ಚಿಕ್ಕಬಳ್ಳಾಪುರ | ಕೋರ್ಟಿನ ಮೂಲಕ ನ್ಯಾಯಪಡೆದ ಶಿಕ್ಷಕರಿಗೆ ನೇಮಕಾತಿಪತ್ರ ವಿತರಿಸಿದ ಡಿಡಿಪಿಐ

Date:

ಸುಪ್ರಿಂಕೋರ್ಟ್ ನಿರ್ದೇಶನದಂತೆ ರಾಜ್ಯ ಸರಕಾರ ೨೦೨೨-೨೩ರಲ್ಲಿ ನಡೆದ ಪದವೀದರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಪ್ರಕ್ರಿಯೆಯಲ್ಲಿ ಆದಾಯ ಮತ್ತು ಜಾತಿ ಪ್ರಮಾಣಪತ್ರಗಳ ಕಾರಣ ಹೊರಗುಳಿದಿದ್ದ ಸರಿಸುಮಾರು ೪೦೦ ಮಂದಿ ಟಿಜಿಟಿ ಶಿಕ್ಷಕರಿಗೆ ಮಂಗಳವಾರ ನೇಮಕಾತಿ ಪ್ರಕ್ರಿಯೆ ನಡೆದಿದ್ದು ಜಿಲ್ಲೆಯಲ್ಲಿ ೧೦ ಮಂದಿ ಶಿಕ್ಷಕರು ಕೌನ್ಸೆಲಿಂಗ್‌ನಲ್ಲಿ ಭಾಗವಹಿಸಿ ಸ್ಥಳನಿಯುಕ್ತಿ ಮಾಡಿಕೊಂಡು ಶಿಕ್ಷಕರ ನೇಮಕಾತಿ ಪತ್ರ ಪಡೆಯುವ ಮೂಲಕ ೩ ವರ್ಷಗಳ ವನವಾಸಕ್ಕೆ ಎಳ್ಳುನೀರು ಬಿಟ್ಟರು.

- Advertisement -

ಮಂಗಳವಾರ ನಡೆದ ದಾಖಲಾತಿ ಪರಿಶೀಲನೆಯಲ್ಲಿ ಲವಲವಿಕೆಯಿಂದ ಭಾಗಿಯಾದ ೧೦ ಮಂದಿ ಪದವೀಧರ ಶಿಕ್ಷಕಿಯರು ಸರಾಸರಿ ೩ ವರ್ಷಗಳ ಸುಧೀರ್ಘ ಕಾನೂನು ಸಂಘರ್ಷದ ವನವಾಸದಿಂದ ಹೊರಬಂದು ಸುಪ್ರಿಂಕೋಟ್ ಮೂಲಕ ತಮ್ಮ ಬದುಕಿಗೆ ಬೇಕಾದ ಬೆಳಕನ್ನು ಪಡೆದುಕೊಂಡಿದ್ದು ಎಲ್ಲರಿಗೂ ಮಾದರಿಯಂತಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಹೊಸ ಓದು | ಬಿ. ಚಂದ್ರೇಗೌಡರ ‘ಕಾಳ ಮಾವನ...

ಬಿ. ಚಂದ್ರೇಗೌಡರ 'ಬಯಲು ಸೀಮೆಯ ಕಟ್ಟೆಪುರಾಣ' ಅಂಕಣ ಬರಹದಿಂದ ಎದ್ದುಬಂದ ಕಾಳಮಾವ ಈಗ ತನ್ನ ಕಡೇ ದಿನಗಳಲ್ಲಿದ್ದಾರೆ. ಅವರು ಕಣ್ಣುಮುಚ್ಚುವ, ಕಾಲುಮಡಚುವ ದೃಶ್ಯಗಳು ಭಾರತದ ಆತ್ಮಸಾಕ್ಷಿಯ ಅಂತ್ಯಸಂಸ್ಕಾರವನ್ನು ಸಂಕೇತಿಸುವಂತಿವೆ. ನಮ್ಮ ನೆಲದ ನಾಲಿಗೆನಿಷ್ಠೆ...

