NEET ಹಗರಣ | ‘ಗೆಸ್ ಪೇಪರ್’ನಲ್ಲಿದ್ದ ಪ್ರಶ್ನೆಗಳೇ ಅಸಲಿ ಪ್ರಶ್ನೆಪತ್ರಿಕೆಯಲ್ಲಿದ್ದವು: ಆಘಾತಕಾರಿ ಸಂಗತಿ ಬಹಿರಂಗ

Date:

ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ(ನೀಟ್‌)ಯ ‘ಗೆಸ್ ಪೇಪರ್’ (ಊಹಾತ್ಮಕ ಪ್ರಶ್ನೆ ಪತ್ರಿಕೆ) ನಲ್ಲಿದ್ದ ರಸಾಯನಶಾಸ್ತ್ರದ (ಕೆಮಿಸ್ಟ್ರಿ) ಪ್ರಶ್ನೆಗಳು ಅಸಲಿ ನೀಟ್ ಪ್ರಶ್ನೆ ಪತ್ರಿಕೆಯೊಂದಿಗೆ ನೂರಕ್ಕೆ ನೂರರಷ್ಟು ತದ್ರೂಪವಾಗಿ ಹೊಂದಿಕೆಯಾಗಿವೆ ಎಂಬ ಆತಂಕಕಾರಿ ಸಂಗತಿ ಬಹಿರಂಗಗೊಂಡಿದೆ. ಆ ಕಾರಣದಿಂದಲೇ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು (NTA) ತನ್ನ ಆಂತರಿಕ ತನಿಖೆ ನಡೆಸಲು ಮತ್ತು ಪ್ರಶ್ನೆ ಪತ್ರಿಕೆ ಸೋರಿಕೆಯ ಮೂಲವನ್ನು ಪತ್ತೆಹಚ್ಚಲು ಪ್ರಮುಖ ಕಾರಣವಾಗಿದೆ. ಹಗರಣದ ವಿಚಾರಣೆಗಾಗಿ ರಸಾಯನಶಾಸ್ತ್ರದ ಪಶ್ನೆಪತ್ರಿಕೆ ಮತ್ತು ಗೆಸ್‌ ಪೇಪರ್‌ಅನ್ನು ಸಿದ್ದಪಡಿಸಿದ ಎಲ್ಲ ತಜ್ಞರು ಮತ್ತು ಅನುವಾದಕರ ಹೆಸರುಗಳನ್ನು ಕೇಂದ್ರೀಯ ತನಿಖಾ ದಳಕ್ಕೆ (CBI) ಎನ್‌ಟಿಎ ಒದಗಿಸಿದೆ ಎಂದು ವರದಿಯಾಗಿದೆ.

- Advertisement -

ಮೂಲಗಳ ಪ್ರಕಾರ, ಮೇ 3 ರಂದು ದೇಶಾದ್ಯಂತ ನಡೆದ ಪರೀಕ್ಷೆಯ ನಾಲ್ಕು ದಿನಗಳ ನಂತರ, ಅಂದರೆ ಮೇ 7 ರಂದು ಎನ್‌ಟಿಎ ಸಂಸ್ಥೆಗೆ ಸಿಕಾರ್‌ ಮೂಲದ ವ್ಯಕ್ತಿಯೊಬ್ಬರು ಇ-ಮೇಲ್ ಕಳಿಸಿದ್ದರು.  ಪ್ರಶ್ನೆಪತ್ರಿಕೆ ಸೋರಿಕೆ ಬಗ್ಗೆ ಮಾಹಿತಿ ನೀಡಿದ್ದರು. ಬಳಿಕ, ಸೋರಿಕೆಯಾದ ಪ್ರಶ್ನೆ ಪತ್ರಿಕೆಯ ಪಿಡಿಎಫ್‌ಅನ್ನೂ ಅವರು ಒದಗಿಸಿದ್ದರು. ಅದನ್ನು ಅಸಲಿ ಪ್ರಶ್ನೆ ಪತ್ರಿಕೆಯೊಂದಿಗೆ ಹೋಲಿಸಿ ನೋಡಿದಾಗ, ರಸಾಯನಶಾಸ್ತ್ರ ಪ್ರಶ್ನೆಪತ್ರಿಕೆಯ ಅಷ್ಟೂ ಪ್ರಶ್ನೆಗಳು ಮತ್ತು ಜೀವಶಾಸ್ತ್ರದ ಬಹುತೇಕ ಪ್ರಶ್ನೆಗಳು ಆ ಪಿಡಿಎಫ್‌ನಲ್ಲಿದ್ದ ಪ್ರಶ್ನೆಗಳಿಗೆ ಹೊಂದಿಕೆಯಾಗಿದ್ದು, ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ ಎಂಬುದನ್ನು ಎನ್‌ಟಿಎ ಅರಿತುಕೊಂಡಿತ್ತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಹೊಸ ಓದು | ಬಿ. ಚಂದ್ರೇಗೌಡರ ‘ಕಾಳ ಮಾವನ...

