ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ (ರಿ) ಆಶ್ರಯದಲ್ಲಿ ಭಾಗ್ಯನಗರದ ಪತ್ರಕರ್ತರ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಪತ್ರಕರ್ತರ ಶೈಕ್ಷಣಿಕ ಕಾರ್ಯಾಗಾರವು ಯಶಸ್ವಿಯಾಗಿ ಮುಕ್ತಾಯಗೊಂಡಿದೆ.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಚಿಕ್ಕಬಳ್ಳಾಪುರ ಜಿಲ್ಲಾ ಹಾಲು ಒಕ್ಕೂಟದ (ಚಿಮುಲ್) ಅಧ್ಯಕ್ಷರಾದ ಶ್ರೀ ವಿ. ಮಂಜುನಾಥರೆಡ್ಡಿ ರವರು, “ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವಲ್ಲಿ ಮತ್ತು ಗ್ರಾಮೀಣ ಭಾಗದ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರುವಲ್ಲಿ ಪತ್ರಕರ್ತರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಇಂತಹ ಶೈಕ್ಷಣಿಕ ಕಾರ್ಯಾಗಾರಗಳು ಪತ್ರಕರ್ತರ ವೃತ್ತಿಪರತೆ ಹಾಗೂ ಸಾಮಾಜಿಕ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಲು ಸಹಕಾರಿಯಾಗಲಿವೆ” ಎಂದು ಆಶಿಸಿದರು.
ಕಾರ್ಯಾಗಾರದಲ್ಲಿ “ಪತ್ರಕರ್ತರು ಮತ್ತು ಸಮಾಜ” ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ಹಾಗೂ ವಿಷಯ ಮಂಡನೆ ಮಾಡಿದ ಕೋಲಾರದ ಹಿರಿಯ ಪತ್ರಕರ್ತರು ಹಾಗೂ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಬಿ.ವಿ. ಗೋಪಿನಾಥ್ ರವರು, “ಬದಲಾಗುತ್ತಿರುವ ಇಂದಿನ ಡಿಜಿಟಲ್ ಯುಗದಲ್ಲಿ ಪತ್ರಕರ್ತರು ವೃತ್ತಿಪರ ಮೌಲ್ಯಗಳನ್ನು ಉಳಿಸಿಕೊಂಡು, ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸಬೇಕು. ಸಮಾಜದ ಕಟ್ಟಕಡೆಯ ವ್ಯಕ್ತಿಯ ಧ್ವನಿಯಾಗುವ ಮೂಲಕ ಮಾಧ್ಯಮ ರಂಗದ ಗೌರವವನ್ನು ಎತ್ತಿಹಿಡಿಯಬೇಕು” ಎಂದು ಕರೆ ನೀಡಿದರು.
ಇಂದಿನ ಮಾಧ್ಯಮ ರಂಗದ ನೈತಿಕತೆಯ ಬಗ್ಗೆ ಅತ್ಯಂತ ಮಹತ್ವದ ಹಾಗೂ ಚಿಂತನೆಗೆ ಹಚ್ಚುವಂತಹ ಕರೆ ನೀಡಿದ್ದಾರೆ. ಇಂದಿನ ಡಿಜಿಟಲ್ ಯುಗದಲ್ಲಿ ಪತ್ರಕರ್ತರು ಕೇವಲ 500 ರಿಂದ 5000 ರೂಪಾಯಿಗಳಂತಹ ಸಣ್ಣ ಆಮಿಷಗಳಿಗೆ ಅಥವಾ ಹಣದ ಪ್ರಭಾವಕ್ಕೆ ಒಳಗಾಗಿ ಪಕ್ಷಪಾತದ ಸುದ್ದಿ ಮಾಡುವುದನ್ನು ಸಂಪೂರ್ಣವಾಗಿ ಬಿಡಬೇಕು ಎಂದು ಅವರು ಒತ್ತಿ ಹೇಳಿದ್ದಾರೆ.
