ಚುನಾವಣಾ ಆಯುಕ್ತರ ನೇಮಕ, ವಜಾ ಹೇಗೆ? ಈ ಹಿಂದೆ ‘ಮಹಾಭಿಯೋಗ’ ನಡೆದಿದೆಯೇ?

Date:

ಚುನಾವಣೆಯನ್ನು ನ್ಯಾಯಸಮ್ಮತವಾಗಿ ನಡೆಸಬೇಕಾದ ಚುನಾವಣಾ ಆಯೋಗ, ಚುನಾವಣಾ ಆಯುಕ್ತರು ಸರ್ಕಾರದ ಪ್ರಭಾವದಿಂದ ಮುಕ್ತವಾಗಿರಬೇಕು. ಆದರೆ ಚುನಾವಣೆ ಸ್ಪರ್ಧಿಸುವ ಆಡಳಿತ ಪಕ್ಷವೇ ತನಗೆ ಇಷ್ಟವಾದ ವ್ಯಕ್ತಿಯನ್ನು ಚುನಾವಣಾ ಅಧಿಕಾರಿಯಾಗಿ ನೇಮಕ ಮಾಡಿಕೊಂಡರೆ, ವಿರೋಧ ಪಕ್ಷಗಳಿಗೆ ನ್ಯಾಯ ಸಿಗುವುದು ಹೇಗೆ?

ಯಾವುದೇ ದೇಶದಲ್ಲಿ ಚುನಾವಣಾ ಪ್ರಕ್ರಿಯೆ ಪ್ರಜಾಪ್ರಭುತ್ವದ ಜೀವನಾಡಿ. ಅದರಲ್ಲೂ ಭಾರತದಂತಹ ಬೃಹತ್ ಮತ್ತು ವೈವಿಧ್ಯಮಯ ದೇಶದಲ್ಲಿ ಚುನಾವಣಾ ಪ್ರಕ್ರಿಯೆ ಅತಿ ಮುಖ್ಯವಾಗಿದೆ. ಈ ಜವಾಬ್ದಾರಿಯನ್ನು ನಿರ್ವಹಿಸುವ ಸಂಸ್ಥೆಯೇ ಭಾರತೀಯ ಚುನಾವಣಾ ಆಯೋಗ (Election Commission of India). ಸಂವಿಧಾನದ ವಿಧಿ 324ರ ಅಡಿಯಲ್ಲಿ ಸ್ವತಂತ್ರ ಹಾಗೂ ನಿಷ್ಪಕ್ಷಪಾತವಾಗಿ ದೇಶದ ಸಂಸತ್ತು, ರಾಜ್ಯ ಶಾಸನಸಭೆಗಳು ಹಾಗೂ ರಾಷ್ಟ್ರಪತಿ, ಉಪರಾಷ್ಟ್ರಪತಿ ಹುದ್ದೆಗಳಿಗೆ ಚುನಾವಣೆ ನಡೆಸುವುದು ಆಯೋಗದ ಮುಖ್ಯ ಕರ್ತವ್ಯವಾಗಿದೆ. ಈ ಸಂಸ್ಥೆಯ ಸುಗಮ ಕಾರ್ಯನಿರ್ವಹಣೆಗೆ ಅದರ ಮುಖ್ಯ ಚುನಾವಣಾ ಆಯುಕ್ತರು (ಸಿಇಸಿ) ಮತ್ತು ಇತರ ಚುನಾವಣಾ ಆಯುಕ್ತರು (ECs) ಅತ್ಯಂತ ಮುಖ್ಯ ಪಾತ್ರ ವಹಿಸುತ್ತಾರೆ.

