ಬೀದರ್‌ | ಬಲಗೈ ಸಮುದಾಯಗಳ ಒಳಮೀಸಲಾತಿ ಹೋರಾಟ ಸಮಿತಿಗೆ ಪದಾಧಿಕಾರಿಗಳ ಆಯ್ಕೆ

Date:

ಬಲಗೈ ಸಮುದಾಯಕ್ಕೆ ಒಳಮೀಸಲಾತಿ ವಿಚಾರದಲ್ಲಿ ಆಗುತ್ತಿರುವ ಅನ್ಯಾಯವನ್ನು ಖಂಡಿಸಿ ಹಾಗೂ ಸಮಾನ ಹಂಚಿಕೆಗೆ ಒತ್ತಾಯಿಸಿ ಬಲಗೈ ಸಮುದಾಯಗಳ ಒಳಮೀಸಲಾತಿ ಹೋರಾಟ ಸಮಿತಿಗೆ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.

- Advertisement -

ಬೀದರ್ ನಗರದ ಶಾಹಗಂಜ್ ಅಂಬೇಡ್ಕರ್ ಭವನದಲ್ಲಿ ಫೆಬ್ರವರಿ 20ರಂದು ಮಧ್ಯಾಹ್ನ 2 ಗಂಟೆಗೆ ನಡೆದ ಬಲಗೈ ಸಮುದಾಯದ ಜಿಲ್ಲಾ ಮಟ್ಟದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಗಡುಸಾದ ದನಿಯೊಳಗಿನ ಮೃದು ಮನಸ್ಸು: ʼನಾನಾ ಪಾಟೇಕರ್ʼ ಎಂಬ...

ಅವರ ಗಡುಸಾದ ದನಿಯಲ್ಲಿ ಸಾಮಾನ್ಯ ಮನುಷ್ಯನ ಆಕ್ರೋಶವಿತ್ತು; ಅವರ ತೀಕ್ಷ್ಣ ನೋಟದಲ್ಲಿ ಬದುಕಿನ ಕಹಿ ಸತ್ಯಗಳಿದ್ದವು. ‘ಕ್ರಾಂತಿವೀರ್’ನಲ್ಲಿ ಅನ್ಯಾಯದ ವಿರುದ್ಧ ಸಿಡಿದವರು, ‘ಖಾಮೋಶಿ’ಯಲ್ಲಿ ಮಾತಿಲ್ಲದೆ ಮನಸ್ಸು ತಟ್ಟಿದವರು, ‘ವೆಲ್‌ಕಮ್’ನಲ್ಲಿ ನಗುವಿನ ಹೊಳೆ ಹರಿಸಿದವರು...

ಕೂಲಿಕಾರ್ಮಿಕರ ಮೊಮ್ಮಗಳ ವಿಶ್ವ ವಿಜಯ: ಭಾರತೀಯ ಮೂಲದ ನವಿ...

ವಿಶ್ವಸಂಸ್ಥೆಯ ಮಾನವ ಹಕ್ಕುಗಳ ವಿಭಾಗದ ಮಾಜಿ ಮುಖ್ಯಸ್ಥೆ ಹಾಗೂ ಪ್ರಸ್ತುತ ಅಂತಾರಾಷ್ಟ್ರೀಯ ನ್ಯಾಯಾಲಯದ (ICJ) ನ್ಯಾಯಾಧೀಶರಾಗಿರುವ ದಕ್ಷಿಣ ಆಫ್ರಿಕಾ ಮತ್ತು ಭಾರತೀಯ ಮೂಲದ ನವನೀತಮ್ 'ನವಿ' ಪಿಳ್ಳೈ (85) ಅವರಿಗೆ 2026ನೇ ಸಾಲಿನ...

ಉತ್ತರ ಕನ್ನಡ | ಗ್ರಾಮೀಣ ಮಹಿಳೆಯರ ಸಬಲೀಕರಣಕ್ಕೆ ‘ಅಕ್ಕ...

ಉತ್ತರ ಕನ್ನಡ ಜಿಲ್ಲೆಯಲ್ಲಿ 'ಅಕ್ಕ ಕೆಫೆ' ಯೋಜನೆ ಯಶಸ್ವಿಯಾಗಿ ಮುನ್ನಡೆಯುತ್ತಿದ್ದು, ಗ್ರಾಮೀಣ ಮಹಿಳೆಯರು ಸ್ವಂತ ಉದ್ಯಮ ನಡೆಸಿ ಆರ್ಥಿಕ ಸ್ವಾವಲಂಬನೆ ಸಾಧಿಸಲು ಮತ್ತು ಉದ್ಯಮಿಗಳಾಗಿ ಹೊರಹೊಮ್ಮಲು ಇದು ದಾರಿಮಾಡಿಕೊಟ್ಟಿದೆ. ಸಂಜೀವಿನಿ ಎನ್‌ಆರ್‌ಎಲ್‌ಎಂ ಯೋಜನೆಯಡಿ...

