ಬೆಳಗಾವಿ : ನಾಳೆ ಸಾಲಾಪೂರ ಗ್ರಾಮದಲ್ಲಿ “ಕೊಡಲ್ಲ ಅಂದ್ರ್ ಕೊಡಲ್ಲ” ನಾಟಕ ಪ್ರದರ್ಶನ

Date:

ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಸಾಲಾಪೂರ ಗ್ರಾಮದ ನಾಟ್ಯ ಯೋಗ ರಂಗ ಸಂಸ್ಥೆಯ ವತಿಯಿಂದ ನಿರ್ದೇಶಕ ಶಕೀಲ್ ಅಹ್ಮದ್ ಅವರ ನಿರ್ದೇಶನದಲ್ಲಿ ‘ಕೊಡಲ್ಲ ಅಂದ್ರ್ ಕೊಡಲ್ಲ’ ನಾಟಕವನ್ನು ನಾಳೆ ಸಂಜೆ 6 ಗಂಟೆಗೆ ಸಾಲಾಪೂರ ಗ್ರಾಮದ ರಂಗಮಂದಿರದಲ್ಲಿ ಪ್ರದರ್ಶಿಸಲಾಗುತ್ತಿದೆ. ಮೈಸೂರಿನ ನಿರ್ದಿಗಂತ ತಂಡ ಪ್ರಸ್ತುತಪಡಿಸುತ್ತಿರುವ ಈ ನಾಟಕ, ಪ್ರಸಿದ್ಧ ನಾಟಕಕಾರ ದಾರಿಯೋ ಫೋ ಅವರ ‘ಕ್ಯಾಂಟ್ ಪೇ, ವೋಂಟ್ ಪೇ’ ನಾಟಕದ ಕನ್ನಡ ರೂಪಾಂತರವಾಗಿದ್ದು, ಬೆಲೆ ಏರಿಕೆ ಮತ್ತು ಆರ್ಥಿಕ ಒತ್ತಡದ ನಡುವಿನ ಸಾಮಾನ್ಯ ಜನರ ಹೋರಾಟವನ್ನು ಪ್ರಹಸನ ಶೈಲಿಯಲ್ಲಿ ಚಿತ್ರಿಸುತ್ತದೆ.

- Advertisement -

ಬೆಲೆ ಏರಿಕೆಯ ವಿರುದ್ಧ ಹಾಸ್ಯಭರಿತ ರಾಜಕೀಯ ಪ್ರಹಸನ

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬ್ರೆಜಿಲ್‌ನಲ್ಲಿ ಒಂದೇ ಹುದ್ದೆಗೆ ಎರಡು ಬಾರಿ ಚುನಾವಣೆ: ಏನಿದು...

ಭಾರತಕ್ಕೂ ಎರಡನೇ ಸುತ್ತಿನ ಪದ್ಧತಿ ಅಗತ್ಯವಿದೆಯೇ ಎಂಬ ಚರ್ಚೆ ಆಗಿಂದಾಗ್ಗೆ ಮುನ್ನೆಲೆಗೆ ಬರುತ್ತಲೇ ಇರುತ್ತದೆ. ಹಲವು ಅಭ್ಯರ್ಥಿಗಳು ಕಣದಲ್ಲಿರುವಾಗ ಮತಗಳು ಹಂಚಿಹೋಗಿ, ಕೇವಲ ಶೇ 30 ಅಥವಾ 40ರಷ್ಟು ಮತ ಪಡೆದವರೂ ನಮ್ಮಲ್ಲಿ...

ಬೆಂಗಳೂರು ಪೌರಕಾರ್ಮಿಕರ ಶ್ವಾಸಕೋಶ ಹಿಂಡುತ್ತಿದೆ ಮಾಲಿನ್ಯ; BMTC ಸಿಬ್ಬಂದಿ,...

ಬೆಂಗಳೂರಿನಲ್ಲಿ ಮಾಲಿನ್ಯವು ಹೊಸ ತಂಬಾಕಾಗಿ ಪರಿಣಮಿಸಿದೆ. ಜನರ ಶ್ವಾಸಕೋಶವನ್ನು ಹಿಂಡುತ್ತಿದೆ. ಮಾಸ್ಕ್, ಕೈಗವಸು, ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸಾ ಸೌಲಭ್ಯಗಳ ಕೊರತೆಗಳಿಂದಾಗಿ ಪೌರಕಾರ್ಮಿಕರು, ಬಿಎಂಟಿಸಿ ನೌಕರರು, ಸಂಚಾರ ಪೊಲೀಸರು ಹಾಗೂ ಕಟ್ಟಡ ಕಾರ್ಮಿಕರು...