- Advertisement -

ಆದರೆ ಇತ್ತೀಚಿನ ದಿನಗಳಲ್ಲಿ ಚುನಾವಣಾ ಆಯೋಗದ ನಿರ್ಧಾರಗಳು, ಮತದಾನದ ಪ್ರಮಾಣ ಹಾಗೂ ಚುನಾವಣಾ ಅಕ್ರಮಗಳು ಒಂದಾದ ಮೇಲೆ ಒಂದು ಬಹಿರಂಗವಾಗುತ್ತಿದೆ. ಈ ವಿಚಾರವು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿವೆ. ಆಯೋಗವು ಸರ್ಕಾರದ ಪ್ರಭಾವಕ್ಕೆ ಒಳಗಾಗುತ್ತಿದೆ ಎಂಬ ಆರೋಪಗಳು ಮತ್ತು ಮುಖ್ಯ ಚುನಾವಣಾ ಆಯುಕ್ತರನ್ನು ಹುದ್ದೆಯಿಂದ ತೆಗೆದುಹಾಕಬೇಕೆಂಬ (ಮಹಾಭಿಯೋಗ) ಆಗ್ರಹಗಳು ಕೇಳಿಬರುತ್ತಿವೆ. ಈ ಮಹಾಭಿಯೋಗ ಪ್ರಕ್ರಿಯೆ ಹೇಗೆ ನಡೆಯುತ್ತದೆ, ಈ ಆಗ್ರಹ ಯಾಕೆ ಕೇಳಿಬಂದಿದೆ ಎಂಬುದನ್ನು ತಿಳಿಯುವುದಕ್ಕೂ ಮುನ್ನ ಚುನಾವಣಾ ಆಯುಕ್ತರ ನೇಮಕಾತಿ, ಪ್ರಸ್ತುತ ಎದುರಾಗಿರುವ ಪ್ರಮುಖ ಸಂಶಯಗಳ ಬಗ್ಗೆ ತಿಳಿಯುವುದು ಮುಖ್ಯ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ರಾಹುಲ್‌ ಗಾಂಧಿ ಲಿಸ್ಟ್‌ನಲ್ಲಿರುವ ʼಸಂವಿಧಾನದ ವಿಧ್ವಂಸಕರುʼ ಇವರೇನಾ?

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ವಿಚಾರದಲ್ಲಿ ಚುನಾವಣಾ ಆಯೋಗದ ವಿರುದ್ಧ ಎದ್ದಿರುವ ಅನುಮಾನಗಳಿಂದ ರಾಜಕೀಯ ಸಂಘರ್ಷ ಮತ್ತಷ್ಟು ತೀವ್ರಗೊಂಡಿದೆ. ಈ ಬೆನ್ನಲ್ಲೇ, ಕಾಂಗ್ರೆಸ್‌ ನಾಯಕ ಹಾಗೂ ಲೋಕಸಭೆ ವಿರೋಧ ಪಕ್ಷದ...

ತೆಲಂಗಾಣ ಬೆಳೆ ರಕ್ಷಣೆಗೆ 3 ಟಿಎಂಸಿ ನೀರು: ಅಚ್ಚುಕಟ್ಟು...

ಕೃಷ್ಣಾ ನದಿಯ ನೀರು ಮತ್ತೊಮ್ಮೆ ಕರ್ನಾಟಕ–ತೆಲಂಗಾಣದ ನಡುವಿನ ಪ್ರಮುಖ ವಿಚಾರವಾಗಿ ಮುನ್ನೆಲೆಗೆ ಬಂದಿದೆ. ತೆಲಂಗಾಣದ ಕೃಷಿ ಪ್ರದೇಶದಲ್ಲಿನ ನಿಂತಿರುವ ಬೆಳೆಗಳನ್ನು ರಕ್ಷಿಸಲು ಕರ್ನಾಟಕದಿಂದ ಕೃಷ್ಣಾ ನೀರು ಬಿಡುಗಡೆ ಮಾಡುವಂತೆ ಆ ರಾಜ್ಯದ ಸಚಿವರು...

AI ಕಲಿಕೆ ಪ್ರತ್ಯೇಕ ವಿಷಯವಾಗದೆ; ತೃತೀಯ ಭಾಷೆಗೆ ಪರ್ಯಾಯವಾಗಿ...

NSQF ನಿಯಮಗಳ ಪ್ರಕಾರ, ವಿದ್ಯಾರ್ಥಿಗಳು ವೃತ್ತಿಪರ AI ವಿಷಯವನ್ನು ಆಯ್ಕೆ ಮಾಡಿಕೊಂಡರೆ, ಅವರು ತೃತೀಯ ಭಾಷೆಯನ್ನು ಕಲಿಯುವುದರಿಂದ ವಿನಾಯಿತಿ ಪಡೆಯಬಹುದು. ಈ ನಿರ್ಧಾರವು 21ನೇ ಶತಮಾನದ ತಾಂತ್ರಿಕ ಕೌಶಲ್ಯಗಳನ್ನು ಬೆಳೆಸುವ ಉದ್ದೇಶವನ್ನು ಹೊಂದಿದ್ದರೂ,...

