ಬೀದರ್‌ | ನೀಗದ ಕನ್ನಡ ಶಿಕ್ಷಕರ ಕೊರತೆ: ಗಡಿಭಾಗದ 21 ಪ್ರೌಢ ಶಾಲೆಗಳಿಗೆ ʼಅತಿಥಿʼಗಳೇ ಆಧಾರ!

Date:

ಬೀದರ್‌ ಜಿಲ್ಲೆಯ ಔರಾದ್‌ ತಾಲೂಕಿನ ಗಡಿಭಾಗದ ಗ್ರಾಮವೊಂದರ ಶಾಲೆಗೆ ಭೇಟಿ ನೀಡಿದೆ. ಅಲ್ಲಿನ ಶಿಕ್ಷಕರು ಪ್ರೀತಿಯಿಂದ ಕರೆದು ಮಧ್ಯಾಹ್ನ ಬಿಸಿಯೂಟದ ಬಾಳೆಹಣ್ಣು ಕೈಗಿಟ್ಟು ಪರಿಚಯ ಮಾಡಿಕೊಂಡರು. ಬಳಿಕ ನಮ್ಮ ಮಾತುಕತೆ ಮುಂದುವರೆಯಿತು.

- Advertisement -

“ಈ ಊರಲ್ಲಿ ಸುತ್ತಾಡಿ ಬಂದೆ. ಬಹುತೇಕ ಜನರು ಮರಾಠಿ ಭಾಷೆಯಲ್ಲೇ ಮಾತಾಡ್ತಾರೆ. ಕನ್ನಡ ಭಾಷೆಯ ಬಳಕೆ ಯಾಕೆ ಕಡಿಮೆ ಇದೆ. ಶಾಲೆಯಲ್ಲಿ ಮಕ್ಕಳು ಕನ್ನಡ ಕಲಿಯುತ್ತಾರೊ ಇಲ್ವಾ?” ಎಂದು ಶಿಕ್ಷಕರಿಗೆ ನಾನು ನೇರವಾಗಿ ಕೇಳಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ವಿರಾಟ್ ಕೊಹ್ಲಿ: ದಂತಕಥೆಯ ಪಯಣದ ಮತ್ತೊಂದು ಸುವರ್ಣ ಅಧ್ಯಾಯ

ಕ್ರಿಕೆಟ್ ಕೇವಲ ಒಂದು ಆಟವಲ್ಲ, ಅದೊಂದು ಜೀವಂತ ಭಾವನೆ ಎಂದು ನಂಬಿರುವ ಕೋಟ್ಯಂತರ ಭಾರತೀಯರಿಗೆ ವಿರಾಟ್ ಕೊಹ್ಲಿ ಕೇವಲ ಒಬ್ಬ ಆಟಗಾರನಲ್ಲ; ಬದಲಾಗಿ ಅದ್ಭುತ ಕಾವ್ಯದಂತಿರುವ ಒಂದು ಸುವರ್ಣ ಶಕೆ. ನವೆಂಬರ್ 5,...

‘ವಿಬಿ-ಜಿ ರಾಮ್‌ ಜಿ’ ಅನುಷ್ಠಾನದಲ್ಲಿ ಎಡವಟ್ಟು! ಕೂಲಿ ಸಿಗದೆ...

ಗ್ರಾಮೀಣ ಬಡ ಕುಟುಂಬಗಳಿಗೆ ಆಸರೆಯಾಗಬೇಕಿದ್ದ ‘ವಿಬಿ-ಜಿ ರಾಮ್ ಜಿ’ (VB-G RAM G) ಯೋಜನೆ, ಅನುಷ್ಠಾನದ ಎಡವಟ್ಟುಗಳಿಂದಾಗಿ ಗೊಂದಲದ ಗೂಡಾಗಿದೆ. ಕೆಲಸ ಮಾಡಿದರೂ ತಿಂಗಳುಗಟ್ಟಲೆ ಕೂಲಿ ಸಿಗದೆ ಬಡ ಕಾರ್ಮಿಕರು ಆರ್ಥಿಕ ಸಂಕಷ್ಟಕ್ಕೆ...

