ಹಾವೇರಿ | ಪ್ರಾಣಿ-ಪಕ್ಷಿಗಳಿಂದ ಬೆಳೆ ರಕ್ಷಿಸಲು ಮೈಕ್‌ ಮೊರೆಹೋದ ರೈತರು

Date:

  • ಮೈಕ್‌‌ನಲ್ಲಿ ತಮ್ಮ ಧ್ವನಿ ರೆಕಾರ್ಡ್‌ ಮಾಡಿ ಹೊಲದ ಸುತ್ತಲೂ ಅಳವಡಿಸಿದ್ದಾರೆ
  • ʼಕೂಗುವ ಶಬ್ದ ಹೊರ ಬರುವುದರಿದ ಪ್ರಾಣಿ-ಪಕ್ಷಿಗಳು ಹೊಲದ ಕಡೆ ಸುಳಿಯುತ್ತಿಲ್ಲʼ

ರೈತರು ತಾವು ಬೆಳೆದ ಬೆಳೆಗಳನ್ನು ಪ್ರಾಣಿ–ಪಕ್ಷಿಗಳಿಂದ ರಕ್ಷಿಸಿ ಕೊಳ್ಳಲು ಹೊಲದ ಸುತ್ತಲೂ ಹಾಕಲಾಗುತ್ತಿದ್ದ ಮುಳ್ಳಿನ ಬೇಲಿ, ಸೀರೆಯ ಬೇಲಿ ಕಟ್ಟುವುದು, ಬೆದರು ಗೊಂಬೆ ನಿಲ್ಲಿಸುವುದು, ಗಂಟೆಗಳಿಗೆ ಪ್ರಾಣಿ-ಪಕ್ಷಗಳು ‘ಡೋಂಟ್‌ ಕೇರ್’ ಎನ್ನುತ್ತಿವೆ. ಹೀಗಾಗಿ, ಅವುಗಳನ್ನು ನಿಯಂತ್ರಿಸಲು ರೈತರು ತಂತ್ರಜ್ಞಾನದ ಮೊರೆ ಹೋಗಿದ್ದಾರೆ.

ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕಿನ ಹಳೇ ವೀರಾಪುರ ಗ್ರಾಮದ ರೈತರು ತಮ್ಮ ಜಮೀನಿನಲ್ಲಿ ಬೆಳೆದ ಬೆಳೆ ರಕ್ಷಣೆಗಾಗಿ ಮಿನಿ ರೆಕಾರ್ಡೆ‌ಬಲ್ ಮೈಕ್‌(ಧ್ವನಿ ದಾಖಲಿಸಬಹುದಾದ ಧ್ವನಿವರ್ಧಕ) ಬಳಸಲಾರಂಭಿಸಿದ್ದಾರೆ. ಗ್ರಾಮದ ರೈತ ಸಿದ್ದನಗೌಡ ಹೊಸಗೌಡ, ತಮ್ಮ ನಾಲ್ಕು ಎಕರೆ ಜಮೀನಿನಲ್ಲಿರುವ ಸೂರ್ಯಕಾಂತಿ ಬೆಳೆ ರಕ್ಷಣೆಗಾಗಿ ಈ ಮೈಕ್‌ಅನ್ನು ಅಳವಿಡಿಸಿದ್ದಾರೆ.

ಹೊಲದ ಸುತ್ತಲೂ ಸ್ಪೀಕರ್‌ಗಳನ್ನು ಅಳವಡಿಸಿದ್ದು, ಮೈಕ್‌‌ನಲ್ಲಿ ರೈತರು ತಮ್ಮ ಧ್ವನಿ ರೆಕಾರ್ಡ್‌ ಮಾಡಿ, ಹೊಲದಲ್ಲಿ ನಿರಂತರವಾಗಿ ಸದ್ದು ಕೇಳುವಂತೆ ಮಾಡಿದ್ದಾರೆ. ಹೀಗಾಗಿ ಪ್ರಾಣಿ–ಪಕ್ಷಿಗಳು ಹೊಲದ ಕಡೆ ಸುಳಿಯದಿರುವುದು ಕಂಡುಬಂದಿದೆ.

“ಬೆಳೆ ಬೆಳೆದು ನಿಂತ ನಂತರ, ಕಟಾವು ಮಾಡೋವರೆಗೆ ತಿಂಗಳುಗಟ್ಟಲೆ ದಿನಪೂರ್ತಿ ಹೊಲದಲ್ಲಿ ಶಬ್ದ ಮಾಡುವುದು ಕಷ್ಟದ ಕೆಲಸ. ಹಾಗಾಗಿ ಹೊಲದ ಸುತ್ತಲೂ ಸೀರೆಯ ಬೇಲಿ ಕಟ್ಟುವುದು, ಗಾಳಿ ಬಿಸಿದಾಗಲೆಲ್ಲ ಶಬ್ದ ಮಾಡುವಂತೆ ಗಂಟೆ ಕಟ್ಟುವುದು ಇತ್ಯಾದಿ ಪ್ರಯತ್ನಗಳನ್ನು ರೈತರು ಮಾಡುತ್ತಾರೆ. ಆದರೆ, ಇದೀಗ ತಂತ್ರಜ್ಞಾನದಿಂದ ಬೆಳೆ ರಕ್ಷಣೆ ಮಾಡುವಂತೆ ಕ್ರಮವಹಿಸಿದ್ದೇನೆ” ಎಂದು ರೈತ ಸಿದ್ದನಗೌಡ ಹೊಸಗೌಡ್ರು ಹೇಳಿಕೊಂಡಿದ್ದಾರೆ.