ಇದನ್ನೂ ಓದಿ: ಸಿಇಸಿ ಗ್ಯಾನೇಶ್ ಕುಮಾರ್ ವಜಾಗೆ ಪಟ್ಟು; ಸೆ.26ರಿಂದ ದೇಶಾದ್ಯಂತ ಪ್ರತಿಭಟನೆಗೆ ಎಡಪಕ್ಷಗಳು, SIR ವಿರೋಧಿ ಒಕ್ಕೂಟ ಕರೆ

ಈ ಹಿಂದೆ ಚುನಾವಣಾ ಆಯುಕ್ತರನ್ನು ಹೇಗೆ ನೇಮಿಸಲಾಗುತ್ತಿತ್ತು?

2023ಕ್ಕಿಂತ ಮೊದಲು ಚುನಾವಣಾ ಆಯುಕ್ತರ ನೇಮಕಾತಿಗೆ ಸಂಬಂಧಿಸಿದಂತೆ ಸಂಸತ್ತು ಪ್ರತ್ಯೇಕವಾದ, ಸುಸ್ಪಷ್ಟ ಶಾಸನಬದ್ಧ ನಿಯಮಾವಳಿಯನ್ನು ರೂಪಿಸಿರಲಿಲ್ಲ. ಸಂವಿಧಾನದ 324(2) ನೇ ವಿಧಿಯ ಪ್ರಕಾರ, “ಸಂಸತ್ತು ಈ ಕುರಿತು ಕಾನೂನು ರೂಪಿಸುವವರೆಗೆ ರಾಷ್ಟ್ರಪತಿಗಳು ಚುನಾವಣಾ ಆಯುಕ್ತರನ್ನು ನೇಮಕ ಮಾಡುತ್ತಾರೆ” ಎಂದು ಹೇಳಲಾಗಿತ್ತು. ಯಾವುದೇ ಪ್ರತ್ಯೇಕ ಕಾಯ್ದೆ ಇಲ್ಲದ ಕಾರಣ, ಪ್ರಧಾನಮಂತ್ರಿಗಳು ಮತ್ತು ಅವರ ಸಂಪುಟದ ಶಿಫಾರಸಿನ ಮೇರೆಗೆ ರಾಷ್ಟ್ರಪತಿಗಳು ನೇರವಾಗಿ ಮುಖ್ಯ ಚುನಾವಣಾ ಆಯುಕ್ತರು ಹಾಗೂ ಇತರ ಆಯುಕ್ತರನ್ನು ನೇಮಕ ಮಾಡುತ್ತಿದ್ದರು. ಈ ವ್ಯವಸ್ಥೆಯಲ್ಲಿ ಆಡಳಿತಾರೂಢ ಸರ್ಕಾರವೇ ತನಗೆ ಅನುಕೂಲಕರವಾದ ಅಥವಾ ನಿವೃತ್ತ ಐಎಎಸ್ ಅಧಿಕಾರಿಗಳನ್ನು ಆಯ್ಕೆ ಮಾಡುತ್ತಿದೆ ಎಂಬ ಆರೋಪಗಳು ನಿರಂತರವಾಗಿ ಕೇಳಿಬರುತ್ತಿದ್ದವು.

2023ರ ಮಾರ್ಚ್‌ನಲ್ಲಿ ಸುಪ್ರೀಂ ಕೋರ್ಟ್ ತನ್ನ ಐತಿಹಾಸಿಕ ತೀರ್ಪಿನಲ್ಲಿ (Anup Baranwal v. Union of India), ಸಂಸತ್ತು ಕಾನೂನು ರೂಪಿಸುವವರೆಗೆ ಚುನಾವಣಾ ಆಯುಕ್ತರ ಆಯ್ಕೆ ಸಮಿತಿಯಲ್ಲಿ ಪ್ರಧಾನಮಂತ್ರಿ, ಲೋಕಸಭೆಯ ವಿರೋಧ ಪಕ್ಷದ ನಾಯಕ ಹಾಗೂ ಭಾರತದ ಮುಖ್ಯ ನ್ಯಾಯಮೂರ್ತಿಗಳು (ಸಿಜೆಐ) ಇರಬೇಕೆಂದು ಆದೇಶಿಸಿತ್ತು. ಆದರೆ, ಕೇಂದ್ರ ಸರ್ಕಾರವು 2023ರ ಕೊನೆಯಲ್ಲಿ “ಮುಖ್ಯ ಚುನಾವಣಾ ಆಯುಕ್ತ ಮತ್ತು ಇತರ ಚುನಾವಣಾ ಆಯುಕ್ತರ (ಸೇವಾ ಷರತ್ತುಗಳು ಮತ್ತು ಅಧಿಕಾರದ ಅವಧಿ) ಕಾಯ್ದೆ, 2023” ಅನ್ನು ಜಾರಿಗೆ ತಂದಿತು.

