ಬೀದರ್‌ | ಸಾಹಿತ್ಯ ಲೋಕದ ಅರಿವು ವಿಸ್ತರಿಸಿದ ವಿದ್ವಾಂಸ ಕೆವಿಎನ್ : ಶಿವಾಜಿ ಮೇತ್ರೆ

Date:

ಕೆ.ವಿ.ನಾರಾಯಣ ಅವರು ಕನ್ನಡ ಸಾಹಿತ್ಯ ಲೋಕದ ಅರಿವನ್ನು ವಿಸ್ತರಿಸಿದ ಹಿರಿಯ ವಿದ್ವಾಂಸರು. ಅವರ ಸಾಹಿತ್ಯ ಮತ್ತು ಚಿಂತನೆಗಳನ್ನು ಬಹು ಆಯಾಮಗಳಲ್ಲಿ ಅಧ್ಯಯನ ಮಾಡುವ ಅಗತ್ಯವಿದೆ ಎಂದು ಕಲಬುರಗಿಯ ಎನ್.ವಿ. ಕಾಲೇಜಿನ ಅಧ್ಯಾಪಕ ಡಾ.ಶಿವಾಜಿ ಮೇತ್ರೆ ಹೇಳಿದರು.

- Advertisement -

ಡಾ.ಜಯದೇವಿತಾಯಿ ಲಿಗಾಡೆ ಪ್ರತಿಷ್ಠಾನ ಹಾಗೂ ಬಸವಕಲ್ಯಾಣ ರೀಡರ್ಸ್ ಕ್ಲಬ್ ವತಿಯಿಂದ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಿದ್ದ ಡಾ.ಕೆ.ವಿ.ನಾರಾಯಣ ಅವರ ಸಾಹಿತ್ಯ ಚಿಂತನೆ ಕುರಿತ ಸಮಾರಂಭದಲ್ಲಿ ಅವರು ಮಾತನಾಡಿ, “ಒಂದು ತಲೆಮಾರಿನ ಲೇಖಕರ ಮೇಲೆ ಪ್ರಭಾವ ಬೀರಿದ ಪ್ರಮುಖ ಚಿಂತಕರಲ್ಲಿ ಕೆ.ವಿ.ನಾರಾಯಣ ಅವರು ಒಬ್ಬರು. ಅವರ ಬರಹಗಳು ಕನ್ನಡ ಸಾಹಿತ್ಯ ಲೋಕಕ್ಕೆ ಹೊಸ ದೃಷ್ಟಿಕೋನವನ್ನು ನೀಡಿವೆ” ಎಂದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬಡತನದ ಮಾಪನ ಮತ್ತು ವಾಸ್ತವ ಚಿತ್ರಣ: ಆಳ ಅಗಲ

ವಿಶ್ವಬ್ಯಾಂಕ್‌ನ ಬಡತನ ಮತ್ತು ಸಮಾನತೆಯ ಇತ್ತೀಚಿನ ವರದಿಯ ಪ್ರಕಾರ 2011ರಿಂದ 2023ರ ಅವಧಿಯಲ್ಲಿ ಭಾರತದಲ್ಲಿ ಅಂದಾಜು 49.6 ಕೋಟಿ ಜನರು ಬಡತನದಿಂದ ಹೊರಬಂದಿದ್ದಾರೆ. ಈ ವರದಿಯನ್ನು ಆಧರಿಸಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ...

ಗಾಂಧೀಯ ‘ರಾಮ’-ಮನುವಾದಿಗಳ ‘ಶ್ರೀರಾಮ’ನಲ್ಲ

ಸಮಾನತೆಯ ರಾಮರಾಜ್ಯಕ್ಕೂ, ವರ್ಣಾಶ್ರಮದ ರಾಜಕಾರಣಕ್ಕೂ ಇರುವ ವ್ಯತ್ಯಾಸವೇನು? ಗಾಂಧೀಜಿಯವರ ಪಾಲಿಗೆ ರಾಮ ಎಂದರೆ ಸತ್ಯ, ಅಹಿಂಸೆ, ಪ್ರೀತಿ ಮತ್ತು ಸರ್ವಧರ್ಮ ಸಮಭಾವದ ಸಂಕೇತ; ಅಂಬೇಡ್ಕರ್ ಅವರ ವಿಮರ್ಶೆಯಲ್ಲಿ ಪುರಾಣದ ರಾಮನ ಆಡಳಿತದಲ್ಲಿ ಜಾತಿ...

ಮಂಡೇಲ ನೇತೃತ್ವದಲ್ಲಿ ಗುಲಾಮಗಿರಿ – ವರ್ಣಭೇದ ನೀತಿ ವಿರುದ್ಧ...

