ರಾಜ್ಯಾದ್ಯಂತ ಉಷ್ಣಾಂಶ ಏರಿಕೆಯಿಂದ ತತ್ತರಿಸಿದ್ದ ಜನತೆಗೆ ಹವಾಮಾನ ಇಲಾಖೆ ಸಣ್ಣ ಸಿಹಿ ಸುದ್ದಿ ನೀಡಿದೆ.
ಭಾರತೀಯ ಹವಾಮಾನ ಇಲಾಖೆ (IMD) ನೀಡಿರುವ ಮುನ್ಸೂಚನೆಯ ಪ್ರಕಾರ, ನಾಳೆಯಿಂದ (ಏ.28) ಮೂರು ದಿನಗಳ ಕಾಲ ರಾಜ್ಯದ ಹಲವೆಡೆ ಮಳೆಯಾಗುವ ಸಾಧ್ಯತೆ ಇದೆ.
ಏಪ್ರಿಲ್ 28ರಿಂದ ಏಪ್ರಿಲ್ 30ರವರೆಗೆ ರಾಜ್ಯದ ವಿವಿಧ ಭಾಗಗಳಲ್ಲಿ ಮಳೆಯ ಮುನ್ಸೂಚನೆ ನೀಡಲಾಗಿದೆ. ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಕೆಲವು ಕಡೆ ಗುಡುಗು-ಮಿಂಚು ಸಹಿತ ಭಾರೀ ಮಳೆಯಾಗುವ ನಿರೀಕ್ಷೆಯಿದೆ ಎಂದು ಹೇಳಿದೆ.
ಇದನ್ನೂ ಓದಿ : ಕೇಸರಿ ಶಾಲು ಹೊದಿಸಿಕೊಂಡ ರಾಘವ ಚಡ್ಡಾ | ಮಹಾರಾಷ್ಟ್ರ ಮಾದರಿಯ ಆಪರೇಷನ್ ಗೆ ಬಿಜೆಪಿ…
ಗುಡುಗು-ಮಿಂಚಿನ ಜೊತೆಗಿರುವ ಮಳೆ ಹಿನ್ನೆಲೆ ಜನರು ಜಾಗರೂಕರಾಗಿರಲು ಹವಾಮಾನ ಇಲಾಖೆ ಸೂಚಿಸಿದೆ. ಕಳೆದ ಕೆಲವು ದಿನಗಳಿಂದ ಕಾಡುತ್ತಿದ್ದ ಬಿಸಿಲಿಗೆ ಈ ಮಳೆ ತಾತ್ಕಾಲಿಕ ವಿರಾಮ ನೀಡಲಿದ್ದು, ತಾಪಮಾನದಲ್ಲೂ ಸ್ವಲ್ಪ ಇಳಿಕೆಯಾಗುವ ಸಾಧ್ಯತೆ ಇದೆ.. ಬಿರುಬೇಸಿಗೆಯ ನಡುವೆ ಈ ಮಳೆ ರಾಜ್ಯದ ಜನರಿಗೆ ಸ್ವಲ್ಪ ನಿರಾಳತೆಯನ್ನು ತರುವ ನಿರೀಕ್ಷೆ ಇದೆ.




