ಮುಂಬೈ-ಗೋವಾ ಹೆದ್ದಾರಿ ಕಾಮಗಾರಿ ವಿಳಂಬ: ಪ್ರಭಾವಿಗಳ ನಂಟು, ₹2,000 ಕೋಟಿ ಅಧಿಕ ಹೊರೆ!

Date:

 ಕರಾವಳಿ ಭಾಗದ ಆರ್ಥಿಕ ಚಟುವಟಿಕೆಗಳಿಗೆ ವೇಗ ನೀಡುವ ನಿರೀಕ್ಷೆಯೊಂದಿಗೆ ಆರಂಭವಾದ 592 ಕಿ.ಮೀ ಉದ್ದದ ಮಹತ್ವಾಕಾಂಕ್ಷಿ ಮುಂಬೈ-ಗೋವಾ ಹೆದ್ದಾರಿ (NH-66) ಯೋಜನೆ ದಶಕಗಳು ಕಳೆದರೂ ಇನ್ನೂ ಪೂರ್ಣಗೊಂಡಿಲ್ಲ. ವಿಶೇಷವಾಗಿ ಮಹಾರಾಷ್ಟ್ರ ವ್ಯಾಪ್ತಿಯ 472 ಕಿ.ಮೀ ಮಾರ್ಗದಲ್ಲಿ ಇನ್ನೂ ಸುಮಾರು 8 ಕಿ.ಮೀ ಕಾಮಗಾರಿ ಬಾಕಿ ಉಳಿದಿದ್ದು, ಇದರಿಂದ ಯೋಜನೆಯ ವೆಚ್ಚ ₹2,000 ಕೋಟಿಗೂ ಅಧಿಕ ಪ್ರಮಾಣದಲ್ಲಿ ಏರಿಕೆಯಾಗಿದೆ. ಈ ವಿಳಂಬದ ಹಿಂದೆ ರಾಜಕೀಯ ಪ್ರಭಾವಿಗಳು, ಸಾಲ ಮರುಪಾವತಿಸದವರು ಹಾಗೂ ತನಿಖಾ ಸಂಸ್ಥೆಗಳ ಕಣ್ಣಿಗೆ ಬಿದ್ದಿರುವ ಉದ್ಯಮಿಗಳ ಕಂಪನಿಗಳು ಭಾಗಿಯಾಗಿರುವುದು ದಾಖಲೆಗಳಿಂದ ಬಹಿರಂಗವಾಗಿದೆ.

- Advertisement -

ಕಳೆದ ಸೆಪ್ಟೆಂಬರ್ 9ರಂದು ಗೋವಾದ ಪೋರ್ವೊರಿಮ್‌ನಲ್ಲಿ 5.15 ಕಿ.ಮೀ ಕಾರಿಡಾರ್ ಉದ್ಘಾಟಿಸಿ ಮಾತನಾಡಿದ್ದ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ, ಮುಂಬೈ-ಗೋವಾ ಹೆದ್ದಾರಿ ವಿಳಂಬದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. “ಈ ವಿಳಂಬಕ್ಕೆ ನನಗೆ ನಾಚಿಕೆಯಾಗುತ್ತಿದೆ, ಮುಂದಿನ ವರ್ಷ ನಡೆಯಲಿರುವ ಈ ಹೆದ್ದಾರಿಯ ಉದ್ಘಾಟನಾ ಸಮಾರಂಭಕ್ಕೆ ನಾನು ಹಾಜರಾಗುವುದಿಲ್ಲ” ಎಂದು ಬಹಿರಂಗವಾಗಿಯೇ ಹೇಳಿದ್ದರು. ಗೋವಾ ವ್ಯಾಪ್ತಿಯ 120 ಕಿ.ಮೀ ಕಾಮಗಾರಿ ಈಗಾಗಲೇ ಪೂರ್ಣಗೊಂಡಿದ್ದು, ಮಹಾರಾಷ್ಟ್ರದ ಬಾಕಿ ಇರುವ 8 ಕಿ.ಮೀ ಕೆಲಸ ಮುಗಿದರೆ ಎರಡೂ ರಾಜ್ಯಗಳ ರಾಜಧಾನಿಗಳು ನೇರವಾಗಿ ಸಂಪರ್ಕಗೊಳ್ಳಲಿವೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಸಿನೆಮಾ ನೋಡುವುದು: ಕಲೆಯ ಆಂತರ್ಯವನ್ನು ಗ್ರಹಿಸುವ ಕ್ರಮ

