ಬೀದರ್‌ | ಗರಿಗೆದರಿದ ಕೃಷಿ ಚಟುವಟಿಕೆ: 4.13 ಲಕ್ಷ ಹೆಕ್ಟೇರ್ ಬಿತ್ತನೆಗೆ ಸಜ್ಜು!

Date:

ಹಿಂದಿನ ವರ್ಷದ ಅತಿವೃಷ್ಟಿ ಮತ್ತು ಪ್ರವಾಹದಿಂದ ತತ್ತರಿಸಿದ್ದ ಬೀದರ್ ಜಿಲ್ಲೆಯ ರೈತರು ಈ ವರ್ಷ ಮುಂಗಾರು ಹಂಗಾಮಿಗೆ ಹೆಚ್ಚು ಸಿದ್ಧತೆಯೊಂದಿಗೆ ತಯಾರಾಗುತ್ತಿದ್ದಾರೆ. ಮಳೆಯ ನಡುವೆಯೂ ಹೊಲ-ಗದ್ದೆಗಳನ್ನು ಹದಗೊಳಿಸುವ ಅವರ ಶ್ರಮವು ಈ ಬಾರಿಯಾದರೂ ಭೂಮಿತಾಯಿ ಉತ್ತಮ ಫಸಲನ್ನು ನೀಡಲಿ ಎನ್ನುವ ನಿರೀಕ್ಷೆಯಲ್ಲಿರುವುದನ್ನು ಪ್ರತಿಬಿಂಬಿಸುತ್ತಿದೆ.

ಮುಂಗಾರು ಹಂಗಾಮಿನ ಪೂರ್ವದಲ್ಲಿ ಮಳೆ ಸುರಿಯುತ್ತಿರುವ ಬೆನ್ನಲೇ ರೈತರು ಬೆಳೆಗಳ ಬಿತ್ತನೆಗಾಗಿ ತಮ್ಮ ಹೊಲ-ಗದ್ದೆಗಳನ್ನು ಹದಗೊಳಿಸುತ್ತಿರುವ ಕೃಷಿ ಚಟುವಟಿಕೆಗಳು ಭರದಿಂದ ಸಾಗಿವೆ.

- Advertisement -

ಬೀದರ್ ಜಿಲ್ಲೆಯಲ್ಲಿ ಹಿಂದಿನ ವರ್ಷ ಮುಂಗಾರು ಹಂಗಾಮಿನಲ್ಲಿ ಸುಮಾರು 4.21 ಲಕ್ಷ ಹೆಕ್ಟೇರ್‌ ಪ್ರದೇಶಲ್ಲಿ ಬಿತ್ತನೆಯಾಗಿತ್ತು. ರೈತರು ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದರು. ಆದರೆ, ಕಾಡಿದ್ದ ಅತಿವೃಷ್ಟಿ ಹಾಗೂ ಪ್ರವಾಹ ರೈತರ ಖುಷಿಯನ್ನು ಕಸಿದು ಆರ್ಥಿಕ ಸಂಕಷ್ಟಕ್ಕೆ ಸಿಲುಕಿಸಿತ್ತು. ಈ ವರ್ಷವೂ ಉತ್ತಮ ಮಳೆ ನಿರೀಕ್ಷೆಯಲ್ಲಿರುವ ರೈತರು ಮೈಕೊಡವಿ ಎದ್ದುನಿಂತು ಮುಂಗಾರು ಬಿತ್ತನೆಗಾಗಿ ಅಗತ್ಯ ಸಿದ್ಧತೆಯಲ್ಲಿ ತೊಡಗಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಭದ್ರಾವತಿ | ಕಲುಷಿತ ಕುಡಿಯುವ ನೀರು ಸರಬರಾಜು; ರೋಗಭೀತಿಯಲ್ಲಿ...

ಭದ್ರಾವತಿ ತಾಲೂಕಿನ ಶಿವರಾಮನಗರ ಗ್ರಾಮದಲ್ಲಿ ನಗರಸಭೆ ಕಲುಷಿತ ಕುಡಿಯುವ ನೀರನ್ನು ಸರಬರಾಜು ಮಾಡುತ್ತಿರುವುದು ಗ್ರಾಮಸ್ಥರಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಈ ವಿಷಯದಲ್ಲಿ ನಗರಸಭೆ ಆಡಳಿತ ಮತ್ತು ಆರೋಗ್ಯ ಇಲಾಖೆ ಕಣ್ಮುಚ್ಚಿ ಕುಳಿತಿರುವುದಾಗಿ ಸ್ಥಳೀಯರು...

