ಜಗದ್ಗುರುಗಳೊಬ್ಬರು ನನ್ನನ್ನು ಸಚಿವನನ್ನಾಗಿ ಮಾಡಬಾರದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಹೇಳಿದ್ದರಂತೆ. ನೀವು ಬೇಡ ಎಂದಿದ್ದಕ್ಕೆ, ನನ್ನನ್ನು ಸಚಿವನನ್ನಾಗಿ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ಈಗೇನು ಮಾಡುತ್ತೀಯ, ಜಗದ್ಗುರು? ಎಂದು ಸಚಿವ ವಿಜಯಾನಂದ ಕಾಶಪ್ಪನವರ್ ಪ್ರಶ್ನಿಸಿದರು.
ಹುನಗುಂದ ತಾಲೂಕಿನ ಹಾವರಗಿ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಕಾಂಗ್ರೆಸ್ ಸರ್ಕಾರ ಇರುವವರೆಗೆ ಯಾವುದೇ ಮುಖ್ಯಮಂತ್ರಿ ಮನೆಗೆ ಹೋಗುವುದಿಲ್ಲ ಎಂದು ಪ್ರಮಾಣ ಮಾಡಿದ್ದೀರಿ. ನಿನ್ನ ನೈತಿಕ ಮಟ್ಟ ಏನಾಗಿದೆ? ಯಾವ ಬಟ್ಟೆ ಹಾಕಿಕೊಂಡಿದ್ದೀಯ? ಅದಕ್ಕೆ ವಿಧೇಯನಾಗಿದ್ದೀಯ?” ಎಂದು ಪ್ರಶ್ನಿಸಿದರು.
“ಯಾವ ಬಟ್ಟೆ ಹಾಕಿಕೊಂಡಿರುತ್ತೇವೆಯೋ ಅದಕ್ಕೆ ವಿಧೇಯರಾಗಿರಬೇಕು. ರಾಜಕಾರಣಿಗಳು ಬಿಳಿ ಬಟ್ಟೆ ಹಾಕಿಕೊಳ್ಳುತ್ತಾರೆ. ಅದಕ್ಕೆ ವಿಧೇಯರಾಗಿರಬೇಕು. ಕಾವಿ, ಖಾಕಿ ಹಾಕಿಕೊಂಡವರು ಅದಕ್ಕೂ ವಿಧೇಯರಾಗಿರಬೇಕು. ನಾನು ಹೇಳಿದರೆ ನಡೆಯುತ್ತದೆ ಎಂದು ಮಾತನಾಡಿದರೆ ಏನು ನಡೆಯುತ್ತದೆ?” ಎಂದು ಪ್ರಶ್ನಿಸಿದರು.
ಕೆಲವರು ಫೇಸ್‌ಬುಕ್, ವಾಟ್ಸ್‌ಅಪ್ ಹಾಗೂ ಇನ್‌ಸ್ಟಾಗ್ರಾಮ್‌ನಲ್ಲಿ ಏನೇನೋ ಬರೆಯುತ್ತಿದ್ದಾರೆ. ಅದಕ್ಕಾಗಿಯೇ, “ಕೊಲ್ಲುವವರು ನೂರು ಜನರಿದ್ದರೆ, ಕಾಯುವವನು ಒಬ್ಬನಿದ್ದಾನೆ” ಎಂದು ಹೇಳುತ್ತಾರೆ ಎಂದು ಕಾಶಪ್ಪನವರ್ ಹೇಳಿದರು.




