ಚಿಕ್ಕಮಗಳೂರು | ಶಾಲೆ ಉಳಿವಿಗೆ ಹೋರಾಟಕ್ಕೆ ಸಿದ್ಧ; ಕೆಸರಿಕೆಹಳ್ಳಿ ಗ್ರಾಮಸ್ಥರು

Date:

ಚಿಕ್ಕಮಗಳೂರು ತಾಲೂಕಿನ ಅಣೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ  ಕೆಸರಿಕೆ ಹಳ್ಳಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯನ್ನು ಮೈಲಿಮನೆ ಕೆಪಿಎಸ್ ಮ್ಯಾಗ್ನೆಟ್ ಶಾಲೆಗೆ ವಿಲೀನಗೊಳಿಸುವ ಮೂಲಕ ಮುಚ್ಚುವುದನ್ನು ವಿರೋಧಿಸಿ  AIDSO ವಿದ್ಯಾರ್ಥಿ ಸಂಘಟನೆಯ ನೇತೃತ್ವದಲ್ಲಿ ಕೆಸರಿಕೆಯ ಗ್ರಾಮಸ್ಥರು,ವಿದ್ಯಾರ್ಥಿಗಳೊಂದಿಗೆ ಬುಧವಾರ ಹೋರಾಟ ನಡೆಸಲಾಯಿತು.

- Advertisement -

ಜಿಲ್ಲಾ ಸಂಚಾಲಕರಾದ ಚೈತ್ರ ಮಾತನಾಡಿ “ರಾಜ್ಯ ಸರ್ಕಾರ ಕೆಪಿಎಸ್ ಮ್ಯಾಗ್ನೆಟ್ ಹೆಸರಿನಲ್ಲಿ ಸರ್ಕಾರಿ ಶಾಲೆಗಳನ್ನು ಮುಚ್ಚುವ ಹುನ್ನಾರ ನಡೆಸುತ್ತಿದೆ. ಚಿಕ್ಕಮಗಳೂರಿನಲ್ಲಿ ಇದರ ವಿರುದ್ಧ ಹಲವಾರು ಹಳ್ಳಿಗಳಲ್ಲಿ ಹೋರಾಟ ಆಗಿದೆ. ಈದಿನ ಕೆಸರಿಕೆ ಸರ್ಕಾರಿ ಶಾಲೆ ಮುಚ್ಚಲು ಹೊರಟಿರುವ ಸರ್ಕಾರದ ನಡೆಯ ವಿರುದ್ಧ ನಾವೆಲ್ಲರೂ ಒಗ್ಗಟ್ಟಾಗಿ ಹೋರಾಟ ಮಾಡೋಣ, ಶಿಕ್ಷಣವನ್ನು ಖಾಸಗೀಕರಣಗೊಳಿಸುವ ಸರ್ಕಾರದ ಇಂತಹ ನೀತಿಗಳ ವಿರುದ್ಧ ಜನಗಳ ಒಗ್ಗಟ್ಟಿನ ಹೋರಾಟ ಮಾತ್ರ ಗೆಲ್ಲಲು ಸಾಧ್ಯ ಎಂದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕಲಬುರಗಿ | ‘ನಮ್ಮನ್ನ ಎಲ್ಲಿಗೆ ಕಳುಹಿಸುತ್ತೀರಿ?’: ತಗ್ಗಿನ ಬೇಲಿಯ...

92ಕ್ಕೂ ಅಧಿಕ ಸ್ಲಂ ಕುಟುಂಬಗಳ ಬದುಕು ಕೇವಲ ಜಮೀನಿನ ಹಕ್ಕಿನ ಪ್ರಶ್ನೆಯಲ್ಲ; ಅವರ ಸುರಕ್ಷಿತ ಓಡಾಟ, ಕುಡಿಯುವ ನೀರು ಹಾಗೂ ನಿತ್ಯದ ಬದುಕಿನ ಹಕ್ಕಿನ ಪ್ರಶ್ನೆಯೂ ಹೌದು. ನ್ಯಾಯಾಲಯದ ವಿಚಾರಣೆ ಅಂತಿಮಗೊಳ್ಳುವವರೆಗೆ ಯಾವುದೇ...

