ಅಪಾಯದ ಸ್ಥಿತಿಯಲ್ಲಿ ಭೀಮನಕಟ್ಟೆ ತೂಗು ಸೇತುವೆ; ದುರಸ್ತಿಗೆ ಗ್ರಾಮಸ್ಥರ ಮನವಿ

Date:

ತೀರ್ಥಹಳ್ಳಿ ತಾಲ್ಲೂಕಿನ ರಜಂದಕಟ್ಟೆ ಸಮೀಪದ ಭೀಮನಕಟ್ಟೆ ತೂಗು ಸೇತುವೆ ಈಗ ನಿರ್ವಹಣೆ ಇಲ್ಲದೆ ತುಕ್ಕು ಹಿಡಿಯಲಾರಂಭಿಸಿದೆ. ಸೇತುವೆ 2007ರಲ್ಲಿ ಮಾಲತಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದ್ದು, ಆಲಗೇರಿ, ಸೌಳಿ, ಬಾಳೇ ಕೋಡ್ಲೂ, ಹೊಳೆಮದ್ದು, ಬಿಕ್ಕಳ್ಳಿ, ಬೇಗಾರುಕೊಪ್ಪ ಊರುಗಳಿಗೆ ಸಂಪರ್ಕ ಕಲ್ಪಿಸುತ್ತದೆ. ದ್ವಿಚಕ್ರ ವಾಹನ ಸವಾರರು ಸೇರಿದಂತ ಮಹಿಳೆಯರು, ಮಕ್ಕಳು ಈ ತೂಗು ಸೇತುವೆಯನ್ನು ಅವಲಂಬಿಸಿದ್ದಾರೆ. 1981ರಲ್ಲಿ ಅಂದಿನ ಶಾಸಕ ಡಿ.ಬಿ ಚಂದ್ರೇಗೌಡರು ಈ ಸೇತುವೆ ನೀಲಿ ನಕ್ಷೆ ಸಿದ್ಧಪಡಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು. ಆ ಪ್ರಸ್ತಾವನೆ ಹಾಗೇ ಮೂಲೆ ಸೇರಿತು. ನಂತರ ಪ್ರತೀ ಚುನಾವಣೆ ಸಂದರ್ಭದಲ್ಲಿಯೂ ಸೇತುವೆ ಪ್ರಮುಖ ಪಾತ್ರ ವಹಿಸುತ್ತಾ ಬರುತ್ತಿತ್ತು.

- Advertisement -

2007ರಲ್ಲಿ ಅಂದಿನ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಪದ್ಮನಾಭ ಭಟ್ 25 ಲಕ್ಷ ರೂಪಾಯಿ ವೆಚ್ಚದ ಅನುದಾನ ನೀಡಿ ತೂಗು ಸೇತುವೆ ನಿರ್ಮಿಸಲು ಕ್ರಮ ಕೈಗೊಂಡರು. ಅನುದಾನ ನೀಡಿ 16 ವರ್ಷ ಕಳೆದಿದೆ. ಈಗ ಸೇತುವೆ ಶಿಥಿಲಾವಸ್ಥೆ ತಲುಪಿದೆ. ಮಳೆಗಾಲ ಪ್ರಾರಂಭ ವಾಗಿದ್ದು ನೇತುವೆಯು ಕಬ್ಬಿಣ ತುಕ್ಕು ಹಿಡಿಯಲಾರಂಭಿಸಿದೆ. ಕೆಲವು ಕಡೆ ಸರಳುಗಳು ತುಕ್ಕು ಹಿಡಿದು ಬೀಳುವ ಹಂತ ತಲುಪಿದೆ. ಮೇಲ್ಭಾಗ ಹಾಸಿದ ಸಿಮೆಂಟ್ ಹಲಗೆ ಕಿತ್ತು ಬಂದಿರುವುದು, ಕಬ್ಬಿಣ ತುಕ್ಕು ಹಿಡಿದ ಬೇರ್ಪಟ್ಟಿರುವುದು ಹಲವು ಸಮಸ್ಯೆಗಳಿಗೆ ಎಡೆ ಮಾಡಿಕೊಟ್ಟಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಗಡುಸಾದ ದನಿಯೊಳಗಿನ ಮೃದು ಮನಸ್ಸು: ʼನಾನಾ ಪಾಟೇಕರ್ʼ ಎಂಬ...

