ಬೀದರ್‌ | ಸೀರತ್ ಅಭಿಯಾನ : ಪ್ರಬಂಧ ಸ್ಪರ್ಧೆಯಲ್ಲಿ ರುಕ್ಸಾನಾ ಬೇಗಂ, ಅಫ್ಸಾನ್ ಪರ್ವೀನ್ ಪ್ರಥಮ

Date:

ಕ್ರಾಂತಿಯ ಜ್ಯೋತಿ ಪ್ರವಾದಿ ಮುಹಮ್ಮದ್ ಸೀರತ್ ಅಭಿಯಾನ ಪ್ರಯುಕ್ತ ಜಮಾಅತೆ ಇಸ್ಲಾಮಿ ಹಿಂದ್ ಬೀದರ್ ಘಟಕ ಹಮ್ಮಿಕೊಂಡಿದ್ದ ಪ್ರಬಂಧ ಸ್ಪರ್ಧೆಯಲ್ಲಿ ಪ್ರೌಢಶಾಲಾ ವಿಭಾಗದಲ್ಲಿ ಹಾಜಿ ಮುಹಮ್ಮದ್ ಸುಲ್ತಾನ್ ಮೆಮೊರಿಯಲ್ ಪ್ರೌಢ ಶಾಲೆ ವಿದ್ಯಾರ್ಥಿನಿ ರುಕ್ಸಾನಾ ಬೇಗಂ ಹಾಗೂ ಕಾಲೇಜು ವಿಭಾಗದಲ್ಲಿ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿನಿ ಅಫ್ಸಾನ್ ಪರ್ವೀನ್ ಪ್ರಥಮ ಸ್ಥಾನ ಗಳಿಸಿದ್ದಾರೆ.

- Advertisement -

ಪ್ರೌಢ ಶಾಲೆ ವಿದ್ಯಾರ್ಥಿಗಳಿಗೆ ಸಾಮಾಜಿಕ ಕ್ರಾಂತಿಯ ಹರಿಕಾರ ಪ್ರವಾದಿ ಮುಹಮ್ಮದ್ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಆರ್ಥಿಕ ಕ್ರಾಂತಿಯ ಹರಿಕಾರ ಪ್ರವಾದಿ ಮುಹಮ್ಮದ್ ಕುರಿತು ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿತ್ತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಸೆ.23 ‘ಭೀಮ ಸಂಕಲ್ಪ ದಿನ’: ಡಾ ಬಿ ಆರ್...

1917ರ ಸೆಪ್ಟೆಂಬರ್ 23ರಂದು ವಡೋದರದ ಆಲದ ಮರದ ಕೆಳಗೆ ಕುಳಿತಿದ್ದ ಯುವ ಅಂಬೇಡ್ಕರ್ ಅವರ ಬಳಿ ಅಧಿಕಾರವಿರಲಿಲ್ಲ, ದೊಡ್ಡ ಸಂಘಟನೆಯಿರಲಿಲ್ಲ. ಆದರೆ ಅನ್ಯಾಯವನ್ನು ಒಪ್ಪಿಕೊಳ್ಳದ ಮನಸ್ಸು ಮತ್ತು ಸಮಾಜವನ್ನು ಬದಲಿಸಬೇಕೆಂಬ ದೃಢ ಸಂಕಲ್ಪವಿತ್ತು....

ಸೌಜನ್ಯ ಪ್ರಕರಣ: ಪ್ರಭಾವಿಗಳ ಜೊತೆ ಲಜ್ಜೆ ಬಿಟ್ಟು ಹೆಜ್ಜೆ...

ತನಿಖಾಧಿಕಾರಿಗಳು ಹಣದ ಆಮಿಷಕ್ಕೆ ಒಳಗಾಗಿದ್ದರೇ ಅಥವಾ ಬಲಾಢ್ಯರ ಒತ್ತಡಕ್ಕೆ ಮಣಿದು ಸಾಕ್ಷ್ಯ ನಾಶ ಮಾಡಿ ಅಪರಾಧಿಗಳ ರಕ್ಷಣೆಗೆ ನಿಂತರೇ ಎಂಬ ಅನುಮಾನ ಸಾಮಾನ್ಯ ಜನರಿಗೂ ಬರುತ್ತಿರುವಾಗ ಕರ್ನಾಟಕದ ಬಹುತೇಕ ಸುದ್ದಿ ಮಾಧ್ಯಮಗಳು ಈ...

ಉತ್ತರ ಪ್ರದೇಶ | ಅಖಿಲೇಶ್ ‘ಧರ್ಮ ರಕ್ಷಣೆ’ಯ ಯುದ್ಧ...