ಬಿ. ಚಂದ್ರೇಗೌಡರ 'ಬಯಲು ಸೀಮೆಯ ಕಟ್ಟೆಪುರಾಣ' ಅಂಕಣ ಬರಹದಿಂದ ಎದ್ದುಬಂದ ಕಾಳಮಾವ ಈಗ ತನ್ನ ಕಡೇ ದಿನಗಳಲ್ಲಿದ್ದಾರೆ. ಅವರು ಕಣ್ಣುಮುಚ್ಚುವ, ಕಾಲುಮಡಚುವ ದೃಶ್ಯಗಳು ಭಾರತದ ಆತ್ಮಸಾಕ್ಷಿಯ ಅಂತ್ಯಸಂಸ್ಕಾರವನ್ನು ಸಂಕೇತಿಸುವಂತಿವೆ. ನಮ್ಮ ನೆಲದ ನಾಲಿಗೆನಿಷ್ಠೆ...

ಬ್ರಿಟಿಷ್ ಕಾಲದ ʼಗುಲಾಮಗಿರಿʼ ಕಾನೂನುಗಳೇ ಇಂದಿನ ಪೊಲೀಸ್‌ ವ್ಯವಸ್ಥೆಯ...

ಸ್ವಾತಂತ್ರ್ಯ ಬಂದು ದಶಕಗಳೇ ಕಳೆದಿದ್ದರೂ, ನಾವಿನ್ನೂ ಬ್ರಿಟಿಷರು ಭಾರತೀಯರನ್ನು ದಮನ ಮಾಡಲು ರೂಪಿಸಿದ 1861ರ ಪೊಲೀಸ್ ಕಾಯಿದೆಯ ನೆರಳಿನಲ್ಲೇ ಬದುಕುತ್ತಿದ್ದೇವೆಯೇ? ಖಾಕಿ ಪಡೆಯನ್ನು 'ಪ್ರಜೆಗಳ ರಕ್ಷಕ'ನಾಗಿಸಬೇಕಿದ್ದ ವ್ಯವಸ್ಥೆ, ಇಂದಿಗೂ ರಾಜಕಾರಣಿಗಳ ಕೈಗೊಂಬೆಯಾಗಿ ಉಳಿದುಕೊಳ್ಳಲು...

ಯಾರು ಹಿತವರು ಈ ಇಬ್ಬರೊಳಗೆ? ನೇಹಾ ಬೋರಾ ಅಭಿಜಿತ್...

“ಹೋಲಿಕೆ ಬೇಡ, ಒಗ್ಗಟ್ಟು ಬೇಕು. ನಾವೆಲ್ಲರೂ ಒಟ್ಟಾಗಿ ಚುನಾವಣಾ ಆಯೋಗದ ಅಕ್ರಮಗಳ ವಿರುದ್ಧ ಹೋರಾಡಬೇಕು” ಎಂದು ನೇಹಾ ಬರೆದರೆ, ಅದಕ್ಕೆ ಅಭಿಜೀತ್ ಉತ್ತರ- “ಇಂಕ್ವಿಲಾಬ್ ಜಿಂದಾಬಾದ್” ನೇಹಾ ಬೋರಾ ಮತ್ತು ಅಭಿಜಿತ್ ದೀಪ್ಕೆ ನಡುವೆ...

