ಉಡುಪಿ | ಮಲ್ಪೆ ಬಂದರು ಸರ್ಕಾರಿ ಭೂಮಿಯ ಅಕ್ರಮ ಗುತ್ತಿಗೆ ತಕ್ಷಣ ರದ್ದುಪಡಿಸಬೇಕು : ಅರುಣ್‌ ಕುಂದರ್‌

Date:

ಉಡುಪಿ ಜಿಲ್ಲೆಯ ಮಲ್ಪೆ ಕಡಲ ತೀರದ ಸುಮಾರು ಎಂಟು ಎಕರೆ ಸರ್ಕಾರಿ ಬಂದರು ವ್ಯಾಪ್ತಿಯ ಭೂಮಿಯನ್ನು ಪಾರದರ್ಶಕತೆ ಇಲ್ಲದೆ, ಸಾರ್ವಜನಿಕರ ಅನುಮತಿ ಪಡೆಯದೆ, ಹೊರಗುತ್ತಿಗೆ ನೀಡಲಾಗಿದೆ. ಸರ್ಕಾರಿ ಭೂಮಿಯ ಅಕ್ರಮ ಗುತ್ತಿಗೆ ತಕ್ಷಣ ರದ್ದುಪಡಿಸಬೇಕು ಎಂದು ಹಿಂದುಳಿದ ವರ್ಗಗಳ ಆಯೋಗದ ಮಾಜಿ ಸದಸ್ಯ ಅರುಣ್‌ ಕುಂದರ್‌ ಕಲ್ಗದ್ದೆ ಹೇಳಿದ್ದಾರೆ.

- Advertisement -

ಮಲ್ಪೆ ಬಂದರು ಸರ್ಕಾರಿ ಭೂಮಿಯ ಅಕ್ರಮ ಗುತ್ತಿಗೆ ಈ ಘಟನೆ ಉಡುಪಿ ಜಿಲ್ಲೆಯ ಜನತೆಗೆ ಆಘಾತ ಮತ್ತು ಅಸಮಾಧಾನ ಉಂಟುಮಾಡಿದೆ. ಸರ್ಕಾರಿ ಆಸ್ತಿ ಜನರ ಆಸ್ತಿ. ಸಾರ್ವಜನಿಕರಿಗೆ ಸೇರಿದ ಬಂದರು ಪ್ರದೇಶವನ್ನು ಖಾಸಗಿ ಸಂಸ್ಥೆ/ಸಂಘಗಳ ಲಾಭಕ್ಕಾಗಿ ವರ್ಗಾವಣೆ ಮಾಡುತ್ತಿರುವುದು ಕಾನೂನುಬಾಹಿರ, ಅಸಂವಿಧಾನಿಕ ಮತ್ತು ಜನಹಿತವಿರೋಧಿ ಕ್ರಮವಾಗಿದೆ. ಸ್ಥಳ ಪರಿಶೀಲನೆ, ಪರಿಸರ ಪ್ರಭಾವ, ಮೀನುಗಾರ ಸಮುದಾಯದ ಅಭಿಪ್ರಾಯ ಪಡೆದುಕೊಳ್ಳದೆ ಈ ಗುತ್ತಿಗೆ ನೀಡಲಾಗಿದೆ. ಮಲ್ಪೆ ಕಡಲತೀರದಲ್ಲಿ ನಿರ್ಮಿಸಿದ್ದ ಮಕ್ಕಳ ಆಟದ ಮೈದಾನ, ಭಜನಾ ಕ್ಷೇತ್ರ, ಪ್ರವಾಸೋದ್ಯಮ ಮೂಲಸೌಕರ್ಯಗಳ ಬಳಕೆಗೆ ಸಾರ್ವಜನಿಕರಿಗೆ ಇರುವ ಹಕ್ಕು ಉಲ್ಲಂಘನೆಯಾಗಿದೆ. ಮಲ್ಪೆ ಬಂದರು ಉಡುಪಿ ಜಿಲ್ಲೆಯ ಮೀನುಗಾರಿಕೆ ಆರ್ಥಿಕತೆಗೆ ಕೇಂದ್ರ, ಬಂದರು ಚಟುವಟಿಕೆಗಳಿಗೆ ಮೂಲಸೌಕರ್ಯ, ಪ್ರವಾಸೋದ್ಯಮದ ಪ್ರಮುಖ ಕೇಂದ್ರ, ಭಜನಾ-ಸಾಂಸ್ಕೃತಿಕ ಚಟುವಟಿಕೆಗಳ ವಿಕಾಸ ಕ್ಷೇತ್ರ ಹೀಗಾಗಿ ಈ ಪ್ರದೇಶದ ಭೂಮಿಯನ್ನು ವ್ಯವಹಾರಿಕ ಹಕ್ಕಿಗೆ ಒಳಪಡಿಸುವುದು ಭವಿಷ್ಯದ ಬಂದರು ಮತ್ತು ಮೀನುಗಾರ ಸಮುದಾಯಕ್ಕೆ ಅಪಾಯಕಾರಿ ಎಂದಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಹೊಸ ಓದು | ಬಿ. ಚಂದ್ರೇಗೌಡರ ‘ಕಾಳ ಮಾವನ...