15 ವರ್ಷಗಳಿಂದ ಪ್ಲಾಸ್ಟಿಕ್‌ ದೂರವಿಟ್ಟ ಗ್ರಾಮ; ನಮ್ಮೂರಿಗೂ ಇದು...

ಒಂದು ಗ್ರಾಮವೆಂದರೆ, ಇಂದಿಗೂ ಮಣ್ಣಿನ ರಸ್ತೆಗಳು, ಕಚ್ಚಾ ಮನೆಗಳು, ಹೊಲ-ಗದ್ದೆಗಳು ಮಾತ್ರ ನೆನಪಾಗುತ್ತವೆ. ಅಲ್ಲಿನ ಜನರ ಬದುಕಿನ ಶಿಸ್ತು, ಸಾರ್ವಜನಿಕ ಸ್ಥಳಗಳ ಮೇಲಿನ ಅವರ ಹೊಣೆಗಾರಿಕೆ ಮತ್ತು ಮುಂದಿನ ಪೀಳಿಗೆಯ ಬಗ್ಗೆ ಇರುವ...

ʼಹಿಂದೆ ಸರಿಯುವ ಮಾತೇ ಇಲ್ಲʼ; ದೆಹಲಿ ಬೀದಿಗಳಲ್ಲಿ ಅಬ್ಬರಿಸುತ್ತಿರುವ...

ಚುನಾವಣಾ ಆಯೋಗದ (ECI) ವಿಶೇಷ ತೀವ್ರ ಪರಿಷ್ಕರಣೆ (SIR) ವಿರುದ್ಧ ಮತ್ತು CEC ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ INDIA ಬ್ಲಾಕ್ ಸಂಸತ್ ಸದಸ್ಯರು ದೆಹಲಿ ಬೀದಿಗಳಲ್ಲಿ ಬೃಹತ್‌ ಪ್ರತಿಭಟನೆ ನಡೆಸುತ್ತಿದ್ದಾರೆ. ಯುವಕರು...

ರೈತರು ಜಮೀನುಗಳಲ್ಲಿ ಕಸ-ಕಡ್ಡಿಗಳನ್ನು ಕಿತ್ತು ಸ್ವಚ್ಛಗೊಳಿಸುವುದು, ಮಳೆ ನೀರು ಭೂಮಿಯಲ್ಲಿ ಇಂಗುವಂತೆ ಮಣ್ಣನ್ನು ಹದಗೊಳಿಸುವುದು, ಕಲ್ಲು ಆಯುವುದು, ಮಣ್ಣಿನ ತೇವಾಂಶ, ಪೋಷಕಾಂಶ ಹೆಚ್ಚಿಸಲು ತಿಪ್ಪೆ ಗೊಬ್ಬರ ಹಾಕುವುದು, ನೇಗಿಲು, ಕುಂಟೆ ಹೊಡೆಯುವ ಕೆಲಸದಲ್ಲಿ ನಿರತರಾಗಿದ್ದಾರೆ.

ಮೇ ಮೊದಲ ವಾರದಿಂದ ಜಿಲ್ಲಾದ್ಯಂತ ಅಲ್ಪಸ್ವಲ್ಪ ಮುಂಗಾರು ಪೂರ್ವ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಇತ್ತ ಕೃಷಿ ಇಲಾಖೆಯು ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ 4.13 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯ ಗುರಿ ಹಾಕಿಕೊಂಡಿದೆ. ಇದಕ್ಕಾಗಿ ಅಗತ್ಯ ಬಿತ್ತನೆ ಬೀಜ, ರಸಗೊಬ್ಬರ ಸಂಗ್ರಹಿಸಿಕೊಂಡು, ಅವುಗಳನ್ನು ವಿತರಣೆಗೆ ಸಜ್ಜು ಮಾಡಿಕೊಂಡಿದೆ.