ಗ್ರಾಮೀಣ ಮೀಸಲಾತಿಯಲ್ಲಿ ಸಾಮಾಜಿಕ ಅನ್ಯಾಯ; ಬರಿದಾಗುತ್ತಿರುವ ಬಡ ಮಕ್ಕಳ...

ಸರಕಾರಿ ಶಾಲೆ ಸೇರುವವರು ಕೇವಲ ಬಡತನ-ಕೆಳಮಟ್ಟದ ಕುಟುಂಬದವರು ಎಂಬಂತಾಗಿದೆ. ಈ ಋಣಾತ್ಮಕ ಭಾವನೆ ಹೋಗಲಾಡಿಸಲು ಕನ್ನಡದಲ್ಲಿ ಕಲಿತರೆ ಉನ್ನತ ಶಿಕ್ಷಣ, ಉದ್ಯೋಗ ಸ್ಪರ್ಧೆಯಲ್ಲಿ ಜಯಿಸಬಹುದೆಂಬ ವಿಶ್ವಾಸ ಮೂಡಿಸಬೇಕಾಗಿದೆ. ಈಗಿನ ಎಡಬಿಡಂಗಿ ಗ್ರಾಮೀಣ ಮೀಸಲಾತಿ...

ಆಹಾರದ ಬೆಲೆ ಏರಿಕೆಯಿಂದ ಕೋಪಗೊಂಡ ಮಹಿಳೆಯರ ಗುಂಪೊಂದು ಸೂಪರ್ ಮಾರ್ಕೆಟ್‌ಗೆ ದಾಳಿ ಮಾಡಿ ಹಣ ನೀಡದೆ ದಿನಸಿಗಳನ್ನು ತೆಗೆದುಕೊಂಡು ಹೋಗುವುದರಿಂದ ಕಥೆ ಆರಂಭವಾಗುತ್ತದೆ. ಗಂಡಂದಿರ ಭೀತಿಯಿಂದ ಸಾಮಾನುಗಳನ್ನು ಹೊಟ್ಟೆಯಲ್ಲಿ ಬಚ್ಚಿಟ್ಟುಕೊಂಡು ಗರ್ಭಿಣಿಯರಂತೆ ನಟಿಸುವ ಮಹಿಳೆಯರ ಹಾಸ್ಯಾಸ್ಪದ ಘಟನೆಗಳು ರಂಗದಲ್ಲಿ ನಗುವಿನ ಜಲಪಾತ ಹರಿಸುತ್ತವೆ.

ಮೊದಲಿಗೆ ವಿರೋಧಿಸಿದ್ದ ಗಂಡಂದಿರು ಬಳಿಕ ಶ್ರೀಮಂತರ ಪರ ನಿಂತಿರುವ ವ್ಯವಸ್ಥೆಯ ಅನ್ಯಾಯವನ್ನು ಅರಿತು ತಮ್ಮ ಹೆಂಡತಿಯರ ಪಕ್ಕ ನಿಲ್ಲುವ ಮೂಲಕ ಕಥೆಯ ರಾಜಕೀಯ ತಿರುಳು ಮೂಡುತ್ತದೆ. ಅಧಿಕಾರದ ಮದದಲ್ಲಿರುವ ಪೊಲೀಸ್ ವ್ಯವಸ್ಥೆಯು ಜನರ ಒಗ್ಗಟ್ಟಿನ ಮುಂದೆ ನಿಷ್ಪ್ರಭವಾಗುವ ಚಿತ್ರಣವೂ ನಾಟಕದ ಕೇಂದ್ರಬಿಂದುವಾಗಿದೆ.

