ಬಸವಕಲ್ಯಾಣ ತಾಲೂಕು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಘಟಕದ ಅಧ್ಯಕ್ಷರಾಗಿ ಮಾರ್ಥಂಡ ಜೋಶಿ, ಪ್ರಧಾನ ಕಾರ್ಯದರ್ಶಿಯಾಗಿ ಉದಯಕುಮಾರ ಮುಳೆ ಅವರು ಎರಡನೇ ಅವಧಿಗೆ ಆಯ್ಕೆಯಾಗಿದ್ದಾರೆ.
ಬಸವಕಲ್ಯಾಣ ನಗರದ ತ್ರಿಪುರಾಂತ ಯಾತ್ರಿ ನಿವಾಸದಲ್ಲಿ ಸಂಘದ ಜಿಲ್ಲಾಧ್ಯಕ್ಷ ಅನಂದ ದೇವಪ್ಪ ಹಾಗೂ ಜಿಲ್ಲಾ ಪದಾಧಿಕಾರಿಗಳ ಸಮಕ್ಷಮದಲ್ಲಿ ನಡೆದ ಸಭೆಯಲ್ಲಿ ಅಧ್ಯಕ್ಷ ಹಾಗೂ ಪ್ರಧಾನ ಕಾರ್ಯದರ್ಶಿಯವರ ಆಯ್ಕೆ ಪ್ರಕ್ರಿಯೆಯನ್ನು ಗೌಪ್ಯ ಮತದಾನದ ಮೂಲಕ ಜರುಗಿತು.
ಜಿಲ್ಲಾಧ್ಯಕ್ಷ ಆನಂದ ದೇವಪ್ಪ ಮಾತನಾಡಿ, “ತಾಲೂಕಿನ ಎಲ್ಲ ಪತ್ರಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಒಗ್ಗಟ್ಟಿನಿಂದ ಕಾರ್ಯ ನಿರ್ವಹಿಸಬೇಕು. ಸಂಘದ ನಿಯಮಗಳನ್ನು ಚಾಚೂತಪ್ಪದೇ ಪಾಲಿಸುವುದರ ಜತೆಗೆ ನಿಯಮಿತವಾಗಿ ಸಭೆ-ಸಮಾರಂಭಗಳನ್ನು ನಡೆಸಬೇಕು” ಎಂದು ಹೇಳಿದರು.
ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಕುಮಾರ ಸ್ವಾಮಿ ಮಾತನಾಡಿ, ಸಂಘದ ನೀತಿ, ನಿಯಮ ಕುರಿತು ತಿಳಿಸಿದರು.
ಜಿಲ್ಲಾ ಉಪಾಧ್ಯಕ್ಷ ಪ್ರಥ್ವಿರಾಜ ಎಸ್. ಜಿಲ್ಲಾ ಕಾರ್ಯದರ್ಶಿ ಸಂತೋಷ ಚೆಟ್ಟಿ, ಜಿಲ್ಲಾ ಖಜಾಂಚಿ ಸುನೀಲಕುಮಾರ ಕುಲಕರ್ಣಿ, ಜಿಲ್ಲಾ ಕಾರ್ಯಕರಿಣಿ ಸಮಿತಿ ಸದಸ್ಯರಾದ ಗುರುನಾಥ ಗಡ್ಡೆ ಹಾಗೂ ಶ್ರೀಕಾಂತ ಪಾಟೀಲ್ ಸಮಕ್ಷಮದಲ್ಲಿ ಸಭೆ ಜರುಗಿತು.
ಇದನ್ನೂ ಓದಿ : ಭಾಲ್ಕಿ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಜೈರಾಜ ಪಾತ್ರೆ ಆಯ್ಕೆ
ಸದಸ್ಯರಾದ ರಾಜೇಂದ್ರ ಗೋಖಲೆ, ಮಾಣಿಕ ಭುರೆ, ಪ್ರದೀಪ ವಿಸಾಜಿ, ವೀರಶೆಟ್ಟಿ, ಡಿ.ಕೆ.ಪ್ರಲ್ಹಾದ, ಕಲ್ಯಾಣರಾವ ಮದರಗಾಂಕರ್, ನೈಮೋದ್ದಿನ್ ಚಾಬುಕಸವಾರ್, ಮಲ್ಲಿಕಾರ್ಜುನ ಬಂಡೆ, ವೀರಶೆಟ್ಟಿ ಮಲಶೆಟ್ಟಿ, ಶಿವಪುತ್ರ ಪಾಟೀಲ್, ಎಂ.ಡಿ. ಖುತಬೊದ್ದಿನ್, ಖಾಜಾ ಸರ್ತಾಜೋದ್ದಿನ್, ಧನರಾಜ ರಾಜೋಳೆ, ಪತ್ರಕರ್ತ ಶಿವಕುಮಾರ ಮಠಪತಿ, ಆದಿತ್ಯ ಗಜರೆ, ಮೊಹ್ಮದ್ ಮಿಯ್ಯಾ, ವಸೀಮ್ ಸೇರಿದಂತೆ ಇತರರು ಭಾಗವಹಿಸಿದ್ದರು.




