ಪಾರಂಪರಿಕ ಮಣ್ಣಿನ ಮಡಕೆ ಕಾಯಕಕ್ಕೆ ಸಂಕಷ್ಟ: ಸರ್ಕಾರದ ನೆರವಿನ ನಿರೀಕ್ಷೆಯಲ್ಲಿ ಕುಂಬಾರರು

Date:

ಸರ್ಕಾರ ಇಂಥ ಸಾಂಪ್ರದಾಯಿಕ ಕಲೆ ಉಳಿಸೋಕೆ ವಿಶೇಷ ಯೋಜನೆ ತರಬೇಕು. ಕುಂಬಾರರಿಗೆ ಸಾಲ ಸೌಲಭ್ಯ, ಯಂತ್ರೋಪಕರಣ, ತರಬೇತಿ ಹಾಗೂ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಿದ್ರೆ ಈ ಕಾಯಕ ಇನ್ನಷ್ಟು ಬೆಳೆಯೋಕೆ ಸಹಾಯ ಆಗ್ತದೆ. ಮಣ್ಣಿನ ಪಾತ್ರೆಗಳ ಬಳಕೆಗೆ ಪ್ರೋತ್ಸಾಹ ಕೊಟ್ಟರೆ ಕುಂಬಾರ ಸಮುದಾಯದ ಬದುಕಿಗೂ ಹೊಸ ಬೆಳಕು ಸಿಗ್ತದೆ.

ಮಣ್ಣಿನ ಮಡಕೆ ಮಾಡಿ ಬದುಕು ಸಾಗಿಸುವ ಕುಂಬಾರ ಸಮುದಾಯ ಇಂದಿಗೂ ತಮ್ಮ ಪಾರಂಪರಿಕ ಕಾಯಕವನ್ನೇ ನಂಬಿಕೊಂಡಿದೆ. ಆಧುನಿಕ ಕಾಲ ಬಂದ್ರೂ ಮಣ್ಣಿನ ಪಾತ್ರೆಗಳ ಜತೆಗೆ ಬದುಕು ಕಟ್ಟಿಕೊಂಡಿರುವ ಈ ಸಮುದಾಯ ಈಗ ಸಂಕಷ್ಟದ ದಿನಗಳನ್ನು ಎದುರಿಸುತ್ತಿದೆ.

- Advertisement -

ಜೇಡಿಮಣ್ಣಿನಿಂದ ಚಕ್ರದ ಸಹಾಯದಲ್ಲಿ ಮಡಕೆಗಳಿಗೆ ಆಕಾರ ಕೊಟ್ಟು, ಅವುಗಳನ್ನು ಒಣಗಿಸಿ ಒಲೆಯ ಮೇಲೆ ಬೇಯಿಸಿ ಮಡಿಕೆ, ಹೂಜಿ, ಹಣತೆ, ಕುಡಿಕೆ, ತತ್ರಾಣಿ, ಲೋಟ, ಜಗ್‌ ಸೇರಿದಂತೆ ಹಲವಾರು ಮಣ್ಣಿನ ಪಾತ್ರೆಗಳನ್ನು ತಯಾರಿಸುತ್ತಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕಲಬುರಗಿ | ‘ನಮ್ಮನ್ನ ಎಲ್ಲಿಗೆ ಕಳುಹಿಸುತ್ತೀರಿ?’: ತಗ್ಗಿನ ಬೇಲಿಯ...

92ಕ್ಕೂ ಅಧಿಕ ಸ್ಲಂ ಕುಟುಂಬಗಳ ಬದುಕು ಕೇವಲ ಜಮೀನಿನ ಹಕ್ಕಿನ ಪ್ರಶ್ನೆಯಲ್ಲ; ಅವರ ಸುರಕ್ಷಿತ ಓಡಾಟ, ಕುಡಿಯುವ ನೀರು ಹಾಗೂ ನಿತ್ಯದ ಬದುಕಿನ ಹಕ್ಕಿನ ಪ್ರಶ್ನೆಯೂ ಹೌದು. ನ್ಯಾಯಾಲಯದ ವಿಚಾರಣೆ ಅಂತಿಮಗೊಳ್ಳುವವರೆಗೆ ಯಾವುದೇ...

