ಮೈಸೂರು | ಹೆಸರಿನ ಸಣ್ಣ ವ್ಯತ್ಯಾಸಕ್ಕೆ ನಿವೃತ್ತ ಜಿಲ್ಲಾಧಿಕಾರಿಗೆ SIR ನೋಟಿಸ್‌; ಜೈಲು ಶಿಕ್ಷೆಯ ಬೆದರಿಕೆ

Date:

ಸುಮಾರು 35 ವರ್ಷಗಳ ಕಾಲ ಸರ್ಕಾರಿ ಸೇವೆಯಲ್ಲಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಮುಖ್ಯ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದ ನಿವೃತ್ತ ಐಎಎಸ್ ಅಧಿಕಾರಿ ಎ.ಬಿ. ಇಬ್ರಾಹಿಂ ಅವರಿಗೆ ಎಸ್‌ಐಆರ್‌ ಪ್ರಕ್ರಿಯೆಯಡಿ ಚುನಾವಣಾ ಆಯೋಗ ನೋಟಿಸ್‌ ನೀಡಿದೆ. ಮತಪಟ್ಟಿಯಲ್ಲಿ ಅವರ ಹೆಸರಿನಲ್ಲಿ ಸಣ್ಣ ತಾರ್ಕಿಕ ವ್ಯತ್ಯಾಸ ಕಂಡುಬಂದಿರುವ ಹಿನ್ನೆಲೆಯಲ್ಲಿ ನೋಟಿಸ್ ನೀಡಲಾಗಿದೆ. ಮಾತ್ರವಲ್ಲದೆ, ನೋಟಿಸ್‌ನಲ್ಲಿ ‘ತಪ್ಪು ಮಾಹಿತಿ,  ಸುಳ್ಳು ಘೋಷಣೆ ನೀಡದರೆ ಜೈಲು ಶಿಕ್ಷೆ ಎದುರಿಸಬೇಕಾಗುತ್ತದೆ’ ಎಂದು ಬೆದರಿಕೆಯನ್ನೂ ಹಾಕಲಾಗಿದೆ.

- Advertisement -

ಇಬ್ರಾಹಿಂ ಅವರು ಮೈಸೂರಿನ ನರಸಿಂಹರಾಜ ವಿಧಾನಸಭಾ ಕ್ಷೇತ್ರದ ಮತದಾರರಾಗಿದ್ದಾರೆ. ಅವರ ಹಳೆಯ ಮತ್ತು ಪ್ರಸ್ತುತ ಮತದಾರರ ಪಟ್ಟಿಯಲ್ಲಿ ಅವರ ಹೆಸರಿನ ಅಕ್ಷರ ಮತ್ತು ಇನಿಷಿಯಲ್‌ಗಳಲ್ಲಿ ಕಂಡುಬಂದ ಸಣ್ಣ ವ್ಯತ್ಯಾಸದ ಕಾರಣಕ್ಕಾಗಿ ನೋಟಿಸ್‌ ನೀಡಲಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ರಾಜಕಾರಣಿಯ ಬೆಡ್‌ರೂಮಿನಲ್ಲಿ ಪ್ರಜಾಪ್ರಭುತ್ವ ಹುಡುಕುವ ಮಾಧ್ಯಮಗಳು!

ಒಂದು ಸಣ್ಣ ಪ್ರಶ್ನೆ, ಪ್ರಿಯ ಓದುಗರೇ! ಬೆಡ್‌ರೂಮಿನ ಹೊಗೆಯ ಹಿಂದೆ ಓಡುವ ಮಾಧ್ಯಮಗಳಿಗೆ, ಜನರ ಬದುಕನ್ನು ಸುಡುತ್ತಿರುವ ಬೆಂಕಿ ಕಾಣುವುದಿಲ್ಲವೇ? ರಾಜಕಾರಣಿಯೊಬ್ಬರ ಖಾಸಗಿ ಬದುಕಿನ ಬಗ್ಗೆ ಸುದ್ದಿ ಹೊರಬಿದ್ದರೆ ಸಾಕು; ಮಾಧ್ಯಮಗಳಲ್ಲಿ ಚರ್ಚೆಗಳ ಮಹಾಪೂರ. ಯಾರು...

