ ಮಾಡುತ್ತಿದ್ದರು.

ಕೊಗನೂರಿನ ಹದಿನೆಂಟು ಮಂದಿ ವೀರ ಯೋಧರೊಂದಿಗೆ ಕೊಗನೂರಿನ ಸುತ್ತಮುತ್ತಲಿನ ಗ್ರಾಮಗಳಲ್ಲಿ ಬ್ರಿಟಿಷರು ಕಂದಾಯ ವಸೂಲಿ ಮಾಡುತ್ತಿದ್ದ ವೇಳೆ ಅವರನ್ನು ತಡೆಯುವಂತಹ ಕೆಲಸ ಮಾಡುತ್ತಿದ್ದರು. ಬ್ರಿಟಿಷರಿಗೆ ಸಂಬಂಧಿಸಿದ ಗೋವಿನಕೊಪ್ಪ, ಹೊನ್ನತ್ತಿ, ಬಿಟ್ಟೂರಿನಲ್ಲಿದ್ದ ಚಾವಡಿಗಳನ್ನು ಹಾನಿ ಮಾಡುತ್ತಿದ್ದರು. ಮೈಲಾರ ಮಹಾದೇವಪ್ಪನವರ ಉಪಟಳಗಳನ್ನು ತಾಳಲಾರದೆ ಬ್ರಿಟಿಷರು ಹೈರಾಣಾಗಿದ್ದರು.

1943 ಏಪ್ರಿಲ್ 1ರಂದು ಹೊಸರತ್ತಿಯ ವೀರಭದ್ರೇಶ್ವರ ದೇವಸ್ಥಾನದಲ್ಲಿ ಬ್ರಿಟಿಷರ ಕಂದಾಯ ಹಣ ಅಪಹರಣ ಮಾಡಲು ಹೋದ ಸಂದರ್ಭಗಳಲ್ಲಿ ಮೈಲಾರ ಮಹದೇವಪ್ಪ, ಕೊಗನೂರಿನ ಮಡಿವಾಳ ತಿರುಕಪ್ಪ ಮತ್ತು ವೀರಯ್ಯ ಹಿರೇಮಠ ಅವರು ಬ್ರಿಟಿಷರ ಗುಂಡೇಟಿಗೆ ಬಲಿಯಾಗಿ, ಹುತಾತ್ಮರಾದರು.

‘1943ರ ಸಂಗ್ರಾಮದಲ್ಲಿ ಗೋಣೆಪ್ಪ ಕಮತ ಮತ್ತು ಯಲ್ಲಮ್ಮ ಕಮತ ಎಂಬ ದಂಪತಿ ಪಾಲ್ಗೊಂಡಿದ್ದರು. ಈ ವೇಳೆ ಬ್ರಿಟಿಷರು ಈ ಇಬ್ಬರನ್ನೂ ಜೈಲಿಗೆ ಅಟ್ಟಿದ್ದರು. ಯಲ್ಲಮ್ಮ ಕಮತರವರು ಜೈಲಿನಲ್ಲೇ ಮಗುವಿಗೆ ಜನ್ಮ ನೀಡಿರುವುದು ನಮ್ಮ ಗ್ರಾಮದ ವೀರಯೋಧರ ದೇಶ ಪ್ರೇಮಕ್ಕೆ ಸಾಕ್ಷಿ.

ಗುಡ್ಡಪ್ಪ ಕ. ಡಿಳ್ಳೆಪ್ಪನವರ, ನಿಂಗಪ್ಪ ಕೂರಗುಂದ, ವೀರಪ್ಪ ಅಂಗಡಿ, ನೀಲಪ್ಪ ಡಿಳ್ಳೆಪ್ಪನವರ, ವೀರಭದ್ರಗೌಡ ಪಾಟೀಲ, ನಿಸ್ಸೀಮ್ಮಪ್ಪ ಚನ್ನೂರು, ಫಕ್ಕಿರಪ್ಪ ರಡ್ಡರ, ಫಕ್ಕೀರಪ್ಪ ಕೂರಗುಂದ, ಭಗವಂತಪ್ಪ ಬೂದನೂರ, ಶಿವಯ್ಯ ಹಿರೇಮಠ, ವಾಸುರೆಡ್ಡಿ ರಡ್ಡರ, ರಾಮಣ್ಣ ಕೂರಗುಂದ, ಚನ್ನಪ್ಪ ಕೂರಗುಂದ ಹಾಗೂ ವಡವಿಯ ವೆಂಕಣ್ಣಚಾರ್ಯ ವಾಯಿ, ನಾಗರಮಡವಿನ ಮುದಕಪ್ಪ ಹಡಪದ, ಹೆಬ್ಬಾಳದ ಹಾಲಪ್ಪ ಉಡಚಣ್ಣವರ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿದ ವೀರ ಯೋಧರು’ ನಿವೃತ್ತ ಪ್ರಾಚಾರ್ಯರು ಹಾಲಪ್ಪ ಕೆಂಗುಡ್ಡಪ್ಪನವರ್ ಮಾಹಿತಿ ನೀಡಿದರು.

ಇದನ್ನೂ ಓದಿದ್ದೀರಾ? ಸ್ವಾತಂತ್ರ್ಯ ಹೋರಾಟದಲ್ಲಿ ಮುಸ್ಲಿಂ ಮಹಿಳೆಯರು; ಬಾಪೂವಿನ ಕರೆಗೆ ಓಗೊಟ್ಟ ದಿಟ್ಟೆಯರು!