ಚುನಾವಣಾ ಆಯೋಗದ ಸಭೆ: ಪರಿಹಾರವಲ್ಲ, ತೇಪೆ ಹಚ್ಚುವ ಕಾರ್ಯಕ್ರಮ

ಅವೈಜ್ಞಾನಿಕ 'SIR' ಪ್ರಕ್ರಿಯೆ ಮತ್ತು ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಸಾರ್ವಜನಿಕವಾಗಿ ಬಯಲಾದ ಬೆನ್ನಲ್ಲೇ ಬಿಡುಗಡೆಯಾದ ಚುನಾವಣಾ ಆಯೋಗದ ಪತ್ರಿಕಾ ಪ್ರಕಟಣೆ, ತಪ್ಪುಗಳನ್ನು ತಿದ್ದುವ ಬದಲು ವ್ಯವಸ್ಥೆಯ ಲೋಪಗಳಿಗೆ ತೇಪೆ ಹಚ್ಚುವ ಯತ್ನದಂತೆ ಕಾಣುತ್ತಿದೆ. ದೇಶದ ಇತಿಹಾಸದಲ್ಲೇ...

ಹೊರಟ್ಟಿ ಅವರ ಹೋರಾಟದ ಬದುಕು ಮತ್ತು ಅವರ ಭಕ್ತ...

ಗ್ಯಾರಂಟಿ ಯೋಜನೆಗಳಿಂದ ಕೂಲಿ ಕಾರ್ಮಿಕರು ಸಿಗುತ್ತಿಲ್ಲವೆಂಬ ಬಸವರಾಜ ಹೊರಟ್ಟಿ ಅವರ ಹೇಳಿಕೆ ಮತ್ತು ಅದಕ್ಕೆ ಸಿಕ್ಕ ಸಾರ್ವಜನಿಕ ಚಪ್ಪಾಳೆಗಳು, ಕೇವಲ ಹಸಿವನ್ನೇ ಶ್ರಮದ ಇಂಧನವನ್ನಾಗಿ ನೋಡುವ ಸಮಾಜದ ಕ್ರೂರ ಮನಸ್ಥಿತಿಯನ್ನು ಅನಾವರಣಗೊಳಿಸುತ್ತವೆ. ಬಸವರಾಜ ಹೊರಟ್ಟಿ...

ಬೇಸಿಗೆ ಬಂದರೆ ಕುಂಬಾರರಿಗೆ ಸ್ವಲ್ಪ ವ್ಯಾಪಾರ ಜಾಸ್ತಿಯಾಗುತ್ತದೆ. ಮಣ್ಣಿನ ಮಡಕೆಯ ನೀರು ತಂಪಾಗಿರತ್ತದೆಂದು ಜನ ಇಂದಿಗೂ ಮಡಕೆ ಖರೀದಿ ಮಾಡ್ತಾರೆ. ಆದ್ರೂ ಈಗ ಫ್ರಿಜ್ ಬಳಕೆ ಜಾಸ್ತಿಯಾದ ಕಾರಣ ಮಡಕೆಗಳ ಬೇಡಿಕೆ ಮೊದಲಿನಷ್ಟು ಇಲ್ಲ. ಇದರಿಂದ ಕುಂಬಾರರ ಬದುಕು ಅಷ್ಟಕ್ಕಷ್ಟೆ ಎನ್ನುವಂತಿದೆ.

WhatsApp Image 2026 05 11 at 9.02.27 AM

ಈ ಕುರಿತು ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಕುಂಬಾರ ಸಮುದಾಯದ ಶಿವಲಿಂಗಪ್ಪ ಮಾತನಾಡಿ, “40 ವರ್ಷದಿಂದ ಕುಂಬಾರಿಕೆ ಮಾಡ್ತಿದಿನಿ. ಮಡಕೆ ಸೇರಿದಂತೆ ಹಲವಾರು ಮಣ್ಣಿನ ಪಾತ್ರೆ ತಯಾರಿಸುತ್ತೀವಿ. ಮೊದಲು ಮಣ್ಣಿನ ಒಲೆ ಮಾಡ್ತಿದ್ವಿ. ಗ್ಯಾಸ್ ಬಂದ ಮೇಲೆ ಅದರ ಬೇಡಿಕೆ ಕಡಿಮೆ ಆಯ್ತು. ಈಗ ಮತ್ತೆ ಗ್ಯಾಸ್‌ ಸಮಸ್ಯೆಯಿಂದ ಮಣ್ಣಿನ ಒಲೆಗಳಿಗೆ ಬೇಡಿಕೆ ಬಂದಿದೆ. ಬಾದಾಮಿಯಿಂದ ತರಿಸಿ ಮಾರಾಟ ಮಾಡ್ತೀವಿ” ಎಂದರು.