ಚುನಾವಣಾ ಆಯೋಗದ ಸಭೆ: ಪರಿಹಾರವಲ್ಲ, ತೇಪೆ ಹಚ್ಚುವ ಕಾರ್ಯಕ್ರಮ

ಅವೈಜ್ಞಾನಿಕ 'SIR' ಪ್ರಕ್ರಿಯೆ ಮತ್ತು ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಸಾರ್ವಜನಿಕವಾಗಿ ಬಯಲಾದ ಬೆನ್ನಲ್ಲೇ ಬಿಡುಗಡೆಯಾದ ಚುನಾವಣಾ ಆಯೋಗದ ಪತ್ರಿಕಾ ಪ್ರಕಟಣೆ, ತಪ್ಪುಗಳನ್ನು ತಿದ್ದುವ ಬದಲು ವ್ಯವಸ್ಥೆಯ ಲೋಪಗಳಿಗೆ ತೇಪೆ ಹಚ್ಚುವ ಯತ್ನದಂತೆ ಕಾಣುತ್ತಿದೆ. ದೇಶದ ಇತಿಹಾಸದಲ್ಲೇ...

ಹೊರಟ್ಟಿ ಅವರ ಹೋರಾಟದ ಬದುಕು ಮತ್ತು ಅವರ ಭಕ್ತ...

ಗ್ಯಾರಂಟಿ ಯೋಜನೆಗಳಿಂದ ಕೂಲಿ ಕಾರ್ಮಿಕರು ಸಿಗುತ್ತಿಲ್ಲವೆಂಬ ಬಸವರಾಜ ಹೊರಟ್ಟಿ ಅವರ ಹೇಳಿಕೆ ಮತ್ತು ಅದಕ್ಕೆ ಸಿಕ್ಕ ಸಾರ್ವಜನಿಕ ಚಪ್ಪಾಳೆಗಳು, ಕೇವಲ ಹಸಿವನ್ನೇ ಶ್ರಮದ ಇಂಧನವನ್ನಾಗಿ ನೋಡುವ ಸಮಾಜದ ಕ್ರೂರ ಮನಸ್ಥಿತಿಯನ್ನು ಅನಾವರಣಗೊಳಿಸುತ್ತವೆ. ಬಸವರಾಜ ಹೊರಟ್ಟಿ...

ಶಾಲೆ ಉಳಿಸಿ ಸಮಿತಿಯ ಅಧ್ಯಕ್ಷರಾದ ಚೇತನ್ ಮಾತನಾಡಿ “ನಮ್ಮೂರಿನಲ್ಲಿ ಸರ್ಕಾರಿ ಶಾಲೆಗೆ ಬರುವ  ಮಕ್ಕಳ ಪೋಷಕರೆಲ್ಲರೂ ಟಾಟಾ ಕಾಫಿ ಎಸ್ಟೇಟ್ ನ ತೋಟಗಳಿಗೆ ಕೂಲಿ ಮಾಡಲು ಹೋಗುವವರು. ಬೇರೆ ಬೇರೆ ರಾಜ್ಯಗಳಿಂದ ಇಲ್ಲಿ ಕೂಲಿ ಮಾಡಲು ಬರುತ್ತಾರೆ. 7 ನೇ ತರಗತಿಗೆ ಎಷ್ಟೋ ಮಕ್ಕಳು ಶಾಲೆ ಬಿಡುತ್ತಾರೆ, ಹಾಗಾಗಿ ಹಳ್ಳಿಯಲ್ಲಿ ಶಾಲೆ ಇದ್ದರೆ ಮಾತ್ರ ನಮ್ಮ ಮಕ್ಕಳಿಗೆ ಶಿಕ್ಷಣ. ಅವರಿಗೆ ಜೀವನ ನಡೆಸಲು ಬೇಕಾದ ಮೂಲಭೂತ ಶಿಕ್ಷಣ ಸಿಗುತ್ತದೆ. ಆದ್ದರಿಂದ ಯಾವುದೇ ಕಾರಣಕ್ಕೂ ಈ ಶಾಲೆ ಮುಚ್ಚಲು ನಾವು ಬಿಡುವುದಿಲ್ಲ! ಸರ್ಕಾರ ಮ್ಯಾಗ್ನೆಟ್ ಯೋಜನೆ ಮಾಡುವುದಾದರೆ,  ಖಾಸಗಿ  ಶಾಲೆಗಳನ್ನು  ಸಂಯೋಜನೆ ಮಾಡಿ ಮುಚ್ಚಲಿ. ಸರ್ಕಾರಿ ಶಾಲೆಗಳನ್ನಲ್ಲ, ಶಾಲೆ ಉಳಿಸಿಕೊಳ್ಳಲು ಎಂತಹ ಹೋರಾಟಕ್ಕಾದರೂ ಸಿದ್ಧ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಮಿತಿ ಮುಖಂಡ ಕೃಷ್ಣಮೂರ್ತಿ ಮಾತನಾಡಿ, “ಕೆಪಿಎಸ್ ಮ್ಯಾಗ್ನೆಟ್ ಶಾಲೆಗಳಿಂದ ಅನುಕೂಲಕ್ಕಿಂತ ಅನಾನುಕೂಲಗಳೆ ಜಾಸ್ತಿ. ಒಂದರಿಂದ ಐದನೇ ತರಗತಿವರೆಗೆ ಶಾಲೆಗಳು ಸರ್ಕಾರಿ ಶಾಲೆಗಳಾಗಿ ಆ ಊರಿನಲ್ಲೇ ನಡೀಬೇಕು ಅನ್ನೋದು ಬಹಳ ಸೂಕ್ತ!! ದೂರದೂರಿಗೆ ಸಣ್ಣ ಸಣ್ಣ ಮಕ್ಕಳು ನಡೆದುಕೊಂಡು ಹೋಗಲು ಸಾಧ್ಯವಿಲ್ಲ, ಪೋಷಕರು ಕೂಡ ಪ್ರತಿದಿನ ಅವರನ್ನು ಕರೆದುಕೊಂಡು ಹೋಗಿ ಬಿಡಲು ಕೂಡ ಸಾಧ್ಯವಿಲ್ಲ, ಹಾಗಾಗಿ ನಾವು ಶಾಲೆ ಮುಚ್ಚಲು ಬಿಡೋದಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು | ಸರ್ಕಾರಿ ಶಾಲೆ ಮುಚ್ಚಲು ಬಿಡುವುದಿಲ್ಲ; ಜೋಳದಾಳು ಗ್ರಾಮಸ್ಥರ ಪ್ರತಿಭಟನೆ