ಮುಂಗಾರು ಹಂಗಾಮಿನ ಪ್ರಮುಖ ಬೆಳೆಗಳಾದ ಸೋಯಾಬೀನ್, ತೊಗರಿ, ಹೆಸರು, ಉದ್ದು, ಜೋಳ ಸೇರಿ ವಿವಿಧ ಬೆಳೆಗಳ ಬಿತ್ತನೆಯಾಗುವ ಸಾಧ್ಯತೆ ಇದೆ. ಪ್ರತಿವರ್ಷದಂತೆ ಈ ಬಾರಿಯೂ ಸೋಯಾ ಬೆಳೆಗೆ ರೈತರು ಪ್ರಥಮಾದ್ಯತೆ ನೀಡಿದ್ದಾರೆ. ಕೃಷಿ ಇಲಾಖೆಯ ಅಂಕಿ-ಅಂಶಗಳ ಪ್ರಕಾರ ಜಿಲ್ಲೆಯಲ್ಲಿ ಬರೋಬ್ಬರಿ 2.22 ಲಕ್ಷ ಹೆಕ್ಟೇರ್‌ನಲ್ಲಿ ಸೋಯಾಬೀನ್‌ ಬಿತ್ತನೆಗೆ ಸಜ್ಜಾಗಿದ್ದಾರೆ. ಇನ್ನು ತೊಗರಿ-1.30 ಲಕ್ಷ ಹೆಕ್ಟೇರ್‌, ಹೆಸರು-23,663, ಉದ್ದು-15,750 ಹಾಗೂ 15,000 ಹೆಕ್ಟೇರ್‌ಗಳಲ್ಲಿ ಕಬ್ಬು ಬಿತ್ತನೆ ಆಗಲಿದೆ.

ರೈತರ ಫೇವರಿಟ್‌ ಬೆಳೆ ʼಸೋಯಾಬೀನ್‌ʼ

ಬೀದರ್‌ ಜಿಲ್ಲೆಯು ರಾಜ್ಯದಲ್ಲಿಯೇ ಹೆಚ್ಚು ಸೋಯಾಬೀನ್‌ ಬೆಳೆಯುವ ಪಟ್ಟಿಯಲ್ಲಿದೆ. ಸೋಯಾಬೀನ್‌ ಬೆಳೆಗೆ ಕ್ರಮೇಣ ಬೇಡಿಕೆ ಹೆಚ್ಚುತ್ತಿದೆ. ಕಳೆದ ಬಾರಿಯೂ 2 ಲಕ್ಷಕ್ಕೂ ಅಧಿಕ ಹೆಕ್ಟೇರ್‌ನಲ್ಲಿ ಸೋಯಾಬೀನ್‌ ಬೆಳೆಯಲಾಗಿತ್ತು, ಈ ಬಾರಿಯು ಜಿಲ್ಲೆಯ ಮುಂಗಾರು ಹಂಗಾಮಿನ ಒಟ್ಟು ಪ್ರದೇಶದ ಶೇ.50ಕ್ಕೂ ಅಧಿಕ ಸೋಯಾಬೀನ್‌ ಬೆಳೆಯಾಗಿದೆ. ಮಳೆ ಹೆಚ್ಚಾದರೂ, ಕಡಿಮೆಯಾದರೂ ಸೋಯಾಬೀನ್‌ ಉತ್ತಮ ಫಸಲು, ಇಳುವರಿ ಬರುವ ಕಾರಣಕ್ಕೆ ರೈತರು ಹೆಚ್ಚು ಒಲವು ಹೊಂದಿದ್ದು, ಕೆಲ ವರ್ಷಗಳಿಂದ ಸೋಯಾಬೀನ್‌ ಬಿತ್ತನೆ ಕಡೆ ಮುಖ ಮಾಡಿದ್ದಾರೆ.

ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಬಿತ್ತನೆ ಪ್ರದೇಶ ಇಳಿಕೆಯಾಗಿದೆ. ಕಳೆದ ಬಾರಿ 4,21,965 ಹೆಕ್ಟೇರ್‌ ಪ್ರದೇಶದಲ್ಲಿ ಮುಂಗಾರು ಬಿತ್ತನೆ ಗುರಿ ಹೊಂದಲಾಗಿತ್ತು. ಬಹುತೇಕ ಅದಕ್ಕಿಂತ ಹೆಚ್ಚಿನ ಸಾಧನೆ ಆಗಿತ್ತು. ಆದರೆ, ಈ ಬಾರಿ 4,12,194 ಹೆಕ್ಟೇರ್‌ನಲ್ಲಿ ಬಿತ್ತನೆಯ ಗುರಿ ಇದೆ. ಅಂದರೆ 9,771 ಹೆಕ್ಟೇರ್‌ ಪ್ರದೇಶ ಮುಂಗಾರು ಬಿತ್ತನೆಯಲ್ಲಿ ಇಳಿಕೆ ಆಗಿರುವುದು ಕಂಡುಬಂದಿದೆ. ಇನ್ನು ಕೆಲ ವರ್ಷಗಳಿಂದ ರೈತರು ಸೋಯಾಬೀನ್‌ ಯಥೇಚ್ಛ ಪ್ರಮಾಣದಲ್ಲಿ ಬೆಳೆಯುತ್ತಿರುವ ಹಿನ್ನೆಲೆ ಉದ್ದು, ಹೆಸರು, ಜೋಳ ಇತರೆ ಬೆಳೆಗಳ ಬಿತ್ತನೆ ಕ್ಷೇತ್ರ ಇಳಿಕೆಯಾಗಿದೆ. ಸೂರ್ಯಕಾಂತಿ ಬೆಳೆಯಂತೂ ಜಿಲ್ಲೆಯಲ್ಲಿ ದುರ್ಬೀನು ಹಾಕಿ ಹುಡುಕಿದರೂ ಬಹುಶಃ ಸಿಗುವುದಿಲ್ಲ.

146 ಕೇಂದ್ರಗಳಲ್ಲಿ ಬೀಜ ವಿತರಣೆ

ಕೃಷಿ ಇಲಾಖೆಯು ಮುಂಗಾರು ಹಂಗಾಮಿನ ಬಿತ್ತನೆಗೆ ಬೇಕಾದ ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದೆ. 1.31 ಲಕ್ಷ ಕ್ವಿಂಟಲ್‌ ಸೋಯಾಬೀನ್‌, 952 ಕ್ವಿಂಟಲ್‌ ತೊಗರಿ, 101 ಕ್ವಿಂಟಲ್‌ ಹೆಸರು, 87 ಕ್ವಿಂಟಲ್‌ ಉದ್ದು ಬೀಜಗಳ ಲಭ್ಯತೆ ಇದೆ. ಎಲ್ಲ ಬಿತ್ತನೆ ಬೀಜಗಳನ್ನು ಸಬ್ಸಿಡಿ ದರದಲ್ಲಿ ವಿತರಿಸಲಾಗುತ್ತಿದೆ.

ಬೀದರ್‌ ಜಿಲ್ಲೆಯಲ್ಲಿ ಒಟ್ಟು 30 ರೈತ ಸಂಪರ್ಕ ಕೇಂದ್ರ ಹಾಗೂ 116 ಹೆಚ್ಚುವರಿ ಬೀಜ ವಿತರಣಾ ಕೇಂದ್ರಗಳು ಸೇರಿ ಒಟ್ಟು 146 ಕೇಂದ್ರಗಳಲ್ಲಿ ಬೀಜ ವಿತರಿಸಲು ಕೃಷಿ ಇಲಾಖೆ ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದೆ. ಇನ್ನು ಯೂರಿಯಾ, ಡಿಎಪಿ ಸೇರಿ ವಿವಿಧ ರಸಗೊಬ್ಬರ 16,579 ಟನ್‌ ದಾಸ್ತಾನು ಇರುವುದಾಗಿ ಕೃಷಿ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಬೀಜ, ರಸಗೊಬ್ಬರ ದರ ಏರಿಕೆ

ಅತಿವೃಷ್ಟಿಯಿಂದ ಬೆಳೆ ಕಳೆದುಕೊಂಡು ಆರ್ಥಿಕ ಸಂಕಷ್ಟದಲ್ಲಿರುವ ರೈತರಿಗೆ ಈ ಬಾರಿ ಸೋಯಾಬೀನ್‌ ಸೇರಿದಂತೆ ಇತರೆ ಬೀಜಗಳ ಹಾಗೂ ರಸಗೊಬ್ಬರ ಬೆಲೆ ಏರಿಕೆಯಾಗಿದ್ದು, ಮತ್ತಷ್ಟು ಆತಂಕ ಮೂಡಿಸಿದೆ. ಸೋಯಾಬೀನ್‌ 1 ಚೀಲ (30ಕೆಜಿ) ಬೆಲೆ 2010 ಆಗಿದೆ. ಕಳೆದ ಬಾರಿ 1300-1400ದಿಂದ ಏಕಾಏಕಿ ಬೆಲೆ ಏರಿಕೆಯಾಗಿದೆ.