ಬ್ರೆಜಿಲ್‌ನಲ್ಲಿ ʼಲೂಲಾʼ ಐತಿಹಾಸಿಕ ಗೆಲುವು: ನಾಗರಿಕ ಸಂಘಟನೆಗಳು ಚುನಾವಣೆಯ...

ಬ್ರೆಜಿಲ್‌ನ ಅಧ್ಯಕ್ಷೀಯ ಚುನಾವಣೆಯಲ್ಲಿ ಎಡಪಂಥೀಯ ನಾಯಕ ಲೂಯಿಸ್ ಇನಾಸಿಯೊ ಲೂಲಾ ಡಿ ಸಿಲ್ವಾ ಅವರು ಅತ್ಯಂತ ಐತಿಹಾಸಿಕ ರೀತಿಯಲ್ಲಿ ಮರುಆಯ್ಕೆಯಾಗಿದ್ದಾರೆ. ಅಕ್ಟೋಬರ್ 25ರಂದು ನಡೆದ ಎರಡನೇ ಸುತ್ತಿನ ಮತದಾನದಲ್ಲಿ ಅವರು ಬಲಪಂಥೀಯ ಅಭ್ಯರ್ಥಿ...

ರಕ್ತಪಾತಕ್ಕೆ ಬೇಕಿದೆ ಪೂರ್ಣವಿರಾಮ: ಇಸ್ರೇಲ್ ಚುನಾವಣೆಯಲ್ಲಿ ಮೊಳಗಲಿದೆಯೇ ಶಾಂತಿಯ...

ಇಸ್ರೇಲ್ ದೇಶದ ಸಂಸತ್ತನ್ನು ‘ನೆಸೆಟ್’ (Knesset) ಎಂದು ಕರೆಯಲಾಗುತ್ತದೆ. ಇಲ್ಲಿನ ಚುನಾವಣಾ ವ್ಯವಸ್ಥೆಯು ಜಗತ್ತಿನ ಇತರ ದೇಶಗಳಿಗಿಂತ ಭಿನ್ನವಾಗಿದ್ದು, 'ಪ್ರಾತಿನಿಧಿಕ ವ್ಯವಸ್ಥೆ' (Proportional representation) ಅಡಿಯಲ್ಲಿ ನಡೆಯುತ್ತದೆ. ಅಂದರೆ, ಭಾರತದಂತೆ ಇಲ್ಲಿನ ಮತದಾರರು...

1986ರಲ್ಲಿ ತಹಶೀಲ್ದಾರ್ ಆಗಿ ವೃತ್ತಿಜೀವನ ಆರಂಭಿಸಿ, ಉಪ ಜಿಲ್ಲಾಧಿಕಾರಿ, ಮಂಗಳೂರು ಪಾಲಿಕೆ ಆಯುಕ್ತ, ಕೆಒಎನ್‌ಐಸಿಎಸ್ ನಿರ್ದೇಶಕ, ವಕ್ಫ್ ಮಂಡಳಿ ಸಿಇಒ, ಸಾರಿಗೆ ಆಯುಕ್ತ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದ ಇಬ್ರಾಹಿಂ ಅವರು 2020ರಲ್ಲಿ ನಿವೃತ್ತರಾಗಿದ್ದರು. ಸರ್ಕಾರದ ನಾನಾ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿರುವ ಅಧಿಕಾರಿಯೊಬ್ಬರು ಇಂದು ತಮ್ಮ ಹಕ್ಕಿಗಾಗಿ ದಾಖಲೆ ಹಿಡಿದು ವಿಚಾರಣೆಗೆ ಹಾಜರಾಗಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ನೋಟಿಸ್‌ನಲ್ಲಿ ಬಳಸಲಾದ ಭಾಷೆಯು ದಾಖಲೆಗಳನ್ನು ಕೇಳಿರುವುದಕ್ಕಿಂತ ಹೆಚ್ಚು ವಿವಾದಾತ್ಮಕವಾಗಿದೆ. ‘ಅಧಿಕಾರಿಗಳಿಗೆ ಸುಳ್ಳು ಮಾಹಿತಿ ನೀಡುವುದು ಕ್ರಿಮಿನಲ್ ಅಪರಾಧ’ ಮತ್ತು ಜನಪ್ರತಿನಿಧಿತ್ವ ಕಾಯ್ದೆ-1950ರ ಸೆಕ್ಷನ್ 31ರ ಅಡಿಯಲ್ಲಿ ‘ಒಂದು ವರ್ಷದವರೆಗೆ ಜೈಲು ಶಿಕ್ಷೆ ಅಥವಾ ದಂಡ ವಿಧಿಸಬಹುದು’ ಎಂಬ ಹೆದರಿಸುವಿಕೆ ಸಾಲುಗಳು ನೋಟಿಸ್‌ನಲ್ಲಿವೆ. ದಶಕಗಳ ಕಾಲ ಸರ್ಕಾರದಲ್ಲೇ ಸೇವೆ ಸಲ್ಲಿಸಿದ ನಿವೃತ್ತ ಅಧಿಕಾರಿಗೆ ಕೇವಲ ತಾಂತ್ರಿಕ ವ್ಯತ್ಯಾಸಕ್ಕಾಗಿ ಇಂತಹ ಜೈಲು ಶಿಕ್ಷೆಯ ಎಚ್ಚರಿಕೆ ನೀಡಿರುವುದು ಪ್ರಕ್ರಿಯೆಯ ಬದ್ಧತೆಯ ಕೊರತೆಯನ್ನು ಎತ್ತಿಹಿಡಿದಿದೆ.

