ಮೈಸೂರು | 24 ಮಂದಿ ಕೈದಿಗಳ ಬಿಡುಗಡೆ

Date:

ಮೈಸೂರು ಕೇಂದ್ರ ಕಾರಾಗೃಹದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ 24 ಮಂದಿ ಅಪರಾಧಿಗಳನ್ನು ಸನ್ನಡತೆ ಆಧಾರ ಮೇಲೆ ಸೋಮವಾರ ಬಿಡುಗಡೆ ಮಾಡಲಾಗಿದೆ. ಈ ಪೈಕಿ ಬೆಂಗಳೂರು ಜೈಲಿನಲ್ಲಿದ್ದ ಓರ್ವ ಮಹಿಳೆ ಹಾಗೂ ಮೈಸೂರಿನಲ್ಲಿದ್ದ 23 ಮಂದಿ ಬಿಡುಗಡೆಯಾಗಿದ್ದಾರೆ.

ಮೈಸೂರಿನ ಕೇಂದ್ರ ಕಾರಾಗೃಹ ಆವರಣದಲ್ಲಿ ಸೋಮವಾರ ಸಂಜೆ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ನ್ಯಾಯಾಧೀಶರಾಗಿರುವ ಬಿ.ಜಿ ದಿನೇಶ್ ಕೈದಿಗಳ ಬಿಡುಗಡೆಗೊಳಿ ಮಾತನಾಡಿದರು. “ಕೈದಿಗಳು ಜೈಲಿನಲ್ಲಿ ಪಡೆದ ವೃತ್ತಿ ತರಬೇತಿಯನ್ನು ಸದ್ಬಳಕೆ ಮಾಡಿಕೊಂಡು ಸಮಾಜದಲ್ಲಿ ಕುಟುಂಬದವರು, ಸ್ನೇಹಿತರು ಮತ್ತು ಬಂಧು-ಬಳಗದೊಂದಿಗೆ ಉತ್ತಮ ಜೀವನ ನಡೆಸಲಿ” ಎಂದು ಶುಭ ಹಾರೈಸಿ, ಬಿಡುಗಡೆ ಪತ್ರ ನೀಡಿದರು.

ಕಾರಾಗೃಹದ ಮುಖ್ಯ ಅಧೀಕ್ಷಕಿ ಕೆ.ಸಿ.ದಿವ್ಯಶ್ರೀ ಮಾತನಾಡಿ, “ಕಳೆದ ಜೂನ್‌ನಲ್ಲಿ 31 ಮಂದಿಯ ಕಡತ ಸಲ್ಲಿಸಲಾಗಿತ್ತು. ಅದರಲ್ಲಿ ನಾಲ್ಕು ಮಂದಿಯ ಬಿಡುಗಡೆಗೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇಬ್ಬರ ಅರ್ಜಿಯನ್ನು ರಾಜ್ಯಪಾಲರು ತಿರಸ್ಕರಿಸಲಾಗಿದ್ದು, ಒಬ್ಬರ ಅರ್ಜಿಯನ್ನು ಮರು ಪರಿಶೀಲಿಸುವಂತೆ ಸೂಚನೆ ನೀಡಲಾಗಿದೆ” ಎಂದು ಮಾಹಿತಿ ನೀಡಿದರು.‌

“ಚುನಾವಣೆ ಹಿನ್ನೆಲೆಯಲ್ಲಿ ಬಿಡುಗಡೆ ವಿಳಂಬವಾಗಿದೆ. ಶಿಕ್ಷೆಯನ್ನು ಕಡಿತಗೊಳಿಸಿದ ಬಳಿಕ ಅವರ ಸನ್ನಡತೆ ಆಧಾರದ ಮೇಲೆ ಸುಮಾರು 24 ಮಂದಿಯನ್ನು ಜೈಲಿನಿಂದ ಬಿಡುಗಡೆ ಮಾಡಲಾಯಿತು. ಕೇಂದ್ರ ಕಾರಾಗೃಹದಲ್ಲಿ ಪ್ರಸ್ತುತ 33 ಮಹಿಳೆಯರು ಸೇರಿದಂತೆ 814 ಕೈದಿಗಳು ಇದ್ದಾರೆ” ಎಂದು ಹೇಳಿದ್ದಾರೆ.

