ಬೀದರ್ | ಧಗ ಧಗನೆ ಹೊತ್ತಿ ಉರಿದ ಕೊಟ್ಟಿಗೆ : 45 ಆಡುಗಳ ಸಹಿತ ವ್ಯಕ್ತಿ ಜೀವಂತ ದಹನ

Date:

ಆಡು ಕೊಟ್ಟಿಗೆಗೆ ಆಕಸ್ಮಿಕ ಬೆಂಕಿ ತಗುಲಿದ ಪರಿಣಾಮ 45 ಆಡುಗಳು ಹಾಗೂ ಓರ್ವ ವ್ಯಕ್ತಿ ಜೀವಂತ ದಹನವಾದ ಹೃದಯವಿದ್ರಾವಕ ಘಟನೆ ಔರಾದ್ ತಾಲೂಕಿನ ಬೋರಾಳ ಗ್ರಾಮದಲ್ಲಿ ಮಂಗಳವಾರ ಸಂಜೆ ನಡೆದಿದೆ.

- Advertisement -

ಬೋರಾಳ ಗ್ರಾಮದ ಶಂಕರ ಈರಗೊಂಡ ಮೇತ್ರೆ (62) ಮೃತಪಟ್ಟ ವ್ಯಕ್ತಿ ಎಂದು ತಿಳಿದು ಬಂದಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಹೊಸ ಓದು | ಬಿ. ಚಂದ್ರೇಗೌಡರ ‘ಕಾಳ ಮಾವನ...

ಬಿ. ಚಂದ್ರೇಗೌಡರ 'ಬಯಲು ಸೀಮೆಯ ಕಟ್ಟೆಪುರಾಣ' ಅಂಕಣ ಬರಹದಿಂದ ಎದ್ದುಬಂದ ಕಾಳಮಾವ ಈಗ ತನ್ನ ಕಡೇ ದಿನಗಳಲ್ಲಿದ್ದಾರೆ. ಅವರು ಕಣ್ಣುಮುಚ್ಚುವ, ಕಾಲುಮಡಚುವ ದೃಶ್ಯಗಳು ಭಾರತದ ಆತ್ಮಸಾಕ್ಷಿಯ ಅಂತ್ಯಸಂಸ್ಕಾರವನ್ನು ಸಂಕೇತಿಸುವಂತಿವೆ. ನಮ್ಮ ನೆಲದ ನಾಲಿಗೆನಿಷ್ಠೆ...

ಬ್ರಿಟಿಷ್ ಕಾಲದ ʼಗುಲಾಮಗಿರಿʼ ಕಾನೂನುಗಳೇ ಇಂದಿನ ಪೊಲೀಸ್‌ ವ್ಯವಸ್ಥೆಯ...

ಸ್ವಾತಂತ್ರ್ಯ ಬಂದು ದಶಕಗಳೇ ಕಳೆದಿದ್ದರೂ, ನಾವಿನ್ನೂ ಬ್ರಿಟಿಷರು ಭಾರತೀಯರನ್ನು ದಮನ ಮಾಡಲು ರೂಪಿಸಿದ 1861ರ ಪೊಲೀಸ್ ಕಾಯಿದೆಯ ನೆರಳಿನಲ್ಲೇ ಬದುಕುತ್ತಿದ್ದೇವೆಯೇ? ಖಾಕಿ ಪಡೆಯನ್ನು 'ಪ್ರಜೆಗಳ ರಕ್ಷಕ'ನಾಗಿಸಬೇಕಿದ್ದ ವ್ಯವಸ್ಥೆ, ಇಂದಿಗೂ ರಾಜಕಾರಣಿಗಳ ಕೈಗೊಂಬೆಯಾಗಿ ಉಳಿದುಕೊಳ್ಳಲು...

ಯಾರು ಹಿತವರು ಈ ಇಬ್ಬರೊಳಗೆ? ನೇಹಾ ಬೋರಾ ಅಭಿಜಿತ್...

“ಹೋಲಿಕೆ ಬೇಡ, ಒಗ್ಗಟ್ಟು ಬೇಕು. ನಾವೆಲ್ಲರೂ ಒಟ್ಟಾಗಿ ಚುನಾವಣಾ ಆಯೋಗದ ಅಕ್ರಮಗಳ ವಿರುದ್ಧ ಹೋರಾಡಬೇಕು” ಎಂದು ನೇಹಾ ಬರೆದರೆ, ಅದಕ್ಕೆ ಅಭಿಜೀತ್ ಉತ್ತರ- “ಇಂಕ್ವಿಲಾಬ್ ಜಿಂದಾಬಾದ್” ನೇಹಾ ಬೋರಾ ಮತ್ತು ಅಭಿಜಿತ್ ದೀಪ್ಕೆ ನಡುವೆ...

ಶಂಕರ ಮೇತ್ರೆ ಅವರು ಗ್ರಾಮದ ಹೊರವಲಯದಲ್ಲಿರುವ ಜಮೀನಿನಲ್ಲಿ ಮೇಕೆ ಶೆಡ್ ಹಾಕಿಕೊಂಡು ಆಡು ಸಾಕಾಣಿಕೆ ಮಾಡುತ್ತಿದ್ದರು. ಎಂದಿನಂತೆ ಆಡುಗಳನ್ನು ಮೇಯಿಸಿಕೊಂಡು ಬಂದು ಕೊಟ್ಟಿಗೆ ಒಳಗಡೆ ಹಾಕಿ ತಾವು ಅಲ್ಲೇ ಮಲಗಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.