“ವ್ಯಾಪಾರ ಅಷ್ಟಕ್ಕಷ್ಟೇ ಇದೆ. ದುಡಿದ್ರೆ ಹೊಟ್ಟೆ ಬಟ್ಟೆಗೆ ಆಗುತ್ತೆ. ಬೆಳಿಗ್ಗೆ 7ರಿಂದ ಸಂಜೆ 7ರವರೆಗೂ ಕೆಲಸ ಮಾಡಬೇಕು. 15 ಮಡಕೆ ಮಾಡಬೇಕಂದ್ರೆ ಎರಡು ದಿನ ಬೇಕಾಗುತ್ತೆ. ಮೊದಲು ಹಳ್ಳಿಗಳಿಗೆ ಹೋಗಿ ಮಡಕೆ ಮಾರಾಟ ಮಾಡ್ತಿದ್ವಿ. ಆಗ ಜನ ಜೋಳ ಕೊಟ್ಟು ಮಣ್ಣಿನ ಪಾತ್ರೆ ತಗೋತಿದ್ರು. ದಿನಕ್ಕೆ ನಾಲ್ಕು ಚೀಲ ಜೋಳ ಸಿಗ್ತಿತ್ತು. ಮೊದಲು ಕೈಚಕ್ರದಲ್ಲಿ ಮಡಕೆ ಮಾಡ್ತಿದ್ವಿ, ಈಗ ಯಂತ್ರದ ಚಕ್ರ ಬಳಸ್ತೀವಿ” ಎಂದು ಹಳೆಯ ದಿನಗಳನ್ನು ನೆನಪಿಸಿಕೊಂಡರು.

“ಬೇಸಿಗೆ ಟೈಮ್‌ನಲ್ಲಿ ಮಡಕೆ ಸ್ವಲ್ಪ ಜಾಸ್ತಿ ಮಾರಾಟ ಆಗತ್ತೆ. ಮದುವೆಗಳಲ್ಲಿ ಕೂಡ ಮಣ್ಣಿನ ಮಡಕೆ ಬಳಸ್ತಾರೆ. ಆದ್ರೂ ಸರ್ಕಾರದಿಂದ ನಮಗೇನೂ ಸಹಾಯ ಸಿಕ್ಕಿಲ್ಲ” ಎಂದು ತಮ್ಮ ನೋವನ್ನು ಹೇಳಿಕೊಂಡರು.

ಆರೋಗ್ಯಕ್ಕೂ ಮಣ್ಣಿನ ಮಡಕೆ ಒಳ್ಳೆದು

“ಈಗಿನ ಕಾಲದಲ್ಲಿ ಫ್ರಿಜ್ ನೀರು ಕುಡಿಯೋದು ಸಾಮಾನ್ಯ ಆಗಿಬಿಟ್ಟಿದೆ. ಆದ್ರ ಆರೋಗ್ಯದ ದೃಷ್ಟಿಯಿಂದ ನೋಡಿದ್ರೆ ಮಣ್ಣಿನ ಮಡಕೆಯ ನೀರಿಗೆ ತನ್ನದೇ ಆದ ಮಹತ್ವ ಇದೆ” ಎಂಬುದು ಹಿರಿಯರ ಅಭಿಪ್ರಾಯ.

ಹಳ್ಳಿಗಳಲ್ಲಿ ಇಂದಿಗೂ ಹಲವರು ಮಡಕೆಯ ನೀರನ್ನೇ ಕುಡಿಯೋ ಅಭ್ಯಾಸ ಇಟ್ಟುಕೊಂಡಿದ್ದಾರೆ. ಕುಂಬಾರರ ಮಣ್ಣಿನ ಮಡಕೆಗಳು ನಮ್ಮ ಸಂಸ್ಕೃತಿ, ಪರಂಪರೆ ಮತ್ತು ಗ್ರಾಮೀಣ ಬದುಕಿನ ಭಾಗ ಆಗಿವೆ. ಕಾಲ ಬದ್ಲಾದ್ರೂ ಈ ಕಾಯಕ ಉಳಿಸ್ಕೊಂಡು ಬಂದಿರೋ ಕುಂಬಾರರು ಇವತ್ತು ಬದುಕಿಗಾಗಿ ಹೋರಾಟ ಮಾಡ್ತಿದ್ದಾರೆ.