ನೋಟಿಸ್‌ ಬಗ್ಗೆ ಮಾತನಾಡಿರುವ ನಿವೃತ್ತ ಜಿಲ್ಲಾಧಿಕಾರಿ ಎ.ಬಿ ಇಬ್ರಾಹಿಂ, “ಮೂರೂವರೆ ದಶಕಗಳ ಕಾಲ ಸರ್ಕಾರಿ ಸೇವೆ ಸಲ್ಲಿಸಿ ನಿವೃತ್ತ ಜೀವನ ನಡೆಸುತ್ತಿರುವ ನನಗೇ ಇಂತಹ ಭಯ ಹುಟ್ಟಿಸುವ ನೋಟಿಸ್ ನೀಡಲಾಗಿದೆ. ನೋಟಿಸ್‌ನ ಎರಡನೇ ಪುಟದಲ್ಲಿರುವ ಸೂಚನೆಗಳನ್ನು ಓದಿದಾಗ ಆತಂಕವಾಯಿತು. ಅಲ್ಲಿ ಕ್ರಿಮಿನಲ್ ಅಪರಾಧ, ಜೈಲು ಶಿಕ್ಷೆ, ದಂಡ ಹಾಗೂ ಸುಳ್ಳು ಮಾಹಿತಿ ನೀಡಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂಬ ಎಚ್ಚರಿಕೆಯ ಭಾಷೆಯನ್ನು ಬಳಸಲಾಗಿದೆ. ಈ ರೀತಿಯ ಬೆದರಿಕೆಯ ಧೋರಣೆಯ ಮೂಲಕ ಸಮಾಜದಲ್ಲಿ ಆತಂಕದ ವಾತಾವರಣ ಸೃಷ್ಟಿಸಲಾಗುತ್ತಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