ಮಧ್ಯಪ್ರಾಚ್ಯದಲ್ಲಿ ನಡೆದ ಯುದ್ಧದ ಪರಿಣಾಮ ರಸಗೊಬ್ಬರದ ದರದ ಮೇಲೆಯೂ ಭಾರಿ ಪರಿಣಾಮ ಬೀರಿ ಅಭಾವದ ಜತೆಗೆ ದರ ಏರಿಕೆ ಆಗಿರುವುದು ರೈತ ಸಮುದಾಯಕ್ಕೆ ಬರೆ ಎಳೆದಂತಾಗಿದೆ. ಕೃಷಿ ಚಟುವಟಿಕೆಗಳಿಗೆ ಎತ್ತುಗಳ ಬಳಕೆ ಕಡಿಮೆಯಾಗಿದೆ. ಶೇ.90ರಷ್ಟು ರೈತರು ರೊಟವೇಟರ್‌, ಬಿತ್ತನೆ, ಔಷಧ ಸಿಂಪಡಣೆ ಸೇರಿ ಎಲ್ಲದಕ್ಕೂ ಟ್ರಾಕ್ಟರ್‌ ಮೇಲೆ ಅವಲಂಬಿತರಾಗಿದ್ದಾರೆ. ಇದೀಗ ತೈಲ ಬೆಲೆ ಏರಿಕೆಯಿಂದಾಗಿ ಟ್ರಾಕ್ಟರ್‌ ಬಾಡಿಗೆಯೂ ಹೆಚ್ಚಳವಾಗುವ ಸಾಧ್ಯತೆ ಇದೆ.

“ಜಿಲ್ಲೆಗೆ ಪ್ರಸಕ್ತ ಮುಂಗಾರಿನಲ್ಲಿ ರಸಗೊಬ್ಬರ ಕೊರತೆ ಎದುರಾಗುವ ಭೀತಿ ಉಂಟಾಗಿದೆ. ಕೃಷಿ ಇಲಾಖೆ ಮಾಹಿತಿ ಪ್ರಕಾರ ಸದ್ಯಕ್ಕೆ ಜಿಲ್ಲೆಯಲ್ಲಿ ಮೇ 21ರ ವರೆಗೆ ಯೂರಿಯಾ-5,250, ಡಿಎಪಿ- 4,960, ಎಂಓಪಿ-738, ಎನ್‌ಪಿಕೆಎಸ್- 4,856, ಎಸ್‌ಎಸ್‌ಪಿ-775 ಸೇರಿ ಒಟ್ಟು 16,579 ಟನ್‌ ರಸಗೊಬ್ಬರದ ದಾಸ್ತಾನು ಇದೆ. ಜೂನ್, ಜುಲೈ ತಿಂಗಳಲ್ಲಿ ಬೇಡಿಕೆಯಷ್ಟು ರಸಗೊಬ್ಬರ ಪೂರೈಕೆಯಾಗುವ ಆಶಾಭಾವವಿದೆ. ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ಜಿಲ್ಲೆಗೆ ಬೇಡಿಕೆಯಷ್ಟು ಗೊಬ್ಬರ ಪೂರೈಕೆಯಾಗಿಲ್ಲ. ಜೂನ್‌, ಜುಲೈ ತಿಂಗಳಲ್ಲಿ ಜಿಲ್ಲೆಗೆ ಬೇಡಿಕೆಯಷ್ಟು ರಸಗೊಬ್ಬರ ಪೂರೈಕೆಯಾಗಲಿದೆ” ಎಂದು ಜಂಟಿ ಕೃಷಿ ನಿರ್ದೇಶಕಿ ದೇವಿಕಾ ಆರ್. ತಿಳಿಸಿದ್ದಾರೆ.

