ಮನೆಯ ಆವರಣದಲ್ಲಿ ರಾತ್ರಿ ಮಲಗಿದ್ದ ವೇಳೆ ಹಾವು ಕಡಿದು ಎಂಟನೇ ತರಗತಿಯಲ್ಲಿ ಬಾಲಕನೊಬ್ಬ ಮೃತಪಟ್ಟ ಘಟನೆ ಔರಾದ್ ತಾಲೂಕಿನ ನಾಗಮಾರಪಳ್ಳಿ ಗ್ರಾಮದಲ್ಲಿ ನಡೆದಿದೆ.
ನಾಗಮಾರಪಳ್ಳಿ ಗ್ರಾಮದ ಲಾರೆನ್ಸ್ ತಂದೆ ರಾಜಕುಮಾರ್ (14) ಮೃತ ಬಾಲಕ. ಎಂದಿನಂತೆ ರವಿವಾರ ರಾತ್ರಿ ಮನೆ ಆವರಣದಲ್ಲಿ ತಂದೆ ಜೊತೆಗೆ ಮಲಗಿದ್ದಾಗ ಹಾವು ಕಡಿದಿದೆ. ನಸುಕಿನ ಜಾವ ತಕ್ಷಣ ಔರಾದ್ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಬೀದರ್ ಜಿಲ್ಲಾ ಆಸ್ಪತ್ರೆಗೆ ಕೊಂಡೊಯ್ಯುವ ವೇಳೆ ಮಾರ್ಗ ಮಧ್ಯೆ ಕೊನೆಯುಸಿರೆಳೆದಿದ್ದಾರೆ ಎನ್ನಲಾಗಿದೆ.
ಮೃತ ಬಾಲಕನ ಪೋಷಕರು ಕಡು ಬಡವರಾಗಿದ್ದು. ಮೃತನಿಗೆ ಇಬ್ಬರು ಸಹೋದರಿಯರಿದ್ದಾರೆ. ಏಕೈಕ ಮಗನನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಸರ್ಕಾರ ಇದನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಿ ಪರಿಹಾರ ನೀಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಈ ಕುರಿತು ಚಿಂತಾಕಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ಬೀದರ್ | ಮಾಯವಾದ ಮಳೆ: ಬರಿದಾದ 57 ಕೆರೆಗಳ ಒಡಲು!