ಖಾಲಿಯಾಗುತ್ತಿವೆ ಉತ್ತರ ಕನ್ನಡದ ಹಳ್ಳಿಗಳು: 40ಕ್ಕೂ ಹೆಚ್ಚು ಗ್ರಾಮಗಳಲ್ಲಿ...

ಮಕ್ಕಳ ಗದ್ದಲ, ಕೃಷಿ ಚಟುವಟಿಕೆಯ ಹಿಗ್ಗು, ಹಬ್ಬ-ಹರಿದಿನಗಳ ಸಂಭ್ರಮದಿಂದ ಕಂಗೊಳಿಸುತ್ತಿದ್ದ ಹಳ್ಳಿಗಳು ಇವತ್ತು ನಿಶ್ಶಬ್ದವಾಗಿ ನಿಂತಿವೆ. ಪ್ರಕೃತಿಯ ಮಡಿಲಲ್ಲಿ ಕಟ್ಟಿಕೊಂಡಿದ್ದ ಬದುಕು ನಿಧಾನವಾಗಿ ಕರಗಿ ಹೋಗುತ್ತಿದೆ. ಊರು ತೊರೆದು ಪಟ್ಟಣ ಸೇರವುದು ಅನಿವಾರ್ಯವ...

“ಈ ಊರಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಎರಡೂ ಮರಾಠಿ ಮಾಧ್ಯಮ ಶಾಲೆಗಳೇ ಇವೆ. ಕನ್ನಡ ಒಂದು ವಿಷಯವಾಗಿ ಬೋಧಿಸುತ್ತೇವೆ. ಕಳೆದ ಒಂದು ದಶಕದಿಂದ ನಮ್ಮ ಶಾಲೆಯಲ್ಲಿ ಕನ್ನಡ ಬೋಧಿಸಲು ಖಾಯಂ ಶಿಕ್ಷಕರಿಲ್ಲ. ಅನಿವಾರ್ಯವಾಗಿ ನಾವು ಪ್ರತಿವರ್ಷ ಅತಿಥಿ ಶಿಕ್ಷಕರನ್ನೇ ನೆಚ್ಚಿಕೊಳ್ಳಬೇಕಿದೆ” ಎಂದು ಅಲ್ಲಿನ ಶಿಕ್ಷಕರು ಕನ್ನಡ ಮಾತಿನಲ್ಲೇ ಬೇಸರದಿಂದ ಉತ್ತರಿಸಿದರು.

ಮಹಾರಾಷ್ಟ್ರ, ತೆಲಂಗಾಣ ರಾಜ್ಯಗಳ ಜತೆ ಗಡಿ ಹಂಚಿಕೊಂಡಿರುವ ಗಡಿ ಗ್ರಾಮಗಳಲ್ಲಿ ಮರಾಠಿ ಮಾಧ್ಯಮ ಪ್ರೌಢ ಶಾಲೆಯಲ್ಲಿ ಕನ್ನಡ ಶಿಕ್ಷಕರ ಕೊರತೆಯಾದರೆ, ಇತ್ತ ಕನ್ನಡ ಮಾಧ್ಯಮದ ಬಹುತೇಕ ಪ್ರೌಢ ಶಾಲೆಗಳಲ್ಲಿಯೂ ಕನ್ನಡ ಭಾಷಾ ಬೋಧನೆಗೆ ಅತಿಥಿಗಳೇ ಆಧಾರವಾಗಿದ್ದಾರೆ. ಇದು ಪ್ರಸಕ್ತ ಶೈಕ್ಷಣಿಕ ಸಾಲಿನ ಸಮಸ್ಯೆ ಅಲ್ಲ. ಕೆಲ ವರ್ಷಗಳಿಂದ ಹೀಗೆ ಇದೆ. ಶಿಕ್ಷಕರ ಕೊರತೆ ಮಕ್ಕಳ ಕನ್ನಡ ಕಲಿಕೆಗೆ ತೊಡಕಾಗುತ್ತಿರುವುದು ಅಷ್ಟೇ ಅಲ್ಲದೆ ಗಡಿಯಲ್ಲಿ ಮಾತೃಭಾಷೆಯ ವಾತಾವರಣ ಬೆಳವಣಿಗೆಗೆ ಹಿನ್ನಡೆಯಾಗುತ್ತಿದೆ.

