ಬೀದರ್ ನಗರದ ಕರ್ನಾಟಕ ಸಾಹಿತ್ಯ ಸಂಘದಲ್ಲಿ ಜಮಾ ಅತೆ ಇಸ್ಲಾಮಿ ಹಿಂದ್ ವತಿಯಿಂದ ಸೀರತ್ ಅಭಿಯಾನ ಅಂಗವಾಗಿ ಆಯೋಜಿಸಿದ್ದ ‘ಕ್ರಾಂತಿಯ ಜ್ಯೋತಿ ಪ್ರವಾದಿ ಮುಹಮ್ಮದ್(ಸ)’ ಕುರಿತ ಮೇಜಿನ ಮಾತು (ರೌಂಡ್ ಟೇಬಲ್ ಟಾಕ್) ಪ್ರವಾದಿ ಮುಹಮ್ಮದ್(ಸ) ಅವರ ಬದುಕಿನ ಸಾಧನೆ ಮೇಲೆ ಬೆಳಕು ಚೆಲ್ಲಿತು.
ಪ್ರವಾದಿ ಮುಹಮ್ಮದ್(ಸ) ಅವರು ವಿವಿಧ ಕ್ಷೇತ್ರಗಳಲ್ಲಿ ಅಲ್ಪಾವಧಿಯಲ್ಲೇ ಹೇಗೆ ಅಗಾಧ ಪರಿವರ್ತನೆ ತಂದರು ಎನ್ನುವುದನ್ನು ಅನೇಕರು ಅಭಿಪ್ರಾಯಪಟ್ಟರು. ಅವರ ಕಾಲದಲ್ಲಿ ಆಧ್ಯಾತ್ಮಿಕ, ಸಾಮಾಜಿಕ, ರಾಜಕೀಯ, ನೈತಿಕ ನ್ಯಾಯ ವ್ಯವಸ್ಥೆ ಮೊದಲಾದ ರಂಗಗಳಲ್ಲಿ ಆದ ಬದಲಾವಣೆಗಳನ್ನು ಬಿಡಿಸಿಟ್ಟರು. ಪ್ರವಾದಿ ಮುಹಮ್ಮದ್(ಸ)ರ ಆತ್ಮಶುದ್ಧಿ, ಶಿಕ್ಷಣ, ಮಾನವ ಮೌಲ್ಯಗಳ ಕುರಿತಾಗಿಯೂ ಚರ್ಚೆ ನಡೆಸಿದರು.
ಡಾ. ವಿಜಯ್ ಬಲ್ಲೂರಕರ್, ಡಾ.ವಿಜಯಶ್ರೀ ಬಶೆಟ್ಟಿ, ಡಾ.ಬುಶ್ರಾ ಐಮನ್, ಪಾರ್ವತಿ ಸೋನಾರೆ, ಮೌಲಾನಾ ಅಯ್ಯೂಬ್ ಸಲೀಂ, ವೀರಭದ್ರಪ್ಪ ಉಪ್ಪಿನ್, ಬಿ.ಎಸ್. ಕುದರೆ, ಜಗದೀಶ್ವರ ಬಿರಾದಾರ, ಪ್ರೊ.ಮನೋಜಕುಮಾರ, ಬಂಡಯ್ಯ ಸ್ವಾಮಿ, ರೂಪಾ ಬಹೆನ್‍ಜಿ, ರೂಪಾರಾಣಿ, ಲತಿಕಾ, ಮಹೇಶ್ ಗೋರನಾಳಕರ್ ಅವರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.
ಜಮಾ ಅತೆ ಇಸ್ಲಾಮಿ ಹಿಂದ್ ರಾಜ್ಯ ಸಲಹಾ ಮಂಡಳಿ ಸದಸ್ಯ ಮುಹಮ್ಮದ್ ಆಸಿಫುದ್ದೀನ್ ಕೊನೆಯಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಜಮಾ ಅತೆ ಇಸ್ಲಾಮಿ ಹಿಂದ್ ಸ್ಥಳೀಯ ಘಟಕದ ಅಧ್ಯಕ್ಷ ಮುಹಮ್ಮದ್ ಮೌಅಝ್ಝಮ್ ಸೇರಿದಂತೆ ಪ್ರಮುಖರಾದ ಡಾ.ಮಕ್ಸೂದ್ ಚಂದಾ, ಡಾ.ಚಂದ್ರಕಾಂತ ಗುದಗೆ, ಡಾ. ಸಿ.ಆನಂದರಾವ್, ಶಂಕರ ದೊಡ್ಡಿ, ಆಸ್ಮಾ ಸುಲ್ತಾನಾ, ತೌಹೀದ್ ಸಿಂಧೆ, ರಾಜಕುಮಾರ ಹೆಬ್ಬಾಳೆ, ವಿಜಯಕುಮಾರ ಸೋನಾರೆ, ಮಚ್ಚೇಂದ್ರ ವಾಘಮಾರೆ, ಮುಹಮ್ಮದ್ ಆರಿಫುದ್ದೀನ್, ಡಾ.ಸೈಯದ್ ಹುಸಾಮುದ್ದೀನ್ ಉಝೇರ್, ಸಿದ್ದು ಫುಲಾರಿ, ಮುಹಮ್ಮದ್ ಸಲಾವುದ್ದೀನ್, ಡಾ.ನವೀದ್ ಇರ್ಷಾದ್ ಅನೇಕ ಗಣ್ಯರು ಉಪಸ್ಥಿತರಿದ್ದರು.
ಇದನ್ನೂ ಓದಿ : ಬೀದರ್ | ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಬ್ಯಾಂಕ್ ನೌಕರರ ಪ್ರತಿಭಟನೆ
ಸೈಯದ್ ಅತೀಕುಲ್ಲಾಹ ಕುರ್ ಆನ್ ಪಠಣ ಮಾಡಿದರು. ಜಮಾ ಅತೆ ಇಸ್ಲಾಮಿ ಹಿಂದ್ ಮಾಧ್ಯಮ ಉಪ ಸಂಚಾಲಕ ಮುಹಮ್ಮದ್ ನಿಝಾಮುದ್ದೀನ್ ವಿಷಯ ಮಂಡಿಸಿದರು. ರಫೀಕ್ ಅಹಮ್ಮದ್ ನಿರೂಪಿಸಿದರು.