“ಕಾರಾಗೃಹದಲ್ಲಿ ಸರ್ಕಾರಿ ಅನುಮೋದಿತ ಕೈಗಾರಿಕಾ ಸಂಸ್ಥೆಗಳ ಸಹಕಾರದೊಂದಿಗೆ ವಿವಿಧ‌ ರೀತಿಯ ಕೌಶಲ್ಯ ತರಬೇತಿಗಳನ್ನು ನೀಡಲಾಗುತ್ತದೆ. ಎಲೆಕ್ಟ್ರಿಷಿಯನ್, ಬ್ಯೂಟಿಷಿಯನ್ ಸೇರಿದಂತೆ ಹಲವು ತರಬೇತಿ, ಜೊತೆಗೆ ಸಮಸ್ಯೆಗಳನ್ನು ಎದುರಿಸುವ ಆಪ್ತಸಮಾಲೋಚನೆ ತರಬೇತಿ ಕಾರ್ಯಕ್ರಮಗಳ ಮೂಲಕ ಹಾಗೂ ಹಲವಾರು ಆಯಾಮಗಳಲ್ಲಿ ಒಬ್ಬ ಕೈದಿಯನ್ನು ಬಿಡುಗಡೆಗೆ ಸಜ್ಜುಗೊಳಿಸಲಾಗುತ್ತದೆ” ಎಂದು ತಿಳಿಸಿದರು.

“ಕೌಶಲ್ಯ ತರಬೇತಿ ಪಡೆದವರು ಸ್ವಂತ ಉದ್ದಿಮೆ ಪ್ರಾರಂಭಿಸಬಹುದು. ಇತರೆ ಉದ್ದಿಮೆಗಳಲ್ಲಿ ಸೇರಿ ತಮ್ಮ ಜೀವನ ರೂಪಿಸಿಕೊಳ್ಳಬಹುದು. ಹತ್ತಾರು ವರ್ಷ ಕಾರಾಗೃಹದಲ್ಲಿ ಇದ್ದವರು ಸಮಾಜದ ಮುಖ್ಯವಾಹಿನಿಗೆ ಹೊಂದಿಕೊಳ್ಳುವುದು, ಆದಾಯ ಗಳಿಸುವುದು ತುಂಬಾ ಕಷ್ಟ. ಹಾಗಾಗಿ ಕೌಶಲ್ಯ ತರಬೇತಿಗಳಿಂದ ಕಲಿತಿರುವುದು ಅವರ ಬದುಕಿಗೆ ಸಹಾಯ ಮಾಡುತ್ತದೆ” ಎಂದು ಕಾರಾಗೃಹದ ಮುಖ್ಯ ಅಧೀಕ್ಷಕಿ ತಿಳಿಸಿದರು.

ಕಾರಾಗೃಹ ಜನರನ್ನು ಇಟ್ಟುಕೊಳ್ಳುವ ಸ್ಥಳವಲ್ಲ. ನ್ಯಾಯದಾನ ಪದ್ದತಿಯನ್ನು ಕಾನೂನು ಬಾಹಿರ ಚಟುವಟಿಕೆಯನ್ನು ಮಾಡಿದವರಿಗೆ ಈ ತರಹದ ಶಿಕ್ಷಾ ವಿಧಾನಗಳಿರುತ್ತವೆ. ಅದನ್ನು ಜಾರಿಗೊಳಿಸುವ ಜೊತೆಗೆ ಅವರ ಮನಪರಿವರ್ತನೆ ಮಾಡುವ ಜವಾಬ್ದಾರಿ ಕಾರಾಗೃಹದ ಮೇಲೆ ಇರುತ್ತದೆ. ಶಿಕ್ಷೆಯನ್ನು ಜಾರಿಗೊಳಿಸುವುದ ಜೊತೆಗೆ ಅವರಿಗೆ ಶಿಕ್ಷಣವನ್ನು ನೀಡಲಾಗುತ್ತದೆ” ಎಂದು ಹೇಳಿದರು.