ಇದೀಗ, ಹಗರಣದ ತನಿಖೆಯನ್ನು ಸಿಬಿಐ ನಡೆಸುತ್ತಿದೆ. ರಸಾಯನಶಾಸ್ತ್ರ ಪ್ರಶ್ನೆಪತ್ರಿಕೆ ಸಿದ್ಧತೆಯಲ್ಲಿ ತೊಡಗಿದ್ದ ಎಲ್ಲ ಪ್ರೊಫೆಸರ್‌ಗಳು ಮತ್ತು ಅನುವಾದಕರ ಸಂಪೂರ್ಣ ಪಟ್ಟಿಯನ್ನು ಸಿಬಿಐಗೆ ಎನ್‌ಟಿಎ ನೀಡಿದೆ. ಪಟ್ಟಿಯಲ್ಲಿ, ಸುಮಾರು 27 ಜನರಿದ್ದಾರೆ. ಅವರಲ್ಲಿ, 24 ಮಂದಿ ಅನುವಾದಕರು, ಓರ್ವ ಭೌತಿಕ, ಓರ್ವ ಅಜೈವಿಕ ಹಾಗೂ ಓರ್ವ ಜೈವಿಕ ರಸಾಯನಶಾಸ್ತ್ರಗಳ ಪೇಪರ್ ಸೆಟ್ಟರ್‌ಗಳಾಗಿದ್ದಾರೆ. ಈ 27 ಮಂದಿಯಲ್ಲಿ ಕೆಲವರು ಈ ಹಿಂದೆಯೂ ಅನುವಾದಕರಾಗಿ ಮತ್ತು ಪೇಪರ್ ಸೆಟ್ಟರ್‌ಗಳಾಗಿ ಕೆಲಸ ಮಾಡಿರುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ನೀಟ್ ಪರೀಕ್ಷೆಗಳನ್ನು ಸುಮಾರು 10ಕ್ಕೂ ಹೆಚ್ಚು ಭಾಷೆಗಳಲ್ಲಿ ನಡೆಸಲಾಗುವುದರಿಂದ, ಎನ್‌ಟಿಎ ಸಂಸ್ಥೆಯು ಭೌತಶಾಸ್ತ್ರ, ರಸಾಯನಶಾಸ್ತ್ರ ಹಾಗೂ ಜೀವಶಾಸ್ತ್ರದ ಮೂರೂ ವಿಷಯಗಳಿಗಾಗಿ ಅನುವಾದಕರನ್ನು ನೇಮಿಸುತ್ತದೆ. ಆದರೆ, ಪ್ರತಿ ವಿಷಯಕ್ಕೂ ಪ್ರತಿ ಭಾಷೆಗೆ ಇಬ್ಬರು ಅನುವಾದಕರಿರುತ್ತಾರೆ – ಉದಾಹರಣೆಗೆ; ಒಬ್ಬರು ಇಂಗ್ಲಿಷ್‌ನಿಂದ ಮಲಯಾಳಂ ಭಾಷೆಗೆ ವಿಷಯದ ಪತ್ರಿಕೆಯನ್ನು ಅನುವಾದಿಸಿದರೆ, ಮತ್ತೊಬ್ಬರು ಅದನ್ನು ಮಲಯಾಳಂನಿಂದ ಇಂಗ್ಲಿಷ್‌ಗೆ ಮರುಅನುವಾದ ಮಾಡುತ್ತಾರೆ. ಅನುವಾದದ ಪ್ರಕ್ರಿಯೆಯಲ್ಲಿ ಪ್ರಶ್ನೆಯ ಅಸಲಿ ಅರ್ಥ ಎಲ್ಲೂ ಬದಲಾಗಬಾರದು ಅಥವಾ ಕಳೆದುಹೋಗಬಾರದು ಎಂಬುದನ್ನು ಖಚಿತಪಡಿಸಿಕೊಳ್ಳಲು ಈ ಕ್ರಮ ವಹಿಸಲಾಗುತ್ತದೆ.