ಸಿನೆಮಾ ವಿಶ್ಲೇಷಣೆ ಎಂದರೆ ಕೇವಲ ದೋಷಗಳನ್ನು ಎಣಿಸುವ ಮೇಲ್ನೋಟದ ತೀರ್ಪಲ್ಲ. ಪರದೆಯ ಮೇಲೆ ಕಾಣುವ ಒಂದೊಂದು ಕ್ಷಣದ ಹಿಂದೆಯೂ ನಿರ್ದೇಶಕ ಮತ್ತು ತಂತ್ರಜ್ಞರ ದೀರ್ಘ ಶ್ರಮ, ಆರ್ಥಿಕ ಮಿತಿಗಳು ಹಾಗೂ ತಾಂತ್ರಿಕ ಸವಾಲುಗಳಿರುತ್ತವೆ....

ಸಮಾನತೆಯ ಮರೆಯಲ್ಲಿ ಅಸಮಾನತೆಯ ನೆರಳು: ಹಸಿರು ಕನಸುಗಳ ಕಾಲಡಿಯಲ್ಲಿ...

ದೇಶದಲ್ಲಿ ಬಡತನ ಇಳಿಕೆಯಾಗುತ್ತಿದೆ, ಅಭಿವೃದ್ಧಿಯ ಅಂಕಿಅಂಶಗಳು ಏರುತ್ತಿವೆ. ಆದರೆ, ಆರ್ಥಿಕ ಪ್ರಗತಿಯ ನಡುವೆಯೂ ಶ್ರಮಜೀವಿಗಳ ಬದುಕಿನಲ್ಲಿ ಬಡತನ, ಜಾತಿ ತಾರತಮ್ಯ ಮತ್ತು ಅಸಮಾನತೆ ಏಕೆ ಮುಂದುವರಿದಿವೆ? ಅಭಿವೃದ್ಧಿಯ ಫಲ ಸಮಾಜದ ಕಟ್ಟಕಡೆಯ ಮನುಷ್ಯನಿಗೂ...

ಬಾಗಲಕೋಟೆ | ಸಾಕ್ಷರತೆಯಲಿ ಹಿಂದುಳಿದ ಜಿಲ್ಲೆ ʻಅಕ್ಷರ ಕ್ರಾಂತಿಗೆʼ...

ಮುಳುಗಡೆ ನಗರಿ ಬಾಗಲಕೋಟೆ ಜಿಲ್ಲೆ ಇಂದು ಕಬ್ಬಿನ ಬೆಲೆ ಹೋರಾಟದಲ್ಲಿ ಗೆಲುವು ಸಾಧಿಸಿ ಸಂಭ್ರಮಿಸುತ್ತಿದೆ. ಇದೇ ಸಂಭ್ರಮ ಶಿಕ್ಷಣ ಕ್ಷೇತ್ರದಲ್ಲಿಯೂ ಕಾಣಿಸಿಕೊಳ್ಳಬೇಕಿದೆ. ಆದರೆ, ಸಾಕ್ಷರತೆ, ಶಿಕ್ಷಕರ ಕೊರತೆ ಹಾಗೂ ಡಿಜಿಟಲ್ ಸೌಲಭ್ಯಗಳ ಅಭಾವ...

2006ರಲ್ಲಿ ರೂಪುಗೊಂಡ ಈ ಯೋಜನೆಯ ಕಾಮಗಾರಿ 2007ರಲ್ಲಿ ಆರಂಭವಾಗಿತ್ತು. 2018ಕ್ಕೆ ಮುಗಿಯಬೇಕಿದ್ದ ಕಾಮಗಾರಿ ಹಲವು ಬಾರಿ ಗಡುವು ವಿಸ್ತರಣೆಯಾಗಿ 2026ರ ಅಂತ್ಯಕ್ಕೆ ಬಂದು ನಿಂತಿದೆ. ಆರಂಭದಲ್ಲಿ ಮಹಾರಾಷ್ಟ್ರ ವಿಭಾಗಕ್ಕೆ ₹12,532 ಕೋಟಿ ಅಂದಾಜು ಮಾಡಲಾಗಿತ್ತು. ಆದರೆ ಭೂಸ್ವಾಧೀನ ವಿಳಂಬ, ಸ್ಥಳೀಯರ ಬೇಡಿಕೆಯಂತೆ ಹೆಚ್ಚುವರಿ ಅಂಡರ್‌ಪಾಸ್‌ಗಳ ನಿರ್ಮಾಣ ಮತ್ತು ಕಾಮಗಾರಿಯ ಸ್ವರೂಪ ಬದಲಾವಣೆಯಿಂದಾಗಿ ಒಟ್ಟು ವೆಚ್ಚ ಶೇ. 44ರಷ್ಟು ಹೆಚ್ಚಾಗಿ ₹18,100 ಕೋಟಿ ದಾಟಿದೆ.