ಮೊದಲು ಇಬ್ಬರು ಕೇಂದ್ರ ಸರ್ಕಾರದ ಕಾರ್ಯದರ್ಶಿ ಮಟ್ಟದ ಅಧಿಕಾರಿಗಳನ್ನು ಒಳಗೊಂಡ ಕೇಂದ್ರ ಕಾನೂನು ಸಚಿವರ ನೇತೃತ್ವದ ಪರಿಶೋಧನಾ ಸಮಿತಿಯು 5 ಅರ್ಹ ಅಭ್ಯರ್ಥಿಗಳ ಪಟ್ಟಿಯನ್ನು ತಯಾರಿಸಿ ಆಯ್ಕೆ ಸಮಿತಿಗೆ ನೀಡುತ್ತದೆ. ಅಂತಿಮವಾಗಿ ಪ್ರಧಾನಮಂತ್ರಿಗಳು (ಸಮಿತಿಯ ಅಧ್ಯಕ್ಷರು), ಲೋಕಸಭೆಯ ವಿರೋಧ ಪಕ್ಷದ ನಾಯಕ (ಅಥವಾ ಅತಿ ದೊಡ್ಡ ವಿರೋಧ ಪಕ್ಷದ ನಾಯಕ), ಪ್ರಧಾನಿಯವರಿಂದ ನಾಮನಿರ್ದೇಶನಗೊಂಡ ಒಬ್ಬ ಕೇಂದ್ರ ಸಂಪುಟ ಸಚಿವರ ಸಮಿತಿಯು ಆಯುಕ್ತರ ಹೆಸರುಗಳನ್ನು ರಾಷ್ಟ್ರಪತಿಗಳಿಗೆ ಶಿಫಾರಸು ಮಾಡಲಿದ್ದಾರೆ. ಈ ಸಮಿತಿಯು ಬಹುಮತದ ಆಧಾರದ ಮೇಲೆ ನೀಡುವ ಶಿಫಾರಸಿನಂತೆ ರಾಷ್ಟ್ರಪತಿಯವರು ಆಯುಕ್ತರನ್ನು ನೇಮಕ ಮಾಡುತ್ತಾರೆ.

ಹೊಸ ಕಾಯ್ದೆಯಲ್ಲಿ ಕಂಡುಬರುವ ಅತ್ಯಂತ ಪ್ರಮುಖ ಲೋಪವೆಂದರೆ ಆಯ್ಕೆ ಸಮಿತಿಯ ಸ್ವರೂಪ ಮತ್ತು ಬಹುಮತದ ಸಂಖ್ಯಾಬಲ. ಸುಪ್ರೀಂ ಕೋರ್ಟ್ ತನ್ನ ಆದೇಶದಲ್ಲಿ ತಟಸ್ಥ ಧ್ವನಿಯಾಗಿ ‘ಭಾರತದ ಮುಖ್ಯ ನ್ಯಾಯಮೂರ್ತಿಗಳನ್ನು’ (ಸಿಜೆಐ) ಸೇರಿಸಿತ್ತು. ಆದರೆ ಹೊಸ ಕಾಯ್ದೆಯಲ್ಲಿ ಮುಖ್ಯ ನ್ಯಾಯಮೂರ್ತಿಗಳನ್ನು ಹೊರಗಿಡಲಾಗಿದೆ. ತ್ರಿ-ಸದಸ್ಯ ಸಮಿತಿಯಲ್ಲಿ ಪ್ರಧಾನಮಂತ್ರಿ ಹಾಗೂ ಅವರು ನಾಮನಿರ್ದೇಶನ ಮಾಡುವ ಕೇಂದ್ರ ಸಚಿವರು ಇರುವುದರಿಂದ, ಮೂವರಲ್ಲಿ ಇಬ್ಬರು ಸರ್ಕಾರದ ಪ್ರತಿನಿಧಿಗಳೇ ಆಗಿರುತ್ತಾರೆ (2:1 ಪ್ರಮಾಣ). ವಿರೋಧ ಪಕ್ಷದ ನಾಯಕರು ಆಕ್ಷೇಪ ವ್ಯಕ್ತಪಡಿಸಿದರೂ ಅಥವಾ ಭಿನ್ನಾಭಿಪ್ರಾಯ ಸೂಚಿಸಿದರೂ, ಸರ್ಕಾರವು ತನಗೆ ಬೇಕಾದ ಅಭ್ಯರ್ಥಿಯನ್ನು ಬಹುಮತದ (2-1) ಆಧಾರದಲ್ಲಿ ಸುಲಭವಾಗಿ ಆಯ್ಕೆ ಮಾಡಲು ಈ ನಿಯಮ ಅವಕಾಶ ಮಾಡಿಕೊಡುತ್ತದೆ.