ಉತ್ತರ ಪ್ರದೇಶದ ಯುವಜನತೆಯ (Gen Z) ಅಸಮಾಧಾನ, ನಿರುದ್ಯೋಗ ಸಮಸ್ಯೆ ಮತ್ತು ಬದಲಾಗುತ್ತಿರುವ ಜಾತಿ ಸಮೀಕರಣಗಳು ತಮಗೆ ಪೂರಕವಾಗಿವೆ ಎಂಬುದನ್ನು ಅಖಿಲೇಶ್ ಯಾದವ್ ಅರಿತಿದ್ದಾರೆ. ತಮ್ಮ ಪಕ್ಷ ಕೇವಲ "ಮುಸ್ಲಿಂ ಮತ್ತು ಯಾದವರ...

ಪ್ರೌಢಶಾಲಾ ವಿಭಾಗದಲ್ಲಿ ಶ್ರೀಮತಿ ಇಂದಿರಾಬಾಯಿ ಗುರುತಪ್ಪ ಶೆಟಕಾರ್ ಪ್ರೌಢಶಾಲೆಯ ಭಾಗ್ಯವತಿ ಹನುಮಂತ ದ್ವಿತೀಯ, ಕಮಠಾಣದ ರೋಶನ್ ಪಬ್ಲಿಕ್ ಶಾಲೆಯ ಆಫ್ರಿನ್ ಮುಹಮ್ಮದ್ ಅಕ್ರಂ ತೃತೀಯ, ಕಾಲೇಜು ವಿಭಾಗದಲ್ಲಿ ಕರ್ನಾಟಕ ಪದವಿ ಕಾಲೇಜಿನ ಭುವನೇಶ್ವರಿ ಕಾವಳೆ ದ್ವಿತೀಯ ಹಾಗೂ ಸಾಯಿ ಸ್ಫೂರ್ತಿ ಕಾಲೇಜಿನ ಮೇಘಾ ಶಿವರಾಜ ತೃತೀಯ ಬಹುಮಾನ ಪಡೆದರು.

ನಗರದ ಡಿಸೆಂಟ್ ಫಂಕ್ಷನ್ ಹಾಲ್‍ನಲ್ಲಿ ಈಚೆಗೆ ನಡೆದ ಕಾರ್ಯಕ್ರಮದಲ್ಲಿ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದವರಿಗೆ ಕ್ರಮವಾಗಿ ತಲಾ 5 ಸಾವಿರ, 3 ಸಾವಿರ ಮತ್ತು 2 ಸಾವಿರ ನಗದು ಬಹುಮಾನ ಹಾಗೂ ಪ್ರಮಾಣ ಪತ್ರ ವಿತರಿಸಲಾಯಿತು.

ಪ್ರಬಂಧ ಸ್ಪರ್ಧೆಯಿಂದಾಗಿ ಪ್ರವಾದಿ ಮುಹಮ್ಮದರು ಅಲ್ಲಾಹನ ಪ್ರವಾದಿ ಎನ್ನುವುದು ಮೊದಲ ಬಾರಿಗೆ ತಿಳಿಯಿತು. ಅಲ್ಪಾವಧಿಯಲ್ಲೇ ಅಲ್ಲಾಹನ ಮಾರ್ಗದರ್ಶನ, ಇಸ್ಲಾಂನ ಬೋಧನೆಗಳು ಮತ್ತು ತಮ್ಮ ಆದರ್ಶ ವ್ಯಕ್ತಿತ್ವದ ಮೂಲಕ ಅವರು ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ಕ್ಷೇತ್ರಗಳಲ್ಲಿ ಹೇಗೆ ಬದಲಾವಣೆ ತಂದರು ಎನ್ನುವುದನ್ನು ಅರಿಯಲು ಸಾಧ್ಯವಾಯಿತು. ಇದಕ್ಕಾಗಿ ಸ್ಪರ್ಧೆ ಸಂಘಟಿಸಿದ ಜಮಾ ಅತೆ ಇಸ್ಲಾಮಿ ಹಿಂದ್‍ಗೆ ಕೃತಜ್ಞತೆ ಸಲ್ಲಿಸುವೆ ಎಂದು ಪ್ರಬಂಧ ಸ್ಪರ್ಧೆ ವಿಜೇತರಲ್ಲಿ ಒಬ್ಬರಾದ ಭುವನೇಶ್ವರಿ ಕಾವಳೆ ಹೇಳಿದರು.