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ (MoRTH) ಕಾರ್ಯದರ್ಶಿ ವಿ. ಉಮಾಶಂಕರ್ ಅವರ ಪ್ರಕಾರ, ಕಳೆದ ಎರಡು ವರ್ಷಗಳಲ್ಲಿ ಸ್ಥಗಿತಗೊಂಡಿದ್ದ ಕಾಮಗಾರಿಗಳಿಗೆ ವೇಗ ನೀಡಲಾಗಿದ್ದು, ಶೇ. 99ರಷ್ಟು ಕೆಲಸ ಪೂರ್ಣಗೊಂಡಿದೆ. ಬಾಕಿ ಕೆಲಸ ಮುಂದಿನ ಏಪ್ರಿಲ್ ವೇಳೆಗೆ ಮುಗಿಯಲಿದೆ.

ಹೆದ್ದಾರಿ ಕಾಮಗಾರಿ ವಿಳಂಬವಾಗಿರುವ 5 ಪ್ರಮುಖ ಹಂತಗಳು:-

ಪನ್ವೇಲ್ – ಇಂದಾಪುರ (84.6 ಕಿ.ಮೀ – ಶೇ. 97.75 ಪೂರ್ಣ): 2011ರಲ್ಲಿ ಆರಂಭವಾದ ಈ ಕಾಮಗಾರಿಯನ್ನು ‘ಸುಪ್ರೀಂ ಇನ್‌ಫ್ರಾಸ್ಟ್ರಕ್ಚರ್’ ನೇತೃತ್ವದ ಒಕ್ಕೂಟಕ್ಕೆ ನೀಡಲಾಗಿತ್ತು. ಆದರೆ 2019ರಲ್ಲಿ ಆರ್‌ಬಿಐನ ಟಾಪ್-100 ಬ್ಯಾಂಕ್ ಸಾಲ ಸುಸ್ತಿದಾರರ ಪಟ್ಟಿಯಲ್ಲಿ ಈ ಕಂಪನಿ ಕಾಣಿಸಿಕೊಂಡಿದ್ದರಿಂದ 2021ರಲ್ಲಿ ಗುತ್ತಿಗೆ ರದ್ದುಗೊಳಿಸಲಾಯಿತು. ಬಳಿಕ ಬಾಕಿ ಕೆಲಸವನ್ನು ಅರಣ್ಯ ಭೂಮಿ ವಂಚನೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದ (ED) ತನಿಖೆ ಎದುರಿಸುತ್ತಿರುವ ಉದ್ಯಮಿ ಹಾಗೂ ರಾಜಕಾರಣಿ ಜೆ.ಎಂ. ಮ್ಹಾತ್ರೆ ಅವರ ಕಂಪನಿ ಮತ್ತು ಕಲ್ಯಾಣ್ ಟೋಲ್ ಇನ್‌ಫ್ರಾಸ್ಟ್ರಕ್ಚರ್‌ಗೆ ವಹಿಸಲಾಗಿದೆ.