“ಇದು ಕೇವಲ ನನ್ನೊಬ್ಬನ ಸಮಸ್ಯೆಯಲ್ಲ; ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬ ತೆರಿಗೆದಾರ ನಾಗರಿಕನಿಗೂ ತಲುಪುತ್ತಿರುವ ಬೆದರಿಕೆಯಾಗಿದೆ. ಮತದಾರರಿಗೆ ಅವರ ಮೂಲಭೂತ ಹಕ್ಕನ್ನು ನೀಡುವ ಬದಲು, ಇಂತಹ ದಮನಕಾರಿ ನೋಟಿಸ್‌ಗಳನ್ನು ನೀಡುವ ಮೂಲಕ ಅವರ ಹಕ್ಕನ್ನೇ ಕಸಿದುಕೊಳ್ಳುವ ಮತ್ತು ಸಮಾಜದ ಮುಖ್ಯವಾಹಿನಿಯಿಂದ ಹೊರದಬ್ಬುವ ಹುನ್ನಾರ ನಡೆಯುತ್ತಿರುವಂತೆ ಕಾಣುತ್ತಿದೆ. ನೋಟಿಸ್‌ನಲ್ಲಿ ಬಳಸಿರುವ ಭಾಷೆ ಮತ್ತು ಶೈಲಿ ತೀವ್ರ ಭಯವನ್ನು ಉಂಟುಮಾಡುವಂತಿದ್ದು, ಇದು ಅತ್ಯಂತ ಆತಂಕಕಾರಿ ಬೆಳವಣಿಗೆಯಾಗಿದೆ” ಎಂದು ಕಿಡಿಕಾರಿದ್ದಾರೆ.

ibrahim

ನೋಟಿಸ್‌ನಲ್ಲಿ ಬಳಸಲಾದ ಪದಗಳನ್ನು ಸಾಮಾಜಿಕ ಕಾರ್ಯಕರ್ತ ಮುನೀರ್ ಕಾಟಿಪಳ್ಳ ಖಂಡಿಸಿದ್ದಾರೆ. “ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಯಾಗಿದ್ದ ಎ.ಬಿ ಇಬ್ರಾಹಿಂ ಅವರು 2014ರ ಲೋಕಸಭಾ ಚುನಾವಣೆ ಮತ್ತು 2016ರ ಪಂಚಾಯತ್ ಚುನಾವಣೆಗಳನ್ನು ಮುಖ್ಯಚುನಾವಣಾಧಿಕಾರಿಯಾಗಿ ಯಶಸ್ವಿಯಾಗಿ ನಡೆಸಿದ್ದರು. ‘ಮತದಾರರ ಪಟ್ಟಿಯಲ್ಲಿ ಹೆಸರು ಇರುವುದು ಕಡ್ಡಾಯ’ ಎಂದು ಜನರಲ್ಲಿ ಜಾಗೃತಿ ಮೂಡಿಸಿದ್ದರು. ಈಗ, ಅದೇ ಹಿರಿಯ ಅಧಿಕಾರಿಯೇ ತಮ್ಮ ಮತದಾರರ ಗುರುತನ್ನು ಸಾಬೀತುಪಡಿಸಲು ಸಮನ್ಸ್ ಎದುರಿಸುತ್ತಿರುವುದು ಚುನಾವಣಾ ಆಡಳಿತ ವ್ಯವಸ್ಥೆಯ ಕಾರ್ಯವೈಖರಿಯ ವೈಫಲ್ಯವನ್ನು ಸೂಚಿಸುತ್ತದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕರ್ನಾಟಕದಲ್ಲಿ ಇಂತಹ ಯಾಂತ್ರಿಕ ಪರಿಶೀಲನೆಯಿಂದ ತೊಂದರೆಗೊಳದಾವರಲ್ಲಿ ಇಬ್ರಾಹಿಂ ಅವರು ಮಾತ್ರವೇ ಇಲ್ಲ. ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಅವರ ಹೆಸರಿನಲ್ಲಿದ್ದ ವ್ಯತ್ಯಾಸಕ್ಕೆ ನೋಟಿಸ್ ನೀಡಲಾಗಿತ್ತು. ಸಾಮಾಜಿಕ ಜಾಲತಾಣದಲ್ಲಿ ಭಾರೀ ಟೀಕೆ ವ್ಯಕ್ತವಾದ ಬಳಿಕ, ಅಧಿಕಾರಿಗಳು ಅವರ ಮನೆಗೆ ತೆರಳಿ, ದಾಖಲೆಗಳನ್ನು ಪರಿಶೀಲಿಸಿ, ನೋಟಿಸ್‌ ಪಾವಸ್ ಪಡೆದುಕೊಂಡಿದ್ದರು. ಅಂತೆಯೇ, ಭಾರತ ರತ್ನ ಪ್ರೊ. ಸಿ.ಎನ್.ಆರ್ ರಾವ್, ಇನ್ಫೋಸಿಸ್ ಸಹ-ಸಂಸ್ಥಾಪಕ ನಂದನ್ ನೀಲೇಕಣಿ ಹಾಗೂ ಜೆರೋಧಾ ಸಂಸ್ಥಾಪಕರಾದ ನಿತಿನ್ ಮತ್ತು ನಿಖಿಲ್ ಕಾಮತ್ ಅವರಂತಹ ಪ್ರಮುಖರ ಹೆಸರುಗಳೂ ಇಂತಹದ್ದೇ ತಾಂತ್ರಿಕ ಕಾರಣಗಳಿಂದ ಪರಿಶೀಲನಾ ಪಟ್ಟಿಗೆ ಸೇರಿವೆ. ಅವರೆಲ್ಲರಿಗೂ ನೋಟಿಸ್ ನೀಡಲಾಗಿದೆ.

