ಗದಗ | ಭಾರತದ ಎಲ್ಲ ಭಾರತೀಯರು ಒಂದು ಎನ್ನುವ ಪರಿಕಲ್ಪನೆಯೇ ಹಿಂದ್: ಡಾ. ಅನುಷಾ ಎಚ್.ಸಿ

Date:

“ಭಾರತೀಯತೆ ಎನ್ನುವ ಕಲ್ಪನೆ ನಾವೆಲ್ಲರೂ ರಾಷ್ರೀಯತೆಯ ಭಾಗವಾಗಿದ್ದೇವೆ ಎಂದು ಅರ್ಥೈಹಿಸಿಕೊಳ್ಳಬೇಕಾಗಿರುವುದು ನಾವೆಲ್ಲರೂ ಒಂದು ಎನ್ನುವಂತಹದ್ದು. ಹಿಂದ್ ಎನ್ನುವ ಪದ ಭೌಗೋಳಿಕವಾಗಿ ಕಟ್ಟಿಕೊಡುವ ಪದವೇ ಹೊರತು, ಯಾವ ಸಮುದಾಯಿಕ ಪ್ರತಿನಿಧಿಕರಣವನ್ನು ಹೇಳುವ ಪದ ಅಲ್ಲ. ಭಾರತದ ಎಲ್ಲ ಭಾರತೀಯರು ಒಂದು ಎನ್ನುವ ಪರಿಕಲ್ಪನೆಯೇ ಹಿಂದ್. ಅದೊಂದು ಭೌಗೋಳಿಕ ಎಲ್ಲೆಯನ್ನು ಇಟ್ಟುಕೊಂಡು ಬಂದಂತಹ ಪದವಾಗಿದೆ” ಎಂದು ಡಾ. ಅನುಷಾ ಎಚ್ ಸಿ ಅಭಿಪ್ರಾಯ ವ್ಯಕ್ತಪಡಿಸಿದರು.

- Advertisement -

ಗದಗ ಪಟ್ಟಣದ ಬಸವೇಶ್ವರ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಪ್ರಗತಿಪರ ಸಂಘಟನೆಗಳ ಸಹಯೋಗದಲ್ಲಿ ಈದಿನ.ಕಾಮ್ ಹೊರತಂದ ವಿಶೇಷಾಂಕ ‘ಜೈಹಿಂದ್ ಜಯ ಕರ್ನಾಟಕ’ ಬಿಡುಗಡೆ ಕಾರ್ಯಕ್ರಮದಲ್ಲಿ ಸಂಚಿಕೆ ಕುರಿತು ಅವರು ಮಾತನಾಡಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಜಾಗತಿಕ ಪೈಪೋಟಿಗೆ ಕನ್ನಡಿಗರನ್ನು ಸಜ್ಜುಗೊಳಿಸುವ ಬೃಹತ್ ವೇದಿಕೆ ‘ಬೆಂಗಳೂರು...

ರಾಜ್ಯದ ಯುವಜನತೆಯನ್ನು ಭವಿಷ್ಯದ ಜಾಗತಿಕ ಉದ್ಯೋಗ ಮಾರುಕಟ್ಟೆಯ ತೀವ್ರ ಪೈಪೋಟಿ ಮತ್ತು ಸವಾಲುಗಳಿಗೆ ಸುಸಜ್ಜಿತವಾಗಿ ಸಿದ್ಧಪಡಿಸುವ ಮಹತ್ವಾಕಾಂಕ್ಷೆಯೊಂದಿಗೆ ರಾಜ್ಯ ಸರ್ಕಾರವು ಬೃಹತ್ ಹೆಜ್ಜೆಯನ್ನಿಟ್ಟಿದೆ. ಇದರ ಅಂಗವಾಗಿ ಮುಂಬರುವ ನವೆಂಬರ್ 3, 4 ಹಾಗೂ...

ಇಸ್ರೇಲ್‌ ಚುನಾವಣೆ | ಅರಬ್ಬರ ಭರ್ಜರಿ ವೋಟಿಂಗ್, 19...