ಆದರೆ, ಈಗ ಪ್ರಶ್ನೆಪತ್ರಿಕೆ ಸಿದ್ದಗೊಳಿಸುವ ಮತ್ತು ಅನುವಾದಿಸುವವರಿಂದಲೇ ಸೋರಿಕೆಯಾಗಿರುವ ಬಲವಾದ ಅನುಮಾನಗಳಿದ್ದು, ಎನ್‌ಟಿಎ ಪಜೀತಿಗೆ ಸಿಲುಕಿದೆ. ಕಳೆದ ವಾರ ಸಿಬಿಐ ಬಂಧಿಸಿರುವ ಪುಣೆಯ ನಿವೃತ್ತ ಉಪನ್ಯಾಸಕ ಪಿ.ವಿ. ಕುಲಕರ್ಣಿ ಅವರು ಪತ್ರಿಕೆಯ ರಸಾಯನಶಾಸ್ತ್ರ ವಿಭಾಗದ ಪ್ರಶ್ನೆಗಳನ್ನು ಸಿದ್ಧಪಡಿಸುವುದು ಮತ್ತು ಅದನ್ನು ಮರಾಠಿ ಭಾಷೆಗೆ ಅನುವಾದಿಸುವ ಎರಡೂ ಕೆಲಸಗಳಲ್ಲಿ ಭಾಗಿಯಾಗಿದ್ದರು ಎಂದು ತಿಳಿದುಬಂದಿದೆ.

 ಜೂನ್ 21ರಂದು ನಡೆಯಲಿರುವ ಮರುಪರೀಕ್ಷೆಗಾಗಿ, ಕೇವಲ ರಸಾಯನಶಾಸ್ತ್ರ ಮಾತ್ರವಲ್ಲದೆ ಜೀವಶಾಸ್ತ್ರ ಮತ್ತು ಭೌತಶಾಸ್ತ್ರ ಪತ್ರಿಕೆಗಳ ಎಲ್ಲ ಪ್ರಶ್ನೆ ಸಿದ್ಧಪಡಿಸುವವರನ್ನು ಮತ್ತು ಅನುವಾದಕರನ್ನು ಸಂಪೂರ್ಣವಾಗಿ ಎನ್‌ಟಿಎ ಬದಲಾಯಿಸಿದೆ ಎಂದು ಮೂಲಗಳು ತಿಳಿಸಿವೆ.

ಈ ಲೇಖನ ಓದಿದ್ದೀರಾ?: ಟ್ರಂಪ್ – ಜಿನ್‌ಪಿಂಗ್ ಭೇಟಿ: ನ್ಯಾಟೋ ರಾಷ್ಟ್ರಗಳು ಮತ್ತು ಭಾರತಕ್ಕೆ ಸಂದೇಶವೇನು?

2024ರಲ್ಲಿ ರಚಿಸಲಾದ ಸಮಿತಿಯ ಶಿಫಾರಸುಗಳ ಪ್ರಕಾರ, ಪ್ರಶ್ನೆ ಪತ್ರಿಕೆ ಸಿದ್ಧಪಡಿಸುವ ಹಂತದಲ್ಲೂ ಕಟ್ಟುನಿಟ್ಟಿನ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಎನ್‌ಟಿಎ ಬಳಿ ಪ್ರತ್ಯೇಕ ನಿಯಮಾವಳಿಗಳಿವೆ. ಇಂಟರ್ನೆಟ್ ಸೌಲಭ್ಯವಿಲ್ಲದ ಸುರಕ್ಷಿತ ಕೊಠಡಿಗಳಲ್ಲಿ ಪ್ರಶ್ನೆ ಪತ್ರಿಕೆಗಳನ್ನು ಸಿದ್ಧಪಡಿಸಬೇಕಾಗುತ್ತದೆ, ಮತ್ತು ಅಲ್ಲಿ ಪೇಪರ್ ಸೆಟ್ಟರ್‌ಗಳು ತಮ್ಮ ಸೆಲ್‌ಫೋನ್‌ಗಳು ಹಾಗೂ ಲ್ಯಾಪ್‌ಟಾಪ್‌ಗಳನ್ನು ಒಳಗೆ ತೆಗೆದುಕೊಂಡು ಹೋಗಲು ಅನುಮತಿ ಇರುವುದಿಲ್ಲ.