ಇದನ್ನೂ ಓದಿ: ದೆಹಲಿಯಲ್ಲಿ ಮತದಾರರ ಪಟ್ಟಿಯಿಂದ 47 ಲಕ್ಷ ಜನರ ಕೈಬಿಟ್ಟ ಆಘಾತಕಾರಿ ಸತ್ಯ: ಬದುಕಿದ್ದರೂ ‘ಮೃತ’ ಎಂದು ಘೋಷಣೆ!

ಚುನಾವಣೆಯನ್ನು ನ್ಯಾಯಸಮ್ಮತವಾಗಿ ನಡೆಸಬೇಕಾದ ಚುನಾವಣಾ ಆಯೋಗ, ಚುನಾವಣಾ ಆಯುಕ್ತರು ಸರ್ಕಾರದ ಪ್ರಭಾವದಿಂದ ಮುಕ್ತವಾಗಿರಬೇಕು. ಆದರೆ ಚುನಾವಣೆ ಸ್ಪರ್ಧಿಸುವ ಆಡಳಿತ ಪಕ್ಷವೇ ತನಗೆ ಇಷ್ಟವಾದ ವ್ಯಕ್ತಿಯನ್ನು ಚುನಾವಣಾ ಅಧಿಕಾರಿಯಾಗಿ ನೇಮಕ ಮಾಡಿಕೊಂಡರೆ, ವಿರೋಧ ಪಕ್ಷಗಳಿಗೆ ನ್ಯಾಯ ಸಿಗುವುದು ಹೇಗೆ? ಆಯ್ಕೆ ಸಮಿತಿಯಲ್ಲಿ ಸರ್ಕಾರಕ್ಕೇ ಅಂತಿಮ ನಿರ್ಧಾರ ತೆಗೆದುಕೊಳ್ಳುವ ಬಹುಮತ ನೀಡಿರುವುದರಿಂದ ಆಯೋಗವು ಸರ್ಕಾರದ ಅಧೀನ ಸಂಸ್ಥೆಯಂತೆ ಬದಲಾಗುವ ಅಪಾಯವಿದೆ. ಇದೀಗ ಅದೇ ಅಪಾಯ ಬಹಿರಂಗವಾಗಿದೆ.

ದೇಶದ ಮುಖ್ಯ ಚುನಾವಣಾ ಆಯುಕ್ತರಾದ (ಸಿಇಸಿ) ಗ್ಯಾನೇಶ್ ಕುಮಾರ್ ಅವರ ವಿರುದ್ಧ ಇತ್ತೀಚೆಗೆ ಗಂಭೀರ ಆರೋಪಗಳು ಕೇಳಿಬಂದಿದೆ. ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಗೆ ಸಂಬಂಧಿಸಿದಂತೆ ಇಬ್ಬರು ಚುನಾವಣಾ ಆಯುಕ್ತರಾದ ಸುಖ್‌ಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರು ಕಳೆದ 10 ತಿಂಗಳುಗಳಲ್ಲಿ ಕನಿಷ್ಠ 14 ಬಾರಿ ಅಧಿಕೃತವಾಗಿ ಲಿಖಿತ ಆಕ್ಷೇಪಣೆಗಳನ್ನು ದಾಖಲಿಸಿದ್ದಾರೆ. ಪೂರ್ಣ ಆಯೋಗದ ಒಮ್ಮತದ ಅನುಮೋದನೆಯಿಲ್ಲದೆ ಕಾನೂನುಬಾಹಿರವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ ಎಂಬ ಮಾಹಿತಿ ಬಹಿರಂಗವಾಗಿದೆ. ಇದೀಗ ಮಹಾಭಿಯೋಗ ನಡೆಸಿ ಮುಖ್ಯ ಚುನಾವಣಾ ಆಯುಕ್ತರನ್ನು ವಜಾಗೊಳಿಸಬೇಕು ಎಂಬ ಆಗ್ರಹ ಕೇಳಿಬಂದಿದೆ.