ನೆಲ್ಸನ್ ಮಂಡೇಲಾ ಅವರಂತಹ ಮಹಾನ್ ನಾಯಕರು ಕಟ್ಟಿದ್ದ ಈ ಪಕ್ಷ ದಾರಿ ತಪ್ಪಿದ್ದಾದರೂ ಹೇಗೆ ಎಂಬ ಪ್ರಶ್ನೆಗೆ ರಾಜಕೀಯ ತಜ್ಞರು ಸ್ಪಷ್ಟ ಕಾರಣಗಳನ್ನು ನೀಡಿದ್ದಾರೆ. ಆಡಳಿತಶಾಹಿಯ ಭ್ರಷ್ಟಾಚಾರ, ಮಿತಿಮೀರಿದ ಬಡತನ, ನಿರುದ್ಯೋಗ, ಮತ್ತು...

ಡಾ.ಜಯದೇವಿತಾಯಿ ಲಿಗಾಡೆ ಪ್ರತಿಷ್ಠಾನದ ನಿರ್ದೇಶಕ ಭೀಮಾಶಂಕರ ಬಿರಾದಾರ ಮಾತನಾಡಿ, “ಕೆ.ವಿ.ನಾರಾಯಣ ಅವರ ನುಡಿ ಚಿಂತನೆ ಪ್ರಭುತ್ವ, ಸಮಾಜ, ಸಮುದಾಯ ಮತ್ತು ಚರಿತ್ರೆಯ ನೆಲೆಗಳಲ್ಲಿ ರೂಪುಗೊಂಡಿದೆ. ಅವರು ಕೇವಲ ಭಾಷಾಶಾಸ್ತ್ರಜ್ಞರಾಗಿರದೆ ಸಮಾಜಶಾಸ್ತ್ರ, ರಾಜಕೀಯ, ಆರ್ಥಿಕತೆ, ಸಾಹಿತ್ಯ ಹಾಗೂ ಸಂಸ್ಕೃತಿಯಂತಹ ಹಲವು ಜ್ಞಾನಶಿಸ್ತುಗಳನ್ನು ಸಮನ್ವಯಗೊಳಿಸಿ ತಮ್ಮ ಚಿಂತನೆಗಳನ್ನು ಮಂಡಿಸಿದ್ದಾರೆ” ಎಂದು ಹೇಳಿದರು.

“ಆಧುನಿಕತೆ, ಮಾರುಕಟ್ಟೆ ವ್ಯವಸ್ಥೆ ಹಾಗೂ ಆಳುವ ವರ್ಗಗಳು ಭಾಷೆಯನ್ನು ಪಲ್ಲಟಗೊಳಿಸುವ ಪ್ರಕ್ರಿಯೆಗಳನ್ನು ತಾತ್ವಿಕ ಮತ್ತು ತಾರ್ಕಿಕ ನೆಲೆಯಲ್ಲಿ ಅವರು ತಮ್ಮ ‘ನುಡಿಗಳ ಅಳಿವು’ ಕೃತಿಯಲ್ಲಿ ವಿಶ್ಲೇಷಿಸಿದ್ದಾರೆ. ಕನ್ನಡ ಭಾಷಾಶಾಸ್ತ್ರ ಮತ್ತು ವಿಮರ್ಶಾ ಲೋಕವನ್ನು ಹೊಸ ದೃಷ್ಟಿಕೋನದಿಂದ ನೋಡುವ ನೋಟಕ್ರಮವನ್ನು ಕೆ.ವಿ.ನಾರಾಯಣ ಅವರು ರೂಪಿಸಿದ್ದಾರೆ” ಎಂದರು.

ಬಸವಕಲ್ಯಾಣ ರೀಡರ್ಸ್ ಕ್ಲಬ್ ಸಂಯೋಜಕ ಡಾ.ಶ್ರೀಕಾಂತ್ ಚವ್ಹಾಣ ಮಾತನಾಡಿ, “ಪಾಶ್ಚಿಮಾತ್ಯ ಸಿದ್ಧಾಂತಗಳು ಹಾಗೂ ವಿದೇಶಗಳಲ್ಲಿ ನಡೆಯುತ್ತಿದ್ದ ಹೊಸ ಸಾಹಿತ್ಯಿಕ ಮತ್ತು ಸಾಮಾಜಿಕ ಚಿಂತನೆಗಳನ್ನು ಕನ್ನಡ ಓದುಗರಿಗೆ ಪರಿಚಯಿಸಿದ ಪ್ರಮುಖ ಬರಹಗಾರರಲ್ಲಿ ಕೆ.ವಿ. ನಾರಾಯಣ ಅವರು ಒಬ್ಬರು” ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಪ್ರಾಧ್ಯಾಪಕ ಪ್ರೊ. ಸಿ.ಬಿ.ಪರತಾಪೂರೆ ಮಾತನಾಡಿ, “ಕೆ.ವಿ.ನಾರಾಯಣ ಅವರಂತಹ ವಿರಾಟ್ ಪ್ರತಿಭೆಯಿಂದ ಕನ್ನಡ ಸಾಹಿತ್ಯ ಮತ್ತು ಭಾಷಾವಿಜ್ಞಾನ ಲೋಕ ಶ್ರೀಮಂತವಾಗಿದೆ. ತಮ್ಮ ಬರಹಗಳ ಮೂಲಕ ಅವರು ಕಟ್ಟಿಕೊಟ್ಟ ಚಿಂತನೆಗಳು ಕನ್ನಡ ಸಾಹಿತ್ಯ ಪರಂಪರೆಗೆ ಹೊಸ ದಿಕ್ಕು ನೀಡಿವೆ. ಅವರ ಬರಹಗಳ ಮೂಲಕವೇ ಅವರನ್ನು ಸಮಗ್ರವಾಗಿ ಅರಿಯುವ ಅಗತ್ಯವಿದೆ” ಎಂದರು.

