ಅಂಬೇಡ್ಕರ್ ಸೇವಾ ಸಮಿತಿ (ರಿ) ಕರ್ನಾಟಕದ ಸಂಸ್ಥಾಪಕ ಹಾಗೂ ರಾಜ್ಯಾಧ್ಯಕ್ಷ ಡಾ. ಕೆ.ಎಂ. ಸಂದೇಶ್ ಅವರ ಹುಟ್ಟುಹಬ್ಬದ ಪ್ರಯುಕ್ತ ಯಾದಗಿರಿ ನಗರದ ಕೋಟೆಗಾರವಾಡ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಮಗ್ರಿಗಳನ್ನು ವಿತರಿಸಿ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಅಂಬೇಡ್ಕರ್ ಸೇವಾ ಸಮಿತಿ ವತಿಯಿಂದ ಶಾಲಾ ವಿದ್ಯಾರ್ಥಿಗಳಿಗೆ ನೋಟ್‌ಬುಕ್, ಪೆನ್, ಪೆನ್ಸಿಲ್ ಹಾಗೂ ಅಂಗನವಾಡಿ ಮಕ್ಕಳಿಗೆ ಸ್ಲೇಟ್, ಚಾಕ್‌ಪೀಸ್ ಮತ್ತು ಸಿಹಿತಿಂಡಿಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಮಿತಿಯ ಯಾದಗಿರಿ ಜಿಲ್ಲಾಧ್ಯಕ್ಷ ರಾಹುಲ್ ಕೊಲ್ಲೂರಕರ್, “ಡಾ. ಕೆ.ಎಂ. ಸಂದೇಶ್ ಅವರು ದೀನದಲಿತರು, ಶೋಷಿತರು, ಬಡವರು, ರೈತರು ಹಾಗೂ ಅನ್ಯಾಯಕ್ಕೊಳಗಾದವರ ಪರವಾಗಿ ನಿರಂತರ ಹೋರಾಟ ನಡೆಸುತ್ತಿರುವ ಜನಪರ ನಾಯಕರು” ಎಂದು ಹೇಳಿದರು.
“ಭೂಗಳ್ಳರಿಂದ ಬಡ ರೈತರ ಜಮೀನುಗಳನ್ನು ರಕ್ಷಿಸಿ ಸಾವಿರಾರು ಎಕರೆ ಭೂಮಿಯನ್ನು ಉಳಿಸಿಕೊಡುವಲ್ಲಿ ಅವರು ಮಹತ್ವದ ಪಾತ್ರ ವಹಿಸಿದ್ದಾರೆ. ಜಾತಿ-ಧರ್ಮದ ಭೇದವಿಲ್ಲದೆ ನೊಂದವರಿಗೆ ನ್ಯಾಯ ದೊರಕಿಸಿಕೊಡುವ ನಿಟ್ಟಿನಲ್ಲಿ ಹೋರಾಟ ನಡೆಸುತ್ತಿದ್ದು, ಪ್ರತಿ ಶುಕ್ರವಾರ ಜನಸ್ಪಂದನ ಕಾರ್ಯಕ್ರಮದ ಮೂಲಕ ಜನರ ಸಮಸ್ಯೆಗಳನ್ನು ಆಲಿಸಿ ಪರಿಹಾರಕ್ಕೆ ಪ್ರಯತ್ನಿಸುತ್ತಿದ್ದಾರೆ” ಎಂದು ತಿಳಿಸಿದರು.

ಡಾ. ಕೆ.ಎಂ. ಸಂದೇಶ್ ಅವರ ನೇತೃತ್ವದಲ್ಲಿ 435 ಯಶಸ್ವಿ ಹೋರಾಟಗಳು, 181 ಅಂತರ್ಜಾತಿ ವಿವಾಹಗಳಿಗೆ ನೆರವು ಹಾಗೂ 5,960 ಎಕರೆ ಬಡವರ ಜಮೀನುಗಳ ರಕ್ಷಣೆ ಸೇರಿದಂತೆ ಹಲವು ಜನಪರ ಕಾರ್ಯಗಳು ನಡೆದಿವೆ. ಅಂತರರಾಷ್ಟ್ರೀಯ ಹಾಗೂ ರಾಷ್ಟ್ರೀಯ ಪ್ರಶಸ್ತಿಗಳು, 2022ರ ಭಾರತೀಯ ಐಕಾನ್ ಪ್ರಶಸ್ತಿ ಮತ್ತು ಕರ್ನಾಟಕ ಸೇವಾ ರತ್ನ ಪ್ರಶಸ್ತಿ ಸೇರಿದಂತೆ ಒಟ್ಟು 53 ರಾಜ್ಯ ಪ್ರಶಸ್ತಿಗಳನ್ನು ಪಡೆದಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
“ಹುಟ್ಟುಹಬ್ಬವನ್ನು ಸಂಭ್ರಮಕ್ಕೆ ಮಾತ್ರ ಸೀಮಿತಗೊಳಿಸದೆ ಬಡ ಮಕ್ಕಳ ಶಿಕ್ಷಣಕ್ಕೆ ನೆರವಾಗುವ ಮೂಲಕ ಆಚರಿಸಿರುವುದು ಸಂತಸದ ವಿಚಾರವಾಗಿದೆ” ಎಂದು ಹೇಳಿದರು.
ಇದನ್ನು ಓದಿದ್ದೀರಾ? ಕಲಬುರಗಿ | ಮೃತ ವಿದ್ಯಾರ್ಥಿ ಕುಟುಂಬಕ್ಕೆ ಪರಿಹಾರ ನೀಡುವಂತೆ ದಸಂಸ ಭೀಮಮಾರ್ಗ ಆಗ್ರಹ
ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯಗುರುಗಳು, ಶಿಕ್ಷಕರು, ದೇವಿದ್ರಪ್ಪ ಕೊಲ್ಲೂರ್, ತಿಪಣ್ಣ ಹಳಿಗೇರಿ, ಬಿ. ಆಂಜನೇಯ ಭಂಡಾರಿ, ಮೌನೇಶ್ ಗಿರೆಪ್ಪನೋರ್, ಎಸ್. ಸೈದಪ್ಪ ಕೂಲೂರ್, ಮೋನಪ್ಪ ಮುನೇಪ್ಪನೋರ್, ರಮೇಶ್ ಕ್ಯಾತ್ನಾಳ್, ಅಯ್ಯಪ್ಪ, ಕುಮಾರ್ ಅರಿಕೇರಿ, ರಾಧಾಕೃಷ್ಣ ಕೌಳೂರ್, ರಮೇಶ್ ಗಣಪುರ, ಪ್ರವೀಣ್ ಗಿರೆಪ್ಪನೋರ್ ಸೇರಿದಂತೆ ಸಮಿತಿಯ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.