ಇಸ್ರೇಲ್‌ ಪ್ರಧಾನಿ ನೆತನ್ಯಾಹುವಿನ ದ್ವೇಷದ ರಾಜಕೀಯಕ್ಕೆ ಬೇಸತ್ತ ಇಸ್ರೇಲ್‌ ಅರಬ್ಬರು ಈ ಬಾರಿಯ ಸಾರ್ವತ್ರಿಕ ಚುನಾವಣೆಯಲ್ಲಿ ದಾಖಲೆಮಟ್ಟದಲ್ಲಿ ಮತಗಟ್ಟೆಗೆ ಧಾವಿಸಿ ಭರ್ಜರಿ ಓಟಿಂಗ್‌ ಮಾಡಿದ್ದಾರೆ. 19 ಸೀಟುಗಳನ್ನು ಗೆಲ್ಲುವ ಮೂಲಕ ನೆತನ್ಯಾಹು ಭವಿಷ್ಯವನ್ನು...

ಅಭಿವೃದ್ಧಿಯಿಂದ ದೂರ ಉಳಿದ ಜೀವನಮರಡಗಿ: ಬಸ್ ಇಲ್ಲ, ನೀರಿಲ್ಲ,...

ಸ್ವಾತಂತ್ರ್ಯಾನಂತರದ ಅಭಿವೃದ್ಧಿಯ ಹಾದಿಯಲ್ಲಿ ಗ್ರಾಮೀಣ ಪ್ರದೇಶಗಳಿಗೆ ಮೂಲಭೂತ ಸೌಲಭ್ಯಗಳನ್ನು ತಲುಪಿಸುವ ಪ್ರಯತ್ನಗಳು ನಡೆಯುತ್ತಿದ್ದರೂ, ಕಲಬುರಗಿ ಜಿಲ್ಲೆಯ ಕಾಳಗಿ ತಾಲೂಕಿನ ಜೀವನಮರಡಗಿ ಗ್ರಾಮದ ಜನರ ಬದುಕಿನಲ್ಲಿ ಮಾತ್ರ ಇಂದಿಗೂ ಹಲವು ಸಮಸ್ಯೆಗಳು ಮುಂದುವರಿದಿವೆ. ಗ್ರಾಮಕ್ಕೆ...

“ಇವತ್ತು ಕರ್ನಾಟಕದ ಪ್ರಶ್ನೆ ಬಂದಾಗ, ಯಾವೆಲ್ಲ ತಪ್ಪು ಗ್ರಹಿಕೆಗಳು ಜನರ ನಡುವೆ ಹರಿದಾಡುತ್ತಿವೆ. ಅವೆಲ್ಲವೂ ರಾಜ್ಯದ ವಿಚಾರಗಳನ್ನು ಸಂಕುಚಿತಗೊಳಿಸಿ ಸಮಾಜದ ಮೇಲೆ ಪರಿಣಾಮ ಬೀರುತ್ತಿವೆ ಎಂಬುದರ ಕುರಿತು ಅರಿಯಬೇಕಾದರೆ ಮೊದಲು ನಮ್ಮ ಮೂಲಕ್ಕೆ ಹೋಗಬೇಕು. ಯಾವುದೇ ಒಂದು ವಿಚಾರವನ್ನ ಅದರ ಮೂಲದಿಂದ ಅಂಚಿನವರೆಗೆ ಜ್ಞಾನವನ್ನು ಪಡೆದು ಒಪ್ಪಿಕೊಳ್ಳುವುದು ದೊಡ್ಡ ಮೂರ್ಖತನ. ಎರಡು ಪರಿಕಲ್ಪಣೆಗಳನ್ನು ಹಿಡಿದು ಕರ್ನಾಟಕದ ಜನತೆ ಚರ್ಚೆಗಳನ್ನು ತೆಗೆದುಕೊಂಡಿದ್ದಾರಲ್ಲ ಅವುಗಳಿಗೆ ಉತ್ತರವಾಗಿ ಈ ‘ಜೈಹಿಂದ್ ಜಯ ಕರ್ನಾಟಕ’ ವಿಶೇಷ ಸಂಚಿಕೆಯಾಗಿದೆ” ಎಂದು ಡಾ. ಅನುಷಾ ಎಚ್.ಸಿ. ಅಭಿಪ್ರಾಯ ವ್ಯಕ್ತಪಡಿಸಿದರು.

