ಗ್ರಾಮೀಣ ಜನರ ಸೇವೆ ಸಲ್ಲಿಸುವುದು ನಮ್ಮ ತಂದೆಯವರ ಕನಸಾಗಿತ್ತು. ಈ ಕನಸು ಸಾಕಾರಗೊಳಿಸಲು ಮತ್ತೊಮ್ಮೆ ಕೈ ಬಲಪಡಿಸಬೇಕು ಎಂದು ಕಾಂಗ್ರೆಸ್ ಅಭ್ಯರ್ಥಿ ಉಮೇಶ ಮೇಟಿ ಹೇಳಿದರು.
ಬಾಗಲಕೋಟೆ ಗ್ರಾಮೀಣ ಭಾಗದ ಸೀತಿಮನಿ ಗ್ರಾಮದಲ್ಲಿ ಬುಧವಾರ ಬೆಳಗ್ಗೆ ಹಮ್ಮಿಕೊಂಡಿದ್ದ ಜನ ಸಂಪರ್ಕ ಸಭೆಯಲ್ಲಿ ಮಾತನಾಡಿ, ಕಳೆದ ವಿಧಾನಸಭೆ ಚುನಾವಣೆಯಲ್ಲಿ ನಿಮ್ಮೆಲ್ಲರ ಆಶೀರ್ವಾದದಿಂದ ಆಯ್ಕೆಯಾಗಿದ್ದ ನಮ್ಮ ತಂದೆ ಎಚ್.ವೈ.ಮೇಟಿ ನಿಮ್ಮೆಲ್ಲರ ಸೇವೆಗೆ ವಿವಿಧ ಯೋಜನೆಗಳನ್ನು ರೂಪಿಸಿದ್ದರು. ಗ್ರಾಮಗಳ ಅಭಿವೃದ್ಧಿಗೆ ಬದ್ಧರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಅವರ ಎಲ್ಲ ಕನಸುಗಳನ್ನು ನನಸು ಮಾಡಲು ಮತ್ತೊಮ್ಮೆ ಕಾಂಗ್ರೆಸ್ ಪಕ್ಷವನ್ನು ಆಶೀರ್ವದಿಸಬೇಕು ಎಂದು ವಿನಂತಿಸಿದರು.
ಗ್ರಾಮದ ವಿವಿಧೆಡೆ ಪ್ರಚಾರ ನಡೆಸಿ ಮತ ಯಾಚಿಸಲಾಯಿತು. ನಂತರ ಹಿರೇಮ್ಯಾಗೇರಿ, ಚಿಕ್ಕಮ್ಯಾಗೇರಿ, ಡೊಮನಾಳ, ಸುತಗುಂಡಾರ, ಮಂಕಣಿ, ದೇವಲಾಪುರ, ಚಿಟಗಿನಕೊಪ್ಪ, ಮುದಿನಕೊಪ್ಪ, ನಾಯನೇಗಲಿ, ನಾಗರಾಳ, ನಾಗಸಂಪಿಗೆ, ಹೊಸರು, ಮನಹಳ್ಳಿ, ರಾಂಪೂರ, ಹಂಡರಗಲ್ಲ ಮತ್ತಿತರ ಗ್ರಾಮಗಳಲ್ಲಿ ಸಂಜೆವರೆಗೆ ಭರ್ಜರಿ ಪ್ರಚಾರ ನಡೆಸಲಾಯಿತು.
ಇದನ್ನೂ ಓದಿ: ಬಾಗಲಕೋಟೆ ಬೈ ಎಲೆಕ್ಷನ್ | ʼಬಿಮ್ಸ್ʼ ಮೂಲಕ ಮತಬ್ಯಾಂಕ್ ಗಟ್ಟಿಗೊಳಿಸಿಕೊಂಡ್ರಾ ಕೈ ನಾಯಕರು?
ಮುಖಂಡರಾದ ಪವನ ಧರ್ಮರ, ಅಭಿಷೇಕ ಧರ್ಮರ, ಉಮೇಶ ಜಮಾದಾರ, ಬಿಷ್ಟಪ್ಪ ಚೌಧರಿ, ಯಲ್ಲಾಲಿಂಗ ಚೌದರಿ, ನಿಂಗನಗೌಡ ಕಲಬುರ್ಗಿ, ಮಲ್ಲಪ್ಪ ಬೆನಕಟ್ಟಿ, ಗೌಡಪ್ಪಗೌಡ ಹಿರೇಗೌಡರ, ಶ್ರೀಕರ ದೇಸಾಯಿ, ಹಣಮಂತ ಪೂಜಾರಿ, ತಿಪ್ಪಣ್ಣ ತಿಮ್ಮಸಾಗರ, ಈರಪ್ಪ ಸಾಳಗುಂದಿ, ಪರಶುರಾಮ ಕಾಳಗಿ, ಈರಪ್ಪ ದಂಡೀನ, ಬಸವಂತಪ್ಪ ಮೇಟಿ ಇತರರಿದ್ದರು.