ಮುಖ್ಯ ಚುನಾವಣಾ ಆಯುಕ್ತರ ವಜಾ ಹೇಗೆ ನಡೆಯುತ್ತದೆ?

ಚುನಾವಣಾ ಆಯೋಗವು ಸರ್ಕಾರದಿಂದ ಸ್ವತಂತ್ರವಾಗಿ ಕಾರ್ಯನಿರ್ವಹಿಸಲು, ಮುಖ್ಯ ಚುನಾವಣಾ ಆಯುಕ್ತರಿಗೆ (ಸಿಇಸಿ) ಸಂವಿಧಾನವು ವಿಶೇಷ ರಕ್ಷಣೆ ನೀಡಿದೆ. ದೇಶದ ಸುಪ್ರೀಂ ಕೋರ್ಟ್ ನ್ಯಾಯಾಧೀಶರನ್ನು ಯಾವ ಆಧಾರ ಮತ್ತು ವಿಧಾನದಲ್ಲಿ ಹುದ್ದೆಯಿಂದ ವಜಾಗೊಳಿಸಬಹುದೋ, ಅದೇ ರೀತಿ ಮಾತ್ರ ಸಿಇಸಿಯವರನ್ನೂ ತೆಗೆದುಹಾಕಬಹುದು. ಸಾಮಾನ್ಯವಾಗಿ ಇದನ್ನು ‘ಇಂಪೀಚ್‌ಮೆಂಟ್’ (ಮಹಾಭಿಯೋಗ) ಎಂದು ಕರೆಯಲಾಗುತ್ತದೆಯಾದರೂ, ಸಂವಿಧಾನದಲ್ಲಿ ‘Removability’ (ಹುದ್ದೆಯಿಂದ ವಜಾ) ಎಂಬ ಪದವನ್ನು ಬಳಸಲಾಗಿದೆ.

ಮುಖ್ಯ ಚುನಾವಣಾ ಆಯುಕ್ತರು ದುರ್ನಡತೆ ಹೊಂದಿದ್ದರೆ ಅಥವಾ ಅಸಾಮರ್ಥ್ಯ ಹೊಂದಿರುವವರು ಎಂಬುದು ಸಾಬೀತಾದರೆ ಲೋಕಸಭೆಯಲ್ಲಿ ಕನಿಷ್ಠ 100 ಸದಸ್ಯರು ಅಥವಾ ರಾಜ್ಯಸಭೆಯಲ್ಲಿ 50 ಸದಸ್ಯರು ನೋಟಿಸ್ ನೀಡಬೇಕು. ಸ್ಪೀಕರ್ ಅಥವಾ ಸಭಾಪತಿಯವರು ಪ್ರಕರಣದ ವಿಚಾರಣೆಗೆ ಮೂವರು ಸದಸ್ಯರ ಸಮಿತಿ ರಚಿಸುತ್ತಾರೆ. ಆರೋಪ ಸಾಬೀತಾದರೆ, ಸಂಸತ್ತಿನ ಉಭಯ ಸದನಗಳಲ್ಲಿ (ಲೋಕಸಭೆ ಮತ್ತು ರಾಜ್ಯಸಭೆ) ಪ್ರತ್ಯೇಕವಾಗಿ, ಹಾಜರಿದ್ದು ಮತ ಚಲಾಯಿಸುವ 2/3 ಭಾಗದಷ್ಟು ಬಹುಮತದೊಂದಿಗೆ ನಿರ್ಣಯ ಅಂಗೀಕಾರವಾಗಬೇಕು. ಅಂತಿಮವಾಗಿ ರಾಷ್ಟ್ರಪತಿಗಳ ಆದೇಶದ ಮೂಲಕ ಸಿಇಸಿಯವರನ್ನು ಹುದ್ದೆಯಿಂದ ತೆರವುಗೊಳಿಸಲಾಗುತ್ತದೆ. ಇತರ ಚುನಾವಣಾ ಆಯುಕ್ತರನ್ನು ಸಿಇಸಿಯವರ ಶಿಫಾರಸಿನ ಮೇರೆಗೆ ರಾಷ್ಟ್ರಪತಿಯವರು ವಜಾಗೊಳಿಸಬಹುದು.