ಇದನ್ನೂ ಓದಿದ್ದೀರಾ? ಅರಣ್ಯ ಇಲಾಖೆಯ ವಸಾಹತುಶಾಹಿ ವಿರುದ್ಧ ನಾಗರಹೊಳೆ ಆದಿವಾಸಿಗಳ ಹಕ್ಕು ಹೋರಾಟ

ಸರ್ಕಾರ ಇಂಥ ಸಾಂಪ್ರದಾಯಿಕ ಕಲೆ ಉಳಿಸೋಕೆ ವಿಶೇಷ ಯೋಜನೆ ತರಬೇಕು. ಕುಂಬಾರರಿಗೆ ಸಾಲ ಸೌಲಭ್ಯ, ಯಂತ್ರೋಪಕರಣ, ತರಬೇತಿ ಹಾಗೂ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಿದ್ರೆ ಈ ಕಾಯಕ ಇನ್ನಷ್ಟು ಬೆಳೆಯೋಕೆ ಸಹಾಯ ಆಗ್ತದೆ. ಮಣ್ಣಿನ ಪಾತ್ರೆಗಳ ಬಳಕೆಗೆ ಪ್ರೋತ್ಸಾಹ ಕೊಟ್ಟರೆ ಕುಂಬಾರ ಸಮುದಾಯದ ಬದುಕಿಗೂ ಹೊಸ ಬೆಳಕು ಸಿಗ್ತದೆ.

WhatsApp Image 2025 11 17 at 5.27.06 PM
ಸುನಿಲ್ ಹಂಪನ್ನವರ
+ posts

ಬೆಳಗಾವಿ ಜಿಲ್ಲಾ ಸಂಯೋಜಕರು

ಪೋಸ್ಟ್ ಹಂಚಿಕೊಳ್ಳಿ:

ಸುನಿಲ್ ಹಂಪನ್ನವರ
ಸುನಿಲ್ ಹಂಪನ್ನವರ
ಬೆಳಗಾವಿ ಜಿಲ್ಲಾ ಸಂಯೋಜಕರು

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗ್ಯಾನೇಶ್ ಕುಮಾರ್ ರಾಜೀನಾಮೆ ನೀಡಲಿ: ಇಸಿಐ ವಿವರಣೆ ತಿರಸ್ಕರಿಸಿದ ಸಿಪಿಐಎಂ; ಸಿಇಸಿ ಪದಚ್ಯುತಿಗೆ ಆಗ್ರಹ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಗೆ ಸಂಬಂಧಿಸಿದಂತೆ ಕೇಂದ್ರ...

ಮುದ್ದೇಬಿಹಾಳ | ದಾಸೋಹಿ ರೈತ ಉತ್ಪಾದಕ ಸಹಕಾರಿ ಸಂಘದ ಆರ್ಥಿಕ ಚಟುವಟಿಕೆ: ಗವಿಸಿದ್ದೇಶ್ವರ ಶ್ರೀಗಳಿಂದ ಚಾಲನೆ

ರೈತರೇ ಮಾಲೀಕರಾಗಿ, ರೈತರ ಆರ್ಥಿಕ ಸಬಲೀಕರಣವನ್ನೇ ಕೇಂದ್ರವಾಗಿಟ್ಟುಕೊಂಡು ಅಸ್ತಿತ್ವಕ್ಕೆ ಬಂದಿರುವ ದಾಸೋಹಿ...

ಸಮುದ್ರದಲ್ಲಿ ಅಲೆಗಳು ಭೋರ್ಗರೆಯುತ್ತಿರುವಾಗ ಈಜುವುದು ನನಗಿಷ್ಟ: ವೈರಲ್ ಆಯ್ತು ರಾಹುಲ್ ಗಾಂಧಿ ‘X’ ಪೋಸ್ಟ್

ಸಮುದ್ರದಲ್ಲಿ ಅಲೆಗಳು ಭೋರ್ಗರೆಯುತ್ತಿರುವಾಗ ಈಜುವುದು ನನಗಿಷ್ಟ ಎಂದು ಕಾಂಗ್ರೆಸ್ ನಾಯಕ ಹಾಗೂ...

ಗವಿಸಿದ್ದೇಶ್ವರ ಸ್ವಾಮೀಜಿ ದಸರಾ ಉದ್ಘಾಟನೆ ಆಹ್ವಾನ ತಿರಸ್ಕರಿಸಿದ್ದಾರೆಂಬ ಸುಳ್ಳುಸುದ್ದಿ: ತಪ್ಪಿತಸ್ಥನ ವಿರುದ್ಧ FIR

ಗವಿಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಮೈಸೂರು ದಸರಾ ಮಹೋತ್ಸವದ ಉದ್ಘಾಟನೆ ಆಹ್ವಾನವನ್ನು...