ನೆರೆಯ ರಾಜ್ಯಗಳೊಂದಿಗೆ ಗಡಿ ಹಂಚಿಕೊಂಡಿರುವ ಬೀದರ್ ಜಿಲ್ಲೆ ರಾಜ್ಯದ ನಕಾಶೆಯಲ್ಲಿ ಉತ್ತರದ ತುತ್ತ ತುದಿಯಲ್ಲಿ ಕಾಣಸಿಗುತ್ತದೆ. ಆದರೆ, ಎಸ್‌ಎಲ್‌ಎಲ್‌ಸಿ, ಪಿಯುಸಿ ಫಲಿತಾಂಶ ಪ್ರಕಟವಾದ ದಿನ ಜಿಲ್ಲೆಯ ಹೆಸರು ಕೊನೆಯ ಟಾಪ್‌ಟೆನ್ ಸಾಲಿನಲ್ಲಿ ಇಣುಕಿ ನೋಡುವಂಥ ಸ್ಥಿತಿ‌ ಈಗಲೂ ಇದೆ. ಜಿಲ್ಲೆಯಲ್ಲಿ ನೀಗದ ಭಾಷಾ ಶಿಕ್ಷಕರ ಕೊರತೆಯಿಂದಾಗಿ ಎಸ್‌ಎಸ್‌ಎಲ್‌ಸಿಯಲ್ಲಿ ಅಧಿಕ ಮಕ್ಕಳು ಕನ್ನಡ ಭಾಷೆಯಲ್ಲೂ ಅನುತ್ತೀರ್ಣರಾಗುವುದು ಇತ್ತೀಚಿನ ವರ್ಷಗಳ ಫಲಿತಾಂಶದ ಅಂಕಿ-ಅಂಶಗಳನ್ನು ಗಮನಿಸಿದರೆ ಸಮಗ್ರ ಚಿತ್ರಣ ಸಿಗಬಹುದು.

ಕಮಲನಗರ ಹೊಸ ತಾಲೂಕಾಗಿ ರಚನೆಯಾದರೂ ಇನ್ನೂ ಪ್ರತ್ಯೇಕ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಿಲ್ಲ. ಸದ್ಯ ಔರಾದ್‌ ತಾಲೂಕಿನ ಬಿಇಒ ವ್ಯಾಪ್ತಿಗೆ ಒಳಪಡುತ್ತದೆ. ಅವಳಿ ತಾಲೂಕಿನಲ್ಲಿ ಒಟ್ಟು 32 ಸರ್ಕಾರಿ ಪ್ರೌಢ ಶಾಲೆಗಳಲ್ಲಿ 69 ವಿಷಯ ಶಿಕ್ಷಕರ ಕೊರತೆ ಎದುರಾಗಿದ್ದು, ಈ ಪೈಕಿ 21 ಪ್ರೌಢ ಶಾಲೆಗಳಲ್ಲಿ ಕನ್ನಡ ಭಾಷಾ ಶಿಕ್ಷಕರೇ ಇಲ್ಲ. ಅಂದರೆ ಅರ್ಧಕ್ಕಿಂತ ಹೆಚ್ಚು ಕನ್ನಡ ಹಾಗೂ ಮರಾಠಿ ಮಾಧ್ಯಮ ಸರ್ಕಾರಿ ಪ್ರೌಢ ಶಾಲೆಗಳಲ್ಲಿ ಕನ್ನಡ ಭಾಷಾ ಬೋಧಕರ ಕೊರತೆ ಇದೆ. 12 ಪ್ರೌಢ ಶಾಲೆಗಳಲ್ಲಿ ಆಂಗ್ಲ ವಿಷಯ ಶಿಕ್ಷಕರಿಲ್ಲ. ಇನ್ನೊಂದು ವಿಚಿತ್ರವೆಂದರೆ ಕೆಲ ಶಾಲೆಗಳು 3-4 ಜನ ಅತಿಥಿ ಶಿಕ್ಷಕರನ್ನು ಅವಲಂಬಿಸಿವೆ. ಗಡಿಯಲ್ಲಿ ಕನ್ನಡ ಭಾಷಾ ಬೋಧನೆಗೆ ಅತಿಥಿ ಶಿಕ್ಷಕರೇ ಗತಿ ಎಂಬಂತಾಗಿದೆ.

