ಬಾಗಲಕೋಟೆ ವಿವಿಯ ಪ್ರಥಮ ಘಟಿಕೋತ್ಸವ: 16 ಸ್ನಾತಕೋತ್ತರ ಪದವೀಧರರಿಗೆ ಚಿನ್ನದ ಪದಕ

Date:

ಶಿಕ್ಷಣದ ಜೊತೆಗೆ ಸಂಸ್ಕಾರ, ಸಂಪ್ರದಾಯಗಳನ್ನು ಬೆಳೆಸಿಕೊಂಡು, ಆ ಸಂಪ್ರದಾಯಗಳ ಜೊತೆ ಆಧುನಿಕತೆಯಲ್ಲಿ ಮುನ್ನಡೆಯಬೇಕಿದೆ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಹೇಳಿದರು.

- Advertisement -

ಬಾಗಲಕೋಟೆಯ ಜಮಖಂಡಿ ನಗರದ ಬಿಎಲ್‌ಡಿಇಎ ಸಂಸ್ಥೆಯ ಆವರಣದಲ್ಲಿರುವ ದರ್ಬಾರ್ ಸಭಾಂಗಣದಲ್ಲಿ ಜರುಗಿದ ಬಾಗಲಕೋಟೆ ವಿಶ್ವವಿದ್ಯಾಲಯದ ಪ್ರಥಮ ಘಟಿಕೋತ್ಸವದಲ್ಲಿ 16 ಜನ ಸ್ನಾತಕೋತ್ತರ ಪದವಿಯ ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಸಹಿತ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು, “ಆಧುನಿಕ ತಂತ್ರಜ್ಞಾನ ಬೆಳೆದಂತೆಲ್ಲ ನೀವೆಲ್ಲಾ ಬೆಳೆದುಕೊಂಡು ಹೋಗಬೇಕಿದೆ. ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿದ್ದು, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಭಾಗವಹಿಸಿ ನಿಮ್ಮ ಭವಿಷ್ಯ ರೂಪಿಸಿಕೊಳ್ಳಬೇಕು” ಎಂದು ತಿಳಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಚಿಕ್ಕಮಗಳೂರು | ಉದ್ಯಾನವನಕ್ಕೆ ಮೀಸಲಿಟ್ಟ ಜಾಗದಲ್ಲಿ ಸಂತೆ ನಡೆಸಲು...

ಉದ್ಯಾನವನ ಮಾನವನ ಮಾನಸಿಕ ನೆಮ್ಮದಿ, ವಿನೋದ, ವಿಶ್ರಾಂತಿ ಹಾಗೂ ವನ್ಯಜೀವಿ ಹಾಗೂ ನೈಸರ್ಗಿಕ ಪರಿಸರವನ್ನು ಸಂರಕ್ಷಿಸಲು ಮೀಸಲಿಟ್ಟ ಒಂದು ಹಸಿರು ತಾಣ ಎಂದೇ ಹೇಳಬಹುದು. ಆಧುನಿಕ ವ್ಯವಸ್ಥೆಯಲ್ಲಿ ನಗರ ಜೀವನದ ಜಂಜಾಟದ ನಡುವೆ...

ವಿಜಯಪುರ | 80ರ ಗಡಿ ದಾಟಿದ ಬಿಳಿ ಜೋಳ,...

ವಿಜಯಪುರ ಎಂದಾಕ್ಷಣ ನೆನಪಾಗುವುದು ಬಿಳಿ ಜೋಳದ ರೊಟ್ಟಿ. ಉತ್ತರ ಕರ್ನಾಟಕದ ಜನರ ಬದುಕು, ಆಹಾರ ಸಂಸ್ಕೃತಿಯ ಅವಿಭಾಜ್ಯ ಭಾಗವಾಗಿರುವ ಜೋಳವೇ ಈಗ ಸಾಮಾನ್ಯ ಜನರ ಕೈಗೆಟುಕದ ವಸ್ತುವಾಗುತ್ತಿದೆ. ಕೆಲವೇ ದಿನಗಳ ಹಿಂದೆ ಕೆಜಿಗೆ...

ರಾಜಕಾರಣಿಯ ಬೆಡ್‌ರೂಮಿನಲ್ಲಿ ಪ್ರಜಾಪ್ರಭುತ್ವ ಹುಡುಕುವ ಮಾಧ್ಯಮಗಳು!