ಅವರ ಗಡುಸಾದ ದನಿಯಲ್ಲಿ ಸಾಮಾನ್ಯ ಮನುಷ್ಯನ ಆಕ್ರೋಶವಿತ್ತು; ಅವರ ತೀಕ್ಷ್ಣ ನೋಟದಲ್ಲಿ ಬದುಕಿನ ಕಹಿ ಸತ್ಯಗಳಿದ್ದವು. ‘ಕ್ರಾಂತಿವೀರ್’ನಲ್ಲಿ ಅನ್ಯಾಯದ ವಿರುದ್ಧ ಸಿಡಿದವರು, ‘ಖಾಮೋಶಿ’ಯಲ್ಲಿ ಮಾತಿಲ್ಲದೆ ಮನಸ್ಸು ತಟ್ಟಿದವರು, ‘ವೆಲ್‌ಕಮ್’ನಲ್ಲಿ ನಗುವಿನ ಹೊಳೆ ಹರಿಸಿದವರು...

ಕೂಲಿಕಾರ್ಮಿಕರ ಮೊಮ್ಮಗಳ ವಿಶ್ವ ವಿಜಯ: ಭಾರತೀಯ ಮೂಲದ ನವಿ...

ವಿಶ್ವಸಂಸ್ಥೆಯ ಮಾನವ ಹಕ್ಕುಗಳ ವಿಭಾಗದ ಮಾಜಿ ಮುಖ್ಯಸ್ಥೆ ಹಾಗೂ ಪ್ರಸ್ತುತ ಅಂತಾರಾಷ್ಟ್ರೀಯ ನ್ಯಾಯಾಲಯದ (ICJ) ನ್ಯಾಯಾಧೀಶರಾಗಿರುವ ದಕ್ಷಿಣ ಆಫ್ರಿಕಾ ಮತ್ತು ಭಾರತೀಯ ಮೂಲದ ನವನೀತಮ್ 'ನವಿ' ಪಿಳ್ಳೈ (85) ಅವರಿಗೆ 2026ನೇ ಸಾಲಿನ...

ಉತ್ತರ ಕನ್ನಡ | ಗ್ರಾಮೀಣ ಮಹಿಳೆಯರ ಸಬಲೀಕರಣಕ್ಕೆ ‘ಅಕ್ಕ...

ಉತ್ತರ ಕನ್ನಡ ಜಿಲ್ಲೆಯಲ್ಲಿ 'ಅಕ್ಕ ಕೆಫೆ' ಯೋಜನೆ ಯಶಸ್ವಿಯಾಗಿ ಮುನ್ನಡೆಯುತ್ತಿದ್ದು, ಗ್ರಾಮೀಣ ಮಹಿಳೆಯರು ಸ್ವಂತ ಉದ್ಯಮ ನಡೆಸಿ ಆರ್ಥಿಕ ಸ್ವಾವಲಂಬನೆ ಸಾಧಿಸಲು ಮತ್ತು ಉದ್ಯಮಿಗಳಾಗಿ ಹೊರಹೊಮ್ಮಲು ಇದು ದಾರಿಮಾಡಿಕೊಟ್ಟಿದೆ. ಸಂಜೀವಿನಿ ಎನ್‌ಆರ್‌ಎಲ್‌ಎಂ ಯೋಜನೆಯಡಿ...

