ಮುಂಬಯಿ ಲೋಕಮಾನ್ಯ ತಿಲಕ್ ಟರ್ಮಿನಲ್ ಮತ್ತು ಮಂಗಳೂರು ಸೆಂಟ್ರಲ್ ನಡುವೆ ಸಂಚರಿಸುವ ಮತ್ಸ್ಯಗಂಧ ಸೂಪರ್ಫಾಸ್ಟ್ ರೈಲು ಜನವರಿ 6, 2027ರಿಂದ ಎಕ್ಸ್ಪ್ರೆಸ್ ರೈಲಾಗಿ ಪರಿವರ್ತನೆಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ರೈಲಿನ ಸಂಖ್ಯೆಯಲ್ಲೂ ಬದಲಾವಣೆಯಾಗಲಿದ್ದು, ಪ್ರಯಾಣಿಕರಿಗೆ ಟಿಕೆಟ್ ದರದಲ್ಲಿಯೂ ಕಡಿತವಾಗಲಿದೆ ಎಂದು ಕೊಂಕಣ ರೈಲ್ವೆ ಪ್ರಕಟಣೆ ತಿಳಿಸಿದೆ.
ಪ್ರಸ್ತುತ ರೈಲು ಸಂಖ್ಯೆ 12619ರೊಂದಿಗೆ ಲೋಕಮಾನ್ಯ ತಿಲಕ್ ಟರ್ಮಿನಲ್ನಿಂದ ಮಂಗಳೂರು ಸೆಂಟ್ರಲ್ಗೆ ಸಂಚರಿಸುತ್ತಿರುವ ಮತ್ಸ್ಯಗಂಧ ಸೂಪರ್ಫಾಸ್ಟ್ ರೈಲು, 2027ರ ಜನವರಿ 6ರಿಂದ ರೈಲು ಸಂಖ್ಯೆ 16369ರೊಂದಿಗೆ ಎಕ್ಸ್ಪ್ರೆಸ್ ರೈಲಾಗಿ ಸಂಚರಿಸಲಿದೆ.
ಅದೇ ರೀತಿ, ಮಂಗಳೂರು ಸೆಂಟ್ರಲ್ನಿಂದ ಲೋಕಮಾನ್ಯ ತಿಲಕ್ ಟರ್ಮಿನಲ್ಗೆ ಸಂಚರಿಸುವ ರೈಲು ಸಂಖ್ಯೆ 12620, ಜನವರಿ 6ರಿಂದ ರೈಲು ಸಂಖ್ಯೆ 16370ರೊಂದಿಗೆ ಎಕ್ಸ್ಪ್ರೆಸ್ ರೈಲಾಗಿ ಕಾರ್ಯಾಚರಣೆ ನಡೆಸಲಿದೆ.
ಇದಲ್ಲದೆ, ಲೋಕಮಾನ್ಯ ತಿಲಕ್ ಟರ್ಮಿನಲ್ ಮತ್ತು ತಿರುವನಂತಪುರಂ ನಾರ್ತ್ ನಡುವೆ ಸಂಚರಿಸುವ ಗರೀಬ್ ರಥ್ ಸೂಪರ್ಫಾಸ್ಟ್ ರೈಲಿನಲ್ಲಿಯೂ ಬದಲಾವಣೆ ಮಾಡಲಾಗಿದೆ. ಪ್ರಸ್ತುತ ರೈಲು ಸಂಖ್ಯೆ 12201ರೊಂದಿಗೆ ಸಂಚರಿಸುತ್ತಿರುವ ಈ ರೈಲು, 2027ರ ಜನವರಿ 4ರಿಂದ ರೈಲು ಸಂಖ್ಯೆ 16371ರೊಂದಿಗೆ ಎಕ್ಸ್ಪ್ರೆಸ್ ರೈಲಾಗಿ ಸಂಚರಿಸಲಿದೆ ಎಂದು ಕೊಂಕಣ ರೈಲ್ವೆ ಪ್ರಕಟಣೆ ತಿಳಿಸಿದೆ.