ಒಂದು ಸಣ್ಣ ಪ್ರಶ್ನೆ, ಪ್ರಿಯ ಓದುಗರೇ! ಬೆಡ್‌ರೂಮಿನ ಹೊಗೆಯ ಹಿಂದೆ ಓಡುವ ಮಾಧ್ಯಮಗಳಿಗೆ, ಜನರ ಬದುಕನ್ನು ಸುಡುತ್ತಿರುವ ಬೆಂಕಿ ಕಾಣುವುದಿಲ್ಲವೇ? ರಾಜಕಾರಣಿಯೊಬ್ಬರ ಖಾಸಗಿ ಬದುಕಿನ ಬಗ್ಗೆ ಸುದ್ದಿ ಹೊರಬಿದ್ದರೆ ಸಾಕು; ಮಾಧ್ಯಮಗಳಲ್ಲಿ ಚರ್ಚೆಗಳ ಮಹಾಪೂರ. ಯಾರು...

ಇದನ್ನು ಓದಿದ್ದೀರಾ? ಬಾಗಲಕೋಟೆ | ವಿವಿ ಮುಚ್ಚುವ ನಿರ್ಧಾರ ಕೈಬಿಡಲು ಎಸ್‌ಐಒ ಮನವಿ

“ಉನ್ನತ ಮಟ್ಟದ ಶಿಕ್ಷಣದಲ್ಲಿ ಸಾಧಿಸಿದ ಎಲ್ಲ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸುತ್ತಿದ್ದೇನೆ. ನಿಮ್ಮ ದೇಶದಲ್ಲಿ ನೀವು ಯಶಸ್ವಿಯಾಗಿರಿ. ನಿಮ್ಮ ಸಾಧನೆಗೆ ಕಠಿಣ ಶ್ರಮ ಪಟ್ಟಿದ್ದೀರಿ. ಜೀವನದ ಯಶಸ್ವಿಗೆ ನೀವು ಕಷ್ಟಪಟ್ಟು ಕೆಲಸ ಮಾಡಬೇಕಾಗುತ್ತದೆ. ಉತ್ತಮ ಮತ್ತು ಸಕಾರಾತ್ಮಕ ಮನೋಭಾವವನ್ನು ಬೆಳೆಸಿಕೊಳ್ಳಿ. ಜೀವನದ ಬದಲಾವಣೆ ಮತ್ತು ಬೆಳೆವಣಿಗೆಯಲ್ಲಿ ನಿರಂತರ ಕಲಿಕೆ, ಚಿಂತನೆ ಮತ್ತು ದೈವಿಕ ಜ್ಞಾನದ ತಿಳುವಳಿಕೆ ಅಗತ್ಯ. ಆದ್ದರಿಂದ ನೀವು ನಿರಂತರವಾಗಿ ಕಲಿಯುವದನ್ನು ಮುಂದುವರಿಸಬೇಕು” ಎಂದರು

ಮುಖ್ಯ ಅತಿಥಿ ಹಾಗೂ ಘಟಿಕೋತ್ಸವದ ಭಾಷಣಕಾರರಾಗಿ ಆಗಮಿಸಿದ್ದ ಮಹಾರಾಷ್ಟ್ರ ನಾಗಪುರದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನ ನಿರ್ದೇಶಕ ಡಾ. ಭೀಮರಾಯ್ ಮೇತ್ರಿ ಮಾತನಾಡಿ, “ಪದವಿ ಪಡೆದ ವಿದ್ಯಾರ್ಥಿಗಳು ಅದೃಷ್ಟವಂತರಾಗಿದ್ದಿರಿ. ಏಕೆಂದರೆ ನೀವು ಡಿಜಿಟಲ್ ಜಗತ್ತಿನ ಜನಿಸಿದ್ದೀರಿ. ಇಂದು ದೇಶ ಚಲನೆಯಲ್ಲಿದ್ದು, ಭಾರತ ಜಾಗತಿಕ ಬ್ರ್ಯಾಂಡ್ ಆಗಿದೆ. 2027-28ರಲ್ಲಿ ಭಾರತವು 3ನೇ ಅತಿ ದೊಡ್ಡ ಜಿಡಿಪಿಯೊಂದಿಗೆ ಆರ್ಥಿಕವಾಗಿ ಮುಂದೆ ಬರಲಿದೆ. ಭಾರತ ಇಂದು ಆತ್ಮ ನಿರ್ಭರ ಭಾರತ ಮತ್ತು ವೀಕ್ಷಿತ ಭಾರತದೊಂದಿಗೆ ಉತ್ತಮ ವೇಗದಲ್ಲಿ ಸಾಗುತ್ತಿದೆ” ಎಂದು ತಿಳಿಸಿದರು.

