ಉಡುಪಿ ತಾಲೂಕಿನ ಇಂದ್ರಾಳಿ ಮಂಚಿ ನೂರಾನಿ ಮಸೀದಿಯ ಆಡಳಿತ ಸಮಿತಿಗೆ ನೂತನ ಸದಸ್ಯರನ್ನು ಆಯ್ಕೆ ಮಾಡಲಾಗಿದೆ.
ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯ ಆದೇಶದಂತೆ ಮಂಚಿ ನೂರಾನಿ ಮಸೀದಿಯ ಮುಂದಿನ ಮೂರು ವರ್ಷಗಳ ಅವಧಿಗೆ 11 ಸದಸ್ಯರನ್ನೊಳಗೊಂಡ ಆಡಳಿತ ಸಮಿತಿಯ ಆಯ್ಕೆ ಪ್ರಕ್ರಿಯೆ ನಡೆಯಿತು.

ಸೆಪ್ಟೆಂಬರ್ 27ರಂದು ಚುನಾವಣಾಧಿಕಾರಿ ಕಮಲ್ ಶಾ ಅಲ್ತಾಫ್ ಹುಸೈನ್ ಅವರ ಮೇಲ್ವಿಚಾರಣೆಯಲ್ಲಿ ಹಾಗೂ ಮಂಚಿ ನೂರಾನಿ ಮಸೀದಿಯ ಆಡಳಿತಾಧಿಕಾರಿ ಮೊಹಮ್ಮದ್ ಹುಸೈನ್ ಅವರ ಸಹಕಾರದೊಂದಿಗೆ ಚುನಾವಣಾ ಪ್ರಕ್ರಿಯೆ ನಡೆಸಲಾಯಿತು.
ನೂತನ ಆಡಳಿತ ಸಮಿತಿಗೆ ಅನಸ್ ಮೊಹಮ್ಮದ್, ಅನ್ಸಾರ್ ಶೇಖ್ ಮೊಹಮ್ಮದ್, ಅಸ್ವಾದ್ ಅಹ್ಮದ್ ಶೇಖ್, ಬುಡ್ನಾರ್ ಗಫೂರ್ ಸಾಹೇಬ್, ಕೆ. ಅಶ್ರಫ್ ಅಲಿ, ಮೊಹಮ್ಮದ್ ಆದಿಲ್, ಬಿ. ಶುಕೂರ್ ಸಾಹೇಬ್, ಫರ್ಹಾಜ್ ಫಿರೋಜ್ ನಾಹೀದ್, ಮೆಹರಾಜ್, ಪಿ. ಫಾರೂಕ್ ಸಾಹೇಬ್ ಹಾಗೂ ಶಬ್ಬೀರ್ ಅಹ್ಮದ್ ಕಾರ್ಕಳ ಸೇರಿದಂತೆ ಸದಸ್ಯರು ಆಯ್ಕೆಯಾಗಿದ್ದಾರೆ.
ನೂತನ ಆಡಳಿತ ಸಮಿತಿಯು ಮುಂದಿನ ಮೂರು ವರ್ಷಗಳ ಅವಧಿಯಲ್ಲಿ ಮಸೀದಿಯ ಆಡಳಿತ ನಿರ್ವಹಣೆ ಹಾಗೂ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.






