ಬೀದರ್‌ | ನೆಟ್‌ವರ್ಕ್ ಸಮಸ್ಯೆ : ಮೊಬೈಲ್‌ ಕರೆ, ರೇಷನ್‌ ಕಾರ್ಡ್ ಬಯೋಮೆಟ್ರಿಕ್‌ಗಾಗಿ ಗ್ರಾಮಸ್ಥರ ಪರದಾಟ!

Date:

ದೇಶ 5ಜಿ ಅಂತರ್ಜಾಲ ಸೇವೆ, ಎಐ ತಂತ್ರಜ್ಞಾನದಂತಹ ಅತ್ಯಾಧುನಿಕ ಕಾಲದಲ್ಲಿದೆ. ಆದರೆ, ಜಿಲ್ಲೆಯ ಗ್ರಾಮೀಣ ಪ್ರದೇಶಗಳ ಕೆಲ ಗ್ರಾಮಗಳಲ್ಲಿ ಇನ್ನೂ ನೆಟ್‌ವರ್ಕ್ ಇಲ್ಲದಿರುವುದು ಆಧುನಿಕ ಯುಗದ ವಿಪರ್ಯಾಸವೇ ಸರಿ. ಮೊಬೈಲ್​ನಲ್ಲಿ ಮಾತನಾಡಲು ಮನೆ ಚಾವಣಿ ಹತ್ತಿದರೆ, ಇಂಟರ್ನೆಟ್‌ ಸೇವೆಗಾಗಿ ಊರಿಂದ 1 ಕಿಮೀ ದೂರ ಕ್ರಮಿಸಿ ಮೊಬೈಲ್​ ಬಳಸಬೇಕು, ಇಲ್ಲದಿದ್ದರೆ ಗುಡ್ಡದ ಪ್ರದೇಶ ಕಡೆಗೆ ಹೋಗಬೇಕಾದ ಪರಿಸ್ಥಿತಿ ಇರುವ ಒಂದು ಊರಿನ ಕಥೆ-ವ್ಯಥ್ಯೆ ನೀವು ನಂಬಲೇಬೇಕು!.

- Advertisement -

ಹೌದು, ಬೀದರ್‌ ಜಿಲ್ಲೆಯ ಔರಾದ್‌ ತಾಲೂಕಿನ ಬರದಾಪುರ ಗ್ರಾಮದಲ್ಲಿ ಇಂತಹದೊಂದು ಸಮಸ್ಯೆ ತಲೆದೋರಿದೆ. ಇಲ್ಲಿನ ಜನರಿಗೆ ಸಮರ್ಪಕ ಮೊಬೈಲ್ ನೆಟ್‌ವರ್ಕ್‌ ಇಲ್ಲದಿರುವುದರಿಂದ ಆನ್‌ಲೈನ್​ನಲ್ಲಿ ನಡೆಯುವ ಸೇವೆಗಳು ಮರೀಚಿಕೆಯಾಗಿವೆ. ಈ ಸಮಸ್ಯೆಯಿಂದಾಗಿ ಜನರು ತುರ್ತು ಪರಿಸ್ಥಿತಿಗಳಲ್ಲಿ ಸ್ಥಳೀಯರು ಅಸಹಾಯಕರಾಗಿ ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ. ನೆಟ್‌ವರ್ಕ್ ಸೇವೆಗಾಗಿ ಸಾಹಸಪಡಬೇಕಾದ ಅನಿವಾರ್ಯತೆ ಎದುರಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಅಂಬಾರಿಯ ಮುಂದೆ ಪೊಲೀಸರು ಸೆಲ್ಫಿ ತೆಗೆದುಕೊಂಡರೆ ಭದ್ರತೆಗೆ ಹೇಗೆ...

ಚಿನ್ನದ ಅಂಬಾರಿಯನ್ನು ಜಂಬೂಸವಾರಿಯ ದಿನ ಬಳಸಿಕೊಳ್ಳಲು ಸರ್ಕಾರ ಅರಸು ಮನೆತನದವರಿಂದ ಪಡೆಯುತ್ತದೆ. ಉಚಿತವಾಗಿ ಅಲ್ಲ; ನಿಗದಿಪಡಿಸಿರುವ ಹಣವನ್ನು ಸಂದಾಯ ಮಾಡಿ. ಅಂಬಾರಿಯ ಭದ್ರತೆಯ ಹೊಣೆ ಸರ್ಕಾರದ ಮೇಲೂ ಇರುತ್ತದೆ. ಪೊಲೀಸರು ಸೆಲ್ಫಿ ತೆಗೆದುಕೊಂಡರೆ...

