ಚಿಕ್ಕಮಗಳೂರು ಜಿಲ್ಲೆಯ ಕುರುವಂಗಿ ರಸ್ತೆಯ ಬಿಳೆಕಲ್ಲು ಗ್ರಾಮದಲ್ಲಿ ಅಂಬೇಡ್ಕರ್ ಜಯಂತಿ ನಡೆಯುವ ಸ್ಥಳದಲ್ಲಿ ನಡೆದ ರಸ್ತೆ ಅಪಘಾತ ಪ್ರಕರಣದಲ್ಲಿ ಜೀವವನ್ಮರಣ ಹೋರಾಟ ನಡೆಸುತ್ತಿದ್ದ 7 ಮಂದಿ ಗಾಯಾಳುಗಳನ್ನು ಹಾಸನದ ಮಹಾಲಕ್ಷ್ಮೀ ಮಂಜಪ್ಪ ಸ್ಪೆಷಾಲಿಟಿ ಆಸ್ಪತ್ರೆಯ ಸಿಬ್ಬಂದಿ ಶಸ್ತ್ರ ಚಿಕಿತ್ಸೆಯೊಂದಿಗೆ, ಅಗತ್ಯ ಚಿಕಿತ್ಸೆ ನೀಡುವ ಮೂಲಕ ಜೀವ ಉಳಿಸಿರುವುದು ನಮಗೆ ಸಂತಸ ತಂದಿದೆ ಎಂದು ಆಸ್ಪತ್ರೆಯ ಮುಖ್ಯಸ್ಥ ಡಾ. ಉಮೇಶ್ ಹೇಳಿದರು.
ಪ್ರಥಮ ಚಿಕಿತ್ಸೆ ಪಡೆದು ನಮ್ಮ ಆಸ್ಪತ್ರೆಗೆ ಬಂದ ಕೂಡಲೆ ಸಕ್ರೀಯವಾಗಿ ಕಾರ್ಯಪ್ರವೃತ್ತವಾದ 7 ಜನ ವಿವಿಧ ತಜ್ಞ ವೈದ್ಯರೂ ಮತ್ತು ಸಿಬ್ಬಂದಿ ಆದ್ಯತೆಯ ತೆಯ ಮೇರೆಗೆ ಚಿಕಿತ್ಸೆ ನೀಡಲಾಯಿತು. ವಿಶೇಷವಾಗಿ 12 ವರ್ಷದ ನಿಶ್ಚಲ ಎಂಬ ಬಾಲಕಿಗೆ ತಲೆ ಮತ್ತು ಬಹು ಆಂಗಾಂಗಳ ವೈಫಲ್ಯತೆ ಕಂಡು ಬಂದಿದ್ದು, ಅದನ್ನು ಪತ್ತೆ ಹಚ್ಚೆ ಅಗತ್ಯ ಚಿಕಿತ್ಸೆ ನೀಡುವ ಮೂಲಕ ಬಾಲಕಿಯ ಜೀವ ಉಳಿಸಿದ್ದೇವೆ ಎಂದು ಹೇಳಿದ ಅವರು 7 ಮಂದಿಯ ಚಚಿಕಿತ್ಸೆಯನ್ನು ಆಸ್ಪತ್ರೆ ಈವರೆಗೂ ಯಾವುದೇ ಶುಲ್ಕ ಪಡೆಯದೆ ಚಿಕಿತ್ಸೆ ನೀಡಿ ಎಲ್ಲರನ್ನೂ ಗುಣಮುಖರಾಗಿಸಿದ ತೃಪ್ತಿ ನಮಗಿದೆ ಎಂದು ಆಸ್ಪತ್ರೆಯ ಮುಖ್ಯಸ್ಥ ಡಾ. ಉಮೇಶ್ ತಿಳಿಸಿದರು.
ಶಾಸಕ ಹೆಚ್.ಡಿ. ತಮ್ಮಯ್ಯ ಆಸ್ಪತ್ರೆಗೆ ಆಗಮಿಸಿ ಗಾಯಾಳುಗಳಿಗೆ ಆತ್ಮಸ್ಥೆರ್ಯ ತುಂಬುವುದರೊಂದಿಗೆ ಚಿಕಿತ್ಸಾ ವೆಚ್ಚವನ್ನು ಸರ್ಕಾರದಿಂದ ಕೊಡಿಸಿಕೊಡುವ ಭರವಸೆ ನೀಡಿದ್ದಾರೆ. ಅವರೊಂದಿಗೆ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಸಹ ಆಗಮಿಸಿದ್ದರು. ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆದವರಿಗೆ ಸರ್ಕಾರ ವೆಚ್ಚ ಭರಿಸಬೇಕು. ಮೃತಪಟ್ಟ ಮಗುವಿಗೆ 25 ಲಕ್ಷ ಪರಿಹಾರ ನೀಡಬೇಕು. ಗಾಯಾಳುಗಳಿಗೆ ಸೂಕ್ತ ಪರಿಹಾರ ನೀಡಬೇಕೆಂದು ಬಿಎಸ್‌ಪಿ ಮುಖಂಡ ಗಂಗಾಧರ ಬಹುಜನ್ ಮಾತಾಡಿದರು.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು | ಡಾ. ಬಿ.ಆರ್ ಅಂಬೇಡ್ಕರ್ ಜಯಂತಿ ಆಚರಣೆಗೆ ತಡೆ; ಆರೋಪಿಗಳ ಬಂಧನಕ್ಕೆ ದಸಂಸ ಒತ್ತಾಯ
ಬಿಎಸ್ ಪಿ ಜಿಲ್ಲಾಧ್ಯಕ್ಷ ಕೆ.ಟಿ. ರಾಧಾಕೃಷ್ಣ ಮಾತನಾಡಿ ಈ ಪ್ರಕರಣದಲ್ಲಿ ಬಾಗಿದಾರರಾದ ತಪ್ಪಿತಸ್ಥರ ವಿರುದ್ದ ಪೊಲೀಸ್ ಇಲಾಖೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ ಅವರು ಮಾನವೀಯ ನೆಲೆಗಟ್ಟಿನಲ್ಲಿ ಸೂಕ್ತ ಸ್ಪಂದನೆ ನೀಡಿದ ಚಿಕ್ಕಮಗಳೂರು ವಿಧಾನ ಸಭಾ ಕ್ಷೇತ್ರದ ಶಾಸಕ ತಮ್ಮಯ್ಯವನರಿಗೆ ಅಭಿನಂಧಿಸುತ್ತೆವೆಂದು ತಿಳಿಸಿದರು. ಈ ಸಂದರ್ಭದಲ್ಲಿ ಪರಮೇಶ್, ಮನೋಜ್, ರಾಜೀವ್, ಮಧುಸೂದನ್, ರಮೇಶ್ ಸೇರಿದಂತೆ ಸಂತ್ರಸ್ಥರು ಉಪಸ್ಥಿತರಿದ್ದರು.