ಕಾಲ ಕಾಲಕ್ಕೆ ನೇರ ನೇಮಕಾತಿ ಮುಖಾಂತರ ಖಾಲಿ ಹುದ್ದೆಗಳನ್ನು ಭರ್ತಿ ಮಾಡಬೇಕಾದ ಸರ್ಕಾರ ಶಿಕ್ಷಕರ ಕೊರತೆ ನೀಗಿಸುವ ಗೋಜಿಗೆ ಹೋಗದಿರುವುದಕ್ಕೆ ಸಮಸ್ಯೆ ಮತ್ತಷ್ಟು ಬಿಗಡಾಯಿಸಿದೆ. ಇದರಿಂದ ಅನ್ಯ ಭಾಷೆಗಳ ಪ್ರಭಾವದಲ್ಲಿ ಮಾತ್ರಭಾಷಾ ಕಲಿಕಾಸಕ್ತಿ ಇರುವ ಮಕ್ಕಳ ಶೈಕ್ಷಣಿಕ ಭವಿಷ್ಯ ಶೋಚನೀಯ ಸ್ಥಿತಿಗೆ ತಲುಪುತ್ತಿದೆ. ಕನ್ನಡ ಭಾಷಾ ಅಭಿವೃದ್ಧಿಗಾಗಿ ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಕೈಗೊಂಡ ಪ್ರಮುಖ ನಿರ್ಣಯಗಳನ್ನು ಶೀಘ್ರವಾಗಿ ಕಾರ್ಯಗತಗೊಳಿಸಲು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆ ಇರುವುದು ವಾಸ್ತವ ಸಂಗತಿ.

ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಔರಾದ್-ಕಮಲನಗರ ತಾಲೂಕಿನ ಒಟ್ಟು 323 ಸರ್ಕಾರಿ ಪ್ರಾಥಮಿಕ, ಪ್ರೌಢ ಶಾಲೆಗಳ ಪೈಕಿ ಪ್ರಾಥಮಿಕ ಹಂತದಲ್ಲಿ 96, ಪ್ರೌಢ ಶಾಲೆಗಳಲ್ಲಿ 65 ಶಿಕ್ಷಕರ ಅತಿಥಿ ಶಿಕ್ಷಕರ ನೇಮಕಕ್ಕೆ ಶಿಕ್ಷಣ ಇಲಾಖೆ ಈಗಾಗಲೇ ಆದೇಶಿಸಿದ್ದು, ಬಹುತೇಕ ಕಡೆ ʼಅತಿಥಿʼಗಳ ನೇಮಕ ಪ್ರಕ್ರಿಯೆ ಮುಕ್ತಾಯಗೊಂಡಿದೆ. ನಿವೃತ್ತಿ, ಮುಂಬಡ್ತಿ ಸೇರಿದಂತೆ ಇತರೆ ಕಾರಣಗಳಿಂದ ಖಾಲಿಯಾದ ತಾಲೂಕಿನ ಹಲವು ಶಾಲೆಗಳಿಗೆ ಮೊದಲ ಹಂತದಲ್ಲಿ ಒಟ್ಟು 165 ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳಲಾಗಿದೆ. ಅತಿಥಿ ಶಿಕ್ಷಕರಿಂದ ಮೌಲ್ಯಯುತ ಶಿಕ್ಷಣ ನಿರೀಕ್ಷಿಸಲು ಅಸಾಧ್ಯ. ಶಿಕ್ಷಕರ ಕೊರತೆಯಿಂದಾಗಿ ಪೋಷಕರು ಖಾಸಗಿ ಶಾಲೆಗಳತ್ತ ಮುಖ ಮಾಡುತ್ತಿರುವುದು ಸರ್ಕಾರಿ ಶಾಲೆಗಳ ಮಕ್ಕಳ ದಾಖಲಾತಿಯೇ ಹೇಳುತ್ತದೆ.