ಸ್ಥಳೀಯ ಗ್ರಾಮಸ್ಥರನ್ನು ಈ ದಿನ.ಕಾಮ್ ಮಾತನಾಡಿಸಿದಾಗ 2007ಕ್ಕಿಂತಲೂ ಮೊದಲು ದೋಣಿಯಲ್ಲಿ ದಾಟುತ್ತಿದ್ದೆವು. 2007ರಲ್ಲಿ ತೂಗು ಸೇತುವೆ ನಿರ್ಮಾಣವಾಯಿತು. ಹನ್ನೊಂದು ವರ್ಷ ಕಳೆದರೂ ಒಂದು ಬಾರೊ ಪೈಂಟ್ ಮಾಡಿದ್ದಾರೆ. ಈಗ ಪೈಂಟೂ ಇಲ್ಲ ಪೂರ್ತಿ ಡ್ಯಾಮೇಜ್ ಆಗಿ ಹೋಗಿದೆ. ಕಬ್ಬಿಣದ ಅಂಶ ಎಲ್ಲವೂ ತುಕ್ಕು ಹಿಡಿದು ಒಟ್ಟೆ ಆಗಿ ಹೋಗಿದೆ ಈ ತೂಗು ಸೇತುವೆ ತೆಗೆದು ನಾಲ್ಕು ಅಡಿ ಕಾಲ ಸೇತುವೆ ಮಾಡಿಕೊಟ್ಟರೆ ತುಂಬಾನೆ ಉಪಕಾರ ಆಗಬಹುದು ಎಂದು ಹೇಳಿದ್ದಾರೆ.

“ಈಗ ಇವರು ತೂಗು ಸೇತುವೆಯಲ್ಲಿ ದಾಟಿ ಹೋಗಲು ಭಯ ಆಗುತ್ತಿದೆ. ಇಲ್ಲಿ ನೂರಾರು ಹಳ್ಳಿ ಇದೆ. ಆ ಹಳ್ಳಿಗಳಿಗೆ ಎಲ್ಲ ಇರುವ ಸಂಪರ್ಕ ಸೇತುವೆ ಇದುವೇ ಆಗಿದೆ. ಈ ಪ್ರದೇಶದಲ್ಲಿ ಹೆಚ್ಚಾಗಿ ಓಡಾಡುವುದು ಬಡವರು ಮತ್ತು ರೈತರು ಸಂಭಂದ ಪಟ್ಟವರು ಬೇಕಾದರೆ ಇಲ್ಲಿ ಬಂದು ಸಮೀಕ್ಷೆ ಮಾಡಿ ನೋಡಲಿ” ಎಂದು ಹರೀಶ್ ಎಂಬುವವರು ಮನವಿ ಮಾಡಿಕೊಂಡಿದ್ದಾರೆ.

“ಅದೇ ಗ್ರಾಮದ ವಿದ್ಯಾರ್ಥಿನಿ ಸೌಮ್ಯ ಈದಿನ.ಕಾಮ್ ಜೊತೆ ಮಾತನಾಡಿ ವಿದ್ಯಾರ್ಥಿಗಳಿಗೆ ಓಡಾಡುವ ತುಂಬಾನೇ ಅನುಕೂಲ ಆಗಿದೆ ಈ ಸೇತುವೆ ಇಲ್ಲದಿದ್ದರೆ ಸುಮಾರು 20 ಕಿ ಲೋ ಮೀಟರ್ ಗಳಷ್ಟು ದೂರ ಸುತ್ತಾಡಿ ಬರಬೇಕು ದಯವಿಟ್ಟು ಎಲ್ಲರಿಗೂ ಉಪಕಾರ ಹಾಗುವ ಹಾಗೆ ಈ ಸೇತುವೆಯನ್ನು ಸರಿಮಾಡಿಸಿಕೊಡಿ” ಎಂದು ಹೇಳಿದರು.

