ಶಾಸಕ ಪ್ರದೀಪ್ ಈಶ್ವರ ಅವರು ತಮ್ಮ ಸ್ಥಾನಕ್ಕೆ ಗೌರವ ತರದ ರೀತಿಯಲ್ಲಿ ವರ್ತಿಸಿ ತಮಗೆ ಮತ ನೀಡಿದ ಮತದಾರರ ಅಭಿಪ್ರಾಯವನ್ನು ಸಹ ಕಡೆಗಣಿಸಿ ದುರ್ನಾಡ್ತೆ ವ್ಯಕ್ತಪ್ರಸಿ ಸಮಾಜದಲ್ಲಿ ಶಾಂತಿ ಕದಡುವ ರೀತಿಯಲ್ಲಿ ವರ್ತಿಸಿದ ಹಿನ್ನೆಲೆ ಅವರ ವಿರುದ್ಧ ನ್ಯಾಯಾಲಯದಲ್ಲಿ ಆರು ವಾರಗಳ ನಂತರ ಕ್ರಿಮಿನಲ್ ಪ್ರಕರಣ ದಾಖಲಿಸುವುದಾಗಿ ಸಮಾಜ ಸೇವಕ ಹಾಗೂ ಚಿತ್ರ ಸಾಹಿತಿ ಮಾಲೂರು ಡಾ. ವರದರಾಜು ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಏರ್ಪಡಿಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರದೀಪ್ ಈಶ್ವರ್ ಅವರು ಬಹಿರಂಗವಾಗಿ ತೊಡೆ, ಭುಜ ಹಾಗೂ ಕೂದಲು ಕಿತ್ತೆಸೆಯುವಂತೆ ಸಾರ್ವಜನಿಕ ಸ್ಥಳದಲ್ಲಿಯೇ ವರ್ತಿಸಿದ ಕಾರಣ ಅವರ ಮೇಲೆ ಚಪ್ಪಲಿ ಎಸಿಯುವಂತಹ ಘಟನೆ ನಡೆಯಲು ಕಾರಣವಾಯಿತು ಚಪ್ಪಲಿ ಎಸೆದವನದ್ದು ಎಷ್ಟು ತಪ್ಪಿದಿಯೋ ಅಷ್ಟೇ ತಪ್ಪು, ಚಪ್ಪಲಿ ಎಸೆಯುವಂತೆ ಪ್ರಚೋದನೆ ಮಾಡಿದ ಶಾಸಕ ಪ್ರದೀಪ್ ಈಶ್ವರ್ ಅವರದ್ದು ಸಹ ತಪ್ಪು ಆಗಿದೆ ಚಪ್ಪಲಿ ಎಸೆದವನ ಮೇಲೆ ಪ್ರಕರಣ ದಾಖಲಿಸುವುದೇ ಆದರೆ ಪ್ರಚೋದನೆ ಮಾಡಿದ ಶಾಸಕನ ವಿರುದ್ಧವು ಯಾಕೆ ಪ್ರಕರಣ ದಾಖಲಿಸಲಿಲ್ಲ ಎಂದು ಪೊಲೀಸರನ್ನ ಪ್ರಶ್ನೆ ಮಾಡಿದರು.
ಇದನ್ನು ಓದಿದ್ದೀರಾ..?ಚಿಂತಾಮಣಿ | ಓವರ್ ಟೇಕ್ ಮಾಡಲು ಹೋಗಿ ಮರಕ್ಕೆ ಗುದ್ದಿದ ಪೆಟ್ರೋಲ್ ತುಂಬಿದ ಲಾರಿ.
ಎರಡು ಬಾರಿ ಈ ರಾಜ್ಯದ ಮುಖ್ಯಮಂತ್ರಿ ಆಗಿದ್ದ ಹೆಚ್.ಡಿ. ಕುಮಾರಸ್ವಾಮಿ ಅವರ ಬಗ್ಗೆ ಮಾಡಿದ ಅಪಮಾನ ಮಾಡಿದ ರೀತಿಯಲ್ಲಿ ಜಾತಿ ಜಾತಿಗಳ ಮಧ್ಯೆ ವೈಶಮ್ಯ ಸೃಷ್ಟಿ ಮಾಡಲು ಯತ್ನಿಸುತ್ತಿರುವ ಶಾಸಕ ಪ್ರದೀಪ್ ಈಶ್ವರ್ ಅಷ್ಟೇ ಎದೆಗಾರಿಕೆಯಿಂದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಗೃಹಮಂತ್ರಿ ಪ್ರಿಯಾಂಕ ಖರ್ಗೆ ಹಾಗೂ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರುಗಳನ್ನು ಪ್ರಶ್ನೆ ಮಾಡುತ್ತಾರೆಯೇ? ಅಷ್ಟು ಎದೆಗಾರಿಕೆ ಅವರಲ್ಲಿ ಇದೆಯೇ ಎಂದು ಪ್ರಶ್ನೆ ಮಾಡಿದರು.
ಚಿಕ್ಕಬಳ್ಳಾಪುರ | ಚಪ್ಪಲಿ ಎಸೆದವನದ್ದು ಎಷ್ಟು ತಪ್ಪಿದೆಯೋ ಅಷ್ಟೇ ತಪ್ಪು, ಶಾಸಕ ಪ್ರದೀಪ್ ಈಶ್ವರ್ ಅವರದ್ದು : ಡಾ. ವರದರಾಜು
ಪೋಸ್ಟ್ ಹಂಚಿಕೊಳ್ಳಿ:




