ಕರ್ನಾಟಕ ರಾಜ್ಯ ಸರ್ಕಾರದ ಮಹಾತ್ಮಾಕಾಂಕ್ಷಿ ಪಂಚ ಗ್ಯಾರಂಟಿಗಳಲ್ಲಿ ಒಂದಾದ ಗೃಹಲಕ್ಷ್ಮೀ ಯೋಜನೆಯ 28ನೇ ಕಂತು ಮಂಗಳವಾರ ಬಿಡುಗಡೆಯಾಗಿದೆ ಎಂದು ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ಎಂ.ಸಿ.ಶಿವಾನಂದಸ್ವಾಮಿ ತಿಳಿಸಿದ್ದಾರೆ.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು | ಗೃಹಬಳಕೆ ಗ್ಯಾಸ್ ಸಿಲಿಂಡರ್‌ಗಳು ಮನೆ ಬಾಗಿಲಿಗೆ; ಜಿಲ್ಲಾಧಿಕಾರಿ ಎನ್.ಎಂ.ನಾಗರಾಜ
ಗೃಹಲಕ್ಷ್ಮೀ ಯೋಜನೆಯ ಮೂಲಕ ಜಿಲ್ಲೆಯ 2,62,439 ಯಜಮಾನಿಯರಿಗೆ ಮಾಸಿಕ ರೂ.2೦೦೦ದಂತೆ ಒಟ್ಟು ರೂ.52,48,78,೦೦೦/- ಗಳನ್ನು ಬಿಡುಗಡೆ ಮಾಡಲಾಗಿದ್ದು, ಫಲಾನುಭವಿಗಳ ಖಾತೆಗೆ ನೇರವಾಗಿ ಜಮಾ ಮಾಡಲಾಗಿದೆ ಎಂದಿದ್ದಾರೆ. ಯೋಜನೆಯು ಆಗಸ್ಟ್ 2023ರಲ್ಲಿ ಆರಂಭಗೊಂಡಿದ್ದು ಈವರೆಗೆ ಜಿಲ್ಲೆಗೆ ರೂ. 1,424.48 ಕೋಟಿ ರೂ.ಗಳನ್ನು ರಾಜ್ಯ ಸರ್ಕಾರ ಒದಗಿಸಿದೆ. 2025-26ನೇ ಸಾಲಿನ 10ನೇ ಕಂತು ಅಂದರೆ 2026ರ ಜನವರಿ ತಿಂಗಳ ಕಂತು ಎಂದು ಮಾಹಿತಿ ನೀಡಿದ್ದಾರೆ.




