ಬೀದರ್‌ | ಜೆಸ್ಕಾಂನಿಂದ ಮರಗಳ ಅವೈಜ್ಞಾನಿಕ ಕೊಂಬೆ ಕತ್ತರಿಸುವಿಕೆ : ಕ್ರಮಕ್ಕೆ ವಿನಯ ಮಾಳಗೆ ಆಗ್ರಹ

Date:

ಬೀದರ ನಗರದ ವಿವಿಧೆಡೆ ವಿದ್ಯುತ್ ತಂತಿಗಳ ನೆಪದಲ್ಲಿ ರಸ್ತೆ ಬದಿಯ ಮರಗಳ ಕೊಂಬೆಗಳನ್ನು ಅವೈಜ್ಞಾನಿಕವಾಗಿ ಕತ್ತರಿಸುತ್ತಿರುವ ಜೆಸ್ಕಾಂ ಕ್ರಮವನ್ನು ರಾಜ್ಯ ವನ್ಯಜೀವಿ ಮಂಡಳಿ ಸದಸ್ಯ ವಿನಯ್ ಕುಮಾರ್ ಮಾಳಗೆ ಅವರು ತೀವ್ರವಾಗಿ ಖಂಡಿಸಿದ್ದಾರೆ.

- Advertisement -

ಈ ಕುರಿತು ಬೀದರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗೆ (ಡಿಸಿಎಫ್) ಲಿಖಿತ ದೂರು ಸಲ್ಲಿಸಿರುವ ಅವರು, “ಮಳೆಗಾಲದಲ್ಲಿ ವಿದ್ಯುತ್ ತಂತಿಗಳಿಗೆ ಮರಗಳ ಕೊಂಬೆ ತಗುಲಿ ಕಿಡಿ ಉಂಟಾಗುತ್ತದೆ, ವಿದ್ಯುತ್ ವ್ಯತ್ಯಯವಾಗುತ್ತದೆ ಎಂಬ ಕಾರಣ ನೀಡಿ ಮರದ ಕೊಂಬೆಗಳನ್ನು ಕತ್ತರಿಸುವ ಬದಲು ವಿದ್ಯುತ್ ವಿತರಣಾ ವ್ಯವಸ್ಥೆಯನ್ನು ವೈಜ್ಞಾನಿಕವಾಗಿ ಸುಧಾರಿಸಬೇಕು” ಎಂದು ಒತ್ತಾಯಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ತಿಪಟೂರು | ಕೊಬ್ಬರಿ ವ್ಯಾಪಾರದಲ್ಲಿ ಅಂಡರ್ ಬಿಲ್ಲಿಂಗ್ ಆಟ;...

ತಿಪಟೂರು ಕೊಬ್ಬರಿ ವ್ಯಾಪಾರದಲ್ಲಿ ಅಂಡರ್ ಬಿಲ್ಲಿಂಗ್ ಆಟ ಜೋರಿದೆ. ಟೆಂಡರ್ ದರ ಒಂದಾದರೆ, ಸುತ್ತಮುತ್ತಲಿನ ಮಾರುಕಟ್ಟೆಗಳಲ್ಲಿ ನೇರ ಖರೀದಿ (URD) ಮತ್ತು ರವಾನೆ ಕೊಬ್ಬರಿ ಖರೀದಿಗೆ ಮತ್ತೊಂದು ಬೆಲೆ ನಿಗದಿಯಾಗಿದೆ. ಅಂಡರ್ ಬಿಲ್ಲಿಂಗ್...

ಮೋದಿ ಪ್ರಚಾರ, ರಾಹುಲ್ ವ್ಯಕ್ತಿತ್ವ ಮತ್ತು ರೆಜಿಮ್ ಚೇಂಜ್

ಮೋದಿ ಅನುಭವಿ ನಟನಂತೆ, ಪ್ರದರ್ಶಕನಂತೆ ಕಾಣುತ್ತಾರೆ. ರಾಹುಲ್ ಗಾಂಧಿ ಪಾತ್ರದ ಒಳಹೊಕ್ಕು ನಟಿಸುವ ಕಲಾವಿದನಂತೆ ಕಾಣುತ್ತಾರೆ. ಈ ನಿಟ್ಟಿನಲ್ಲಿ ರಾಹುಲ್ ರಾಜಕೀಯ ನಡೆಗಳು ಮೋದಿಯವರ ರಾಜಕೀಯ ನಡೆಗಳೊಂದಿಗೆ ವಿಶ್ಲೇಷಣೆಗೊಳಗಾಗುತ್ತಿವೆ. ಕಳೆದ 12 ವರ್ಷಗಳ...

137 ಜೀವ ರಕ್ಷಕ ಕ್ಯಾನ್ಸರ್ ಔಷಧಗಳ ದರ ಶೇ.70ರಷ್ಟು...

ಕ್ಯಾನ್ಸರ್ ಚಿಕಿತ್ಸೆಯ ದುಬಾರಿ ವೆಚ್ಚದಿಂದ ಕಂಗೆಟ್ಟಿರುವ ರೋಗಿಗಳಿಗೆ ಕೇಂದ್ರ ಸರ್ಕಾರದಿಂದ ಕೊಂಚ ನಿರಾಳತೆಯ ಸುದ್ದಿಯೊಂದಿದೆ! 137 ಜೀವರಕ್ಷಕ ಕ್ಯಾನ್ಸರ್ ಔಷಧಗಳ ಬೆಲೆ ಇಳಿಕೆಯಾಗುವ ಸಾಧ್ಯತೆಯಿದ್ದು, ಕೆಲವು ಔಷಧಗಳ ಗರಿಷ್ಠ ಚಿಲ್ಲರೆ ಬೆಲೆ ಶೇ.70ರವರೆಗೆ...

“ಪ್ರತಿ ವರ್ಷ ಅವೈಜ್ಞಾನಿಕವಾಗಿ ಮರಗಳ ಕೊಂಬೆ ಕತ್ತರಿಸುವಿಕೆಯಿಂದಾಗಿ ಮರಗಳ ಸಹಜ ಸಮತೋಲನ ಹಾಳಾಗಿದೆ. ಮರಗಳ ಒಂದು ಭಾಗವನ್ನು ನಿರಂತರವಾಗಿ ಕತ್ತರಿಸುವುದರಿಂದ ಅವುಗಳ ರಚನಾತ್ಮಕ ಸ್ಥಿರತೆ ಕುಂಠಿತಗೊಂಡು, ಅನೇಕ ಮರಗಳು ರಸ್ತೆಯ ಕಡೆಗೆ ವಾಲುತ್ತಿವೆ. ಇದರಿಂದ ವಾಹನ ಸವಾರರು, ಪಾದಚಾರಿಗಳು, ಸಾರ್ವಜನಿಕರು ಹಾಗೂ ರಸ್ತೆ ಬದಿಯ ಆಸ್ತಿಪಾಸ್ತಿಗೆ ಭವಿಷ್ಯದಲ್ಲಿ ಹೆಚ್ಚಿನ ಅಪಾಯ ಉಂಟಾಗುವ ಸಾಧ್ಯತೆಯಿದೆ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

WhatsApp Image 2024 07 27 at 10.11.32 AM
ವಿನಯಕುಮಾರ ಮಾಳಗೆ

ನಗರದ ಬೊಮ್ಮಗೊಂಡೇಶ್ವರ ವೃತ್ತದಿಂದ ಗುಂಪಾ ರಸ್ತೆಯಲ್ಲಿನ ಬಿ.ವಿ. ಭೂಮಾರೆಡ್ಡಿ ಕಾಲೇಜು ಸಮೀಪ, ಕೆಇಬಿ ಕಚೇರಿ ಎದುರಿನ ರಸ್ತೆಯಿಂದ ವಿಜಯಲಕ್ಷ್ಮಿ ಸಾರಿ ಸೆಂಟರ್‌ವರೆಗೆ, ತಾಯಿ-ಮಗು ವೃತ್ತದಿಂದ ಹೊಸ ಬಸ್ ನಿಲ್ದಾಣ ಜಂಕ್ಷನ್‌ವರೆಗೆ ಹೀಗೆ ವಿವಿಧ ಮುಖ್ಯ ರಸ್ತೆಗಳಲ್ಲಿ ವಿವಿಧ ಜಾತಿಯ ಮರಗಳ ಕೊಂಬೆಗಳನ್ನು ಕತ್ತರಿಸುವ ಕೆಲಸ ನಡೆಯುತ್ತಿದೆ ಎಂದು ದೂರಿದ್ದಾರೆ.