“ಜಿಲ್ಲೆಗೆ ಖಾರಿಫ್‌ನಲ್ಲಿ ಒಟ್ಟಾರೆ 43,366 ಮೆಟ್ರಿಕ್ ಟನ್ (ಐಎಫ್‌ಎಂಎಸ್‌) ಬೇಡಿಕೆ ಇದೆ. 14,540 ಮೆಟ್ರಿಕ್ ಟನ್ ದಾಸ್ತಾನಿದೆ. ಏಪ್ರಿಲ್- ಮೇ ತಿಂಗಳಲ್ಲಿ ಜಿಲ್ಲೆಗೆ 6,588 ಮೆಟ್ರಿಕ್ ಟನ್ ಗೊಬ್ಬರ ಪೂರೈಕೆಯಾಗಿದೆ. ಎರಡೂ ಸೇರಿ 21,218 ಮೆಟ್ರಿಕ್ ಟನ್ ಆಗಿದೆ. ಈ ಪೈಕಿ ಈವರೆಗೆ 3,396 ಮೆಟ್ರಿಕ್ ಟನ್ ಗೊಬ್ಬರ ಮಾರಾಟವಾಗಿದ್ದು, ಸದ್ಯಕ್ಕೆ ಜಿಲ್ಲೆಯಲ್ಲಿ 16,579 ಮೆಟ್ರಿಕ್ ಟನ್ ದಾಸ್ತಾನಿದೆ. ಜೂನ್, ಜುಲೈ ತಿಂಗಳಲ್ಲಿ ಜಿಲ್ಲೆಗೆ ಬೇಡಿಕೆಯಷ್ಟು ರಸಗೊಬ್ಬರ ಪೂರೈಕೆಯಾಗಲಿದೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ : ಬೀದರ್‌ | ರಾಜಕಾರಣದಲ್ಲಿ ಶರಣ ಚಿಂತನೆ ಬೆರೆತರೆ ಹೊಸ ಸಮಾಜ ನಿರ್ಮಾಣ ಸಾಧ್ಯ : ಡಾ.ವಾಸು

ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಸ್ವಾಮಿ ʼಈ ದಿನ.ಕಾಮ್‌ʼ ಜತೆಗೆ ಮಾತನಾಡಿ, “ಅತಿವೃಷ್ಟಿ, ಅನಾವೃಷ್ಟಿಯಿಂದ ತತ್ತರಿಸಿದ ರೈತರಿಗೆ ಬಿತ್ತನೆ ಬೀಜ, ರಸಗೊಬ್ಬರ ದರ ಏರಿಕೆಯಾಗಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ರೈತರ ಬೆಳೆಗಳಿಗೆ ಸೂಕ್ತ ಬೆಲೆ ಒದಗಿಸದ ಸರ್ಕಾರಗಳು ರೈತರನ್ನು ಆರ್ಥಿಕ ಸಂಕಷ್ಟಕ್ಕೆ ಸಿಲುಕಿಸುತ್ತಿವೆ. ಸರ್ಕಾರ ಕೂಡಲೇ ಬೀಜ, ರಸಗೊಬ್ಬರ ದರ ಇಳಿಕೆ ಮಾಡಿ ಸಕಾಲಕ್ಕೆ ಬೀಜ, ಗೊಬ್ಬರ ಪೂರೈಸಲು ಕ್ರಮವಹಿಸಬೇಕು” ಎಂದು ಒತ್ತಾಯಿಸಿದರು.

ಹಿಂದಿನ ವರ್ಷದ ಅತಿವೃಷ್ಟಿ ಮತ್ತು ಪ್ರವಾಹದಿಂದ ತತ್ತರಿಸಿದ್ದ ಬೀದರ್ ಜಿಲ್ಲೆಯ ರೈತರು ಈ ವರ್ಷ ಮುಂಗಾರು ಹಂಗಾಮಿಗೆ ಹೆಚ್ಚು ಸಿದ್ಧತೆಯೊಂದಿಗೆ ತಯಾರಾಗುತ್ತಿದ್ದಾರೆ. ಮಳೆಯ ನಡುವೆಯೂ ಹೊಲ-ಗದ್ದೆಗಳನ್ನು ಹದಗೊಳಿಸುವ ಅವರ ಶ್ರಮವು ಈ ಬಾರಿಯಾದರೂ ಭೂಮಿತಾಯಿ ಉತ್ತಮ ಫಸಲು ನೀಡಲಿ ಎನ್ನುವ ನಿರೀಕ್ಷೆಯಲ್ಲಿರುವುದನ್ನು ಪ್ರತಿಬಿಂಬಿಸುತ್ತಿದೆ.