ಈವರೆಗೆ ದೇಶದಲ್ಲಿ ಸಿಇಸಿಯ ‘ಮಹಾಭಿಯೋಗ’ ಜರುಗಿದೆಯೇ?

ದೇಶದ ಪ್ರಜಾಪ್ರಭುತ್ವದ ಇತಿಹಾಸದಲ್ಲಿ ಈವರೆಗೆ ಯಾವೊಬ್ಬ ಮುಖ್ಯ ಚುನಾವಣಾ ಆಯುಕ್ತರನ್ನೂ (ಸಿಇಸಿ) ಮಾಹಾಭಿಯೋಗ ಅಥವಾ ಸಂಸದೀಯ ಪ್ರಕ್ರಿಯೆಯ ಮೂಲಕ ಹುದ್ದೆಯಿಂದ ವಜಾಗೊಳಿಸಲಾಗಿಲ್ಲ. ಹಿಂದೆ ಟಿ.ಎನ್. ಶೇಷನ್ ಅವರಂತಹ ಆಯುಕ್ತರಿದ್ದಾಗ ರಾಜಕೀಯ ವಲಯದಲ್ಲಿ ಭಿನ್ನಾಭಿಪ್ರಾಯಗಳು ಮೂಡಿದರೂ ಪ್ರಕ್ರಿಯೆ ಜರುಗಿರಲಿಲ್ಲ. ಹಾಗೆಯೇ, 2009ರಲ್ಲಿ ಸಿಇಸಿ ಎನ್. ಗೋಪಾಲಸ್ವಾಮಿ ಅವರು ಸಹ-ಆಯುಕ್ತ ನವೀನ್ ಚಾವ್ಲಾರನ್ನು ವಜಾಗೊಳಿಸಲು ನೀಡಿದ್ದ ಶಿಫಾರಸನ್ನು ಅಂದಿನ ಸರ್ಕಾರ ತಿರಸ್ಕರಿಸಿತ್ತು. ಹೀಗಾಗಿ ಸಂಸತ್ತಿನಲ್ಲಿ ಮತದಾನದ ಹಂತಕ್ಕೆ ತಲುಪಿ ವಜಾಗೊಂಡ ಉದಾಹರಣೆ ಭಾರತದಲ್ಲಿಲ್ಲ.

ಹೀಗೆ ಚುನಾವಣಾ ಆಯೋಗವು ಪ್ರಜಾಪ್ರಭುತ್ವದ ಅಡಿಪಾಯವನ್ನು ಕಾಯುವ ಪವಿತ್ರ ಸಂಸ್ಥೆ. ಸಾರ್ವಜನಿಕರು ಮತ್ತು ರಾಜಕೀಯ ಪಕ್ಷಗಳಿಗೆ ಆಯೋಗದ ಮೇಲಿರುವ ನಂಬಿಕೆಯೇ ಪ್ರಜಾಪ್ರಭುತ್ವದ ಯಶಸ್ಸಿನ ಗುಟ್ಟು. ಆದರೆ, ಇತ್ತೀಚಿನ ವರ್ಷಗಳಲ್ಲಿ ನೇಮಕಾತಿ ಪ್ರಕ್ರಿಯೆಯಲ್ಲಿ ಸರ್ಕಾರದ ಅತಿಯಾದ ಪ್ರಭಾವ ಮತ್ತು ಆಯೋಗದ ನಿರ್ಧಾರಗಳ ಪಾರದರ್ಶಕತೆಯ ಮೇಲಿನ ಪ್ರಶ್ನೆಗಳು ಸಾರ್ವಜನಿಕ ನಂಬಿಕೆಗೆ ಧಕ್ಕೆ ತರುತ್ತಿರುವುದು ಕಳವಳಕಾರಿ.