ವೇದಿಕೆಯ ಮೇಲಿರುವ ಕಲಾವಿದರು

ಸಲ್ಮಾ ದಂಡಿನ್, ದಿನೇಶ್ ನಾಯ್, ಚರಿತ್ ಸುವರ್ಣ, ಚರಿತಾ ಶಾರದಾ ಹಾಗೂ ಮಂಜುನಾಥ ಮಂಡಲಗೇರಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ತಾಂತ್ರಿಕ ತಂಡ

ರಂಗಸಜ್ಜಿಕೆ & ವೇಷಭೂಷಣ: ಶ್ವೇತಾರಾಣಿ ಎಚ್.ಕೆ

ಸಂಗೀತ: ಅನುಷ್ ಶೆಟ್ಟಿ

ಬೆಳಕಿನ ವಿನ್ಯಾಸ: ಮಂಜುನಾಥ ಹಿರೇಮಠ

ಪರಿಕರ: ವಿನೀತ್ ಕುಮಾರ್, ಚಿಕ್ಕಮಗಳೂರು

ತಂಡ ನಿರ್ವಹಣೆ: ಕಲ್ಲಪ್ಪ ಪೂಜೇರ್

ಬೆಳಕಿನ ನಿರ್ವಹಣೆ: ಆಸಿಫ್ ಹೂವಿನಹಡಗಲಿ

ನಿರ್ದಿಗಂತ – ಸಮಕಾಲೀನ ರಂಗಪ್ರಯೋಗಗಳ ಕೇಂದ್ರ

ಕಲಾವಿದ ಪ್ರಕಾಶ್ ರಾಜ್ ಅವರ ಸೃಜನಾತ್ಮಕ ಹಂಬಲದಿಂದ ಉದ್ಭವಿಸಿದ ನಿರ್ದಿಗಂತ, ಸಮಾನ ಮನಸ್ಕ ಕಲಾವಿದರ ಸಮೂಹವಾಗಿ ನವೀನ ರಂಗಭಾಷೆಯನ್ನು ಹುಡುಕುವ ಪ್ರಯತ್ನದಲ್ಲಿ ತೊಡಗಿದೆ. ಸಾರ್ವಜನಿಕ ಪ್ರದರ್ಶನಗಳು, ಕಾಲೇಜು ರಂಗ, ಶಾಲಾ ರಂಗವಿಕಾಸ, ಯುವ ನಿರ್ದೇಶಕರಿಗೆ ಬೆಂಬಲ ನೀಡುವ ಮೂಲಕ ರಂಗಭೂಮಿಯ ಮಟ್ಟದಲ್ಲಿ ದೊಡ್ಡ ಮಧ್ಯಪ್ರವೇಶಿಕೆ ಮಾಡುತ್ತಿದೆ. ದೇಶ–ವಿದೇಶಗಳ ರಂಗಕಲಾವಿದರು ಇಲ್ಲಿ ತರಬೇತಿ ನೀಡಿ ಹೊಸ ಪ್ರಯೋಗಗಳನ್ನು ನಡೆಸಿದ್ದಾರೆ.

IMG 20251111 WA0000
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕುಡಚಿ ರೈಲು ಮಾರ್ಗ ಕಾಮಗಾರಿಗೆ ವೇಗ ನೀಡಿ; ರೈಲ್ವೆ ಹೋರಾಟಕ್ಕೆ ರೈತರೂ ಕೈಜೋಡಿಸಿ: ಕುತ್ಬುದ್ದೀನ್ ಖಾಜಿ

ದಶಕಗಳಿಂದ ಕುಂಟುತ್ತ ಸಾಗುತ್ತಿರುವ ಕುಡಚಿ ರೈಲು ಮಾರ್ಗದ ಕಾಮಗಾರಿಯನ್ನು ತ್ವರಿತಗೊಳಿಸಿ, ಯೋಜನೆಯನ್ನು...

ಬೆಳಗಾವಿ | ಸರ್ಕಾರದಲ್ಲಿ ಹಣ ಇಲ್ಲ, ಸಿಎಂ ಮಾತಿಗೆ ಒಪ್ಪದ ರೈತರು, ಸಾಲ ಮಾಡಿಯಾದರೂ ಕಬ್ಬಿಗೆ ಬೆಲೆ ನೀಡಿ: ಚೂನಪ್ಪ ಪೂಜೇರಿ

ಕಬ್ಬು ಬೆಳೆಗಾರರ ಬೇಡಿಕೆಗಳ ಕುರಿತು ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಸೋಮವಾರ ಮುಖ್ಯಮಂತ್ರಿ...

ವಾಯವ್ಯ ಕರ್ನಾಟಕ‌ ಸಾರಿಗೆಗೆ ‘ಚೆನ್ನಮ್ಮ’ ಹೆಸರು ಮರುನಾಮಕರಣ: ಸಿಎಂ ಡಿ‌ಕೆ ಶಿವಕುಮಾರ್

ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ (NWKRTC) ವೀರರಾಣಿ ಕಿತ್ತೂರು ಚೆನ್ನಮ್ಮ...