ಇದರ ಜೊತೆಗೆ, ಪರೀಕ್ಷೆಯ ಪಾರದರ್ಶಕತೆ ಮತ್ತು ಸಮಗ್ರತೆಯನ್ನು ಕಾಯ್ದುಕೊಳ್ಳಲು ಅಸ್ತಿತ್ವದಲ್ಲಿರುವ ಪ್ರಮಾಣಿತ ಕಾರ್ಯಾಚರಣೆ ಪ್ರಕ್ರಿಯೆಯನ್ನು (SOP) ಮರುರೂಪಿಸುವ ಕೆಲಸವೂ ನಡೆಯುತ್ತಿದೆ. “ಜೂನ್ 21 ರಂದು ನಡೆಯಲಿರುವ ‘ಪೆನ್ ಮತ್ತು ಪೇಪರ್’ ಆಧಾರಿತ ನೀಟ್ ಪರೀಕ್ಷೆಗೆ ಒಂದು ತಿಂಗಳಿಗಿಂತ ಕಡಿಮೆ ಸಮಯವಿರುವುದರಿಂದ, ಸಮಯದ ಮಿತಿ ಅತ್ಯಂತ ಕಠಿಣವಾಗಿದೆ ಮತ್ತು ಸವಾಲಿನಿಂದ ಕೂಡಿದೆ” ಎಂದು ಎನ್‌ಟಿಎ ಮೂಲಗಳು ಹೇಳಿರುವುದಾಗಿ ‘ದಿ ಇಂಡಿಯನ್ ಎಕ್ಸ್‌ಪ್ರೆಸ್‌’ ವರದಿ ಮಾಡಿದೆ.

ಈ ಮಧ್ಯೆ, ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಜೂನ್ 21 ರಂದು ನಿಗದಿಯಾಗಿರುವ ಮರುಪರೀಕ್ಷೆಯ ಸಿದ್ಧತೆಗಳ ಕುರಿತು ಪರಾಮರ್ಶೆ ಸಭೆ ನಡೆಸಿದ್ದಾರೆ. ಮರುಪರೀಕ್ಷೆಯ ವ್ಯವಸ್ಥೆಗಳ ಮೇಲ್ವಿಚಾರಣೆಯನ್ನು ಕಟ್ಟುನಿಟ್ಟಾಗಿ ಖಚಿತಪಡಿಸಿಕೊಳ್ಳಲು ಎಲ್ಲ ರಾಜ್ಯಗಳ ಜಿಲ್ಲಾಧಿಕಾರಿಗಳುಮತ್ತು ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ತಕ್ಷಣವೇ ಸಮನ್ವಯ ಸಭೆಗಳನ್ನು ನಡೆಸಬೇಕೆಂದು ನಿರ್ದೇಶನ ನೀಡಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮೈಸೂರು ದಸರಾ ಉದ್ಘಾಟನೆಗೆ ಅಭಿನವ ಗವಿಸಿದ್ದೇಶ್ವರ ಶ್ರೀಗೆ ಆಹ್ವಾನ

ಕೊಪ್ಪಳದ ಗವಿಸಿದ್ದೇಶ್ವರ ಮಠದ ಪೀಠಾಧಿಪತಿಗಳಾದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಅವರು ಈ...

ಪತ್ರಕರ್ತೆಯರ ಮೇಲೆ ಲೈಂಗಿಕ ದೌರ್ಜನ್ಯ; ಮಹಿಳೆಯರಿಗೆ ಸುರಕ್ಷತೆಯೇ ಇಲ್ಲವೇ: ಮೋಶಾಗೆ ಪ್ರಿಯಾಂಕಾ ಗಾಂಧಿ ಪ್ರಶ್ನೆ

ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆಯ ವರದಿಗಾರಿಕೆ ಮಾಡುತ್ತಿದ್ದ ಮಹಿಳಾ ಪತ್ರಕರ್ತೆಯರ ಮೇಲೆ...