ಜನತಂತ್ರಕ್ಕೆ ಕುತ್ತು: ‘ಖಾಸಗಿತನ’ದ ನೆಪದಲ್ಲಿ ಪತ್ರಿಕಾ ಸ್ವಾತಂತ್ರ್ಯ ಹತ್ತಿಕ್ಕಲು...

ಮೋದಿ ಸರ್ಕಾರವು ಈ ಕಾಯ್ದೆಯನ್ನು ಏಕಾಏಕಿ ಜಾರಿಗೊಳಿಸದೆ, ಹಂತ ಹಂತವಾಗಿ ಜಾರಿಗೊಳಿಸುತ್ತಾ ಪ್ರಜಾಪ್ರಭುತ್ವದ ಕತ್ತು ಹಿಸುಕುತ್ತಿದೆ. ಆರ್‌ಟಿಐ ಕಾಯ್ದೆಯನ್ನು ದುರ್ಬಲಗೊಳಿಸುವ ತಿದ್ದುಪಡಿಯು ಈಗಾಗಲೇ ನವೆಂಬರ್ 2025ರಿಂದಲೇ ಜಾರಿಯಲ್ಲಿದ್ದರೆ, ಡೇಟಾ ಬಳಕೆಯ ಕಠಿಣ ನಿಯಮಗಳು...

ಬೆಂಗಳೂರು ಶಿಕ್ಷಕರ ಕ್ಷೇತ್ರದ ಸೋಲು: ಕಾಂಗ್ರೆಸ್ ಸರ್ಕಾರಕ್ಕೆ ಎಚ್ಚರಿಕೆಯ...

ಉಳಿದ ಮೂರು ವಿಧಾನ ಪರಿಷತ್‌ ಕ್ಷೇತ್ರಗಳಿಗಿಂತ ಬೆಂಗಳೂರು ಶಿಕ್ಷಕರ ಕ್ಷೇತ್ರದ ಫಲಿತಾಂಶ ರಾಜಕೀಯವಾಗಿ ಪರಿಣಾಮ ಬೀರಬಲ್ಲದು. ಡಿ.ಕೆ. ಶಿವಕುಮಾರ್‌ ಅವರ ನಾಯಕತ್ವವನ್ನು ಓರೆಗೆ ಹಚ್ಚಬಲ್ಲದು. ಒಕ್ಕಲಿಗ ಪ್ರಾಬಲ್ಯದ ಪ್ರದೇಶಗಳ ಒಲವು-ನಿಲುವುಗಳನ್ನು ತಿಳಿಸಬಲ್ಲದು. ಆದರೆ,...

ಗ್ರಾಮಸ್ಥರು ಪ್ರತಿ ತಿಂಗಳು ಪಡಿತರ ಅಕ್ಕಿಗಾಗಿ ಬಯೋಮೆಟ್ರಿಕ್ ಮಾಡಿಸಲು ಊರ ಹೊರಗಿರುವ ಸರ್ಕಾರಿ ಶಾಲೆ ಆವರಣ ಅಥವಾ ಗುಡ್ಡದ ಕಡೆಗೆ ತೆರಳುತ್ತಾರೆ. ಮನೆಯಲ್ಲಿ ಮೊಬೈಲ್‌ನಲ್ಲಿ ಮಾತಾಡುವುದು, ಅಂತರ್ಜಾಲದ ಸಹಾಯದಿಂದ ಮಾಹಿತಿ ಪಡೆಯಬೇಕಾದರೆ ಮನೆ ಚಾವಣಿ ಏರಲೇಬೇಕು ಎಂದು ಗ್ರಾಮಸ್ಥರು ಗೋಳು ತೋಡಿಕೊಂಡಿದ್ದಾರೆ.

