ಡಿ.14ರಂದು ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ: ಗೆಲುವು ಯಾರ ತೆಕ್ಕೆಗೆ?

Date:

ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಾಳೆ ಅಂದರೆ ಡಿಸೆಂಬರ್ 14ರಂದು ಚುನಾವಣೆ ನಡೆಯಲಿದೆ. ಸ್ತ್ರಿವಾದಿ ಲೇಖಕಿ ಆರ್ ಸುನಂದಮ್ಮ ಮತ್ತು ಲೇಖಕಿ, ಪ್ರಾಧ್ಯಾಪಕಿ ನಿರ್ಮಲಾ ಎಲಿಗಾರ್ ಕಣದಲ್ಲಿದ್ದು ಇಬ್ಬರೂ ಪ್ರಚಾರದಲ್ಲಿ ತೊಡಗಿದ್ದಾರೆ. ಬೆಂಗಳೂರು ನಿವಾಸಿಗಳಿಗೆ ಕರಪತ್ರಗಳನ್ನು ಹಂಚಿ ಪ್ರಚಾರ ನಡೆಸಿದರೆ, ಉಳಿದವರಿಗೆ ಫೇಸ್‌ಬುಕ್, ಕರೆ, ವಾಟ್ಸಾಪ್‌ ಮೊದಲಾದ ಆನ್‌ಲೈನ್ ಅಸ್ತ್ರಗಳನ್ನು ಬಳಸಿ ಪ್ರಚಾರ ನಡೆಸಿದ್ದಾರೆ.

- Advertisement -

ನಿಯಮ ಪ್ರಕಾರವಾಗಿ ಪ್ರತಿ ಮೂರು ವರ್ಷಕ್ಕೊಮ್ಮೆ ಕರ್ನಾಟಕ ಲೇಖಕಿಯರ ಸಂಘದ ಚುನಾವಣೆಯು ನಡೆಯುತ್ತದೆ, ಅದೇ ದಿನ ಫಲಿತಾಂಶವೂ ಹೊರಬೀಳಲಿದೆ. ಬೆಂಗಳೂರು ನಗರದಲ್ಲಿ ವಾಸವಿರುವವರು ಮಾತ್ರ ಚುನಾವಣೆಯಲ್ಲಿ ಸ್ಪರ್ಧಿಸಲು ಅರ್ಹರಾಗಿರುತ್ತಾರೆ. ಆಯ್ಕೆಯಾದವರು ಅವರೇ ಕಾರ್ಯಕಾರಿ ಸಮಿತಿ ಮತ್ತು ಪದಾಧಿಕಾರಿಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಬಳಿಕ ಸಂಘದ ಕಾರ್ಯ ಚಟುವಟಿಕೆಗಳನ್ನು ಮುಂದುವರೆಸುತ್ತಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಮುಸ್ಲಿಯಾರ್ ಹೇಳಿಕೆ ಎಬ್ಬಿಸಿದ ಪ್ರಶ್ನೆ— ಧಾರ್ಮಿಕ ಮೌಲ್ಯಗಳ ನಡುವೆ...

ಮಹಿಳೆಯ ಗೌರವವನ್ನು ರಕ್ಷಿಸುವ ಹೆಸರಿನಲ್ಲಿ ಆಕೆಯ ಶಿಕ್ಷಣ, ಪ್ರತಿಭೆ, ವೃತ್ತಿ ಅಥವಾ ಸಾಮಾಜಿಕ ಸೇವೆಯ ಬಾಗಿಲುಗಳನ್ನು ಮುಚ್ಚುವುದು ಒಂದು ವಿಷಯ; ಧಾರ್ಮಿಕ ಹಯಾ ಮತ್ತು ಮೌಲ್ಯಗಳನ್ನು ಕಾಪಾಡಿಕೊಂಡೇ ಸಮಾಜದಲ್ಲಿ ಜವಾಬ್ದಾರಿಯುತವಾಗಿ ಪಾಲ್ಗೊಳ್ಳಲು ಅವಕಾಶ...

ಧಾರವಾಡ | ಹುಲಕೊಪ್ಪ‌ ಶಾಲೆ ಶೌಚಾಲಯ ಕಾಮಗಾರಿ ಅಪೂರ್ಣ;...

ಧಾರವಾಡ ಜಿಲ್ಲೆಯ ಕಲಘಟಗಿ ಪ್ರಾಥಮಿಕ ಶಾಲೆಯಲ್ಲಿ‌ ಶೌಚಾಲಯ ಸೇರಿದಂತೆ ಮೂಲಭೂತ ಸೌಲಭ್ಯಗಳ ಕೊರತೆಯಿಂದ ವಿದ್ಯಾರ್ಥಿಗಳು ಸಮಸ್ಯೆ ಎದುರಿಸುತ್ತಿದ್ದಾರೆ. ಹೈಟೆಕ್ ಶೌಚಾಲಯ ಆರಂಭವಾಗಿ ಸುಮಾರು ವರ್ಷಗಳೇ ಕಳೆದರೂ ಇನ್ನೂ ಕಾಮಗಾರಿ ಮುಗಿದಿಲ್ಲ. ಶಾಲೆಯ...

ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನ ಮತ್ತು ಸದ್ಯದ ಬಿಕ್ಕಟ್ಟುಗಳು

ಇಂದು ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನ. ಜಾಗತಿಕವಾಗಿ ಕುಸಿಯುತ್ತಿರುವ ಪ್ರಜಾಪ್ರಭುತ್ವವನ್ನು ಎತ್ತಿಹಿಡಿಯಲು ಯುನೈಟೆಡ್ ನೇಷನ್ಸ್ ಜನರಲ್ ಅಸೆಂಬ್ಲಿಯು ಸೆಪ್ಟಂಬರ್ 15ನ್ನು ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನವನ್ನಾಗಿ ಆಚರಿಸುವ ಘೋಷಣೆ ಮಾಡಿತು. ಪರಿಣಾಮ ಇಂಟರ್ ಪಾರ್ಲಿಮೆಂಟರಿ ಯೂನಿಯನ್...

ಇದನ್ನು ಓದಿದ್ದೀರಾ? ಡಿ.14ರಂದು ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ

2022ರಲ್ಲಿ ನಡೆದ ಲೇಖಕಿಯರ ಸಂಘದ ಚುನಾವಣೆಯಲ್ಲಿ ಅಂದಿನ ಅಧ್ಯಕ್ಷೆ ವನಮಾಲಾ ಸಂಪನ್ನಕುಮಾರ್‌ ಹಾಗೂ ಪುಷ್ಪ ಅವರ ನಡುವೆ ನೇರ ಸ್ಪರ್ಧೆ ನಡೆದಿತ್ತು. ಸಂಘದ 1,330 ಸದಸ್ಯರಲ್ಲಿ1,295 ಮಂದಿ ಮತದಾನದ ಅರ್ಹತೆ ಹೊಂದಿದ್ದರು. ಒಟ್ಟಾರೆಯಾಗಿ ರಾಜ್ಯದ ಎಲ್ಲೆಡೆಯಿಂದ ಒಟ್ಟಾರೆ 699 ಮತಗಳು ಚಲಾವಣೆಯಾಗಿದ್ದವು. ಈ ಪೈಕಿ 44 ಮತಗಳು. ತಿರಸ್ಕರಿಸಲ್ಪಟ್ಟಿದ್ದವು. ಅಂತಿಮವಾಗಿ 62 ಮತಗಳ ಅಂತರದಿಂದ ಪುಷ್ಪ ಗೆಲುವು ಸಾಧಿಸಿದ್ದರು.

ಆದರೆ ಹಲವು ಬಾರಿ ಏಕಪಕ್ಷೀಯವಾಗಿ ನಿರ್ಧಾರ ಕೈಗೊಂಡ ಆರೋಪ ಅವರ ಮೇಲಿತ್ತು ಮತ್ತು ಸೆಪ್ಟೆಂಬರ್‌ನಲ್ಲಿ ಪದಾಧಿಕಾರಿಗಳು ರಾಜೀನಾಮೆಯನ್ನೂ ನೀಡಿದ್ದರು. ಅದಾಗಲೇ ಅಧ್ಯಕ್ಷರು, ಸಮಿತಿಯ ಅವಧಿ ಮುಗಿದಿತ್ತು. ಇದೀಗ ಹೊಸ ಸಮಿತಿ ರಚನೆಗಾಗಿ ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯುತ್ತಿದ್ದು, ಪುಷ್ಪ ಅವರು ವೈಯಕ್ತಿಕ ಕಾರಣ ನೀಡಿ ಚುನಾವಣೆಯಲ್ಲಿ ಸ್ಪರ್ಧಿಸಲು ನಿರಾಕರಿಸಿದ್ದಾರೆ. ಸುನಂದಮ್ಮ ಮತ್ತು ನಿರ್ಮಲಾ ಎಲಿಗಾರ್ ಕಣದಲ್ಲಿದ್ದಾರೆ.

ಈ ಬಗ್ಗೆ ಈದಿನ ಡಾಟ್‌ ಕಾಮ್‌ಗೆ ಪ್ರತಿಕ್ರಿಯಿಸಿದ ಲೇಖಕಿ ಆರ್ ಸುನಂದಮ್ಮ, “ಪ್ರಚಾರ ಚೆನ್ನಾಗಿ ನಡೆಯುತ್ತಿದೆ. ಬೆಂಗಳೂರು ನಗರದಲ್ಲೇ ಅಧಿಕ ಮತಗಳಿದ್ದು, ಅವರು ಮತಗಟ್ಟೆಗೆ ಬಂದು ಮತ ಚಲಾಯಿಸಲಿದ್ದಾರೆ. ಗೆಲ್ಲುವ ಭರವಸೆಯಲ್ಲಿ ಚುನಾವಣೆಗೆ ಸ್ಪರ್ಧಿಸುತ್ತಿದ್ದೇವೆ” ಎಂದು ತಿಳಿಸಿದರು.