ಬಿ. ಚಂದ್ರೇಗೌಡರ 'ಬಯಲು ಸೀಮೆಯ ಕಟ್ಟೆಪುರಾಣ' ಅಂಕಣ ಬರಹದಿಂದ ಎದ್ದುಬಂದ ಕಾಳಮಾವ ಈಗ ತನ್ನ ಕಡೇ ದಿನಗಳಲ್ಲಿದ್ದಾರೆ. ಅವರು ಕಣ್ಣುಮುಚ್ಚುವ, ಕಾಲುಮಡಚುವ ದೃಶ್ಯಗಳು ಭಾರತದ ಆತ್ಮಸಾಕ್ಷಿಯ ಅಂತ್ಯಸಂಸ್ಕಾರವನ್ನು ಸಂಕೇತಿಸುವಂತಿವೆ. ನಮ್ಮ ನೆಲದ ನಾಲಿಗೆನಿಷ್ಠೆ...

ಬ್ರಿಟಿಷ್ ಕಾಲದ ʼಗುಲಾಮಗಿರಿʼ ಕಾನೂನುಗಳೇ ಇಂದಿನ ಪೊಲೀಸ್‌ ವ್ಯವಸ್ಥೆಯ...

ಸ್ವಾತಂತ್ರ್ಯ ಬಂದು ದಶಕಗಳೇ ಕಳೆದಿದ್ದರೂ, ನಾವಿನ್ನೂ ಬ್ರಿಟಿಷರು ಭಾರತೀಯರನ್ನು ದಮನ ಮಾಡಲು ರೂಪಿಸಿದ 1861ರ ಪೊಲೀಸ್ ಕಾಯಿದೆಯ ನೆರಳಿನಲ್ಲೇ ಬದುಕುತ್ತಿದ್ದೇವೆಯೇ? ಖಾಕಿ ಪಡೆಯನ್ನು 'ಪ್ರಜೆಗಳ ರಕ್ಷಕ'ನಾಗಿಸಬೇಕಿದ್ದ ವ್ಯವಸ್ಥೆ, ಇಂದಿಗೂ ರಾಜಕಾರಣಿಗಳ ಕೈಗೊಂಬೆಯಾಗಿ ಉಳಿದುಕೊಳ್ಳಲು...

ಯಾರು ಹಿತವರು ಈ ಇಬ್ಬರೊಳಗೆ? ನೇಹಾ ಬೋರಾ ಅಭಿಜಿತ್...

“ಹೋಲಿಕೆ ಬೇಡ, ಒಗ್ಗಟ್ಟು ಬೇಕು. ನಾವೆಲ್ಲರೂ ಒಟ್ಟಾಗಿ ಚುನಾವಣಾ ಆಯೋಗದ ಅಕ್ರಮಗಳ ವಿರುದ್ಧ ಹೋರಾಡಬೇಕು” ಎಂದು ನೇಹಾ ಬರೆದರೆ, ಅದಕ್ಕೆ ಅಭಿಜೀತ್ ಉತ್ತರ- “ಇಂಕ್ವಿಲಾಬ್ ಜಿಂದಾಬಾದ್” ನೇಹಾ ಬೋರಾ ಮತ್ತು ಅಭಿಜಿತ್ ದೀಪ್ಕೆ ನಡುವೆ...