bagalkote1
ಸ್ನಾತಕೋತ್ತರ ಪದವಿಯಲ್ಲಿ ಸಾಧನೆ ಮಾಡಿದ ಆಯಿಷಾ ಅಲಾಸ್

“ಸಾಧನೆ, ಶ್ರೇಷ್ಠತೆ ಮನ್ನಣೆಗೆ ಕಾರಣವಾಗುತ್ತದೆ ಎಂಬುದನ್ನು ವಿದ್ಯಾರ್ಥಿಗಳು ನೆನಪಿನಲ್ಲಿಟ್ಟುಕೊಳ್ಳಬೇಕು. ಮನ್ನಣೆ ಗೌರವಕ್ಕೆ ಕಾರಣವಾದರೆ, ಗೌರವವು ಅಧಿಕಾರಕ್ಕೆ ಕಾರಣವಾಗುತ್ತದೆ. ಆದ್ದರಿಂದ ಸಂಸ್ಥೆ, ರಾಷ್ಟ್ರವನ್ನು ಹೆಮ್ಮೆಪಡಿಸಲು ಒಂದೇ ಒಂದು ಮಾರ್ಗವೆಂದರೆ ಕಾರ್ಯಕ್ಷಮತೆಯಾಗಿದೆ. ದಿನನಿತ್ಯದ ಜೀವನದಲ್ಲಿ ಶ್ರೇಷ್ಠತೆಯನ್ನು ಅಭ್ಯಾಸವನ್ನಾಗಿ ಮಾಡಿಕೊಳ್ಳುವ ಮೂಲಕ ಮಾತ್ರ ಇದನ್ನು ಸಾಧಿಸಬಹುದಾಗಿದೆ. ನೀವು ಮಾಡುವ ಯಾವುದೇ ಕೆಲಸದಲ್ಲಿ ಜಾಗತಿಕ ಅತ್ಯುತ್ತಮವಾದುದನ್ನು ಮಾನದಂಡವಾಗಿ ಇರಿಸಿ, ನಿಮ್ಮ ಮುಂದಿನ ಹೆಜ್ಜೆ ಸಮಾಜದಲ್ಲಿ ನಾಯಕನಾಗುವ ಗುರಿಯನ್ನು ಹೊಂದಬೇಕು” ಎಂದು ಹೇಳಿದರು.

ಈ ಸಂದರ್ಭದಲ್ಲಿ ಮೂವರಿಗೆ ಡಾಕ್ಟರೇಟ್ ಹಾಗೂ 16 ಮಂದಿ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಚಿನ್ನದ ಪದಕದ ಜೊತೆಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕಾರ್ಯಕ್ರಮದಲ್ಲಿ ಬಾಗಲಕೋಟೆ ವಿವಿಯ ಕುಲಪತಿ ಪ್ರೊ.ಆನಂದ ಶರದ್ ದೇಶಪಾಂಡೆ, ಕುಲಸಚಿವ ಸೋಮಲಿಂಗ ಗೆಣ್ಣೂರ, ಮೌಲ್ಯಮಾಪನ ವಿಭಾಗದ ಕುಲಸಚಿವೆ ಪ್ರೊ. ಲತಾ ಕೆ.ಜಿ, ಹಣಕಾಸು ಅಧಿಕಾರಿ ಡಾ.ಚಿದಾನಂದ ಢವಳೇಶ್ವರ ಸೇರಿದಂತೆ ಸಿಂಡಿಕೇಟ್ ಸದಸ್ಯರು, ವಿದ್ಯಾವಿಷಯಕ್ ಪರಿಷತ್ ಸದಸ್ಯರು ಉಪಸ್ಥಿತರಿದ್ದರು.

ಇದನ್ನು ಓದಿದ್ದೀರಾ? ಬಾಗಲಕೋಟೆ | ಗುರುಮಹಾಂತ ಸ್ವಾಮೀಜಿಗೆ ಗೌರವ ಡಾಕ್ಟರೇಟ್; ಎಂ ಬಿ ಪಾಟೀಲ್ ಪ್ರಶಂಸೆ

ಗೌರವ ಡಾಕ್ಟರೇಟ್ ಪ್ರದಾನ

ಬಾಗಲಕೋಟೆ ವಿವಿಯ ಘಟಿಕೋತ್ಸವದಲ್ಲಿ ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ ಮತ್ತು ಪ್ರಸಿದ್ದ ಬಾಹ್ಯಾಕಾಶ ವಿಜ್ಞಾನಿ ಎಸ್. ನಂಬಿ ನಾರಾಯಣನ್ ಹಾಗೂ ಟೆಕ್ ಉದ್ಯಮಿ ಮತ್ತು ಲೋಕೋಪಕಾರಿ ತಂತ್ರಜ್ಞಾನ ಉದ್ಯಮಿ ಮಹೇಶ ಬೆಲ್ಲದ ಅವರಿಗೆ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಗೌರವ ಡಾಕ್ಟರೇಟ್ ಪ್ರದಾನ ಮಾಡಿದರು.

