ಬೆಳಗಾವಿ | ಗಣೇಶ ವಿಸರ್ಜನೆ ವೇಳೆ ಕೆರೆಯಲ್ಲಿ ಮುಳುಗಿ ಯುವಕ ಸಾವು

Date:

ಬೆಳಗಾವಿ ತಾಲೂಕಿನ ಮಚ್ಚೆ ಗ್ರಾಮದ ಕೆರೆಯಲ್ಲಿ ಗಣೇಶ ಮೂರ್ತಿ ವಿಸರ್ಜನೆಗೆ ತೆರಳಿದ್ದ ಬಿಎಸ್‌ಸಿ ವಿದ್ಯಾರ್ಥಿಯೊಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಶುಕ್ರವಾರ ಸಂಜೆ ನಡೆದಿದೆ.

- Advertisement -

ಮೃತರನ್ನು ಬೆಳಗಾವಿ ನಗರದ ಕಾಲೇಜಿನಲ್ಲಿ ಬಿಎಸ್‌ಸಿ ವ್ಯಾಸಂಗ ಮಾಡುತ್ತಿದ್ದ ವಿಶ್ವೇಶ ನಾಯಕ (20) ಎಂದು ಗುರುತಿಸಲಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಹಾವೇರಿ | ಬರದ ಬೇಗೆಯಲ್ಲೂ ಕೈ ಹಿಡಿದ ಮೆಕ್ಕೆಜೋಳ;...

"ಯಾವುದೇ ರಸಗೊಬ್ಬರಗಳನ್ನು ಬಳಸದೇ, ಕೀಟನಾಶಕಗಳನ್ನು ಸಿಂಪಡಿಸದೆಯೇ ಸಹಜ ಸಮೃದ್ಧ ಬೆಳೆ ಬೆಳೆಯುವುದು ಸಾವಯವ ಕೃಷಿಯ ಪವಾಡ" ಎಂದು ಚಂ.ಸು ಪಾಟೀಲ್ ಸಾವಯವ ಕೃಷಿಯ ಅನುಕೂಲಗಳನ್ನು ವಿಶ್ಲೇಷಿಸುತ್ತಾರೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆ ಕೊರತೆಯಿಂದ ತೀವ್ರ...

ಚುನಾವಣಾ ಆಯುಕ್ತರ ನೇಮಕ, ವಜಾ ಹೇಗೆ? ಈ ಹಿಂದೆ...

ಚುನಾವಣೆಯನ್ನು ನ್ಯಾಯಸಮ್ಮತವಾಗಿ ನಡೆಸಬೇಕಾದ ಚುನಾವಣಾ ಆಯೋಗ, ಚುನಾವಣಾ ಆಯುಕ್ತರು ಸರ್ಕಾರದ ಪ್ರಭಾವದಿಂದ ಮುಕ್ತವಾಗಿರಬೇಕು. ಆದರೆ ಚುನಾವಣೆ ಸ್ಪರ್ಧಿಸುವ ಆಡಳಿತ ಪಕ್ಷವೇ ತನಗೆ ಇಷ್ಟವಾದ ವ್ಯಕ್ತಿಯನ್ನು ಚುನಾವಣಾ ಅಧಿಕಾರಿಯಾಗಿ ನೇಮಕ ಮಾಡಿಕೊಂಡರೆ, ವಿರೋಧ ಪಕ್ಷಗಳಿಗೆ...

ರಾಹುಲ್‌ ಗಾಂಧಿ ಲಿಸ್ಟ್‌ನಲ್ಲಿರುವ ʼಸಂವಿಧಾನದ ವಿಧ್ವಂಸಕರುʼ ಇವರೇನಾ?

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ವಿಚಾರದಲ್ಲಿ ಚುನಾವಣಾ ಆಯೋಗದ ವಿರುದ್ಧ ಎದ್ದಿರುವ ಅನುಮಾನಗಳಿಂದ ರಾಜಕೀಯ ಸಂಘರ್ಷ ಮತ್ತಷ್ಟು ತೀವ್ರಗೊಂಡಿದೆ. ಈ ಬೆನ್ನಲ್ಲೇ, ಕಾಂಗ್ರೆಸ್‌ ನಾಯಕ ಹಾಗೂ ಲೋಕಸಭೆ ವಿರೋಧ ಪಕ್ಷದ...

ವಿಶ್ವೇಶ ಹಾಗೂ ಸ್ನೇಹಿತರು ಸಾರ್ವಜನಿಕ ಸ್ಥಳದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿದ್ದರು. ಶುಕ್ರವಾರ ಸಂಜೆ ಗಣೇಶ ಮೂರ್ತಿ ವಿಸರ್ಜನೆಗಾಗಿ ಸ್ನೇಹಿತರೊಂದಿಗೆ ಮಚ್ಚೆ ಗ್ರಾಮದ ಕೆರೆಗೆ ತೆರಳಿದ್ದರು. ವಿಸರ್ಜನೆ ಬಳಿಕ ಸ್ನೇಹಿತರೆಲ್ಲರೂ ದಡಕ್ಕೆ ಮರಳಿದರೂ ವಿಶ್ವೇಶ ಮಾತ್ರ ಕಾಣಿಸಿಕೊಳ್ಳಲಿಲ್ಲ.

ವಿಶ್ವೇಶ ಕೆರೆಯಲ್ಲಿ ಮುಳುಗಿರುವುದು ಖಚಿತವಾದ ಬಳಿಕ ಶೋಧ ಕಾರ್ಯ ನಡೆಸಲಾಯಿತು. ಬಳಿಕ ಮೃತದೇಹವನ್ನು ಕೆರೆಯಿಂದ ಹೊರತೆಗೆಯಲಾಯಿತು.

ಗಣೇಶ ಮೂರ್ತಿ ವಿಸರ್ಜನೆಯ ಸಂಭ್ರಮದಲ್ಲಿದ್ದ ಗ್ರಾಮದಲ್ಲಿ ಯುವಕನ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಸೂತಕದ ಛಾಯೆ ಆವರಿಸಿತು. ಮಗನನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ವಿಸರ್ಜನೆಯ ಸಂಭ್ರಮ ಕ್ಷಣಾರ್ಧದಲ್ಲೇ ದುಃಖವಾಗಿ ಮಾರ್ಪಟ್ಟಿತು.

ಘಟನೆ ಕುರಿತು ಬೆಳಗಾವಿ ಗ್ರಾಮೀಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೆಳಗಾವಿ | ಹಳೆಯ ವೈಷಮ್ಯಕ್ಕೆ ಯುವಕನ ಕೊಲೆ: ಇಬ್ಬರ ಬಂಧನ

ಹಳೆಯ ವೈಷಮ್ಯ ಹಾಗೂ ಕ್ಷುಲ್ಲಕ ಕಾರಣಕ್ಕೆ ಯುವಕನೊಬ್ಬನನ್ನು ಚಾಕುವಿನಿಂದ ಇರಿದು ಭೀಕರವಾಗಿ...

ಬೆಳಗಾವಿ | ಸಿಡಿಲು ಬಡಿದು ರೈತ ಸಾವು: ಮತ್ತೋರ್ವ ಗಂಭೀರ

ಬೆಳಗಾವಿ ಜಿಲ್ಲೆಯ ಯರಗಟ್ಟಿ ತಾಲೂಕಿನ ಮದ್ಲೂರು ಗ್ರಾಮದ ರೈತರಿಬ್ಬರು ಜಮೀನಿನಲ್ಲಿ ಮೆಕ್ಕೆಜೋಳದ...