ಪ್ರವಾದಿ ಮುಹಮ್ಮದರು, ಇಸ್ಲಾಂ ಹಾಗೂ ಪವಿತ್ರ ಕುರಾನ್ ಬಗ್ಗೆ ಸರಿಯಾದ ತಿಳುವಳಿಕೆ ನೀಡಲು ಹಾಗೂ ಈ ಕುರಿತ ತಪ್ಪು ಕಲ್ಪನೆಗಳನ್ನು ದೂರ ಮಾಡಲು ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿತ್ತು. ಮುಸ್ಲಿಮ್ ಜತೆಗೆ ಬೇರೆ ಬೇರೆ ಧರ್ಮಗಳ ವಿದ್ಯಾರ್ಥಿಗಳೂ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು ಎಂದು ಜಮಾ ಅತೆ ಇಸ್ಲಾಮಿ ಹಿಂದ್ ಬೀದರ್ ಘಟಕದ ಅಧ್ಯಕ್ಷ ಮುಹಮ್ಮದ್ ಮೌಅಝ್ಝಂ ತಿಳಿಸಿದರು.

ಇದನ್ನೂ ಓದಿ : ಕೊಪ್ಪಳ | ಡಿಜೆ, ಪಟಾಕಿಗೆ ಗುಡ್‌ ಬೈ: ರಸ್ತೆ, ಬಾವಿ, ಶಾಲೆ ಅಂದಗೊಳಿಸಿದ ಗಣೇಶ ಮಂಡಳಿ ಯುವಕರು!

ಪ್ರಮುಖರಾದ ಮುಹಮ್ಮದ್ ಆರಿಫುದ್ದೀನ್, ಮೌಲಾನಾ ಸೈಯದ್ ಸಿರಾಜುದ್ದೀನ್ ನಿಜಾಮಿ, ಮೌಲಾನಾ ಮುಹಮ್ಮದ್ ಮುನೀಸ್ ಕಿರ್ಮಾನಿ, ಮುಹಮ್ಮದ್ ಸಲಾವುದ್ದೀನ್ ಫರ್ಹಾನ್, ಸೈಯದ್ ಅಝ್ಹಾನ್ ಅಹಮ್ಮದ್, ಡಾ. ಬುಶ್ರಾ ಐಮನ್, ಆಜಂ ಪಾಶಾ, ರಫೀಕ್ ಅಹಮ್ಮದ್ ಗಾದಗಿ, ಮುಜ್ತಬಾ ಖಾನ್, ಹೈದರ್ ಅಲಿ ಶಾಕಿರ್, ಅಸ್ಲಂ ಪಾಷಾ ಖಾದ್ರಿ, ಮುಹಮ್ಮದ್ ಷಫಿಉದ್ದೀನ್, ಎಂಜಿನಿಯರ್ ಸೈಯದ್ ಅತಿಕುಲ್ಲಾ, ಮುಹಮ್ಮದ್ ಆರಿಫುದ್ದೀನ್, ಮುಹಮ್ಮದ್ ಸಲಾಹುದ್ದೀನ್, ಮುಹಮ್ಮದ್ ನಿಝಾಮುದ್ದೀನ್ ಮತ್ತಿತರರು ಇದ್ದರು.

WhatsApp Image 2026 09 17 at 6.40.49 AM 4
ಜಾಹೀರಾತು
eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉತ್ತರ ಪ್ರದೇಶ | ಅಖಿಲೇಶ್ ‘ಧರ್ಮ ರಕ್ಷಣೆ’ಯ ಯುದ್ಧ ಬಿಜೆಪಿಯ ಮತ ಹುಂಡಿ ಖಾಲಿ ಮಾಡುವುದೇ?

ಉತ್ತರ ಪ್ರದೇಶದ ಯುವಜನತೆಯ (Gen Z) ಅಸಮಾಧಾನ, ನಿರುದ್ಯೋಗ ಸಮಸ್ಯೆ ಮತ್ತು...

ವಿಜಯಪುರ | ಆತ್ಮವಿಶ್ವಾಸ ಬೆಳೆಸಿಕೊಂಡು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಿ: ಪ್ರೊ. ಎಸ್ ಇಂದುಮತಿ

ಹೆಣ್ಣುಮಕ್ಕಳು ತಮ್ಮ ಭದ್ರತೆಯ ಕುರಿತು ಯಾವುದೇ ಆತಂಕಕ್ಕೆ ಒಳಗಾಗದೆ ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕು....

ವಿಜಯಪುರ | ಪೌರಕಾರ್ಮಿಕರು ನಗರದ ಬೆನ್ನೆಲುಬು: ಮೇಯರ್ ಮಡಿವಾಳಪ್ಪ ಕರಡಿ

ವಿಜಯಪುರ ನಗರದ ಸ್ವಚ್ಛತೆ ಹಾಗೂ ನೈರ್ಮಲ್ಯ ಕಾಪಾಡುವಲ್ಲಿ ಪೌರಕಾರ್ಮಿಕರ ಸೇವೆ ಅತ್ಯಂತ...