ಮುಖಂಡರಾದ ಮಾರುತಿ ಬೌದ್ಧೆ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮುಖಂಡರು ಮಾತನಾಡಿ, ʼಒಳಮೀಸಲಾತಿ ರೋಸ್ಟರ್ ಬಿಂದುವಿನ ಅನುಷ್ಠಾನದಿಂದ ಬಲಗೈ ಸಮುದಾಯಕ್ಕೆ ಅನ್ಯಾಯವಾಗುತ್ತಿದೆʼ ಎಂದು ಆರೋಪಿಸಿದರು.

ʼಒಳಮೀಸಲಾತಿ ವರ್ಗಿಕರಣದಂತೆ ಪ್ರವರ್ಗ (ಎ) ಗೆ ಶೇ 6ರಷ್ಟು ಅವಕಾಶಗಳು ಸಿಗುತ್ತಿವೆ. ಆದರೆ, ಪ್ರವರ್ಗ-ಬಿ (ಶೇ 6ರಷ್ಟು) ಪ್ರವರ್ಗ-ಸಿಗೆ (ಶೇ 5ರಷ್ಟು) ಅನ್ಯಾಯ ಆಗುತ್ತಿದೆ. ಇದರಿಂದ ಸಮುದಾಯದ ಅನೇಕ ಅರ್ಹರಿಗೆ ಅವಕಾಶಗಳು ಕಮ್ಮಿಯಾಗುತ್ತಿವೆ. ಉದ್ಯೋಗ ಹಾಗೂ ಶಿಕ್ಷಣ ಕ್ಷೇತ್ರಗಳಲ್ಲಿ ಯಾವುದೇ ತಾರತಮ್ಯವಿಲ್ಲದೆ ಸಮಾನ ಹಂಚಿಕೆ ಮಾಡಬೇಕುʼ ಎಂದು ಒಕ್ಕೊರಲಿನಿಂದ ಸರ್ಕಾರವನ್ನು ಒತ್ತಾಯಿಸಲಾಯಿತು.

ರಾಜ್ಯ ಸರ್ಕಾರ ಹಾಗೂ ಮುಖ್ಯಮಂತ್ರಿ ಸೇರಿದಂತೆ ಸಂಬಂಧಿತ ಸಚಿವರು ಮತ್ತು ಶಾಸಕರ ವಿರುದ್ಧ ಅಗತ್ಯವಾದರೆ ಬೀದರ್ ಬಂದ್ ಸೇರಿದಂತೆ ಬೃಹತ್ ಹೋರಾಟ ರೂಪಿಸುವುದಾಗಿ ಸಭೆಯಲ್ಲಿ ಸರ್ವಾನುಮತದಿಂದ ತೀರ್ಮಾನಿಸಲಾಯಿತು.

ಸಮಿತಿ ಅಧ್ಯಕ್ಷರಾಗಿ ಮಹೇಶ ಗೊರನಾಳಕರ್‌ ಆಯ್ಕೆ :

ಇದೇ ಸಂದರ್ಭದಲ್ಲಿ ಬಲಗೈ ಸಮುದಾಯಗಳ ಒಳಮೀಸಲಾತಿ ಹೋರಾಟ ಸಮಿತಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಮುಖಂಡರಾದ ಮಹೇಶ ಗೊರನಾಳಕರ್ ಅವರನ್ನು ಆಯ್ಕೆ ಮಾಡಲಾಯಿತು.

ಕಾರ್ಯಕಾರಿ ಸಮಿತಿ ಸದಸ್ಯರಾಗಿ ಪ್ರದೀಪ ನಾಟೇಕರ್, ಪ್ರಕಾಶ ರಾವಣ, ಭೀಮರಾವ ಮಾಲಗತ್ತಿ, ರಾಹುಲ್ ಡಾಂಗೆ, ಪವನ ಮಿಠಾರೆ, ಸಂಜುಕುಮಾರ ಸಾಗರ, ವಿನೋದ ಬಂದಗೆ, ಸೂರ್ಯಕಾಂತ ಸಾಧೂರೆ ಹಾಗೂ ಅರುಣ ಪಟೇಲ್ ಅವರನ್ನು ಆಯ್ಕೆ ಮಾಡಲಾಯಿತು.