ಕೆ.ವಿ.ನಾರಾಯಣ ಅವರು ರಚಿಸಿದ ‘ನುಡಿಗಳ ಅಳಿವು’, ‘ಕನ್ನಡ ಜಗತ್ತು ಅರ್ಧ ಶತಮಾನ’, ‘ಬುದ್ಧಿಜೀವಿಗಳ ಬಿಕ್ಕಟ್ಟು’, ‘ಚಾಮ್‌ಸ್ಕಿ ಜೊತೆಗೆ ಎರಡು ಹೆಜ್ಜೆ’ ಸೇರಿದಂತೆ ವಿವಿಧ ಕೃತಿಗಳ ಕುರಿತು ಚರ್ಚೆ ಹಾಗೂ ಸಂವಾದ ನಡೆಯಿತು.

ಇದನ್ನೂ ಓದಿ : ಬೀದರ್‌ | ನವೋದಯ ವಿದ್ಯಾಲಯ ಪ್ರವೇಶ ಪರೀಕ್ಷೆ ನ.28ರಂದು

ಸಮಾರಂಭದಲ್ಲಿ ಡಾ.ಚಿತ್ರಶೇಖರ ಚಿರಳ್ಳಿ, ಭೀಮಾಶಂಕರ ಮಾಶಾಳಕರ, ಸೂರ್ಯಕಾಂತ ಪಾಟೀಲ, ಡಾ.ರಾಚಯ್ಯ ಸ್ವಾಮಿ, ವೈದ್ಯಾಧಿಕಾರಿ ಡಾ.ಸಂಗೀತಾ ಮಂಠಾಳೆ, ನವೀನ ಶ್ರೀವಾತ್ಸವ, ಶರಣಪ್ಪ, ಸಹದೇವ, ವೀರೇಶ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಚಂದ್ರಕಾಂತ ಅಕ್ಕಣ್ಣಾ ಸ್ವಾಗತಿಸಿ ನಿರೂಪಿಸಿದರು. ಬಸವರಾಜ ಶೇರಿ ವಂದಿಸಿದರು.

WhatsApp Image 2026 10 10 at 7.46.08 PM 43
eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಭದ್ರಾ ಹುಲಿ ಸಂರಕ್ಷಿತ ಪ್ರದೇಶದ ತಾಂತ್ರಿಕ ಸಮಿತಿಗೆ ವಿನಯಕುಮಾರ್ ಮಾಳಗೆ ನಾಮನಿರ್ದೇಶನ

ಕರ್ನಾಟಕದ ಹುಲಿ ಸಂರಕ್ಷಿತ ಪ್ರದೇಶಗಳ ಗಡಿ ವೈಜ್ಞಾನಿಕ ಪುನರ್‌ಪರಿಶೀಲನೆ ಮತ್ತು ಪುನರ್‌ನಿರ್ಧಾರ...

ಯುಪಿ ಚುನಾವಣೆಗೆ ಹೊಸ ತಿರುವು: ಓವೈಸಿ- ಚಂದ್ರಶೇಖರ್ ಮೈತ್ರಿ ಘೋಷಣೆ; ಆಜಾದ್ ಸಿಎಂ ಅಭ್ಯರ್ಥಿ

ಮುಂಬರುವ 2027ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಮುನ್ನ ರಾಜ್ಯ ರಾಜಕಾರಣದಲ್ಲಿ...

ಬೀದರ್‌ | ಕಬ್ಬಿನ ದರ ನಿಗದಿಗೆ ಆಗ್ರಹಿಸಿ ಅನಿರ್ದಿಷ್ಟಾವಧಿ ಧರಣಿ‌ ಆರಂಭ

ಪ್ರಸಕ್ತ ವರ್ಷದ ಹಂಗಾಮಿನ ಪ್ರತಿ ಟನ್ ಕಬ್ಬಿಗೆ ₹5,500 ಬೆಲೆ ನಿಗದಿಪಡಿಸಿ,...