ಸರ್ಕಾರಿ ಶಾಲೆಗಳ ಅಳಿವು – ಉಳಿವು:

ಸರ್ಕಾರಿ ಶಾಲೆಗಳಿಗೆ ಮೂಲಭೂತ ಸೌಕರ್ಯ ಒದಗಿಸಲು ಸರ್ಕಾರ ಕಾಲಕಾಲಕ್ಕೆ ಅನುದಾನ ನೀಡುತ್ತದೆ. ಶಾಲೆಯ ಶೈಕ್ಷಣಿಕ ಪ್ರಗತಿಯ ಕುರಿತು ಗಂಭೀರವಾಗಿ ಪರಿಗಣಿಸದ ಸರ್ಕಾರ ಹಾಗೂ ಇಲಾಖೆ ಅಭಿವೃದ್ಧಿ ಹೆಸರಿನಲ್ಲಿ ಕೋಟಿ ಖರ್ಚು ಮಾಡಲು ಹಿಂಜರಿಯುವುದಿಲ್ಲ. ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಎರಡಂಕಿ ದಾಟದ ಅನೇಕ ಕಡೆ ಹೊಸ ಕೋಣೆಗಳು ತಲೆಯೆತ್ತಿವೆ. ಆದರೆ, ಮಕ್ಕಳ ಸಂಖ್ಯೆ, ಕೋಣೆಗಳಿರುವ ಶಾಲೆಗಳಲ್ಲಿ ಶಿಕ್ಷಕರ ಕೊರತೆ, ಮೂಲ ಸೌಕರ್ಯಗಳಿಲ್ಲದೆ ಸೊರಗುತ್ತಿವೆ.

ಗಡಿ ಪ್ರದೇಶದ ಔರಾದ್-ಕಮಲನಗರ ಉಭಯ ತಾಲೂಕಿನ ಜನ ಕನ್ನಡದೊಂದಿಗೆ ಮರಾಠಿ, ತೆಲುಗು ಭಾಷೆ ಸಾಮಾನ್ಯವಾಗಿ ಮಾತಾಡುವುದು ರೂಢಿಯಲ್ಲಿದೆ. ಅನ್ಯಭಾಷಿಕರ ನೆಲದಲ್ಲಿ ಕನ್ನಡ ಭಾಷೆ, ಸಂಸ್ಕೃತಿ, ಪರಂಪರೆ ಉಳಿಸಿ, ಬೆಳೆಸುವುದು ದೊಡ್ಡ ಸವಾಲಿನ ಕೆಲಸವಾಗಿದೆ. ಗಡಿ ಭಾಗದ ಶಾಲೆಗಳು ಹಲವು ವರ್ಷಗಳಿಂದ ಕನ್ನಡ ಶಿಕ್ಷಕರ ಕೊರತೆ ಎದುರಿಸುತ್ತಿವೆ. ಬೆರಳಣಿಕೆಯಷ್ಟು ಹೊಸ ಶಿಕ್ಷಕರ ನೇಮಕವಾದರೂ ಮತ್ತೆ ʼಅತಿಥಿʼಗಳೇ ಆಧಾರವಾಗಿದ್ದಾರೆ. ಕನ್ನಡ ಭಾಷಾ ಬೆಳವಣಿಗೆ ಜೊತೆ ಕಲೆ, ಸಾಹಿತ್ಯ, ಸಂಸ್ಕೃತಿ ಬೆಳೆವಣಿಗೆ ಕುಂಠಿತಕ್ಕೆ ಪ್ರಮುಖ ಕಾರಣವಾಗಿದೆ.

ಪ್ರೌಢ ಶಾಲಾ ಅತಿಥಿ ಶಿಕ್ಷಕರಿಗೆ ಸರ್ಕಾರ ನೀಡುವ ಗೌರವ ಸಂಭಾವನೆ ಕಡಿಮೆ ಇರುವುದರಿಂದ ಕೆಲವೆಡೆ ಅತಿಥಿ ಶಿಕ್ಷಕರು ಸಿಗದ ಪರಿಸ್ಥಿತಿ ಇದೆ. ಕೆಲವೆಡೆ ಮರಾಠಿ ಮಾಧ್ಯಮದಲ್ಲಿ ಓದಿರುವ ಅತಿಥಿ ಶಿಕ್ಷಕರೇ ಕನ್ನಡ ಕಲಿಸಬೇಕಾದ ಪರಿಸ್ಥಿತಿಯೂ ಇದೆ. ಸರ್ಕಾರ ನೇರ ನೇಮಕಾತಿ ಮೂಲಕ ಶಿಕ್ಷಕರ ಖಾಲಿ ಹುದ್ದೆ ಭರ್ತಿ ಮಾಡಿಕೊಳ್ಳುವರೆಗೂ ಅತಿಥಿ ಶಿಕ್ಷಕರನ್ನು ನೇಮಿಸಿಕೊಂಡು ಸರಿದೂಗಿಸುವುದು ಇಲಾಖೆಗೆ ಅನಿವಾರ್ಯ ಹೌದು.