ಯಾವುದೇ ಸುದ್ದಿಯನ್ನು ಪ್ರಕಟಿಸುವ ಮುನ್ನ ಅದರ ಹಿಂದಿರುವ ಸತ್ಯ ಮತ್ತು ಸತ್ಯಾಸತ್ಯತೆಯನ್ನು ಕೂಲಂಕಷವಾಗಿ ಪರಿಶೀಲಿಸಿ, ನಿಷ್ಪಕ್ಷಪಾತವಾಗಿ ಸಮಾಜದ ಮುಂದೆ ಇಡುವುದು ಮಾಧ್ಯಮದ ಮುಖ್ಯ ಉದ್ದೇಶವಾಗಬೇಕು. ಅಷ್ಟೇ ಅಲ್ಲದೆ, ಪ್ರತಿಯೊಬ್ಬ ಪತ್ರಕರ್ತನೂ ಕಾನೂನು ಅಥವಾ ಸಮಾಜಕ್ಕೆ ಹೆದರುವುದಕ್ಕಿಂತ ಹೆಚ್ಚಾಗಿ, ತನ್ನ ಆತ್ಮಸಾಕ್ಷಿಗೆ ಹೆದರಿ ವೃತ್ತಿಪರ ಮೌಲ್ಯಗಳನ್ನು ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಉಳಿಸಿಕೊಳ್ಳಬೇಕು ಎಂದು ಅವರು ಕಿವಿಮಾತು ಹೇಳಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಬಾಗೇಪಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಶ್ರೀ ಡಿ.ಎನ್. ಕೃಷ್ಣಾರೆಡ್ಡಿ ರವರು, “ತಾಲ್ಲೂಕಿನ ಪತ್ರಕರ್ತರ ಕ್ಷೇಮಾಭಿವೃದ್ಧಿಗೆ ಮತ್ತು ಅವರ ವೃತ್ತಿ ಕೌಶಲ್ಯವನ್ನು ಹೆಚ್ಚಿಸಲು ಸಂಘವು ನಿರಂತರವಾಗಿ ಇಂತಹ ಹತ್ತು ಹಲವು ಉಪಯುಕ್ತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದೆ. ಕಾರ್ಯಾಗಾರದ ಸದುಪಯೋಗವನ್ನು ಎಲ್ಲಾ ಪತ್ರಕರ್ತರು ಪಡೆದುಕೊಳ್ಳಬೇಕು” ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಖಜಾಂಚಿ ಹಾಗೂ ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿಗಳಾದ ಶ್ರೀ ಎಂ. ವಾಸುದೇವಹೊಳ್ಳ, ಚಿಕ್ಕಬಳ್ಳಾಪುರ ಜಿಲ್ಲಾಧ್ಯಕ್ಷರಾದ ಶ್ರೀ ವಿ. ರವಿಕುಮಾರ್, ಭಾಗವಹಿಸಿದರು ಮತ್ತು ತಾಲ್ಲೂಕು ಪತ್ರಕರ್ತರು ಆದ ಶ್ರೀ ರಾಮಕೃಷ್ಣ ಹೆಗ್ಗಡೇ ,ಸ್ಯಯದ್ ಸಿದ್ದಿಕ್, ಶಂಕರ್ ರಾವ್ , ಮಂಜುನಾಥ , ಚೇಳೂರ್ ಚಲಪತಿ ,ಬಿ.ಆರ್. ಕೃಷ್ಣಾ (ಹಿರಿಯ ಪತ್ರಕರ್ತ)ಅಬ್ದುಲ್ ಕರೀಂ ಸಾಬ್ .ಎಸ್. ಸುರೇಶ್, ವಿ. ಅಶ್ವಥ್ ನಾರಾಯಣ (ಮಣಿಕಂಠ)ಎಸ್.ಎಸ್. ಶ್ರೀನಿವಾಸ್,ವೆಂಕಟೇಶ್, ಲೋಕೇಶ್,ಜಿ.ವಿ. ವೆಂಕಟೇಶ್,ಕೆ.ಹೆಚ್. ನಾರಾಯಣಸ್ವಾಮಿ,ಬಿ ಟಿ ಚಂದ್ರ ಶೇಖರ ರೆಡ್ಡಿ , ಅರ್.ಎನ್.ಗೋಪಾಲರೆಡ್ಡಿ ,
ಸುಬ್ಬು ಮುನಿರಾಜ್ ,ಶಾಂತ ಮೂರ್ತಿ , ಕಾ ನಿ ಪ ಸಂಘದ ಅಧ್ಯಕ್ಷರಾದ ಚೇಳೂರು ಆನಂದ್ ,ಡಿ.ಎನ್. ನಾಗರಾಜ ,ಬಾಬು , ರಘುನಾಥ್ ಇನ್ನೂ ಅನೇಕ ಪತ್ರಕರ್ತರು ಹಾಜರಿದ್ದರು