ಸಂಜೆ 7 ಗಂಟೆ ಸುಮಾರಿಗೆ ಮೇಕೆ ಶೆಡ್‌ಗೆ ಆಕಸ್ಮಿಕ ಬೆಂಕಿ ತಗುಲಿ ಧಗ ಧಗ ಉರಿಯತೊಡಗಿ ಕೊಟ್ಟಿಗೆಯಲ್ಲಿದ್ದ 45 ಆಡುಗಳು ಸುಟ್ಟು ಕರಕಲಾಗಿವೆ. ಅದೇ ಕೊಟ್ಟಿಗೆಯಲ್ಲಿ ಮಲಗಿದ್ದ ಶಂಕರ ಮೇತ್ರೆ ಅವರು ಬೆಂಕಿಯ ಕೆನ್ನಾಲಿಗೆಯಿಂದ ಹೊರಬರಲಾಗದೆ ಸಜೀವ ದಹನವಾಗಿದ್ದು, ಅವರ ದೇಹ ಗುರುತಿಸಲಾಗದಷ್ಟು ಸುಟ್ಟು ಕರಕಲಾಗಿದೆ.

1005055031
ಮೃತ ಕುರಿಗಾಯಿ ಶಂಕರ ಮೇತ್ರೆ

ಈ ಕುರಿತು ಸ್ಥಳೀಯರು ಔರಾದ್ ಅಗ್ನಿಶಾಮಕ ದಳ ಕಚೇರಿಗೆ ಮಾಹಿತಿ ನೀಡಿದ್ದರು. ಆದರೆ ವಾಹನಗಳು ಬರುವಷ್ಟರಲ್ಲಿ ಭಾರೀ ಬೆಂಕಿ ಹತ್ತಿಕೊಂಡಿದ್ದರಿಂದ ಮೇಕೆ ಶೆಡ್‌ನಲ್ಲಿದ್ದ 45 ಕುರಿ, ಮರಿಗಳು ಬೆಂಕಿಗೆ ಆಹುತಿಯಾಗಿ ಅಪಾರ ಹಾನಿಯಾಗಿದೆ. ಅಲ್ಲದೆ ಕುರಿಗಾಯಿಯೊಬ್ಬರು ಸಜೀವ ದಹನವಾಗಿರುವುದು ಮನಕಲಕುವ ದೃಶ್ಯವಾಗಿದೆ.

ಕೊಟ್ಟಿಗೆಯಲ್ಲಿ ಸೋಲಾರ್ ದೀಪಗಳಿವೆ, ವಿದ್ಯುತ್ ತಂತಿ ಇರಲಿಲ್ಲ. ಆದರೂ ಆಕಸ್ಮಿಕ ಬೆಂಕಿ ಹೇಗೆ ತಗುಲಿದೆ ಎಂಬುದರ ಬಗ್ಗೆ ಖಚಿತ ಮಾಹಿತಿ ಇನ್ನೂ ಬಂದಿಲ್ಲ. ಈ ಬಗ್ಗೆ ತನಿಖೆಯಿಂದ ತಿಳಿದು ಬರಬೇಕಿದೆ ಎಂದು ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ.

ವಿಷಯ ತಿಳಿದು ಔರಾದ್ ಪೊಲೀಸ್ ಠಾಣೆ ಪೊಲೀಸರು, ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ಪರಿಶೀಲಿಸಿದ್ದಾರೆ

ಇದನ್ನೂ ಓದಿ : ಬೀದರ್ | ಬೇಸಿಗೆ ಬೆಳಿಗ್ಗೆಯೇ ಮಳೆ ಆರ್ಭಟ : ಸಿಡಿಲು ಬಡಿದು ಯುವಕ ಸಾವು

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪತ್ರಕರ್ತೆಯರ ಮೇಲೆ ಲೈಂಗಿಕ ದೌರ್ಜನ್ಯ; ಮಹಿಳೆಯರಿಗೆ ಸುರಕ್ಷತೆಯೇ ಇಲ್ಲವೇ: ಮೋಶಾಗೆ ಪ್ರಿಯಾಂಕಾ ಗಾಂಧಿ ಪ್ರಶ್ನೆ

ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆಯ ವರದಿಗಾರಿಕೆ ಮಾಡುತ್ತಿದ್ದ ಮಹಿಳಾ ಪತ್ರಕರ್ತೆಯರ ಮೇಲೆ...

ಕಲಬುರಗಿ | SIR ಎಡವಟ್ಟು: ಬದುಕಿರುವವರಿಗೂ ಮತದಾರರ ಪಟ್ಟಿಯಲ್ಲಿ ‘Death’ ಮುದ್ರೆ?

ಮತದಾರರ ಪಟ್ಟಿಯನ್ನು ಶುದ್ಧೀಕರಿಸುವ ಉದ್ದೇಶದಿಂದ ಕೈಗೊಳ್ಳಲಾಗಿರುವ ವಿಶೇಷ ತೀವ್ರ ಪರಿಷ್ಕರಣೆ (SIR)...