ಔರಾದ್ ತಾಲೂಕು ಕಸಾಪ ಅಧ್ಯಕ್ಷ ಬಾಲಾಜಿ ಅಮರವಾಡಿ ಮಾತನಾಡಿ, “ಗಡಿ ಭಾಗವಾದ ಔರಾದ ಕ್ಷೇತ್ರದಲ್ಲಿ ಸರ್ಕಾರಿ ಪ್ರೌಢ ಶಾಲೆಗಳಲ್ಲಿ ಕನ್ನಡ ಭಾಷಾ ಬೋಧಕರ ಕೊರತೆ ಇರುವುದು ಗಂಭೀರವಾದ ವಿಷಯ. ಹಲವು ವರ್ಷಗಳಿಂದ ಶಿಕ್ಷಕರ ನೇರ ನೇಮಕಾತಿ ಪ್ರಕ್ರಿಯೆ ಆಗದಿರುವುದಕ್ಕೆ ಈ ಸಮಸ್ಯೆ ಉಲ್ಬಣಗೊಂಡಿದೆ. ಸರ್ಕಾರ ಇದು ವಿಶೇಷ ಪ್ರಕರಣವೆಂದು ಪರಿಗಣಿಸಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಶಿಕ್ಷಕರ ಕೊರತೆ ನೀಗಿಸಲು ವಿಶೇಷ ನಿಯಮ ಜಾರಿಗೊಳಿಸುವ ಮುಖಾಂತರ ಖಾಯಂ ಶಿಕ್ಷಕರ ನೇಮಕಕ್ಕೆ ಮುಂದಾಗಬೇಕು” ಎಂದು ಹೇಳಿದರು.

ಗಡಿ ಗ್ರಾಮಗಳ ಶಾಲೆಗಳಲ್ಲಿಯೇ ಇಲ್ಲ ಕನ್ನಡ ಶಿಕ್ಷಕರು:

ಗಡಿ ಗ್ರಾಮಗಳ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿ ಕನ್ನಡ ವಿಷಯ ಶಿಕ್ಷಕರ ಕೊರತೆ ಹೆಚ್ಚಾಗಿ ಎದ್ದು ಕಾಣುತ್ತಿದೆ. ಅದರಲ್ಲೂ ಜಂಬಗಿ, ನಾಗಮಾರಪಳ್ಳಿ, ಚಿಂತಾಕಿ, ಏಕಂಬಾ, ಹಂದಿಕೇರಾ, ಮುರ್ಕಿ, ಹೊಕ್ರಾಣಾ, ಬಾದಲಗಾಂವ, ಹಂಗರಗಾ, ದಾಬಕಾ(ಸಿ) ಸೇರಿದಂತೆ ಇತರೆ ಕಡೆ ಕನ್ನಡ ವಿಷಯ ಶಿಕ್ಷಕರ ಕೊರತೆ ಎದುರಾಗಿದೆ. ಎರಡು ತಾಲೂಕಿನ ಪ್ರಾಥಮಿಕ, ಪ್ರೌಢ ಕನ್ನಡ, ಮರಾಠಿ ಹಾಗೂ ಉರ್ದು ಮಾಧ್ಯಮ ಶಾಲೆಗಳಲ್ಲಿ ಕನ್ನಡ ಭಾಷಾ ಬೋಧಕರಿಲ್ಲದ ಕಾರಣ ವಿದ್ಯಾರ್ಥಿಗಳ ಭವಿಷ್ಯ ಮುಸುಕಾಗುತ್ತಿದೆ. ಅನ್ಯ ಭಾಷೆಗಳ ಮಧ್ಯೆ ಕನ್ನಡಮಯ ವಾತಾವರಣ ನಿರ್ಮಿಸುವುದು ಸದ್ಯಕ್ಕೆ ಕನಸಾಗಿಯೇ ಉಳಿದಿದೆ.

