ಹಳ್ಳಿಯಿಂದ ದಿಲ್ಲಿಯವರೆಗೆ ಸೌಹಾರ್ದ ಪರಂಪರೆ, ವಿಶ್ವಾಸ, ಕಲೆ, ಸಾಹಿತ್ಯ, ಸಂಸ್ಕೃತಿ ನಾವು ತಲತಲಾಂತರಗಳಿಂದ ನೋಡುತ್ತಾ ಬಂದಿದ್ದೇವೆ. ಹಾಗೆಯೇ, ಹಿಂದೇ ಹಳ್ಳಿಯ ಸೊಬಗು, ಭಾಷೆ, ಹಳ್ಳಿಯ ಜನರು ಹೊಂದಾಣಿಕೆಯ ಸ್ವಭಾವ ಹಾಗೂ ಬೇರೊಬ್ಬರೂ ತನ್ನ ಊರಿಗೆ ಬಂದಾಗ ಪ್ರೀತಿಯಿಂದ ನೋಡಿಕೊಳ್ಳುವ ಆರೈಕೆ ಅಷ್ಟಿಷ್ಟಲ್ಲ.

ಆದರೇ ಇತ್ತೀಚ್ಚಿನ ವರ್ಷಗಳಿಂದ ಹಳ್ಳಿಯಿಂದ ಪಟ್ಟಣದವರೆಗೂ ಒಬ್ಬರಿಗೊಬ್ಬರು ಪ್ರೀತಿ, ಸಮಯ ಕೊಡುವಲ್ಲಿ ವಿಫಲರಾಗುತ್ತಿದ್ದಾರೆ. ನಾನು ಹೀಗೆ ಬೇರೊಂದು ಊರಿಗೆ ಸ್ನೇಹಿತರನ್ನು ಭೇಟಿ ಆಗಲು ಹೋಗುವಾಗ ಒಂದು ಊರಿನ ಪರಿಚಯ ಮಾಡಿದರು. ಅದು ಚಿಕ್ಕಮಗಳೂರು ಜಿಲ್ಲೆ ಅಜ್ಜಂಪುರ ತಾಲೂಕು ಗೊಂಡೆದಹಳ್ಳಿ ಗ್ರಾಮ, ಇದು ಸ್ವಚ್ಛ ಗ್ರಾಮ ಎನ್ನಬಹುದು.

ಈ ಗ್ರಾಮದ ವಿಶೇಷತೆ ಗೊಂಡೇದಹಳ್ಳಿ ರುದ್ರಪ್ಪ ಚನ್ನಬಸಪ್ಪ (ಜನನ:೧೯೩೦) ಅಥವಾ ಸರಳವಾಗಿ ಗೊ. ರು. ಚನ್ನಬಸಪ್ಪ ನವರು ಒಬ್ಬ ಭಾರತೀಯ ಕವಿ, ಬರಹಗಾರ, ವಿದ್ವಾಂಸ ಮತ್ತು ಕನ್ನಡದ ಜಾನಪದ ತಜ್ಞ. ಅವರು ವಚನ ಸಾಹಿತ್ಯ ಮತ್ತು ಕನ್ನಡ ಜಾನಪದ ಕೃತಿಗಳಿಗೆ ಹೆಸರುವಾಸಿಯಾಗಿದ್ದಾರೆ.

ಗ್ರಾಮದಲ್ಲಿ ಮಧ್ಯಪಾನ ಮತ್ತು ಧೂಮಪಾನ ವ್ಯಾಸನಿಗಳಿಲ್ಲ, ಕುಡಿಯುವ ನೀರಿನ ವ್ಯವಸ್ಥೆ, ಸಮುದಾಯ ಭವನ ಹಾಗೂ ಮುಚ್ಚು ಹೋಗುತ್ತಿದ್ದ ಶಾಲೆಯನ್ನು ಉಳಿಸುವಲ್ಲಿ ಗ್ರಾಮದ ಜನರ ಪಾತ್ರ ದೊಡ್ಡದು, ಹಾಗೆಯೇ ಅಭಿವೃದ್ಧಿ ಪಡಿಸಿದ್ದಾರೆ. ಇಲ್ಲಿ ಲಿಂಗಾಯಿತ ಸಮುದಾಯದವರು ವಾಸಿಸುತ್ತಿದ್ದಾರೆ.
This video cannot be played in your browser. Open the video directly

ಒಂದು ವಿಶೇಷ ಅಂದ್ರೆ ಎಲ್ಲಾರ ಮನೆಯಲ್ಲಿ ಹೆಸರಿನ ಫಲಕ ಕಡ್ಡಾಯವಾಗಿ ಹಾಕಿಕೊಂಡಿದ್ದಾರೆ. ಯಾವುದೇ ಅಹಿತಕರ ಘಟನೆ, ಗಲಾಟೆ, ಘರ್ಷಣೆಗಳ್ಳಿಲದ ಗ್ರಾಮವಾಗಿದೆ. ಗ್ರಾಮದ ಜನರು ಸೌಹಾರ್ದದಿಂದ ಕೂಡಿ ಬಾಳುತ್ತಿದ್ದಾರೆ. ಇಲ್ಲಿಯವರೆಗೂ ಕಾನೂನು, ಕೇಸು ಪ್ರಕರಣಗಳು ನಡೆದಿಲ್ಲ, ಅದರಲ್ಲೂ ಈ ಗ್ರಾಮದಲ್ಲಿ ಎಲ್ಲಾ ವಿದ್ಯಾಭ್ಯಾಸ ಪಡೆದವರಾಗಿದ್ದಾರೆ ಹಾಗೂ ರಾಜ್ಯಕ್ಕೆ ಸ್ವಚ್ಛ ಗ್ರಾಮ ಎಂದು ಬಿರುದು ಸಿಕ್ಕಿದೆ ಎನ್ನುತ್ತಾರೆ ಗ್ರಾಮಸ್ಥರು.

ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು | ಸಚಿವ ನಾಗೇಂದ್ರ; ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ
ಈ ಗ್ರಾಮ ಮಾದರಿ ಗ್ರಾಮವಾಗಿದೆ. ಈ ಗ್ರಾಮವನ್ನು ಎಲ್ಲಾರು ಅನುಸರಿಸಿದರೆ ಅಭಿವೃದ್ಧಿ ಮತ್ತು ಸೌಹಾರ್ದತೆ ಮತ್ತು ಒಳ್ಳೆಯ ಬಾಂಧವ್ಯ ಹೆಚ್ಚಾಗುತ್ತದೆ. ಊರಿನ ಗ್ರಾಮದಲ್ಲಿ ಪ್ರೀತಿ, ವಿಶ್ವಾಸ ಉಳಿಯುತ್ತದೆ. ಇದು ಎಲ್ಲಾರ ಮನಸಲ್ಲಿ ಉಳಿಯುವಂತಾಗಿದೆ.