ಇನ್ನು, “ಪ್ರಚಾರ ಭರ್ಜರಿಯಾಗಿ ನಡೆದಿದೆ. ಚುನಾವಣೆ ಎಂದಾಗ ಅದನ್ನು ಕೊಂಚ ಗಂಭೀರವಾಗಿಯೇ ತೆಗೆದುಕೊಳ್ಳಬೇಕಾಗುತ್ತದೆ. ಖಂಡಿತವಾಗಿಯೂ ಗೆಲ್ಲುವ ಭರವಸೆಯಿದೆ. ಜನರ ಪ್ರತಿಕ್ರಿಯೆ ಚೆನ್ನಾಗಿದೆ. ನಾಳೆಯವರೆಗೂ ಕಾಯಬೇಕು” ಎಂದು ಪ್ರತಿಸ್ಪರ್ಧಿ ಲೇಖಕಿ, ಪ್ರಾಧ್ಯಾಪಕಿ ನಿರ್ಮಲಾ ಎಲಿಗಾರ್ ಈದಿನ ಡಾಟ್‌ ಕಾಮ್‌ಗೆ ಹೇಳಿದ್ದಾರೆ.

ಕರ್ನಾಟಕದಲ್ಲಿ ಒಟ್ಟು 1600 ಮತಗಳಿದ್ದು, ಈ ಪೈಕಿ 592 ಅಂದರೆ ಸರಿಸುಮಾರು 600ರಷ್ಟು ಮತವು ಬೆಂಗಳೂರಿನಲ್ಲಿದೆ. ಬೆಂಗಳೂರು ನಗರದ ಮತದಾರರು ಶಂಕರಪುರದಲ್ಲಿರುವ ಅಶೋಕ ಶಿಶುವಿಹಾರದಲ್ಲಿ ಬೆಳಿಗ್ಗೆ 10ರಿಂದ ಸಂಜೆ 4 ಗಂಟೆಯವರೆಗೆ ನಡೆಯಲಿರುವ ಮತದಾನ ಪ್ರಕ್ರಿಯೆಯಲ್ಲಿ ಭಾಗಿಯಾಗಲಿದ್ದಾರೆ. ಉಳಿದ ಜಿಲ್ಲೆಯವರು ಅಂಚೆ ಮತದಾನ ಮಾಡುತ್ತಾರೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಿಜೆಪಿಯಲ್ಲಿ ಆಂತರಿಕ ಕುಸ್ತಿ; ಪ್ರತಾಪ್ ಸಿಂಹ – ನಾಗೇಂದ್ರ‌ ಬೀದಿ ಕಾಳಗ

ಮೈಸೂರು ಜಿಲ್ಲೆಯ ಟಿ. ನರಸೀಪುರ ಗಣೇಶೋತ್ಸವ ಮೆರವಣಿಗೆ ವಿಚಾರವಾಗಿ ಇನ್ಸ್‌ಪೆಕ್ಟರ್ ಧನಂಜಯ್‌...

ಮುಸ್ಲಿಂ ಮಹಿಳೆಯ ಸೌಹಾರ್ದತೆ: 18 ವರ್ಷಗಳಿಂದ ಗಣೇಶ ಸಮಿತಿ ಮುನ್ನಡೆಸುತ್ತಿರುವ ಜುಬೇದಾ

ಸಮಾಜದಲ್ಲಿ ಧರ್ಮ ಮತ್ತು ಜಾತಿಯ ಹೆಸರಿನಲ್ಲಿ ಒಡಕು ಮೂಡಿಸಲು ಹಿಂದುತ್ವ ಕೋಮುವಾದಿ...

ಕರ್ನಾಟಕ ಕಾಂಗ್ರೆಸ್‌ ವಾರ್‌ ರೂಂ ಅಧ್ಯಕ್ಷರಾಗಿ ತಿಪಟೂರು ಟುಡಾ ಶಶಿಧರ್‌ ನೇಮಕ

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯು (ಕೆಪಿಸಿಸಿ) ಮುಂಬರುವ ಪಕ್ಷದ ಸಂಘಟನಾತ್ಮಕ ಹಾಗೂ...

ಮಹಿಳಾ ಉದ್ಯೋಗಿಗಳ ರಾತ್ರಿ ಪಾಳಿ ಸುರಕ್ಷತಾ ನಿಯಮ ತಿದ್ದುಪಡಿ: ಸರ್ಕಾರದ ನಡೆಗೆ ಕೆಐಟಿಯು ತೀವ್ರ ವಿರೋಧ

ಕರ್ನಾಟಕ ಸರ್ಕಾರವು ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳ ಕಾಯ್ದೆಗೆ ತಿದ್ದುಪಡಿ ತರುವ...