ಕನ್ನಡ ಭಾಷೆ, ನಾಡು ನುಡಿ ಹಾಗೂ ಸರ್ಕಾರಿ ಶಾಲೆಗಳ ಗುಣಮಟ್ಟ ಶಿಕ್ಷಣ ಒದಗಿಸುವ ಬಗ್ಗೆ ಸರ್ಕಾರ ಹಾಗೂ ಶಿಕ್ಷಣ ಸಚಿವರು ದಿನಾಲೂ ಮಾತನಾಡುತ್ತಲೇ ಇರುತ್ತಾರೆ. ಅದಕ್ಕಾಗಿ ಸುಸಜ್ಜಿತ ಕಟ್ಟಡ ನಿರ್ಮಾಣ, ಉಚಿತ ಯೋಜನೆಗಳು ಜಾರಿಯಲ್ಲಿವೆ. ಆದರೆ, ಅನೇಕ ಕಡೆ ಶಿಕ್ಷಕರ ಕೊರತೆ ಮುಖ್ಯವಾಗಿರುವ ಕಾರಣಕ್ಕೆ ಶಾಲೆಗಳು ದುಸ್ಥಿತಿಗೆ ತಲುಪುತ್ತಿವೆ. ಇಂದು ಶಾಲಾ ಹಂತದಲ್ಲಿ ಮಕ್ಕಳ ಎದೆಗೆ ಕನ್ನಡ ನಾಡು-ನುಡಿಯ ಬೀಜ ಹಾಕುವ ಪ್ರಯತ್ನ ನಡೆಯದಿದ್ದರೆ ನಾಳೆಯ ದಿನ ಕನ್ನಡ ನುಡಿ ತೇರು ಎಳೆಯುವವರು ಯಾರು? ಎಂಬ ಪ್ರಶ್ನೆ ಸಹಜವಾಗಿ ಕಾಡದೇ ಇರದು!.

ಗಡಿ ಭಾಗದಲ್ಲಿ ಕನ್ನಡ ಭಾಷಾ ಅಭಿವೃದ್ಧಿ ಸೇರಿ ಕಲೆ, ಸಾಹಿತ್ಯ, ಸಾಂಸ್ಕೃತಿಕ ಉಳಿವಿಗಾಗಿ ಸರ್ಕಾರ ವಿವಿಧ ಯೋಜನೆಗಳಿದ್ದರೂ ಅವು ಸಮರ್ಪಕವಾಗಿ ಜಾರಿಯಾಗುತ್ತಿಲ್ಲ. ಕನ್ನಡ ನಾಡು-ನುಡಿ, ಸಂಸ್ಕೃತಿ ಅಭಿವೃದ್ಧಿಗಾಗಿಯೇ ಸರ್ಕಾರ ಸ್ಥಾಪಿಸಲಾದ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹಾಗೂ ಕನ್ನಡಪರ ಸಂಘ-ಸಂಸ್ಥೆಗಳು ಇದು ಗಂಭೀರವಾಗಿ ಪರಿಗಣಿಸಿ ಒಕ್ಕೊರಲಿನಿಂದ ಧ್ವನಿಯೆತ್ತುವುದು ಅಗತ್ಯವಾಗಿದೆ. ಇದಕ್ಕೆ ಜನತೆಯೂ ತಮ್ಮ ಕರ್ತವ್ಯ ಎಂದು ಭಾವಿಸಿ ಕೈಜೋಡಿಸಬೇಕಿದೆ.

ಇದನ್ನೂ ಓದಿ : ಬೀದರ್‌ | ಹದಗೆಟ್ಟ ರಸ್ತೆ, ಸವಾರರು ಹೈರಾಣು : ದುರಸ್ತಿ ಯಾವಾಗ?