1003301881

“ಈ ‘ಜೈಹಿಂದ್ ಜಯ ಕರ್ನಾಟಕ’ ಶಿರ್ಷಿಕೆಯ ಕೃತಿ ನೋಡಿದಾಗ ಕುವೆಂಪುವ ಅವರ ನಾಡಗೀತೆ ‘ಜಯ ಭಾರತ ಜನನಿಯ ತನುಜಾತೆ, ಜಯಯೇ ಕರ್ನಾಟಕ ಮಾತೆ’ ನನಗೆ ನೆನಪಾಯಿತು. ಯಾವಾಗ ಭಾರತವನ್ನು ಒಕ್ಕೂಟ ವ್ಯವಸ್ಥೆಯನ್ನಾಗಿ ರೂಪಿಸಲಾಯಿತು. ಆಗ ಎಲ್ಲ ರಾಜಕೀಯ ನಾಯಕರಲ್ಲಿ ಭಯ ಮೂಡಿತು. ಭಾರತವನ್ನು ಕೇಂದ್ರ ಒಕ್ಕೂಟವನ್ನು ಮಾಡುವುದೋ? ಅಥವಾ ಕೆಂದ್ರದೊಳಗೆ ರಾಜ್ಯಗಳ ಒಕ್ಕೂಟ ಮಾಡುವುದೋ? ಎಂಬ ಪ್ರಶ್ನೆ ಬಂದಾಗ ವಲ್ಲಭಾಯಿ ಪಟೇಲರಿಂದ ಹಿಡಿದು ಎಲ್ಲ ರಾಜಕೀಯ ನಾಯಕರಲ್ಲಿ ಪ್ರಶ್ನೆ ಮೂಡಿದ್ದು, ಮುಂದೊಂದು ದಿನ ಈ ರಾಜ್ಯಗಳೇ ಸ್ವಚ್ಛೆಯಾಗಿ ವರ್ತಿಸಿ, ಭಾರತ ಸೌಹಾರ್ದತೆಗೆ ದಕ್ಕೆ ತಂದರೆ ಹೇಗೆ ಎಂಬ ಪ್ರಶ್ನೆ ಮೂಡುತ್ತದೆ. ಆಗ ಭಾರತ ಮತ್ತು ಕರ್ನಾಟಕ ಕಲ್ಪನೆಗಳ ಕುರಿತು ಕನ್ನಡದ ಕವಿಗಳು ಮಾಡಿದ ಚರ್ಚೆಗಳು ನಮಗೆ ಮುಖ್ಯವೆನಿಸುತ್ತವೆ. ಕುವೆಂಪು ಅವರ ನಾಡಗೀತೆಯ ಮೂಲಕ ಭಾರತದ ಅಡಿಯಲ್ಲಿರುವ ರಾಜ್ಯಗಳು ಹೇಗೆ ವರ್ತಿಸಬೇಕು ಹೇಳುವಂತಹ ಶಿರ್ಷಿಕೆಯನ್ನು ಇಟ್ಟುಕೊಂಡು ಈ ಸಂಚಿಕೆ ರೂಪಿಸಿರುವುದು ಬಹಳ ಮಹತ್ವದ ಕೆಲಸ” ಎಂದು ಹೇಳಿದರು.

“ಭಾರತದ ಸ್ವಾತಂತ್ರ ಚಳುವಳಿ ಅರ್ಥೈಹಿಸಿಕೊಂಡಿದ್ದು ಎಂದರೆ, ಕೆಲವು ಹಿರಿಯ ನಾಯಕರು, ಪ್ರಮುಖ ಘಟನೆಗಳು, ಇನ್ನೂ ಚರಿತ್ರೆ ಪುಸ್ತಕಗಳ ಮೂಲಕ ಮಂದಗಾಮಿಗಳು, ತೀವ್ರಗಾಮಿಗಳು, ಗಾಂಧಿಯುಗ ಕ್ರಾಂತಿಕಾರಿ ಯುಗ ಇತ್ಯಾದಿ.. ಇತ್ಯಾದಿ ವಿಭಾಗಿಕರಣಗಳು ನಮಗೆ ಕಲ್ಪಿಸಿಕೊಟ್ಟವು. ಇದನ್ನೇ ನಾವು ಸ್ವಾತಂತ್ರ್ಯ ಚಳುವಳಿ ಎಂದು  ಗಮನಕ್ಕೆ ಬಂದಿದ್ದೇವೆ. ಹಾಗಾಗಿ ಚರಿತ್ರೆಯ ದಾಖಲೀಕರಣದಲ್ಲಿ ಆಗಿರುವ ದೋಷಗಳನ್ನು ತುಂಬಾ ಚೆನ್ನಾಗಿ ಈ ಸಂಚಿಕೆಯಲ್ಲಿ ಕಟ್ಟಿಕೊಡುತ್ತದೆ” ಎಂದು ಹೇಳಿದರು.