ಮೈಲಾರಪ್ಪನವರ ನೇತೃತ್ವದಲ್ಲಿ ನಡೆದ ಚಳವಳಿ ಇಡೀ ದೇಶದ ಜನರನ್ನು ಬಡಿದೆಬ್ಬಿಸಿತ್ತು. ಅವರ ದೇಶಭಕ್ತಿ, ರಾಷ್ಟ್ರಾಭಿಮಾನ, ತ್ಯಾಗ, ಬಲಿದಾನಗಳು ಮತ್ತು ಆದರ್ಶಗಳು ನಮ್ಮೆಲ್ಲರಿಗೂ ಅನುಕರಣೀಯ. ತಮ್ಮ ಅಮೋಘ ಹೋರಾಟದ ಮೂಲಕ ಶಿರಹಟ್ಟಿ ತಾಲೂಕು ಭಾರತ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸದಲ್ಲಿ ಕೊಗನೂರಿನ ಈ ಅಪರೂಪದ ಹೋರಾಟಗಾರರನ್ನು ಇತಿಹಾಸ ಪುಟಗಳಲ್ಲಿ ದಾಖಲಿಸಬೇಕಿದೆ.

ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಂಡ ಕೊಗನೂರಿನ ಹದಿನೆಂಟು ವೀರ ಯೋಧರ ಹೆಸರಿನಲ್ಲಿ ಉದ್ಯಾನ ನಿರ್ಮಿಸಿ ಸ್ಮಾರಕಗಳನ್ನು ಪ್ರತಿಷ್ಠಾಪಿಸಲು ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು ಡಿ ಕೆ ಹೊನ್ನಪ್ಪನವರ, ಕೊಗನೂರ ಗ್ರಾಮದ ಮುಖಂಡರ ಒತ್ತಾಯವಾಗಿದೆ.

SHARANAPPA H SANGANALA
ಶರಣಪ್ಪ ಎಚ್ ಸಂಗನಾಳ
+ posts

ಗದಗ ಜಿಲ್ಲೆಯ ರೋಣ ತಾಲೂಕಿನ ಸವಡಿ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ. ಧ್ವನಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರದಲ್ಲಿ ಒಂದಷ್ಟು ಕಾಲ ಕೆಲಸ. ಸದ್ಯ 'ಈ ದಿನ.ಕಾಮ್'ನಲ್ಲಿ ಮೀಡಿಯಾ ಕೋಆರ್ಡಿನೇಟರ್. ಓದು, ಪಕ್ಷಿ ವೀಕ್ಷಣೆ, ಕೃಷಿಯಲ್ಲಿ ಆಸಕ್ತಿ.

ಪೋಸ್ಟ್ ಹಂಚಿಕೊಳ್ಳಿ:

ಶರಣಪ್ಪ ಎಚ್ ಸಂಗನಾಳ
ಶರಣಪ್ಪ ಎಚ್ ಸಂಗನಾಳ
ಗದಗ ಜಿಲ್ಲೆಯ ರೋಣ ತಾಲೂಕಿನ ಸವಡಿ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ. ಧ್ವನಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರದಲ್ಲಿ ಒಂದಷ್ಟು ಕಾಲ ಕೆಲಸ. ಸದ್ಯ 'ಈ ದಿನ.ಕಾಮ್'ನಲ್ಲಿ ಮೀಡಿಯಾ ಕೋಆರ್ಡಿನೇಟರ್. ಓದು, ಪಕ್ಷಿ ವೀಕ್ಷಣೆ, ಕೃಷಿಯಲ್ಲಿ ಆಸಕ್ತಿ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಭಟ್ಕಳ | ಸರ್ವಿಸ್ ರಸ್ತೆಯಲ್ಲಿ ನಿಲ್ಲಿಸಿದ್ದ ಮಿನಿ ಬಸ್ ಕಳವು

ಭಟ್ಕಳ: ರಾಷ್ಟ್ರೀಯ ಹೆದ್ದಾರಿ 66ರ ಪಕ್ಕದ ಸರ್ವಿಸ್ ರಸ್ತೆಯಲ್ಲಿ ನಿಲ್ಲಿಸಿದ್ದ ಮಿನಿ...

ಯಲ್ಲಾಪುರ | ಉಡ ಬೇಟೆ ಆರೋಪ: ತಂದೆ-ಮಗ ಬಂಧನ

ಅಕ್ರಮವಾಗಿ ವನ್ಯಪ್ರಾಣಿಗಳನ್ನು ಬೇಟೆಯಾಡಿ, ಅದರ ಮಾಂಸವನ್ನು ಮನೆಯಲ್ಲಿ ಇಟ್ಟುಕೊಂಡಿದ್ದ ಆರೋಪದ ಮೇಲೆ...

ಉಡುಪಿ | ಡಾ.ಮೆಹೆವಿಶ್ ಮುಶೀರ್ ಶೇಖ್‌ಗೆ ಪಿಎಚ್‌ಡಿ ಪದವಿ

ಡಾ. ಮಮತಾ ಬಾಲಚಂದ್ರ ಅವರ ಮಾರ್ಗದರ್ಶನದಲ್ಲಿ ಹಾಗೂ ಡಾ. ನರೇಂದ್ರ ವಿ.ಜಿ....