ಸರ್ಕಾರಿ ಶಾಲೆ ಅಂದರೆ ಬಹುತೇಕರು ಮೂಗು ಮುರಿಯುತ್ತಾರೆ. ಈ ಮಧ್ಯೆ ಕೆಲ ಕನ್ನಡ ಸರ್ಕಾರಿ ಶಾಲೆಗಳು ಕಾನ್ವೆಂಟ್‌ ಶಾಲೆಗೂ ಮೀರಿಸಿ ಸೈ ಎನಿಸಿಕೊಂಡು ಎದೆ ತಟ್ಟಿಕೊಳ್ಳುವಷ್ಟು ಮಾದರಿಯಾಗಿ ಮುನ್ನಡೆಯುತ್ತಿವೆ. ಈ ನಡುವೆ ಗ್ರಾಮೀಣ ಪ್ರದೇಶದ ಹಲವು ʼನಮ್ಮೂರ ಸರ್ಕಾರಿ ಶಾಲೆʼಗಳು ಬೆರಳಣಿಕೆಯಷ್ಟು ಬಡಮಕ್ಕಳ ಕಲಿಯುವ ಶಾಲೆಗಳಂತೆ ಬದಲಾಗುತ್ತಿರುವುದು ಉತ್ತಮ ಬೆಳವಣಿಗೆ ಎನ್ನಲಾದಿತೇ?

WhatsApp Image 2025 02 06 at 11.55.32 e1738823214905
ಬಾಲಾಜಿ ಕುಂಬಾರ್
+ posts

ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.

ಪೋಸ್ಟ್ ಹಂಚಿಕೊಳ್ಳಿ:

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮೋದಿ ಸರ್ಕಾರ ECಗೆ ಇಮ್ಯೂನಿಟಿ ನೀಡಿದ್ದರೂ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲಾಗಲ್ಲ: ಕಪಿಲ್ ಸಿಬಲ್

ಮುಖ್ಯ ಚುನಾವಣಾ ಆಯುಕ್ತರಿಗೆ (CEC) ಕ್ರಿಮಿನಲ್ ಪ್ರಕರಣಗಳಿಂದ ಕಾನೂನು ರಕ್ಷಣೆ ನೀಡಲಾಗಿದೆ...

‘ಗೃಹಲಕ್ಷ್ಮಿ’ಗೆ 17 ಪ್ರಶ್ನೆಗಳ ಪರೀಕ್ಷೆ: ₹2 ಸಾವಿರದ ಯೋಜನೆಗೆ ಇಷ್ಟೆಲ್ಲಾ ದಾಖಲೆ ಬೇಕೇ?

ಮರುಪರಿಶೀಲನೆ ಹೆಸರಿನಲ್ಲಿ ಫಲಾನುಭವಿಗಳ ಅಸ್ತಿತ್ವವನ್ನೇ ಪ್ರಶ್ನಿಸುವಂತಾಗಬಾರದು; ನೈಜ ಅನರ್ಹರನ್ನು ಕೈಬಿಡುವ ಕ್ರಮದ...

UPI ವಹಿವಾಟಿನ ಮೇಲಿನ ಶುಲ್ಕಕ್ಕೆ ತಡೆ ನೀಡಲು ಸುಪ್ರೀಂ ಕೋರ್ಟ್‌ ನಕಾರ

ಅಕ್ಟೋಬರ್ 15ರಿಂದ ಜಾರಿಗೆ ಬರಲಿರುವ 2,000 ರೂ.ಗಿಂತ ಹೆಚ್ಚಿನ ಯುಪಿಐ ವಹಿವಾಟುಗಳ...

‘ದೇಶದ ನೌಕರಶಾಹಿ ಆತ್ಮಸಾಕ್ಷಿಯ ಕರೆಯನ್ನು ಆಲಿಸಬೇಕು.’ ಮಾಜಿ ಚುನಾವಣಾ ಆಯುಕ್ತ ಅಶೋಕ್‌ ಲವಾಸ ಹೇಳಿದ ಆತ್ಮಸಾಕ್ಷಿಯ ಕತೆ

ಸಾರ್ವಜನಿಕ ಸೇವೆಯಲ್ಲಿರುವ ಪ್ರತಿಯೊಬ್ಬರೂ ತಮ್ಮ ಕರ್ತವ್ಯದ ಹಾದಿಯಲ್ಲಿ ನೈತಿಕ ಸಂದಿಗ್ಧತೆಯನ್ನು ಎದುರಿಸಿದಾಗ,...