16 ಮಂದಿ ಸ್ನಾತಕೋತ್ತರ ಪದವೀಧರರಿಗೆ ಚಿನ್ನದ ಪದಕ ಪ್ರದಾನ

ಉತ್ತಮ ಸಾಧನೆ ಮಾಡಿದ 16 ಜನ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ರಾಜ್ಯಪಾಲ ಗೆಹ್ಲೋಟ್ ಅವರು ಚಿನ್ನದ ಪದಕ ಪ್ರದಾನ ಮಾಡಿದರು. ಆಯಿಷಾ ಅಲಾಸ್, ಪ್ರಿಯಾಂಕ ಹಡಪದ, ಭಾಗ್ಯಶ್ರೀ ಗವಾಲಿ, ಅನೀಲ ತೆಗ್ಗಿ, ಗಾಯತ್ರಿ ಲಲಕಿ, ಜ್ಯೋತಿ ದಂಡಿನ, ವಜ್ರಕುಮಾರ ಕುಸಾನಲ್, ಗುರುರಾಜ ಗೌಡರ, ಸುಷ್ಮಾ ತಂಬಕು, ರಾಜಕುಮಾರ ಅರಳಗುಂಡಿ, ನಿಶ್ಮಿತಾ ಚೂರಿ, ಸಾತ್ವಿಕಾ, ಐಶ್ವರ್ಯ ಕೊಡಗ, ರಾಜೇಶ್ವರಿ ಹಿರೇದೇಸಾಯಿ, ಸುಜಾತಾ ಲವಟೆ, ಸನ್ಮತಿ ಕುರ್ಪೆ ಅವರು ಚಿನ್ನದ ಪದಕ ಪಡೆದುಕೊಂಡರು.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ಎಣ್ಣೆಕಾಳು ಉತ್ಪಾದನೆ ಸ್ವಾವಲಂಬನೆ ಅಗತ್ಯ : ಡಿಸಿ ಶಿಲ್ಪಾ ಶರ್ಮಾ

ಜಿಲ್ಲೆಯಲ್ಲಿ ಎಣ್ಣೆಕಾಳು ಬೆಳೆಗಳ ಉತ್ಪಾದನೆ ಹೆಚ್ಚಿಸುವ ಮೂಲಕ ಸ್ವಾವಲಂಬನೆ ಸಾಧಿಸಬೇಕು. ಕುಸುಬೆ,...

ರೈಲು ಶೌಚಾಲಯದಲ್ಲಿ ನೀರಿಲ್ಲದೆ ಪರದಾಟ: ಇಲಾಖೆಗೆ ದಂಡ ವಿಧಿಸಿದ ಶಿವಮೊಗ್ಗ ಗ್ರಾಹಕ ಆಯೋಗ

ರೈಲಿನಲ್ಲಿ ನೀರಿನ ಸೌಲಭ್ಯ ಕಲ್ಪಿಸದೆ ಸೇವಾ ನ್ಯೂನ್ಯತೆ ಎಸಗಿದ್ದಕ್ಕೆ ಸಂಬಂಧಿಸಿದಂತೆ ರೈಲ್ವೆ...

ಈ ದಿನ ಸಂಪಾದಕೀಯ | ಮೋದಿಯ 56 ಇಂಚಿನ ಅಳ್ಳೆದೆ ಮತ್ತು ಚೀನಾದ ಅತಿಕ್ರಮಣ

ಒಂದು ಕಡೆ ಚೀನಾ ನಮ್ಮ ಗಡಿ ಅತಿಕ್ರಮಿಸುತ್ತಿದ್ದರೆ, ಇನ್ನೊಂದು ಕಡೆ ಅದೇ...

ಮುಂಡಗೋಡ | ಆಲಳ್ಳಿಯಲ್ಲಿ ವೃದ್ಧೆ ಅನುಮಾನಾಸ್ಪದ ಸಾವು; ₹1.70 ಲಕ್ಷ ನಗದು, ಚಿನ್ನಾಭರಣ ನಾಪತ್ತೆ

ಮುಂಡಗೋಡ ತಾಲೂಕಿನ ಆಲಳ್ಳಿ ಗ್ರಾಮದಲ್ಲಿ 75 ವರ್ಷದ ಮಹಿಳೆಯೊಬ್ಬರು ಮನೆಯಲ್ಲಿ ಅನುಮಾನಾಸ್ಪದವಾಗಿ...