1003301877

“ಈ ಸಂಚಿಕೆಯಲ್ಲಿ ಭಾರತ ಸ್ವಾತಂತ್ರ್ಯ ಚಳುವಳಿಯ ಎನ್ನುವಂತಹದ್ದು, ಕೇವಲ ರಾಜಕೀಯ ಹೋರಾಟ ಅಲ್ಲ, ಅಥವಾ ಬ್ರಿಟಿಷರ ದಾಸ್ಯದಿಂದ ವಿಮೋಚನೆ ನಡೆದ ಹೋರಾಟ ಅಷ್ಟೆ ಅಲ್ಲ, ಭಾರತದ ಸ್ವಾತಂತ್ರ್ಯ ಚಳುವಳಿ ಜೊತೆ ಜೊತೆಗೆ ಹಲವು ಪ್ರಶ್ನೆಗಳಿದ್ದವು. ಇಲ್ಲಿ ಸಮಾನತೆಯ ಪ್ರಶ್ನೆ, ಶೋಷಣೆಯ ಪ್ರಶ್ನೆ, ರೈತರ ಪ್ರಶ್ನೆ, ಕಾರ್ಮಿಕರ ಪ್ರಶ್ನೆ ಎಲ್ಲವುಗಳನ್ನು ಒಳಗೊಂಡು ಸಾವಿರ ತೊರೆಗಳಾಗಿ ಹರಿದಂತ ಸ್ವಾತಂತ್ರ್ಯ ಚಳುವಳಿಯನ್ನು ಒಂದು ದಿಕ್ಕಿಗೆ ಸಿಮೀತಗೊಳಿಸುತ್ತಿದ್ದೇವೆ. ಎನ್ನುವ ಒಳನೋಡ ಸಂಪಾದಕೀಯ ಬರಹದಲ್ಲಿ ಮೂಡಿದೆ” ಎಂದು ಹೇಳಿದರು.

ಇನ್ನೋರ್ವರು ವಿಶೇಷ ಸಂಚಿಕೆ ಕುರಿತು ಪ್ರೊ. ಬಸವರಾಜ ಪೂಜಾರ ಮಾತನಾಡಿ, “ಈ ‘ಜೈಹಿಂದ್ ಜಯ ಕರ್ನಾಟಕ’ ವಿಶೇಷ ಸಂಚಿಕೆಯಲ್ಲಿ ಸಾವಿರ ಇತಿಹಾಸ ಪುಸ್ತಕಗಳ ಸಾರ ಸಂಗ್ರಹ, ಲೇಖನಗಳಲ್ಲಿ ಅಡಗಿದ್ದು, ಅಮೋಘ ಸಂಚಿಕೆಯಾಗಿದ್ದು, ಎಲ್ಲರೂ ಓದಲೇ ಬೇಕಾದ ಸಂಚಿಕೆ ಇದಾಗಿದೆ” ಎಂದು ಹೇಳಿದರು.

ಮುಖ್ಯ ಅತಿಥಿಗಳು ಪ್ರೊ.ಬಿ.ಎ.ಕೆಂಚರೆಡ್ಡಿ ಅವರು ಮಾತನಾಡಿ, “ಜನಪರ, ಸಾಮಾಜಿಕ ನ್ಯಾಯದ ಚಳುವಳಿಯ ಮಾಧ್ಯಮವೇ ಈದಿನ.ಕಾಮ್. ಯಾರು ಚಳುವಳಿ, ಹೋರಾಟ ಮಾಡುವರೋ ಅವರು ಮೊದಲು ಪತ್ರಿಕೆಯನ್ನು ಆರಂಭ ಮಾಡುತ್ತಾರೆ. ಕಾರ್ಲಮಾರ್ಕನಿಂದ ಹಿಡಿದು, ಅಂಬೇಡ್ಕರಯಾಧಿಯಾಗಿ ಇಲ್ಲಿಯವರೆಗೂ ಹೋರಾಟಗಾರರು ಬೇರೆ ಬೇರೆ ಸಂದರ್ಭದಲ್ಲಿ ಪತ್ರಿಕೆಗಳನ್ನು ಹುಟ್ಟು ಹಾಕಿದರು. ಆ ಹಿನ್ನಲೆಯಲ್ಲಿ ಈದಿನ.ಕಾಮ್ ಹುಟ್ಟಿಕೊಂಡಿದೆ” ಎಂದು ಹೇಳಿದರು‌.

ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಚಾರ್ಯರು ಕೆ.ಎಚ್. ಬೇಲೂರು ಅವರು ಅಧ್ಯಕ್ಷೀಯ ನುಡಿಗಳನ್ನಾಡಿದರು. ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷರು ರಾಜು ಹೆಬ್ಬಳ್ಳಿ ಮಾತನಾಡಿದರು. ಈದಿನ.ಕಾಮ್ ಜಿಲ್ಲಾ ವರದಿಗಾರರು ಶರಣಪ್ಪ ಎಚ್ ಸಂಗನಾಳ ಪ್ರಸ್ತಾವಿಕ ಮಾತನಾಡಿದರು. ದಲಿತ ಹೋರಾಟಗಾರ ಮುತ್ತು ಬಿಳಿಯಲಿ, ಗುರುನಾಥ ಕೆಂಗಾರಕರ್ ಅವರು ಈದಿನ.ಕಾಮ್ ಓದುಗರಾಗಿ ಅಭಿಪ್ರಾಯ ಹಂಚಿಕೊಂಡರು. ಚಲವಾದಿ ಮಹಾಸಭಾ ಜಿಲ್ಲಾಧ್ಯಕ್ಷರು ಆನಂದ ಶಿಂಗಾಡಿ, ಸಂವಿಧಾನ ಪೂರ್ವ ಪೀಠಿಕೆ ಓದುವ ಮೂಲಕ ವಿಶೇಷ ಸಂಚಿಕೆ ಬಿಡುಗಡೆ ಕಾರ್ಯಕ್ರಮ ಆರಂಭವಾಯಿತು.

ಕಾರ್ಯಕ್ರಮದ ವೇದಿಕೆಯಲ್ಲಿ ಜಾಗತಿಕ ಲಿಂಗಾಯತ ಮಹಾಸಭಾ ಮುಖಂಡರು ಅಶೋಕ ಬರಗುಂಡಿ, ರೈತ ಸಂಘದ ಜಿಲ್ಲಾಧ್ಯಕ್ಷರು ಮುತ್ತಣ್ಣ ಚೌಡರೆಡ್ಡಿ, ಜಮಾತೆ ಇಸ್ಲಾಂ ಹಿಂದ್ ಜಿಲ್ಲಾಧ್ಯಕ್ಷರು ಕೆ.ಐ.ಶೇಖ್ ಅಲಿ, ಅಂಜುಮಾನ್ ಅಧ್ಯಕ್ಷರು ಅನ್ವರ್ ಹಾಗೂ ವೇದಿಕೆ ಮುಂಭಾಗದಲ್ಲಿ ಅನೇಕರು ಉಪಸ್ಥಿತರಿದ್ದರು. ಮುತ್ತು ಬಿಳಿಯಲಿ ನಿರೂಪಿಸಿದರು.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕಲಬುರಗಿ | ರಸ್ತೆ ಸಂಪೂರ್ಣ ಹದಗೆಟ್ಟು ಸಂಚಾರ ದುಸ್ತರ: ದುರಸ್ತಿಗೆ ದಲಿತ ಸೇನೆ ಆಗ್ರಹ

ಮಳಖೇಡದಿಂದ ಚಿತ್ತಾಪುರಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ಸಂಪೂರ್ಣ ಹದಗೆಟ್ಟು ಸಂಚಾರಕ್ಕೆ...

ಕಲಬುರಗಿ ಜಿಲ್ಲೆಯ 4.77 ಲಕ್ಷ ಮತದಾರರು ಎಲ್ಲಿ ಹೋದರು? ಎಸ್‌ಐಆರ್ ವಿರುದ್ಧ ಸಿಪಿಐ ತೀವ್ರ ಆಕ್ರೋಶ

ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯ ಬಳಿಕ ಲಕ್ಷಾಂತರ ಮತದಾರರ ಹೆಸರುಗಳು...

ಉಡುಪಿ | ಓವರ್‌ಪಾಸ್‌ ಉದ್ಘಾಟನೆಯಾದರೂ ಸರ್ವಿಸ್‌ ರಸ್ತೆಗೆ ಮುಕ್ತಿ ಸಿಕ್ಕಿಲ್ಲ; ಧೂಳಿನಿಂದ ವಾಹನ ಸವಾರರಿಗೆ ಸಂಕಷ್ಟ

ಉಡುಪಿ ನಗರದ ಕರಾವಳಿ ಜಂಕ್ಷನ್‌ನಿಂದ ಕಿನ್ನಿಮೂಲ್ಕಿವರೆಗಿನ ರಾಷ್ಟ್ರೀಯ ಹೆದ್ದಾರಿಯ ಇಕ್ಕೆಲಗಳಲ್ಲಿರುವ ಸರ್ವಿಸ್‌...