ಅರಣ್ಯ ಇಲಾಖೆಯ ಅನುಮತಿ ಹಾಗೂ ಕಾನೂನುಬದ್ಧ ನಿಯಮಗಳನ್ನು ಪಾಲಿಸದೇ ಮರಗಳ ಕೊಂಬೆ ಕತ್ತರಿಸಿದ್ದರೆ ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥ ಅಧಿಕಾರಿಗಳು ಮತ್ತು ಸಿಬ್ಬಂದಿ ವಿರುದ್ಧ ಕಾನೂನು ಹಾಗೂ ಇಲಾಖಾ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿ : ದೆಹಲಿಯಲ್ಲಿ ರಾಹುಲ್ ಗಾಂಧಿ ಬಂಧನಕ್ಕೆ ಈಶ್ವರ ಖಂಡ್ರೆ ಖಂಡನೆ

ಕಳೆದ ವರ್ಷವೂ ಇದೇ ವಿಷಯವಾಗಿ ದೂರು ನೀಡಿದ್ದರೂ ಯಾವುದೇ ಪರಿಣಾಮಕಾರಿ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ, ಈ ಬಾರಿ ಗಂಭೀರವಾಗಿ ಪರಿಗಣಿಸಿ ಮೂರು ದಿನಗಳೊಳಗೆ ಕೈಗೊಂಡ ಕ್ರಮದ ಲಿಖಿತ ವರದಿ ನೀಡಬೇಕು. ಅಗತ್ಯ ಕ್ರಮ ಕೈಗೊಳ್ಳದಿದ್ದರೆ ಶಾಂತಿಯುತ ಧರಣಿ ನಡೆಸುವುದಾಗಿ ವಿನಯ ಮಾಳಗೆ ಅವರು ಎಚ್ಚರಿಕೆ ನೀಡಿದ್ದಾರೆ.

eedina
ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಾಡಿಗೆ ಕಾರು, ಇನ್‌ಸ್ಟಾಗ್ರಾಮ್ ಬಿಲ್ಡಪ್: ಉದ್ಯಮಿ ಸೋಗಿನಲ್ಲಿ ಮಹಿಳಾ ಪೊಲೀಸರಿಗೆ 24 ಲಕ್ಷ ರೂ. ವಂಚನೆ

ಮದುವೆಯಾಗುವ ಆಮಿಷವೊಡ್ಡಿ ಮಹಿಳಾ ಪೊಲೀಸ್ ಕಾನ್‌ಸ್ಟೆಬಲ್‌ಗಳಿಂದ ಬರೋಬ್ಬರಿ 24 ಲಕ್ಷ ರೂಪಾಯಿ...

ಬೆಂಗಳೂರಿನ ಶೇ. 63ರಷ್ಟು ಪಿಜಿಗಳು ಅನಧಿಕೃತ: ಜಿಬಿಎ ಆಡಿಟ್ ವರದಿ

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಪೇಯಿಂಗ್ ಗೆಸ್ಟ್ (ಪಿಜಿ) ವಸತಿಗಳ ಪೈಕಿ...

ಶೇರುಪೇಟೆ- ಈ ವಾರದ ನಷ್ಟ 20 ಲಕ್ಷ ಕೋಟಿ! ತೈಲ ಬೆಲೆಗಳ ‘ಕರಡಿ ಕುಣಿತ’ವೇ ಕಾರಣ

ಹಬ್ಬದ ಸಂಭ್ರಮದ ಸಮಯದಲ್ಲಿ ಶೇರುಪೇಟೆಯಲ್ಲಿ ಬಂಡವಾಳ ಹೂಡಿಕೆ ಮಾಡಿದವರು ತೀವ್ರ ನಿರಾಸೆಯನ್ನು...