ಕೋಲಾರ: ತಾಲ್ಲೂಕಿನ ಮುದುವಾಡಿ ಕೆರೆಗೆ ತಡೆಗೋಡೆ ಹಾಗೂ ಸರಿಯಾದ ಸೂಚನಾ ಫಲಕವಿಲ್ಲದೆ ಸ್ಥಳೀಯ ಅಧಿಕಾರಿಗಳ ನಿರ್ಲಕ್ಷತೆಯಿಂದ ರಾತ್ರಿ ವೇಳೆ ಆದ ಅಪಘಾತದಲ್ಲಿ ರೈತ ಮುಖಂಡ ಟಿ.ಎಂ ವೆಂಕಟೇಶ್ ಕೆರೆಯಲ್ಲಿ ಬಿದ್ದು ಮೃತಪಟ್ಟಿದ್ದು ಸರ್ಕಾರದಿಂದ ಪರಿಹಾರವನ್ನು ಕೊಡಿಸಿಕೊಡುವಂತೆ ಮೃತನ ಪತ್ನಿ ಮುನಿರತ್ನಮ್ಮ ಹಾಗೂ ಮಗ ಯಶವಂತ್ ಅವರು ಗುರುವಾರ ಜಿಲ್ಲಾಧಿಕಾರಿಗೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮನವಿ ಮಾಡಿ ಮಾತನಾಡಿದ ಮುನಿರತ್ನಮ್ಮ ಮತ್ತು ಕುಟುಂಬದವರು ಮೃತ ಟಿ.ಎಂ ವೆಂಕಟೇಶ್ ರೈತ ಮುಖಂಡರಾಗಿದ್ದು ಹಲವಾರು ರೈತಪರ ಕಾರ್ಯಕ್ರಮ ಹಾಗೂ ಹೋರಾಟಗಳಲ್ಲಿ ಭಾಗವಹಿಸಿದ್ದಾರೆ ಜಿಲ್ಲೆಯಲ್ಲಿ ಉನ್ನತ ರೈತ ಮುಖಂಡರಾಗಿದ್ದು ಇವರು ಬಡ ರೈತ ಕುಟುಂಬದಿಂದ ಬಂದಿದ್ದರು ಕೋಲಾರ ಜಿಲ್ಲಾ ರೈತರ ಜನಪರ ಕಾರ್ಯಕ್ರಮದಲ್ಲಿ ಭಾಗವಹಿಸಿ ಕೋಲಾರದಿಂದ ನನ್ನ ಮನೆಗೆ ವಾಪಸ್ಸು ಬರುವಾಗ ಮುದುವಾಡಿ ಕೆರೆಗೆ ಕಾರು ಬಿದ್ದು ಮೃತರಾದರು ಈ ರಸ್ತೆಯು ರಾಜ್ಯ ಹೆದ್ದಾರಿಯಾಗಿದ್ದು ರಸ್ತೆ ಅಗಲೀಕರಣವಾಗದೇ ಹೆಚ್ಚು ವಾಹನಗಳು ಓಡಾಡುತ್ತಿದ್ದು ಹಾಗು ರಾತ್ರಿ ವೇಳೆ ಕತ್ತಲಿನಲ್ಲಿ ಯಾವುದೇ ವಿದ್ಯುತ್ ಬೆಳಕು ಇಲ್ಲದೇ ಇರುವ ಕಾರಣ ಆದ ಅಪಘಾತದಲ್ಲಿ ನನ್ನ ಮೃತಪಟ್ಟಿದ್ದಾರೆ ಎಂದು ತಿಳಿಸಿದರು.
ಈ ಘಟನೆಯು ಅಧಿಕಾರಿಗಳ ನಿರ್ಲಕ್ಷತೆಯಿಂದ ಅಪಘಾತದಲ್ಲಿ ಮೃತಪಟ್ಟಿದ್ದು, ತಾವುಗಳು ದಯಮಾಡಿ ನನ್ನ ಗಂಡನಿಗೆ ಜಿಲ್ಲಾಡಳಿತದಿಂದ ಹಾಗೂ ರಾಜ್ಯ ಸರ್ಕಾರದಿಂದ ಮಾನವೀಯತೆ ದೃಷ್ಟಿಯಿಂದ ಪರಿಹಾರವನ್ನು ಕೊಡಿಸಿಕೊಡಬೇಕೆಂದು ಮನವಿ ಮಾಡಿದರು.
ಇದನ್ನು ಓದಿದ್ದೀರಾ..? ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ
ಈ ಸಂದರ್ಭದಲ್ಲಿ ಕಾರ್ಮಿಕ ಮುಖಂಡ ಗಾಂಧಿನಗರ ನಾರಾಯಣಸ್ವಾಮಿ, ಜೆಎಂಎಸ್ ಮುಖಂಡರಾದ ವಿ.ಗೀತಾ, ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಅಧ್ಯಕ್ಷ ಎನ್.ಎನ್ ಶ್ರೀರಾಮ್, ತಾಲೂಕು ಕಾರ್ಯದರ್ಶಿ ವಿ.ನಾರಾಯಣರೆಡ್ಡಿ, ಮುಂತಾದವರು ಇದ್ದರು.