ಬ್ರಿಟಿಷ್ ಕಾಲದ ʼಗುಲಾಮಗಿರಿʼ ಕಾನೂನುಗಳೇ ಇಂದಿನ ಪೊಲೀಸ್‌ ವ್ಯವಸ್ಥೆಯ...

ಸ್ವಾತಂತ್ರ್ಯ ಬಂದು ದಶಕಗಳೇ ಕಳೆದಿದ್ದರೂ, ನಾವಿನ್ನೂ ಬ್ರಿಟಿಷರು ಭಾರತೀಯರನ್ನು ದಮನ ಮಾಡಲು ರೂಪಿಸಿದ 1861ರ ಪೊಲೀಸ್ ಕಾಯಿದೆಯ ನೆರಳಿನಲ್ಲೇ ಬದುಕುತ್ತಿದ್ದೇವೆಯೇ? ಖಾಕಿ ಪಡೆಯನ್ನು 'ಪ್ರಜೆಗಳ ರಕ್ಷಕ'ನಾಗಿಸಬೇಕಿದ್ದ ವ್ಯವಸ್ಥೆ, ಇಂದಿಗೂ ರಾಜಕಾರಣಿಗಳ ಕೈಗೊಂಬೆಯಾಗಿ ಉಳಿದುಕೊಳ್ಳಲು...

ಯಾರು ಹಿತವರು ಈ ಇಬ್ಬರೊಳಗೆ? ನೇಹಾ ಬೋರಾ ಅಭಿಜಿತ್...

“ಹೋಲಿಕೆ ಬೇಡ, ಒಗ್ಗಟ್ಟು ಬೇಕು. ನಾವೆಲ್ಲರೂ ಒಟ್ಟಾಗಿ ಚುನಾವಣಾ ಆಯೋಗದ ಅಕ್ರಮಗಳ ವಿರುದ್ಧ ಹೋರಾಡಬೇಕು” ಎಂದು ನೇಹಾ ಬರೆದರೆ, ಅದಕ್ಕೆ ಅಭಿಜೀತ್ ಉತ್ತರ- “ಇಂಕ್ವಿಲಾಬ್ ಜಿಂದಾಬಾದ್” ನೇಹಾ ಬೋರಾ ಮತ್ತು ಅಭಿಜಿತ್ ದೀಪ್ಕೆ ನಡುವೆ...

ಇವರು ನೇಮಕಾತಿ ಪ್ರಕ್ರಿಯೆಯಿಂದ ಹೊರಗುಳಿಯಲು ಪ್ರಧಾನ ಕಾರಣ ಮಧುವೆಯಾಗಿದ್ದರೂ ಗಂಡನ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಸಲ್ಲಿಸುವ ಬದಲಿಗೆ ತಂದೆಯ ಜಾತಿ ಆದಾಯ ಪ್ರಮಾಣ ಪತ್ರ ಸಲ್ಲಿಸಿದ್ದೇ ಆಗಿತ್ತು.ಅಂತಿಮವಾಗಿ ಹೆಣ್ಣುಮಕ್ಕಳು ಮಧುವೆಯಾಗಿ ಗಂಡನಮನೆಗೆ ಹೋದರೂ ತಂದೆಯ ಜಾತಿ ಪ್ರಮಾಣ ಪತ್ರವೇ ಆಕೆಯ ಗುರುತನ್ನು ನಿರ್ಧರಿಸುತ್ತದೆ ಎಂದು ತೀರ್ಪಿತ್ತ ಪರಿಣಾಮ ಮತ್ತೆ ಉದ್ಯೋಗಕ್ಕೆ ಸೇರುವಂತಾಗಿರುವುದು ವಿಚಿತ್ರವಾದರೂ ಸತ್ಯಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಸುಕನ್ಯಾ ಮತ್ತು ಇತರರು ಉಪಸ್ಥಿತರಿದ್ದರು.