ಗ್ರಾಮದ ಮುಖಂಡ ಸಂಜುಕುಮಾರ ಗೌಡ ಮಾತನಾಡಿ, “ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ನೀಡಿರುವ ಆದೇಶದ ಹಿನ್ನೆಲೆಯಲ್ಲಿ ರೇಷನ್‌ ಕಾರ್ಡ್‌ಗಳಿಗೆ ಇ-ಕೆವೈಸಿ ಮಾಡಿಸಲು ಜನರು ನ್ಯಾಯಬೆಲೆ ಅಂಗಡಿಗಳಿಗೆ ಬರುತ್ತಿದ್ದಾರೆ. ಉದ್ಯೋಗಕ್ಕಾಗಿ ನಗರಗಳಿಗೆ ವಲಸೆ ಹೋದ ಜನರು ಇ-ಕೆವೈಸಿಗಾಗಿ ಊರಿಗೆ ಮರಳಿದ್ದಾರೆ. ಆದರೆ, ಗ್ರಾಮದಲ್ಲಿ ಸಮರ್ಪಕ ನೆಟ್‌ವರ್ಕ್ ಬಾರದ ಕಾರಣ ಗಂಟೆಗಟ್ಟಲೇ ಕಾಯಬೇಕಾದ ಪರಿಸ್ಥಿತಿ ಇದೆ. ಇನ್ನ ಇ-ಕೆವೈಸಿ ಮಾಡಿಸಲು ಸರ್ವರ್‌ ಡೌನ್‌ ಇರುವುದರಿಂದ ಅಪ್ಡೇಟ್‌ ನಿಧಾನಗತಿಗೆ ಸಾಗಿರುವುದರಿಂದ ವೃದ್ಧರು, ಮಕ್ಕಳು ತೊಂದರೆ ಅನುಭವಿಸುವಂತಾಗಿದೆ. ಪ್ರತಿ ತಿಂಗಳು ರೇಷನ್‌ ಕಾರ್ಡ್ ಬಯೋಮೆಟ್ರಿಕ್‌ ಗಾಗಿ ಜನರು ನ್ಯಾಯಬೆಲೆ ಅಂಗಡಿ ಬಿಟ್ಟು ಊರ ಹೊರಗಡೆ ನೆಟ್‌ವರ್ಕ್ ಸಿಗುವ ಕಡೆಗೆ ಅಲೆದಾಡುವಂತಾಗಿದೆ” ಎಂದು ತಿಳಿಸಿದರು.

“ಗ್ರಾಮದಲ್ಲಿ ಹಲವು ವರ್ಷಗಳಿಂದ ನೆಟ್‌ವರ್ಕ್ ಸಮಸ್ಯೆ ಕಾಡುತ್ತಿದೆ. ಬಹುತೇಕ ಜನರು ಏರಟೆಲ್‌ ಸಿಮ್ ಬಳಸುತ್ತಾರೆ. ಆದರೆ, ಕರೆ ಬಂದಾಗ ಮನೆ ಚಾವಣಿ ಮೇಲೆ ಹೋಗಿ ಮಾತಾಡಬೇಕು. ಇಲ್ಲದಿದ್ದರೆ ಎತ್ತರದ ಪ್ರದೇಶ, ಊರ ಹೊರವಲಯದ ಗುಡ್ಡದ ಕಡೆಗೆ ತೆರಳಬೇಕಾದ ದುಸ್ಥಿತಿ ಬಂದೊದಗಿದೆ. ಈ ಸಮಸ್ಯೆ ಬಗ್ಗೆ ಸಂಬಂಧಪಟ್ಟ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಶಾಶ್ವತ ಪರಿಹಾರ ದೊರೆತಿಲ್ಲ. ಕೂಡಲೇ ಸಂಬಂಧಪಟ್ಟ ಟೆಲಿಕಾಂ ಸಂಸ್ಥೆಗಳೊಂದಿಗೆ ಸಮನ್ವಯ ಸಾಧಿಸಿ ಅಗತ್ಯವಿರುವ ಕಡೆ ಹೊಸ ಟವರ್ ಸ್ಥಾಪಿಸುವುದು ಅಥವಾ ಈಗಿರುವ ನೆಟ್‌ವರ್ಕ್ ವ್ಯವಸ್ಥೆಯನ್ನು ಬಲಪಡಿಸುವ ಮೂಲಕ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಬರದಾಪುರ ಗ್ರಾಮಸ್ಥ ರಘುನಾಥ ಮಾಳಗೆ ಆಗ್ರಹಿಸಿದ್ದಾರೆ.