ಗುತ್ತಿಗೆ ಒಪ್ಪಿಗೆ ಪತ್ರ ತಕ್ಷಣ ರದ್ದುಪಡಿಸಬೇಕು, ವಿಚಾರಣೆಗೆ ನ್ಯಾಯಿಕ/ನಿಜಾನ್ವೇಷಣಾ ಸಮಿತಿ ರಚಿಸಬೇಕು, ಭೂಮಿ ಬಳಕೆ ಕುರಿತು ಸಾರ್ವಜನಿಕ ಗ್ರಾಮಸಭೆ / ಸಾರ್ವಜನಿಕ ವಿಚಾರಣೆ ನಡೆಸಬೇಕು, ಭೂಮಿಯ ಸಮಗ್ರ ಬಳಕೆ ಕುರಿತು ಮೀನುಗಾರರು, ಸ್ಥಳೀಯರು, ಪ್ರವಾಸೋದ್ಯಮ ಸಂಘಟನೆಗಳು, ಪರಿಸರ ತಜ್ಞರು ಹಾಗೂ ಆಡಳಿತ ಸಮಿತಿಗಳ ಸಲಹೆ ಕಡ್ಡಾಯವಾಗಿ ಪಡೆದುಕೊಳ್ಳಬೇಕು. ಜನರಿಂದ ಜನರಿಗಾಗಿ ಭೂಮಿಯನ್ನು ಉಳಿಸೋಣ, ಮಲ್ಪೆ ಬಂದರು ಜನರ ಬದುಕು, ಸಂಸ್ಕೃತಿ ಮತ್ತು ಹಕ್ಕುಗಳಿಗೆ ಸಂಬಂಧಿಸಿದ ಸ್ಥಳ. ಅದು ಯಾವುದೂ ರಾಜಕೀಯ / ವ್ಯಾಪಾರಿಕ ಒತ್ತಡಕ್ಕೆ ಒಳಡಾಗಬಾರದು. ನಾವು ಈ ಹೋರಾಟವನ್ನು ಕಾನೂನು ಪರ, ಶಾಂತಿಪೂರ್ಣ ಮತ್ತು ಜನತಾಂತ್ರಿಕ ವಿಧಾನದಲ್ಲಿ
ಮುಂದುವರಿಸುತ್ತೇವೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಕಲೇಶಪುರ | 25 ವರ್ಷ ನೆನಗುದಿಗೆ ಬಿದ್ದಿದ್ದ ಆಟೋ ನಿಲ್ದಾಣ ನಿರ್ಮಾಣ 

ಹಾಸನ ಜಿಲ್ಲೆ ಸಕಲೇಶಪುರ ಪಟ್ಟಣದ ಹಳೆ ಬಸ್ ನಿಲ್ದಾಣದ ಸಮೀಪ ಸ್ಥಳೀಯ...

ಕಾರವಾರ | ಗ್ರಾಮ ಆಡಳಿತ ಅಧಿಕಾರಿ ಪರೀಕ್ಷೆ ಸುಸೂತ್ರ: ಒಟ್ಟು 11,671 ಅಭ್ಯರ್ಥಿಗಳು ಹಾಜರು

ಕಾರವಾರ: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ವತಿಯಿಂದ ಕಂದಾಯ ಇಲಾಖೆಯ ಗ್ರಾಮ...

ಹಾಸನ | ₹426 ಕೋಟಿ; ಹಾಸನ-ಬೇಲೂರು ಚತುಷ್ಪಥ ರಸ್ತೆ ಅಭಿವೃದ್ಧಿ ಯೋಜನೆ; ಸಂಸದ ಶ್ರೇಯಸ್ ಪಟೇಲ್ 

ಹಾಸನ ನಗರದಲ್ಲಿ ಸುದ್ದಿಗಾರರೊಂದಿಗೆ ಸಂಸದ ಶ್ರೇಯಸ್ ಪಟೇಲ್ ಮಾತನಾಡಿ, ಹಾಸನ -...

ಯಲ್ಲಾಪುರ | ವಜ್ರಳ್ಳಿಯಲ್ಲಿ ರಸ್ತೆ ಕಾಮಗಾರಿಗೆ ಸಂಗ್ರಹಿಸಿದ್ದ ₹36 ಸಾವಿರ ಮೌಲ್ಯದ ಕಡಿ, ಎಂ-ಸ್ಯಾಂಡ್ ಕಳವು

ಯಲ್ಲಾಪುರ: ರಸ್ತೆ ಕಾಮಗಾರಿಗಾಗಿ ಸಂಗ್ರಹಿಸಿಟ್ಟಿದ್ದ ಕಡಿ ಹಾಗೂ ಎಂ-ಸ್ಯಾಂಡ್ ಕಳವು ಮಾಡಿರುವ...