ಈ ಸುದ್ದಿ ಓದಿದ್ದೀರಾ? ಮುರುಘಾ ಮಠಕ್ಕೆ ಸರ್ಕಾರದ ಆಡಳಿತಾಧಿಕಾರಿ ನೇಮಕ ರದ್ದು; ಹೈಕೋರ್ಟ್ ಆದೇಶ

“ಕಾರಾಗೃಹಕ್ಕೆ ಬಂದಾಗ ಕೈದಿ ಎಂದು ನೋಡದೆ ವ್ಯಕ್ತಿಯಾಗಿ ನೋಡುತ್ತೇವೆ. ಆತನಲ್ಲಿರುವ ತಪ್ಪುಗಳನ್ನು ತಿದ್ದುವ ಕೆಲಸ ಮಾಡುತ್ತೇವೆ. ಸನ್ನಢತೆ ಆಧಾರದ ಮೇಲೆ ಬಿಡುಗಡೆ ಮಾಡುವುದು ಜೀವನ ನಡೆಸಲು ನೀಡುವ ಎರಡನೇ ಅವಕಾಶದಂತೆ. ಅದಕ್ಕೆ ಸಮಾಜವೂ ಅನುವು ಮಾಡಿಕೊಡಬೇಕು. ಹೊಸ ಮನಷ್ಯರಾಗಿ ಸ್ವೀಕರಿಸಬೇಕು. ಬಿಡುಗಡೆಯಾಗಲಿರುವ ಕೈದಿಗಳು ಅಪರಾಧ ಮುಕ್ತ ಸಮಾಜದ ರಾಯಭಾರಿಗಳಾಗಲಿ” ಎಂದು ಮುಖ್ಯ ಅಧೀಕ್ಷಕಿ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಕಾರಾಗೃಹ ಇಲಾಖೆಯ ಜೈಲರ್‌ಗಳು ಧರಣೇಶ್, ಗೀತಾ, ಅಮರ್ ಸೇರಿದಂತೆ ಅಧಿಕಾರಿಗಳು ಮತ್ತು ಸಿಬ್ಬಂದಿ ಇದ್ದರು.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

Subscribe

ಹೆಚ್ಚು ಓದಿಸಿಕೊಂಡ ಲೇಖನಗಳು

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗದಗ | ‘ಮಾಂಜಾ ದಾರ’ಕ್ಕೆ ಸಿಲುಕಿ‌ ಯುವಕ ಬಲಿ

ಕಾರಹುಣ್ಣಿಮೆಯ ದಿನ ಉತ್ತರಕರ್ನಾಟಕದಲ್ಲಿ ಗಾಳಿಪಟ ಹಾರಿಸುವುದು ವಾಡಿಕೆ. ಈ ಗಾಳಿಪಟದ ಮುಂಜಾ...

ನಮ್ಮ ಸಚಿವರು | ಮಾಸ್ ಲೀಡರ್ ಆಗುವ ಲಕ್ಷಣವುಳ್ಳ ಪ್ರಿಯಾಂಕ್ ಖರ್ಗೆ; ಕ್ಷೇತ್ರದ ಅಭಿವೃದ್ಧಿಗೆ ನೀಡಬೇಕಿದೆ ಆದ್ಯತೆ

ಪ್ರಿಯಾಂಕ್ ಖರ್ಗೆ ಅವರು  ಕಾಂಗ್ರೆಸ್‌ನಲ್ಲಿ ತಮ್ಮದೇ ವರ್ಚಸ್ಸು ಹೊಂದಿದ್ದಾರೆ. ತಂದೆಯ ಹಾದಿಯಲ್ಲಿಯೇ...

ಧಾರವಾಡ | ವಿದ್ಯುತ್ ದರ ಹೆಚ್ಚಳ; ಕೈಗಾರಿಕಾ ಉದ್ಯಮಿಗಳ ಸಂಘ ಖಂಡನೆ

ವಿದ್ಯುತ್ ಶುಲ್ಕ ಗಣನೀಯ ಹೆಚ್ಚಳವನ್ನು ವಿರೋಧಿಸಿ ಧಾರವಾಡ ಬೆಳವಣಿಗೆ ಕೇಂದ್ರ ಮತ್ತು...

ಧಾರವಾಡ | ಚಿಗರಿ ಬಸ್‌ಗಳಲ್ಲಿ ಮಹಿಳೆಯರಿಗಿಲ್ಲ ಉಚಿತ ಪ್ರಯಾಣ

ಅವಳಿ ನಗರಗಳಾದ ಹುಬ್ಬಳ್ಳಿ-ಧಾರವಾಡಕ್ಕೆ ಶೀಘ್ರ ಸಂಪರ್ಕಕ್ಕಾಗಿ ಬಿಆರ್‌ಟಿಎಸ್‌ ನಿಂದ 'ಚಿಗರಿ' ಹೆಸರಿನ...