ಈ ಪ್ರತಿಭಟನೆಯಲ್ಲಿ  ಜಿಲ್ಲಾ ಸಹ ಸಂಚಾಲಕಿ ಸುಷ್ಮಾ, ಗ್ರಾಮಸ್ಥರಾದ ಚೇತನ್, ಗಂಗಾಧರ್, ಶಶಿಧರ್, ಸೋಮಶೇಖರ್, ಇಂದಿರಾ, ನಿಂಗರಾಜು ಇನ್ನಿತರ  50ಕ್ಕೂ ಹೆಚ್ಚು ಪೋಷಕರು, ಗ್ರಾಮಸ್ಥರು ಉಪಸ್ಥಿತರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಯಚೂರು | ಪೊತ್ನಾಳ ಗ್ರಂಥಾಲಯದಲ್ಲಿ ಮೂಲಸೌಕರ್ಯ ಕೊರತೆ: ಓದಲು ಬರುವ ವಿದ್ಯಾರ್ಥಿಗಳಿಗೆ ಪರದಾಟ

ಮಾನ್ವಿ ತಾಲ್ಲೂಕಿನ ಪೊತ್ನಾಳ ಗ್ರಾಮ ಪಂಚಾಯತ್ ವ್ಯಾಪ್ತಿಯ ಸರ್ಕಾರಿ ಶಾಲೆಯ ಮೈದಾನದಲ್ಲಿರುವ...

ಕಲಬುರಗಿ | ಪ್ರೀತಿಸಿದ ಯುವತಿಯನ್ನೇ ಮದುವೆಯಾಗಲು ಪಟ್ಟು: ಟವರ್ ಏರಿದ ಯುವಕ!

ತಾನು ಪ್ರೀತಿಸಿದ ಯುವತಿಯನ್ನೇ ಮದುವೆಯಾಗಬೇಕು ಎಂದು ಪಟ್ಟು ಹಿಡಿದ ಯುವಕನೊಬ್ಬ, ಮದುವೆಗೆ...

ಅಳಿವಿನ ಅಂಚಿನಲ್ಲಿ ಅಕ್ಕಸಾಲಿಗರ ಕುಲಕಸುಬು: ಸರ್ಕಾರದ ನೆರವಿಗೆ ಚಿನ್ನ-ಬೆಳ್ಳಿ ಕೆಲಸಗಾರರ ಆಗ್ರಹ

ಒಮ್ಮೆ ರಾಜಾಶ್ರಯ ಪಡೆದಿದ್ದ ಪಾರಂಪರಿಕ ಕುಲಕಸುಬುಗಳಲ್ಲಿ ಒಂದಾಗಿದ್ದ ಚಿನ್ನ ಮತ್ತು ಬೆಳ್ಳಿ...

ಕಲಬುರಗಿ | ಅಪ್ರಾಪ್ತ ಬಾಲಕಿಯ ಮೇಲಿನ ಲೈಂಗಿಕ ದೌರ್ಜನ್ಯ: ಆರೋಪಿಗೆ 20 ವರ್ಷ ಕಠಿಣ ಕಾರಾಗೃಹ

ಅಪ್ರಾಪ್ತ ಬಾಲಕಿಯ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ...