ಬೀದರ್ ಮಹಾನಗರ ಮುಖ್ಯರಸ್ತೆಗಳ ಅಂದ ಕಸಿದ ಗುಂಡಿಗಳು!

Date:

ಬೀದರ್‌ ಮಹಾನಗರದ ಮುಖ್ಯ ರಸ್ತೆಗಳಲ್ಲಿ ಅಲ್ಲಲ್ಲಿ ಕಾಣಿಸಿಕೊಂಡಿರುವ ಗುಂಡಿಗಳು ವಾಹನ ಸವಾರರ ಸಂಚಾರಕ್ಕೆ ಸವಾಲಾಗಿದೆ. ನಗರದ ಪ್ರಮುಖ ರಸ್ತೆಗಳಿಂದ ಹಿಡಿದು, ಬಡಾವಣೆಗಳಿಗೆ ಸಂಪರ್ಕ ಕಲ್ಪಿಸುವ ಓಣಿಯ ಒಳ ರಸ್ತೆಗಳಲ್ಲೂ ಮೊಳಕಾಲುದ್ದದ ಗುಂಡಿಗಳು ಜನರ ನೆಮ್ಮದಿ ಕೆಡಿಸಿದ್ದು ಅಷ್ಟೇ ಅಲ್ಲದೆ ನಗರದ ಅಂದ ಕಸಿದಿವೆ.

- Advertisement -

ಈ ರಸ್ತೆಗಳಲ್ಲೇ ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ಸಂಚರಿಸುವ ಅನಿವಾರ್ಯತೆ ಸೃಷ್ಟಿಯಾಗಿದೆ. ಹಲವು ಕಡೆ ದೊಡ್ಡ ಗಾತ್ರದ ತಗ್ಗು, ಗುಂಡಿಯಲ್ಲಿ ಮಳೆ ಬಂದಾಗ ನೀರು ನಿಲ್ಲುತ್ತದೆ. ʼರಸ್ತೆ ಮೇಲೆ ಗುಂಡಿಯೊ ಗುಂಡಿಯಲ್ಲಿ ರಸ್ತೆಯೊʼ ಎಂಬಂತಾಗಿ ಸಾರ್ವಜನಿಕರು ʼಗುಂಡಿಗಳು ಸಾರ್‌ ಗುಂಡಿಗಳುʼ ಎಂದು ಹಾಸ್ಯ ಮಾಡುತ್ತಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

“ಪವಿತ್ರ ಸ್ಥಳಗಳ ಮೇಲೆ ದಾಳಿ” ಹೆಸರಿನಲ್ಲಿ ಸೌದಿ ಅರೇಬಿಯಾ...

ಇತ್ತೀಚಿನ ದಿನಗಳಲ್ಲಿ ಮಧ್ಯಪ್ರಾಚ್ಯದ ಭೌಗೋಳಿಕ ರಾಜಕೀಯವು ಅತ್ಯಂತ ಸಂಕೀರ್ಣ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಇಸ್ರೇಲ್ ಮೇಲೆ ದಾಳಿ ನಡೆಸುವ ಉದ್ದೇಶದಿಂದ ಯೆಮೆನ್‌ನ ಹೌತಿ ಪಡೆಗಳು (ಅನ್ಸಾರ್ ಅಲ್ಲಾ) ಉಡಾವಣೆ ಮಾಡುತ್ತಿರುವ ಕ್ಷಿಪಣಿಗಳು ಹಾಗೂ ಡ್ರೋನ್‌ಗಳು...

ಹೂಥಿಗಳು ಯಾರು? ಅವರು ಮೆಕ್ಕಾವನ್ನೇ ಗುರಿಯಾಗಿಸಿದ್ದರೇ?

ಇರಾನ್‌ನ ‘ಪ್ರತಿರೋಧ ಅಕ್ಷ’ದ ಪ್ರಮುಖ ಭಾಗವಾಗಿರುವ ಹೂಥಿಗಳು ಈಗ ಇಸ್ರೇಲ್, ಸೌದಿ ಅರೇಬಿಯಾ ಮತ್ತು ಕೆಂಪು ಸಮುದ್ರದ ಭದ್ರತಾ ಸಮೀಕರಣಗಳ ಕೇಂದ್ರದಲ್ಲಿ ನಿಂತಿದ್ದಾರೆ. ಮೆಕ್ಕಾವನ್ನೇ ಗುರಿಯಾಗಿಸಿ ಡ್ರೋನ್ ಕಳುಹಿಸಲಾಗಿದೆ ಎಂಬ ಸೌದಿ ಆರೋಪದ...

ಬಾಗಲಕೋಟೆ | ಆಲಮಟ್ಟಿ ಒಳಹರಿವು ಶೂನ್ಯ: ಬಾಗಿನ ಅರ್ಪಣೆಗೆ...

ಮಹಾರಾಷ್ಟ್ರದ ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಮಳೆ ಕಡಿಮೆಯಾಗಿ ಆಲಮಟ್ಟಿ ಜಲಾಶಯದ ಒಳಹರಿವು ಶೂನ್ಯಕ್ಕೆ ತಲುಪಿದೆ. ಜಲಾಶಯ ಭರ್ತಿಯಾಗಿ ಈಗ ನೀರಿನ ಮಟ್ಟ ಇಳಿಕೆಯಾಗುತ್ತಿದ್ದರೂ, ಇದುವರೆಗೆ ಕೃಷ್ಣಾ ನದಿಗೆ ಬಾಗಿನ ಅರ್ಪಿಸದಿರುವುದು ಬಾಗಲಕೋಟೆ ಜಿಲ್ಲೆಯ...

ಸ್ವಲ್ಪ ಮಳೆಯಾದರೆ ಸಾಕು ಮುಖ್ಯರಸ್ತೆಯಲ್ಲಿ ಅಪಾರ ಪ್ರಮಾಣದಲ್ಲಿ ನೀರು ಸಂಗ್ರಹವಾಗುತ್ತದೆ. ರಸ್ತೆ ಮೇಲಿನ ನೀರು ಸರಾಗವಾಗಿ ಹರಿದು ಹೋಗುವಂತೆ ಸೂಕ್ತ ವ್ಯವಸ್ಥೆ ಕಲ್ಪಿಸಿಲ್ಲ. ಇನ್ನು ಕೆಲವೆಡೆ ಅವೈಜ್ಞಾನಿಕವಾಗಿ ನಡೆದ ಕಾಮಗಾರಿಯ ಪರಿಣಾಮವಾಗಿ ಇಂತಹ ದುಸ್ಥಿತಿ ನಿರ್ಮಾಣವಾಗುತ್ತಿರುವುದು ಮೇಲ್ನೋಟಕ್ಕೆ ಕಾಣುತ್ತಿದೆ.

ಈಚೆಗೆ ಸತತವಾಗಿ ಮಳೆಯಾದ ವೇಳೆ ʼಈದಿನʼ ತಂಡ ನಗರಾದ್ಯಂತ ಸುತ್ತಾಡಿ ʼರಿಯಾಲಿಟಿ ಚೆಕ್‌ʼ ನಡೆಸಿತು. ಈ ತಗ್ಗು, ಗುಂಡಿಮಯ ರಸ್ತೆಗಳ ಅಧ್ವಾನ ಕಣ್ಣಿಗೆ ರಾಚುವಂತಿತ್ತು. ಈ ಕೆಳಗಿನ ಆಯ್ದ ಚಿತ್ರಗಳು ಮಹಾನಗರದ ಸೌಂದರ್ಯ ಹಾಳುಗೆಡುವಂತಿವೆ.

ಇದನ್ನು ಕ್ಷೇತ್ರದ ಜನಪ್ರತಿನಿಧಿಗಳು, ಸಂಬಂಧಪಟ್ಟ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿದಂತೆ ಕಾಣುತ್ತಿಲ್ಲ. ಮಳೆಗಾಲಕ್ಕೂ ಮುನ್ನವೇ ಗುಂಡಿ ಮುಚ್ಚುವ ಕೆಲಸ ಆಗಿದ್ದರೆ ಇಂತಹ ಅವ್ಯವಸ್ಥೆ ಕಾಣುತ್ತಿರಲಿಲ್ಲ, ಇನ್ನು ಅನೇಕ ಕಡೆ ರಸ್ತೆ, ಚರಂಡಿಗಳ ಸೂಕ್ತ ನಿರ್ವಹಣೆ ಕೊರತೆಯೂ ಎದ್ದು ಕಾಣುತ್ತಿದೆ.

ಗೋಡೆಗೆ ಮೂತ್ರ ವಿಸರ್ಜನೆ ಮಾಡುವುದನ್ನು ತಪ್ಪಿಸಲು ಸ್ಟೀಲ್‌ ಮಿರರ್‌ಗಳನ್ನು (ಕನ್ನಡಿ) ಅಳವಡಿಸುವ ಹೊಸ ದಾರಿ ಕಂಡುಕೊಂಡಿರುವ ಮಹಾನಗರ ಪಾಲಿಕೆಯು ನಗರದ ಮುಖ್ಯರಸ್ತೆಗಳಲ್ಲಿ ಸೃಷ್ಟಿಯಾದ ಆಳವಾದ ತಗ್ಗು, ಗುಂಡಿ, ಮಳೆ ನೀರು ಸಂಗ್ರಹದ ಬಗ್ಗೆಯೂ ತಲೆಕೆಡಿಸಿಕೊಳ್ಳಬೇಕಿದೆ. ಮಳೆಯಾದರೆ ಸಾರ್ವಜನಿಕರು ಅನುಭವಿಸುತ್ತಿರುವ ತಾಪತ್ರಯಗಳು ಮನಗಾಣಬೇಕಿದೆ. ಅದಕ್ಕೆ ವೈಜ್ಞಾನಿಕ ಮಾದರಿಯ ಕಾಮಗಾರಿಗಳನ್ನು ತತ್‌ಕ್ಷಣ ಕೈಗೊಂಡು ಪರಿಹಾರವೂ ಕಂಡುಕೊಳ್ಳುವುದು ಈಗಿನ ಅಗತ್ಯ.

WhatsApp Image 2026 08 02 at 11.24.40 AM 1
ನ್ಯೂ ಆದರ್ಶ ಕಾಲೋನಿಯಿಂದ ಚಿದ್ರಿ ಹೋಗುವ ರಸ್ತೆ
WhatsApp Image 2026 08 02 at 11.24.40 AM
ಮೈಲೂರು ಸರ್ಕಲ್‌ ದಿಂದ ಗುಂಪಾ ಕಡೆಗೆ ಹೋಗುವ ರಿಂಗ್‌ ರೋಡ್‌
WhatsApp Image 2026 08 02 at 11.24.35 AM
ಹಾರೂರಗೇರಿ ಕಮಾನ್‌ ಸಮೀಪದ ರಸ್ತೆ ಕೆಸರಿನ ಗದ್ದೆಯಾಗಿದೆ (ಮಳೆ ನಿಂತ ಬಳಿಕ ತಾತ್ಕಾಲಿಕ ಮರುಮ ಹಾಕಿದ್ದಾರೆ)ಅ
WhatsApp Image 2026 08 02 at 11.24.38 AM
ಮೈಲೂರ ಕ್ರಾಸ್‌ ಸಮೀಪದ ವಾಸು ಆಸ್ಪತ್ರೆ ಬಳಿಯ ರಸ್ತೆ ಸಮೀಪದ ಬೃಹತ್ ತಗ್ಗಿನಲ್ಲಿ‌ ಮಳೆ ನೀರು ಸಂಗ್ರಹ
WhatsApp Image 2026 08 02 at 11.24.40 AM 2
ತಾಯಿ-ಮಗು ವೃತ್ತದಿಂದ ಕೆಇಬಿ ಕಡೆಗೆ ಹೋಗುವ ರಸ್ತೆ
WhatsApp Image 2026 08 02 at 11.24.39 AM 1
ಗುಂಪಾ ರೋಡ್‌ದಿಂದ ಕಮಠಾಣೆ ಕಾಲೇಜು ಹೋಗುವ ಕ್ರಾಸ್‌ ಬಳಿಯ ತಗ್ಗು, ಗುಂಡಿ
WhatsApp Image 2026 08 02 at 11.24.41 AM
ಜಿಲ್ಲಾ ಜೆಸ್ಕಾಂ ಕಚೇರಿ ಎದುರಿನ ರಸ್ತೆ
WhatsApp Image 2026 08 02 at 11.24.41 AM 2
ಅಕ್ಕಮಹಾದೇವಿ ಕಾಲೇಜು ಸಮೀಪದ ಕ್ರಾಸ್‌
WhatsApp Image 2026 08 02 at 11.24.42 AM
ಹೊಸ ಬಸ್‌ ನಿಲ್ದಾಣದಿಂದ ತಾಯಿ-ಮಗು ವೃತ್ತದ ಕಡೆಗೆ ಸಂಪರ್ಕಿಸುವ ರಸ್ತೆಯಲ್ಲಿ ಗುಂಡಿಗಳೇ ಗುಂಡಿಗಳು!
WhatsApp Image 2026 08 02 at 11.24.41 AM 1
ಹೊಸ ಬಸ್‌ ನಿಲ್ದಾಣ ಎದುರಿನ ಗುಂಡಿಯಲ್ಲಿ ಮಳೆ ನೀರು ಸಂಗ್ರಹ
WhatsApp Image 2026 08 02 at 11.22.05 AM
ಹಳೆ ಬಸ್‌ ನಿಲ್ದಾಣ ಎದುರಗಡೆಯ ಗುಂಡಿ
WhatsApp Image 2026 08 02 at 11.24.30 AM
ಹರಳಯ್ಯ ವೃತ್ತದಿಂದ ರೈಲ್ವೆ ನಿಲ್ದಾಣಕ್ಕೆ ಹೋಗುವ ದಾರಿಯಲ್ಲಿ ಗುಂಡಿಗಳು
WhatsApp Image 2026 08 02 at 11.24.39 AM 2
ಕುಂಬಾರವಾಡ ಕ್ರಾಸ್‌ ಸಮೀಪದ ಕೈಲಾಸ ಶೋರೂಮ್‌ ಎದುರುಗಡೆ ಅಪಾರ ಪ್ರಮಾಣದಲ್ಲಿ ಸಂಗ್ರಹವಾದ ಮಳೆ ನೀರು
WhatsApp Image 2026 08 02 at 11.24.32 AM
ಬೊಮ್ಮಗೊಂಡೇಶ್ವರ ವೃತ್ತದ ಸಮೀಪದಲ್ಲಿ ಗುಂಡಿಗಳು
WhatsApp Image 2026 08 02 at 11.24.31 AM
ಭಗತ್‌ ಸಿಂಗ್‌ ವೃತ್ತದಿಂದ ಗುಂಪಾ ಹೋಗುವ ದಾರಿ ಮಧ್ಯೆದ ರೈಲ್ವೆ ಸೇತುವೆ ಕೆಳಗೆ ಮಳೆ ನೀರು ಸರಾಗವಾಗಿ ಹೋಗದೆ ಸಂಗ್ರಹವಾಗಿರುವುದು
WhatsApp Image 2026 08 02 at 11.24.36 AM 2
ರಂಗಮಂದಿರದಿಂದ ಬಸ್‌ ನಿಲ್ದಾಣ ಕಡೆಗೆ ಹೋಗುವ ರಸ್ತೆಯಲ್ಲಿ ಗುಂಡಿಗಳ ದರ್ಬಾರ್

ಇದನ್ನೂ ಓದಿ : ಡಿ.ಆರ್. ನಾಗರಾಜ್ ಅವರ ಕತೆ | ನಗರದೇವಿಯ ದರ್ಶನ

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪಡಿತರ ಚೀಟಿ ಇ-ಕೆವೈಸಿ ಗಡುವು ವಿಸ್ತರಣೆ: ಸರ್ಕಾರ ಆದೇಶ

ಕರ್ನಾಟಕದಲ್ಲಿ ಎಪಿಎಲ್ ಮತ್ತು ಬಿಪಿಎಲ್ ಪಡಿತರ ಚೀಟಿದಾರರು ರೇಷನ್ ಕಾರ್ಡ್ ಇ-ಕೆವೈಸಿ...

ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಹತ್ತು ಹೊಸ ಯೋಜನೆಗಳ ಘೋಷಣೆ

ಕಲ್ಯಾಣ ಕರ್ನಾಟಕ ವಿಮೋಚನಾ ದಿನದ ಅಂಗವಾಗಿ ಸಿಎಂ‌ ಡಿ ಕೆ ಶಿವಕುಮಾರ್...

ʼಕ್ಯಾಷ್‌ಲೆಸ್‌ ಎಕಾನಮಿʼ ಹೆಸರಲ್ಲಿ ಸುಲಿಗೆ; ನೋಟು ಬ್ಯಾನ್‌ನಿಂದ UPI ವರೆಗೆ ಮೋದಿ ಸರ್ಕಾರದ ಎಡವಟ್ಟುಗಳು

ಈ ಅಸಮರ್ಪಕ ಆರ್ಥಿಕ ಹೊಡೆತದ ವಿರುದ್ಧ ‘ಭಾರತೀಯ ಚಿಲ್ಲರೆ ವ್ಯಾಪಾರಿಗಳ ಸಂಘ’...

ದವಡೆ ಜಜ್ಜಿಸಿಕೊಂಡ ಆಪರೇಷನ್ ಎಪಿಕ್ ಫ್ಯೂರಿ: ಇರಾನ್ ಕಾಳಗದಲ್ಲಿ ಅಮೆರಿಕಕ್ಕೆ ಆದ ನಷ್ಟಗಳೇನೇನು?

ಬೃಹತ್ ಮೊತ್ತದ ಬಜೆಟ್, ದುಬಾರಿ ಬೆಲೆಯ ಯುದ್ಧ ವಿಮಾನಗಳು ಮತ್ತು ಅತ್ಯಾಧುನಿಕ...