ಇಂದಾಪುರ – ವಡ್ಪಾಲೆ (26.75 ಕಿ.ಮೀ – ಶೇ. 89 ಪೂರ್ಣ): 2017ರಲ್ಲಿ ರಾಜಸ್ಥಾನದ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಸಚಿವ ಉದಯ್ ಲಾಲ್ ಅಂಜನಾ ಮಾಲೀಕತ್ವದ ‘ಚೇತಕ್ ಎಂಟರ್‌ಪ್ರೈಸಸ್’ ಮತ್ತು ‘ಆಪ್ಕೋ ಇನ್‌ಫ್ರಾಟೆಕ್’ ಜಂಟಿ ಸಂಸ್ಥೆಗೆ ಈ ಗುತ್ತಿಗೆ ನೀಡಲಾಗಿತ್ತು. ತೀವ್ರ ವಿಳಂಬದ ಹಿನ್ನೆಲೆಯಲ್ಲಿ 2025ರ ಜೂನ್‌ನಲ್ಲಿ ಇವರ ಗುತ್ತಿಗೆಯನ್ನು ರದ್ದುಪಡಿಸಿ, ಜೈಪುರ ಮೂಲದ ಎಲ್‌ಎನ್‌ಎ ಇನ್‌ಫ್ರಾಪ್ರಾಜೆಕ್ಟ್ಸ್‌ಗೆ ನೀಡಲಾಗಿದೆ. ಈ ವಿಭಾಗದ ವೆಚ್ಚ ₹1,203 ಕೋಟಿಯಿಂದ ₹1,657 ಕೋಟಿಗೆ ಏರಿದೆ.

ಪರಶುರಾಮ ಘಾಟ್ – ಅರಾವಳಿ (34.45 ಕಿ.ಮೀ – ಶೇ. 98.50 ಪೂರ್ಣ): ಈ ವಿಭಾಗದ ಗುತ್ತಿಗೆಯನ್ನೂ ಮಾಜಿ ಸಚಿವ ಉದಯ್ ಲಾಲ್ ಅಂಜನಾ ಅವರ ಚೇತಕ್ ಎಂಟರ್‌ಪ್ರೈಸಸ್ ಮತ್ತು ಈಗಲ್ ಇನ್‌ಫ್ರಾ ಇಂಡಿಯಾ ಜಂಟಿಯಾಗಿ ಪಡೆದಿದ್ದವು. ಭೂಸ್ವಾಧೀನ ಮತ್ತು ನ್ಯಾಯಾಲಯದ ಪ್ರಕರಣಗಳಿಂದಾಗಿ ಕಾಮಗಾರಿ ವಿಳಂಬವಾಗಿದ್ದು, ಚಿಪ್ಲುನ್‌ನಲ್ಲಿ 1.8 ಕಿ.ಮೀ ಫ್ಲೈಓವರ್ ಕೆಲಸ ಬಾಕಿ ಇದೆ. ಯೋಜನೆಯ ವೆಚ್ಚ ₹983 ಕೋಟಿಯಿಂದ ₹2,226 ಕೋಟಿಗೆ ಜಿಗಿದಿದೆ.

ಅರಾವಳಿ – ಕಾಂಟೆ (39.24 ಕಿ.ಮೀ – ಶೇ. 95 ಪೂರ್ಣ): 2017ರಲ್ಲಿ ಗುತ್ತಿಗೆ ಪಡೆದಿದ್ದ ಎಂಇಪಿ ಇನ್‌ಫ್ರಾಸ್ಟ್ರಕ್ಚರ್ ಸಂಸ್ಥೆ ₹128 ಕೋಟಿ ಸಾಲ ಮರುಪಾವತಿಸದೆ ದಿವಾಳಿ ಪ್ರಕ್ರಿಯೆಗೆ (NCLT) ಒಳಗಾಯಿತು. ಹೀಗಾಗಿ 2024ರಲ್ಲಿ ಮರು ಟೆಂಡರ್ ಕರೆದು, ಮಹಾರಾಷ್ಟ್ರದ ‘ಸಮೃದ್ಧಿ ಮಹಾಮಾರ್ಗ’ ಯೋಜನೆಯ ನೇತೃತ್ವ ವಹಿಸಿದ್ದ ನಿವೃತ್ತ ಐಎಎಸ್ ಅಧಿಕಾರಿ ರಾಧೇಶ್ಯಾಮ್ ಮೊಪಲ್ವಾರ್ ಅವರ ಅಧ್ಯಕ್ಷತೆಯ ‘ಹಜೂರ್ ಇನ್‌ಫ್ರಾ ಪ್ರಾಜೆಕ್ಟ್ಸ್’ ಸಂಸ್ಥೆಗೆ ಕಾಮಗಾರಿ ವಹಿಸಲಾಗಿದೆ. ಈ ವಿಭಾಗದ ವೆಚ್ಚ ₹1,102 ಕೋಟಿಯಿಂದ ₹1,443 ಕೋಟಿಗೆ ಹೆಚ್ಚಾಗಿದೆ.