ಈ ಸುದ್ದಿ ಓದಿದ್ದೀರಾ? ಧಾರವಾಡ| ಕೃಷಿ ಕ್ಷೇತ್ರದಲ್ಲಿ ತಂತ್ರಜ್ಞಾನದ ಅಗತ್ಯವಿದೆ:...

“ಬೇಸಾಯದಲ್ಲಿ ಉಂಟಾಗಿರುವ ನಷ್ಟಕ್ಕಿಂತ, ಕೈಗೆ ಬಂದ ಬೆಳೆ ಉಳಿಸಿಕೊಳ್ಳುವುದು ಸವಾಲಾಗಿತ್ತು. ಪ್ರತಿ ಸಲ ಬೆಳೆ ಬಂದಾಗ ಗಿಳಿಗಳು, ಗುಬ್ಬಿ–ಕಾಗೆಗಳ ಕಾಟದಿಂದ ಹೈರಾಣಾಗಿದ್ದೆವು. ಒಮ್ಮೆ ಪಕ್ಕದ ಮಾಸೂರಿನ ಸಂತೆಯಲ್ಲಿ ಮೈಕ್‌‌ಗಳನ್ನು ಮಾರಾಟ ಮಾಡುತ್ತಿದ್ದರು. ಅದನ್ನು ₹400 ಕೊಟ್ಟು ಖರೀದಿಸಿದೆ. ಕೂಗುವ ಧ್ವನಿಯನ್ನು ಮೈಕ್‌‌ನಲ್ಲಿ ರೆಕಾರ್ಡ್ ಮಾಡಿದ್ದೇವೆ. ನಮ್ಮ ಹೊಲದ ಸುತ್ತ ನಾಲ್ಕು ಮೈಕ್‌‌ಗಳನ್ನು ಗಿಡಕ್ಕೆ ಕಟ್ಟಿದ್ದೇನೆ. ಕೂಗುವ ಶಬ್ದ ಹೊರ ಬರುವುದರಿದ ಯಾವುದೇ ಪ್ರಾಣಿ ಪಕ್ಷಿಗಳು ನಮ್ಮ ಹೊಲದ ಕಡೆ ಸುಳಿಯುತ್ತಿಲ್ಲ” ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ರೈತರು ಬೆಳೆದಿರುವ ತೊಗರಿ, ಜೋಳ, ಮೆಕ್ಕೆಜೋಳ, ಸೂರ್ಯ ಕಾಂತಿ ಹೀಗೆ ಹಲವು ಬೆಳೆಗಳನ್ನು ಪ್ರಾಣಿ-ಪಕ್ಷಿಗಳಿಂದ ರಕ್ಷಿಸಲು ಹಳೆಯ ವೀರಾಪುರ ಗ್ರಾಮದ ರೈತರು ಹೊಲದ ಸುತ್ತಲೂ ಮೈಕ್ ಅಳವಡಿಸಿದ್ದಾರೆ ಎಂದು ಕಂಡುಬಂದಿದೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೆಂಗಳೂರು | ನ್ಯಾಯಾಂಗ ಬಡಾವಣೆಯಲ್ಲಿ ಬೀದಿ ಬದಿ ವ್ಯಾಪಾರಿಯ ಎಳನೀರು ಕಳ್ಳತನ

ಬಡ ವ್ಯಾಪಾರಿಯೊಬ್ಬರು ಮಾರಾಟ ಮಾಡಲು ತಂದಿರಿಸಿದ್ದ ಸುಮಾರು 800 ಎಳನೀರು ರಾತ್ರೋರಾತ್ರಿ...

ಈಗಲಾದರೂ ಚರ್ಚೆಗೆ ಬರುತ್ತದೆಯೇ ಪ್ರಾದೇಶಿಕ ಅಸಮಾನತೆ ಕೂಗು

ಕರ್ನಾಟಕ ಏಕೀಕರಣವಾಗಿ ಅರ್ಧ ಶತಮಾನ ಕಳೆದರೂ ಇಡೀ ಕರ್ನಾಟಕವನ್ನು ಸಮಗ್ರವಾಗಿ ಅಭಿವೃದ್ಧಿಯ...

ಉತ್ತರ ಕನ್ನಡ | ಬೇಸಿಗೆಗೂ ಮುನ್ನವೇ ನೀರಿನ ಬವಣೆ; ಸಂಕಷ್ಟದಲ್ಲಿ ಗ್ರಾಮಗಳು

ಶಿರಸಿ ಮಲೆನಾಡು ಆದರೆ, ಪ್ರತಿ ವರ್ಷ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಎದುರಾಗುತ್ತದೆ....

ಚಾಮರಾಜನಗರ | ಸರ್ವರ್‌ ಸಮಸ್ಯೆಯಿಂದ ವಸತಿ ಯೋಜನೆ ದಾಖಲೆ ಸಲ್ಲಿಕೆ ವಿಳಂಬ; ಕಾಲಾವಧಿ ಮುಂದೂಡುವಂತೆ ಒತ್ತಾಯ

ವಸತಿ ಯೋಜನೆಗಳ ಅಡಿಯಲ್ಲಿ ಆಯ್ಕೆಯಾಗಿರುವ ಫಲಾನುಭವಿಗಳಿಗೆ ದಾಖಲೆಗಳನ್ನು ಸಲ್ಲಿಸಲು ನವೆಂಬರ್‌ 30...