ಆದ್ದರಿಂದ, ಸಿಇಸಿಯವರ ವಜಾಗೆ ಅಥವಾ ಇಂಪೀಚ್‌ಮೆಂಟ್‌ಗೆ ಆಗ್ರಹಿಸುವುದು ಬರೀ ರಾಜಕೀಯ ತಂತ್ರವಲ್ಲ, ಆಯೋಗದಲ್ಲಿ ಸುಧಾರಣೆ ತರುವ ನಿಟ್ಟಿನಲ್ಲಿ ಗಂಭೀರ ಹೆಜ್ಜೆ. ಸಂಸತ್ತು ಮತ್ತು ನ್ಯಾಯಾಂಗವು ಚುನಾವಣಾ ಆಯೋಗದ ಸಂಪೂರ್ಣ ಸ್ವಾಯತ್ತತೆಯನ್ನು ಎತ್ತಿಹಿಡಿಯುವಂತೆ ನೋಡಿಕೊಳ್ಳುವುದು, ಮತದಾನ ಪ್ರಕ್ರಿಯೆಯಲ್ಲಿ ಶೇ. 100ರಷ್ಟು ಪಾರದರ್ಶಕತೆ ಕಾಯ್ದುಕೊಳ್ಳುವುದು ಮತ್ತು ಸಾರ್ವಜನಿಕ ಅನುಮಾನಗಳನ್ನು ತಕ್ಷಣವೇ ಪರಿಹರಿಸುವುದು ಇಂದಿನ ತುರ್ತು ಅಗತ್ಯ. ಈ ಮೂಲಕ ಮಾತ್ರ ದೇಶದ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಅಖಂಡವಾಗಿ ಉಳಿಸಿಕೊಳ್ಳಲು ಸಾಧ್ಯ.

WhatsApp Image 2025 11 17 at 4.20.34 PM
+ posts

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

ಪೋಸ್ಟ್ ಹಂಚಿಕೊಳ್ಳಿ:

ಮಯೂರಿ ಬೋಳಾರ್
ಮಯೂರಿ ಬೋಳಾರ್
ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಜ್ಯದಲ್ಲಿ ಮಿತಿಮೀರಿದ ದಲಿತರ ಮೇಲಿನ ದೌರ್ಜನ್ಯ: ಕಾನೂನು ಸುವ್ಯವಸ್ಥೆ ವೈಫಲ್ಯದ ವಿರುದ್ಧ ಮುಖಂಡರ ಗುಡುಗು

ರಾಜ್ಯದಲ್ಲಿ ಕಳೆದ ನಾಲ್ಕು ವರ್ಷಗಳಿಂದ ದಲಿತರ ಮೇಲಿನ ಹಲ್ಲೆ, ದೌರ್ಜನ್ಯ, ಮಹಿಳೆಯರ...

ಪ್ರಧಾನಿಗಳು ರೈತರ ಆದಾಯ ಡಬಲ್ ಮಾಡಲಿಲ್ಲ; ಯುದ್ಧ ನಡೆಯುತ್ತಿದ್ದಾಗಲೂ ರೈತರು ವಿಶ್ರಾಂತಿ ಪಡೆಯಲಿಲ್ಲ-ಸಿಎಂ

ಪ್ರಧಾನಿ ದೇಶವನ್ನು, ಮುಖ್ಯಮಂತ್ರಿ ರಾಜ್ಯವನ್ನು ಹಾಗೂ ಶಾಸಕರು ಕ್ಷೇತ್ರವನ್ನು ಪ್ರತಿನಿಧಿಸಿದರೆ, ರೈತ...

ಸಿಇಸಿ ಗ್ಯಾನೇಶ್ ಕುಮಾರ್ ವಜಾಗೆ ಪಟ್ಟು; ಸೆ.26ರಿಂದ ದೇಶಾದ್ಯಂತ ಪ್ರತಿಭಟನೆಗೆ ಎಡಪಕ್ಷಗಳು, SIR ವಿರೋಧಿ ಒಕ್ಕೂಟ ಕರೆ

ಚುನಾವಣಾ ಆಯೋಗದ ಮತದಾರರ ಪಟ್ಟಿ ವಿಶೇಷ ತ್ರೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯಲ್ಲಿ...

ಚುನಾವಣಾ ವ್ಯವಸ್ಥೆಯನ್ನೇ ಅಲುಗಾಡಿಸಿದ ಮೋದಿ ಸರ್ಕಾರದ 10 ವಿವಾದಗಳು

ಪ್ರಜಾಪ್ರಭುತ್ವದ ಜೀವಾಳವಾದ ನಿಷ್ಪಕ್ಷಪಾತ ಚುನಾವಣಾ ವ್ಯವಸ್ಥೆಗೆ ಇಂದು ಗ್ರಹಣ ಬಡಿದಿದೆಯೇ? ಏಕಾಏಕಿ...