ಸದ್ಯ 3 ಕಿ.ಮೀ ಉದ್ದದ ಎರಡು ಬೈಪಾಸ್‌ಗಳು, 192 ಮೀಟರ್ ಸೇತುವೆ, 1.8 ಕಿ.ಮೀ ಫ್ಲೈಓವರ್ ಹಾಗೂ ನಾಲ್ಕು ಕಡೆಗಳಲ್ಲಿ 1.5 ಕಿ.ಮೀ ಗುಡ್ಡ ಕತ್ತರಿಸುವ ಕಾಮಗಾರಿಗಳು ಅಂತಿಮ ಹಂತದಲ್ಲಿವೆ. ಇಂತಹ ವಿಳಂಬಗಳನ್ನು ತಪ್ಪಿಸಲು, ಇನ್ನು ಮುಂದೆ ಶೇ. 90ರಷ್ಟು ಭೂಸ್ವಾಧೀನ ಮತ್ತು ಅರಣ್ಯ ಇಲಾಖೆ ಅನುಮತಿಗಳು ಪೂರ್ಣಗೊಂಡ ನಂತರವೇ ಟೆಂಡರ್ ಕರೆಯುವುದಾಗಿ ಹೆದ್ದಾರಿ ಸಚಿವಾಲಯ ಕಟ್ಟುನಿಟ್ಟಿನ ನಿಯಮ ರೂಪಿಸಿದೆ.

ಮೂಲ : ಇಂಡಿಯನ್‌ ಎಕ್ಸ್‌ಪ್ರೆಸ್‌

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮತದಾರ ನೋಂದಣಿಗೆ ಫಾರ್ಮ್- 6 ತುಂಬಿದವರಿಗೆ ಶಿಕ್ಷೆ ಇಲ್ಲ- ಸುಪ್ರೀಮ್’ಗೆ ಚುನಾವಣಾ ಆಯೋಗದ ನಿವೇದನೆ

ದೆಹಲಿಯಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ 'ವಿಶೇಷ ತೀವ್ರ ಪರಿಷ್ಕರಣೆ' (SIR) ಪ್ರಕ್ರಿಯೆಯಲ್ಲಿ...

ಕರ್ನಾಟಕ | ಆಸ್ತಿ ಖರೀದಿದಾರರಿಗೆ ಶಾಕ್: ನೋಂದಣಿ ದರ ಹೆಚ್ಚಳಕ್ಕೆ ಸರ್ಕಾರ ಸಿದ್ಧತೆ!

ಬೆಂಗಳೂರು ಸೇರಿದಂತೆ ಕರ್ನಾಟಕದಾದ್ಯಂತ ನಿವೇಶನ, ಅಪಾರ್ಟ್‌ಮೆಂಟ್ ಹಾಗೂ ಇತರ ಸ್ಥಿರಾಸ್ತಿಗಳನ್ನು ಖರೀದಿಸುವವರಿಗೆ...

ಬೆಂಗಳೂರಿಗರ ಸುರಕ್ಷತೆ: ಮನೆಮನೆಗೆ ತೆರಳಿ ಮಾಹಿತಿ ಸಂಗ್ರಹಿಸಲು ಪೊಲೀಸ್ ಇಲಾಖೆಗೆ ಸಿಎಂ ಸೂಚನೆ

ಬೆಂಗಳೂರು ನಗರದ ನಿವಾಸಿಗಳ ಸುರಕ್ಷತೆ ಮತ್ತು ಭದ್ರತೆಯನ್ನು ಖಚಿತಪಡಿಸುವ ನಿಟ್ಟಿನಲ್ಲಿ ಮಹತ್ವದ...

ರಸ್ತೆ ಸುರಕ್ಷತೆ ಕೇವಲ ಮರೀಚಿಕೆ: ರಾಜ್ಯದಲ್ಲಿ ಅಪಘಾತಗಳಿಗೆ ವರ್ಷಕ್ಕೆ 11,000 ಸಾವು

ಕರ್ನಾಟಕದಲ್ಲಿ ರಸ್ತೆ ಸುರಕ್ಷತೆಯು ಆತಂಕಕಾರಿ ಮಟ್ಟ ತಲುಪಿದ್ದು, ರಸ್ತೆ ಅಪಘಾತಗಳಲ್ಲಿ ಪ್ರತಿ...