ಇದನ್ನೂ ಓದಿ : ಬೀದರ್‌ ವಿವಿ ಪ್ರಥಮ ಘಟಿಕೋತ್ಸವ : 20 ವಿದ್ಯಾರ್ಥಿಗಳಿಗೆ ಚಿನ್ನದ ಪದಕ, ಇಬ್ಬರಿಗೆ ಗೌರವ ಡಾಕ್ಟರೇಟ್

ಗ್ರಾಮದ ಮುಖಂಡರಾದ ಸೂರ್ಯಕಾಂತ ಪಾಟೀಲ್, ಜ್ಞಾನೋಬಾ ಪಾಟೀಲ್, ನಾಗನಾಥ್ ಪಾಟೀಲ್, ವಿಠಲ, ನಾಗನಾಥ್, ಸಿದ್ದಾರೆಡ್ಡಿ, ಹಣಮಾರೆಡ್ಡಿ, ರತಿಕಾಂತ್, ಅಮೀರ್, ರಾಜಕುಮಾರ್, ಚಂದ್ರಕಾಂತ್, ಸತೀಶ್, ಸುಧಾಕರ್, ಬಸವರಾಜ್, ಅಶೋಕ್ ,ಚೇತನ್ ನಾಗರೆಡ್ಡಿ ಸೇರಿದಂತೆ ಅನೇಕರು ನೆಟ್‌ವರ್ಕ್‌ ಸಮಸ್ಯೆ ಕುರಿತು ಬೇಸರ ವ್ಯಕ್ತಪಡಿಸಿದ್ದು, ಶಾಶ್ವತ ಪರಿಹಾರ ಕಲ್ಪಿಸಲು ಮನವಿ ಮಾಡಿದ್ದಾರೆ.

eedina
ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದೆಹಲಿ SIR:​’ಹಳೆಯ’ ಮತದಾರರಿಗೆ ‘ಹೊಸ’ ಫಾರ್ಮ್ ಏಕೆ: ಚುನಾವಣಾ ಆಯೋಗಕ್ಕೆ ಸುಪ್ರೀಂ ತರಾಟೆ

ದೆಹಲಿಯಲ್ಲಿ ನಡೆಯುತ್ತಿರುವ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ, ಹಿಂದಿನ ಮತದಾರರ...

ಡಯಾಜಿಯೊ ಇಂಡಿಯಾದ ನೂತನ ಜನರಲ್ ಕೌನ್ಸೆಲ್ ಆಗಿ ಸಮೀರ್ ಚುಘ್ ನೇಮಕ

ಪ್ರಮುಖ ಮದ್ಯ ಉತ್ಪಾದನಾ ಕಂಪನಿಯಾದ ಡಯಾಜಿಯೊ ಇಂಡಿಯಾ (Diageo India) ಸಂಸ್ಥೆಯ...

ಬೀದರ್‌ | ಶೈಕ್ಷಣಿಕ ಜ್ಞಾನದೊಂದಿಗೆ ಮಾನವೀಯ ಮೌಲ್ಯ ಬೆಳೆಸಿಕೊಳ್ಳಿ : ಜ್ಯೋತಿರ್ಮಯಾನಂದ ಸ್ವಾಮೀಜಿ

ವಿದ್ಯಾರ್ಥಿಗಳು ಶಿಸ್ತು, ಸಂಯಮ, ಪರಿಶ್ರಮ ಹಾಗೂ ಉತ್ತಮ ಮೌಲ್ಯಗಳನ್ನು ನಿತ್ಯ ಜೀವನದಲ್ಲಿ...

ಈ ದಿನ ಸಂಪಾದಕೀಯ | ಎಸ್‌ಐಆರ್‌ ಮುಗೀತು; ಉತ್ತರ ಸಿಗದ ಪ್ರಶ್ನೆಗಳಿನ್ನೂ ಬಾಕಿ ಇವೆ!

ಎಸ್‌ಐಆರ್‌ ಮುಗಿದಿದೆ, ಅಂತಿಮ ಮತದಾರರ ಪಟ್ಟಿಯೂ ಪ್ರಕಟವಾಗಿದೆ. ಆದರೆ ಉತ್ತರ...