ಏನಿದು ಕೋರ್ಟ್ ಕಥೆ!!!
೨೦೨೨-೨೩ನೇ ಶೈಕ್ಷಣಿಕ ಸಾಲಿನ ಶಿಕ್ಷಕರ ನೇಮಕಾತಿಯಲ್ಲಿ ೪೦೦ ಮಂದಿ ಶಿಕ್ಷಕರನ್ನು ಕೆಲವು ತಾಂತ್ರಿಕ ದೋಷಗಳಾದ ಆದಾಯ ಮತ್ತು ಜಾತಿ ಪ್ರಮಾಣಪತ್ರಗಳ ವಿವಾದ ಬೆನ್ನತ್ತಿತ್ತು. ಇದಿರಂದಾಗಿ ಅರ್ಹ ಒಬಿಸಿ ಅಭ್ಯರ್ಥಿಗಳ ನೇಮಕಾತಿ ಪ್ರಕ್ರಿಯೆ ನೆನೆಗುದಿಗೆ ಬಿದ್ದಿತು.ಅರ್ಹ ಅಭ್ಯರ್ಥಿಗಳು ಇದನ್ನು ಪ್ರಶ್ನಿಸಿ ಕೆಎಟಿ ಕದ ತಟ್ಟಿ ನ್ಯಾಯಕೋರಿದ್ದರು. ಅಲ್ಲಿಂದ ಹೈಕೋರ್ಟ್ಗೆ ಹೋಯಿತು.ಅಲ್ಲಿಯೂ ನೇಮಕಾತಿಗೆ ಅಸ್ತು ಎಂದಿದ್ದರೂ ಇದನ್ನು ಪ್ರಶ್ನಿಸಿ ಸುಪ್ರಿಂಕೋರ್ಟ್ನಲ್ಲಿ ಮತ್ತೆ ಪ್ರಕರಣ ದಾಖಲಾಗಿತ್ತು.ಸುಪ್ರಿಂಕೋರ್ಟ್ ಹೈಕೋರ್ಟ್ ಆದೇಶ ಎತ್ತಿಹಿಡಿದ ಪರಿಣಾಮ ರಾಜ್ಯಾದ್ಯಂತ ಏಕಕಾಲಕ್ಕೆ ೪೦೦ ಶಿಕ್ಷಕರಿಗೆ ಕೌನ್ಸೆಲಿಂಗ್ ಮೂಲಕ ಮಂಗಳವಾರ ಆದೇಶಪತ್ರ ನೀಡಲಾಯಿತು.ಈ ಪೈಕಿ ಜಿಲ್ಲೆಯಲ್ಲಿ ೧೦ ಮಂದಿ ಜಿಪಿಟಿ ಶಿಕ್ಷಕರು ಸ್ಥಳವನ್ನು ಆಯ್ಕೆ ಮಾಡಿಕೊಂಡು ಸಂತಸ ವ್ಯಕ್ತಪಡಿಸಿದರು.

ಇದನ್ನು ಓದಿದ್ದೀರಾ..? ಶ್ರೀನಿವಾಸಪುರ | ಗಾಳಿ-ಮಳೆಗೆ ಮಾವು ಬೆಳೆ ನಾಶ: ರೈತರಿಗೆ ತ್ವರಿತ ಪರಿಹಾರ ನೀಡಲು ಕೆಆರ್‌ಎಸ್ ಪಕ್ಷ ಆಗ್ರಹ