ಇದನ್ನೂ ಓದಿ : ಬೀದರ್‌ | ನಾಳೆ ಉದ್ಯೋಗ, ಸಿರಿಧಾನ್ಯ, ಫಲಪುಷ್ಪ, ಮತ್ಸ್ಯಮೇಳ : ಕಣ್ಮನ ಸೆಳೆಯುವ ʼಮಾಡರ್ನ್‌ ಲೇಡಿʼ

ಸಭೆಯಲ್ಲಿ ಬಲಗೈ ಸಮುದಾಯದ ಮುಖಂಡರಾದ ಅನೀಲಕುಮಾರ ಬೆಲ್ದಾರ, ಬಾಬುರಾವ ಪಾಸ್ವಾನ, ಡಾ. ಕಾಶಿನಾಥ ಚೆಲ್ವಾ, ವಿಠಲದಾಸ ಪ್ಯಾಗೆ, ಕಲ್ಯಾಣರಾವ ಭೋಸ್ಲೆ, ದೀಲಿಪ್ ಭೋಸ್ಲೆ, ಶ್ರೀಪತರಾವ ದಿನೆ, ಶಿವಕುಮಾರ ನಿಲಿಕಟ್ಟಿ, ರಾಜಕುಮಾರ ಬನ್ನೆರ, ಅಂಬಾದಾಸ ಗಾಯಕವಾಡ, ವಿಜಯಕುಮಾರ ಗಾಯಕವಾಡ, ಸಂಜುಕುಮಾರ ಲಾಧಾ, ಸುಭಾಷ ಲಾಧಾ, ವಿಷ್ಣುವರ್ಧನ್ ವಾಲ್ದೊಡ್ಡಿ, ಶಿವಕುಮಾರ ಭಾವಿಕಟ್ಟಿ, ಸುಧಾಕರ್ ರಾಜಗೀರಾ, ಸಂದೀಪ್ ಕಾಂಟೆ, ಪುಟ್ಟರಾಜ ದಿನೆ, ಗೌತಮ ಬಗ್ದಲಕರ್, ಅಮೃತ ಮುತ್ತಂಗಿಕರ್, ಝೆರೆಪ್ಪಾ ಬೆಲ್ದಾರ್, ಗೌತಮ ಪ್ರಸಾದ, ಉದಯ ನಾಯಕ, ಮೋಹನ್ ಡಾಂಗೆ, ಅಜಯ ದೀನೆ, ಬಾಬುರಾವ ಮಿಠಾರೆ, ಪ್ರಸನ್ನ ಡಾಂಗೆ, ರವಿ ಚಿದ್ರಿ, ಸುಧಾಮಣಿ ಗುಪ್ತಾ, ಶೇಶರಾವ ಬೆಳಕುಣಿ, ಝರೆಪ್ಪಾ ರಾಂಪೂರೆ, ಕಂಟೆಪ್ಪಾ ಪೂಜಾರಿ, ತುಕಾರಾಮ ದೊಡ್ಡಿ, ರಾಹುಲ್ ಭಂಗೂರೆ, ಸತೀಶ್ ಲಕ್ಕಿ, ಪ್ರದೀಪ ಕುದರೆ ಸೇರಿದಂತೆ ಅನೇಕ ಹೋರಾಟಗಾರರು ಉಪಸ್ಥಿತರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ಬೆಂಬಲ ಬೆಲೆಯಲ್ಲಿ ಹೆಸರುಕಾಳು, ಸೋಯಾಬೀನ್ ಖರೀದಿಗೆ ನೋಂದಣಿ ಆರಂಭ

ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ 2026-27ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ...

ಬೀದರ್‌ | ಬೈಕ್ ಅಪಘಾತ: ಇಬ್ಬರು ಯುವಕರು ಸಾವು

ನೆರೆಯ ತೆಲಂಗಾಣದ ಸಂಗಾರೆಡ್ಡಿ ಸಮೀಪ ಬುಧವಾರ ನಸುಕಿನ ಜಾವ ಸಂಭವಿಸಿದ ರಸ್ತೆ...

ಬೀದರ್‌ | 9 ವರ್ಷಗಳ ಹಿಂದೆ ಬೀದರ್‌ಗೆ ಆಗಮಿಸಿದ್ದ ನಟ ನಾನಾ ಪಾಟೇಕರ್

ಹೃದಯಾಘಾತದಿಂದ ನಿಧನರಾದ ಬಾಲಿವುಡ್ ಹಿರಿಯ ನಟ ನಾನಾ ಪಾಟೇಕರ್‌ಗೆ ಬೀದರ್...

ಬೀದರ್‌ | ನ.28, 29ರಂದು ಅನುಭವ ಮಂಟಪ ಉತ್ಸವ : ತುಮಕೂರು ಸಿದ್ಧಗಂಗೆ ಶ್ರೀಗಳಿಗೆ ಆಹ್ವಾನ

ಬೀದರ್‌ ಜಿಲ್ಲೆಯ ಬಸವಕಲ್ಯಾಣ ನಗರದ ಅನುಭವ ಮಂಟಪ ಪರಿಸರದಲ್ಲಿ ನವೆಂಬರ್ 28...