ಗಮನಾರ್ಹವಾಗಿ, ರಾಜ್ಯದಲ್ಲಿ ಬರೊಬ್ಬರಿ 43,81,141 ಮತದಾರರಿಗೆ ನೋಟಿಸ್‌ಗಳನ್ನು ನೀಡಲಾಗಿದೆ. ಆದರೆ, ಆರಂಭಿಕ ಹಂತದಲ್ಲಿ ಕೇವಲ 7.3 ಲಕ್ಷ ನೋಟಿಸ್‌ಗಳು ಮಾತ್ರ ಜನರಿಗೆ ತಲುಪಿದ್ದು, ಉಳಿದ ಲಕ್ಷಾಂತರ ನೋಟಿಸ್‌ಗಳು ವಿತರಣೆಯಾಗದೆ ಬಾಕಿಯುಳಿದಿವೆ. ಉದ್ಯೋಗ, ವಯಸ್ಸು ಹಾಗೂ ಅನಾರೋಗ್ಯದ ನಡುವೆಯೂ ಲಕ್ಷಾಂತರ ಜನರು ಅಧಿಕಾರಿಗಳ ಕಚೇರಿಗಳಿಗೆ ಹಾಜರಾಗಿ, ತಮ್ಮ ಮತದಾನದ ಹಕ್ಕನ್ನು ಉಳಿಸಿಕೊಳ್ಳಲು ಹೆಣಗಾಡುತ್ತಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕಲಬುರಗಿ | ಈಶಾನ್ಯ ಶಿಕ್ಷಕರ ಕ್ಷೇತ್ರ ಚುನಾವಣೆ : ನಾಳೆ ಮತ ಎಣಿಕೆ, ಸಕಲ ಸಿದ್ಧತೆ ಪೂರ್ಣ

ಈಶಾನ್ಯ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯ ಮತ ಎಣಿಕೆ ನಾಳೆ...

ಭದ್ರಾವತಿ | ಜಯಂತಿಗಳ ರಜೆ ರದ್ದುಪಡಿಸಲು ಸರಕಾರದ ಗಮನ ಸೆಳೆಯುವೆ: ಶಾಸಕಿ ಶಾರದಾ ಪುರ್ಯಾನಾಯ್ಕ್

ಉಪನ್ಯಾಸಕರ ಅಭಿಪ್ರಾಯದಂತೆ ದಾರ್ಶನಿಕರ ಹೆಸರಲ್ಲಿ ನೀಡುವ ರಜೆಗಳನ್ನು ರದ್ದು ಪಡಿಸಿ ಶಾಲಾ...

ವಿಜಯಪುರ | ಮಾನವೀಯ ಮೌಲ್ಯಗಳ ಸಂದೇಶ ಸಾರಿದ ಮಹರ್ಷಿ ವಾಲ್ಮೀಕಿ: ಶಾಸಕ ವಿಠ್ಠಲ ಕಟಕಧೊಂಡ

ಮಹರ್ಷಿ ವಾಲ್ಮೀಕಿ ಅವರು ರಾಮಾಯಣದ ಮೂಲಕ ಭಾರತೀಯ ಸಾಹಿತ್ಯ, ಸಂಸ್ಕೃತಿ ಹಾಗೂ...