೨೦೨೨-೨೩ರಲ್ಲಿ ನಡೆದ ೧೫ಸಾವಿರ ಪದವೀಧರ ಶಿಕ್ಷಕರ ನೇಮಕಾತಿಯಲ್ಲಿ ೪೮೧ ಮಂದಿ ಅಭ್ಯರ್ಥಿಗಳು ಮಧುವೆಯಾಗಿದ್ದರೂ ತಂದೆಯ ಜಾತಿ ಆದಾಯ ಪ್ರಮಾಣ ಪತ್ರ ಸಲ್ಲಿಸಿ ನೇಮಕಾತಿ ಆಗಿರುತ್ತಾರೆ.ಇದೇ ಕಾರಣಕ್ಕೆ ನಮ್ಮನ್ನು ಕೌನ್ಸೆಲಿಂಗ್‌ನಿಂದ ಹೊರಗಿಟ್ಟಿದ್ದರು.ಇದನ್ನು ಪ್ರಶ್ನಿಸಿ ನಾವು ಕೆಎಟಿ, ಹೈಕೋರ್ಟ್ ಸುಪ್ರಿಂಕೋರ್ಟ್ವರೆಗೂ ಹೋಗಿ ನ್ಯಾಯ ಕೇಳಿದ್ದೆವು.ಅಲ್ಲಿ ತಂದೆಜಾತಿ ಆದಾಯ ಪ್ರಮಾಣ ಪತ್ರ ಪರಿಗಣಿಸಲು ಸೂಚನೆ ನೀಡಿದ್ದರು.ಅದರಂತೆ ನೇಮಕಾತಿ ಪ್ರಕ್ರಿಯೆ ನಡೆಯಿತು. ಡಿಡಿಪಿಐ ಕಛೇರಿಯಲ್ಲಿ ನಡೆದ ಕೌನ್ಸೆಲಿಂಗ್ ಪಾರದರ್ಶಕವಾಗಿ ನಡೆದು ಶಾಲೆಗಳ ಆಯ್ಕೆ ಮಾಡಿಕೊಂಡು ನೇಮಕಾತಿ ಆದೇಶ ಪಡೆದಿದ್ದೇವೆ.ಎಲ್ಲಾ ಕಾರ್ಯಗಳನ್ನು ಸುಸೂತ್ರವಾಗಿ ನಡೆಸಿದ ಡಿಡಿಪಿಐ ರಮೇಶ್ ಮತ್ತು ತಂಡಕ್ಕೆ ಧನ್ಯವಾದಗಳನ್ನು ಅರ್ಪಿಸುತ್ತೇನೆ.ಈ ಮೂಲಕ ನಮಗೆ ನ್ಯಾಯಾಲಯದ ಮೇಲಿನ ನಂಬಿಕೆ ಹೆಚ್ಚಾಯಿತು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಕಲೇಶಪುರ | 25 ವರ್ಷ ನೆನಗುದಿಗೆ ಬಿದ್ದಿದ್ದ ಆಟೋ ನಿಲ್ದಾಣ ನಿರ್ಮಾಣ 

ಹಾಸನ ಜಿಲ್ಲೆ ಸಕಲೇಶಪುರ ಪಟ್ಟಣದ ಹಳೆ ಬಸ್ ನಿಲ್ದಾಣದ ಸಮೀಪ ಸ್ಥಳೀಯ...

ಕಾರವಾರ | ಗ್ರಾಮ ಆಡಳಿತ ಅಧಿಕಾರಿ ಪರೀಕ್ಷೆ ಸುಸೂತ್ರ: ಒಟ್ಟು 11,671 ಅಭ್ಯರ್ಥಿಗಳು ಹಾಜರು

ಕಾರವಾರ: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ವತಿಯಿಂದ ಕಂದಾಯ ಇಲಾಖೆಯ ಗ್ರಾಮ...

ಹಾಸನ | ₹426 ಕೋಟಿ; ಹಾಸನ-ಬೇಲೂರು ಚತುಷ್ಪಥ ರಸ್ತೆ ಅಭಿವೃದ್ಧಿ ಯೋಜನೆ; ಸಂಸದ ಶ್ರೇಯಸ್ ಪಟೇಲ್ 

ಹಾಸನ ನಗರದಲ್ಲಿ ಸುದ್ದಿಗಾರರೊಂದಿಗೆ ಸಂಸದ ಶ್ರೇಯಸ್ ಪಟೇಲ್ ಮಾತನಾಡಿ, ಹಾಸನ -...

ಯಲ್ಲಾಪುರ | ವಜ್ರಳ್ಳಿಯಲ್ಲಿ ರಸ್ತೆ ಕಾಮಗಾರಿಗೆ ಸಂಗ್ರಹಿಸಿದ್ದ ₹36 ಸಾವಿರ ಮೌಲ್ಯದ ಕಡಿ, ಎಂ-ಸ್ಯಾಂಡ್ ಕಳವು

ಯಲ್ಲಾಪುರ: ರಸ್ತೆ ಕಾಮಗಾರಿಗಾಗಿ ಸಂಗ್ರಹಿಸಿಟ್ಟಿದ್ದ ಕಡಿ ಹಾಗೂ ಎಂ-ಸ್ಯಾಂಡ್ ಕಳವು ಮಾಡಿರುವ...