ಆದರೆ, ಕಳೆದ ವರ್ಷದ ಅನುಭವವು ಎಚ್ಚರಿಕೆಯ ಸಂದೇಶವನ್ನು ನೀಡುತ್ತಿದೆ. ಅತಿವೃಷ್ಟಿ, ನೀರಾವರಿ ನಿರ್ವಹಣೆ, ಬೆಳೆ ವಿಮೆ ಮತ್ತು ಆಧುನಿಕ ಕೃಷಿ ತಂತ್ರಜ್ಞಾನಗಳತ್ತ ಸರ್ಕಾರ ಮತ್ತು ರೈತರಿಬ್ಬರೂ ಗಮನ ಹರಿಸಬೇಕಾಗಿದೆ. ಸುಸ್ಥಿರ ಕೃಷಿ ಪದ್ಧತಿಗಳ ಮೂಲಕ ರೈತರ ಆದಾಯವನ್ನು ಸುರಕ್ಷಿತಗೊಳಿಸುವುದು ಮುಖ್ಯವಾಗಿದೆ.

WhatsApp Image 2025 02 06 at 11.55.32 e1738823214905
ಬಾಲಾಜಿ ಕುಂಬಾರ್
+ posts

ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.

ಪೋಸ್ಟ್ ಹಂಚಿಕೊಳ್ಳಿ:

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಹುಲ್ ಗಾಂಧಿ ನೇತೃತ್ವದಲ್ಲಿ ರಾಜ್‌ಘಾಟ್‌ನಲ್ಲಿ ‘ಇಂಡಿಯಾ’ ಒಕ್ಕೂಟದ ಮೌನ ಪ್ರತಿಭಟನೆ

ಮುಖ್ಯ ಚುನಾವಣಾ ಆಯುಕ್ತ (CEC) ಗ್ಯಾನೇಶ್ ಕುಮಾರ್ ಅವರ ವಿರುದ್ಧ ಪ್ರತಿಪಕ್ಷಗಳು...

ಬಾಗಲಕೋಟೆ | ಪ್ರಜಾಪ್ರಭುತ್ವದ ಕರಾಳ ದಿನ: ಕಾಂಗ್ರೆಸ್ ಬೃಹತ್ ಪ್ರತಿಭಟನೆ

ಭಾರತೀಯ ಪ್ರಜಾಪ್ರಭುತ್ವ ಮತ್ತು ಸಂವಿಧಾನದ ರಕ್ಷಣೆಯ ಸಂಕಲ್ಪದೊಂದಿಗೆ ಕಾಂಗ್ರೆಸ್ ಪಕ್ಷದ ವತಿಯಿಂದ...

ಭದ್ರಾವತಿ | ಕಲುಷಿತ ಕುಡಿಯುವ ನೀರು ಸರಬರಾಜು; ರೋಗಭೀತಿಯಲ್ಲಿ ಗ್ರಾಮಸ್ಥರು

ಭದ್ರಾವತಿ ತಾಲೂಕಿನ ಶಿವರಾಮನಗರ ಗ್ರಾಮದಲ್ಲಿ ನಗರಸಭೆ ಕಲುಷಿತ ಕುಡಿಯುವ ನೀರನ್ನು ಸರಬರಾಜು...

ವಿಜಯಪುರ | ಕೆ-ಸೆಟ್ ಪರೀಕ್ಷೆ ಪಾರದರ್ಶಕತೆಗೆ ಕಟ್ಟುನಿಟ್ಟಿನ ಕ್ರಮ: ಡಾ. ಔದ್ರಾಮ

ಅ. 11ರಂದು ನಡೆಯಲಿರುವ ಕೆ-ಸೆಟ್ ಪರೀಕ್ಷೆಯನ್ನು ಪಾರದರ್ಶಕ ಹಾಗೂ ಅಚ್ಚುಕಟ್ಟಾಗಿ ನಡೆಸಲು...