ಒಟ್ಟಿನಲ್ಲಿ ಹೆಗ್ಗೋಡು ಮತ್ತು ಮುಳುಬಾಗಿಲು ಗ್ರಾಮ ಪಂಚಾಯತಿಯ ನಿರ್ಲಕ್ಷದಿಂದಾಗಿ ಜನರು ಸಂಕಷ್ಟ ಅನುಭವಿಸುವಂತಾಗಿದೆ. ಜನಪ್ರತಿನಿಧಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ಮುಂದಾಗುವ ಅನಾಹುತವನ್ನು ತಪ್ಪಿಸಬೇಕಿದೆ.

ಪೋಸ್ಟ್ ಹಂಚಿಕೊಳ್ಳಿ:

ಶಾರೂಕ್ ತೀರ್ಥಹಳ್ಳಿ
ಶಾರೂಕ್ ತೀರ್ಥಹಳ್ಳಿ
ಮೂಲತಃ ತೀರ್ಥಹಳ್ಳಿಯವರಾದ ಇವರು ಪ್ರಸ್ತುತ ಈದಿನ. ಕಾಮ್ ಉಡುಪಿ ಜಿಲ್ಲಾ ವರದಿಗಾರರಾಗಿ ಮತ್ತು ಕರಾವಳಿ ಮಲೆನಾಡು ಭಾಗದ ವಲಯ ಸಂಯೋಜಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. 2017 ರಿಂದ ಪತ್ರಿಕೋದ್ಯಮದಲ್ಲಿ ತೊಡಗಿಸಿಕೊಂಡ ಇವರು ದಿನ ಪತ್ರಿಕೆ, ವಾರ ಪತ್ರಿಕೆ, ನ್ಯೂಸ್ ವೆಬ್ ಪೋರ್ಟಲ್ ನಲ್ಲಿ ಕಾರ್ಯನಿರ್ವಹಸಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಆಡಳಿತದಲ್ಲಿ ಪಾರದರ್ಶಕತೆಗೆ ಮಾಹಿತಿ ಹಕ್ಕು ಕಾಯ್ದೆ ಪ್ರಮುಖ ಅಸ್ತ್ರ: ಹಣಮಂತ ಶಿಂದೆ

ಮಾಹಿತಿ ಹಕ್ಕು ಕಾಯ್ದೆಯ ಪರಿಣಾಮಕಾರಿ ಬಳಕೆ, ಆಡಳಿತದಲ್ಲಿ ಪಾರದರ್ಶಕತೆ ಹಾಗೂ ಸಾಮಾಜಿಕ...

ಯತ್ನಾಳ್ ವಿರುದ್ಧ ಹೊರ್ತಿ ವಾಗ್ದಾಳಿ; ಅರ್ಜಿ ವಾಪಸ್ ಪಡೆದ ಹಿಂದಿನ ಸತ್ಯ ಬಹಿರಂಗಪಡಿಸಲು ಸವಾಲು

ಮತದಾರರ ಪಟ್ಟಿಯಿಂದ ಹೆಸರುಗಳನ್ನು ತೆಗೆದುಹಾಕುವಂತೆ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಬರೆದಿರುವ...

ಆರೋಗ್ಯ ಸುರಕ್ಷತೆಗೆ ಆದ್ಯತೆ ನೀಡಿ: ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚನೆ

ಕೊಡಗು ಜಿಲ್ಲೆಯಲ್ಲಿ ಡೆಂಗ್ಯೂ, ಮಲೇರಿಯಾ ಸೇರಿದಂತೆ ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಅಗತ್ಯ...

ಉಡುಪಿ | ಯುವಜನರೇ, ನಿರಂತರ ಪರಿಶ್ರಮದಿಂದ ಯಶಸ್ಸಿನ ಮೆಟ್ಟಿಲೇರಿ: ಪ್ರಕಾಶ್ ಶೆಟ್ಟಿ

ಯುವಜನರು ನಿರಂತರ ಪ್ರಯತ್ನದ ಮೂಲಕ ಜೀವನದಲ್ಲಿ ಒಂದೊಂದೇ ಮೆಟ್ಟಿಲು ಏರುತ್ತಾ ಸಾಗಿದರೆ...