ಚಿಕ್ಕಮಗಳೂರು | ಗೋವು ಕಳ್ಳತನ; ಆರೋಪಿಗಳಿಗೆ ಶೋಧ 

Date:

ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಪೊಲೀಸ್ ಠಾಣೆಯ ಪಿಎಸ್ಐ ಮಧು ಅವರು ಗಡಿಕಲ್ ಮುಖ್ಯ ರಸ್ತೆಯ ಬಳಿ ಕರ್ತವ್ಯದಲ್ಲಿದ್ದಾಗ ಜುಲೈ 6, 2026ರಂದು  ಬೆಳಗಿನ ಜಾವ ಸುಮಾರು 3 ಗಂಟೆಗೆ ಗಡಿಕಲ್ ಚೆಕ್‌ಪೋಸ್ಟ್ ಬಳಿ ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ತೀರ್ಥಹಳ್ಳಿ ಕಡೆಯಿಂದ ಬಂದ ಇನ್ನೋವಾ ಕಾರನ್ನು ನಿಲ್ಲಿಸಲು ಸೂಚಿಸಲಾಗಿತ್ತು. ಆದರೆ ಕಾರಿನ ಚಾಲಕ ಕಾರನ್ನು ನಿಲ್ಲಿಸದೆ ಅತಿ ವೇಗವಾಗಿ ಪರಾರಿಯಾಗಿದ್ದಾನೆ.

- Advertisement -

ಅನುಮಾನಗೊಂಡ ಪಿಎಸ್ಐ ಮಧು ಅವರು ಸಿಬ್ಬಂದಿಗಳೊಂದಿಗೆ ಇಲಾಖೆಯ ಜೀಪಿನಲ್ಲಿ ಕಾರನ್ನು ಸುಮಾರು ಒಂದು ಕಿಲೋಮೀಟರ್‌ವರೆಗೆ ಹಿಂಬಾಲಿಸಿದ್ದಾರೆ. ದೋರಗಲ್ ರಸ್ತೆ ಬಳಿ ಕಾರು ನಿಯಂತ್ರಣ ತಪ್ಪಿ ಒಂದು ಚಕ್ರ ಚರಂಡಿಗೆ ಬಿದ್ದಿದೆ. ಕಾರಿನಲ್ಲಿದ್ದ ಮೂವರು ವ್ಯಕ್ತಿಗಳನ್ನು ಪೊಲೀಸರು ಹಿಡಿಯಲು ಮುಂದಾದಾಗ ಕತ್ತಲಿನಲ್ಲೇ ಅವರು ಪರಾರಿಯಾಗಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಸಂವಿಧಾನಕ್ಕೆ 77 ವರ್ಷ | ಸಂವಿಧಾನ ಸೋತಿದೆಯೇ?, ಅನುಷ್ಠಾನದಲ್ಲಿ...

26 ನವೆಂಬರ್ 1949. ಭಾರತದ ಇತಿಹಾಸದಲ್ಲಿ ಇದೊಂದು ಮಹತ್ವದ ಐತಿಹಾಸಿಕ ದಿನ. ಶತಮಾನಗಳ ಸಾಮಾಜಿಕ ಅಸಮಾನತೆ, ಶೋಷಣೆ, ದಮನ ಮತ್ತು ಅನ್ಯಾಯದ ವಿರುದ್ಧ ಸಮಾನತೆ, ಸ್ವಾತಂತ್ರ್ಯ, ನ್ಯಾಯ ಹಾಗೂ ಸಹೋದರತ್ವದ ಆಧಾರದಲ್ಲಿ ಹೊಸ...

ಪಂಜಾಬ್ ಚುನಾವಣೆ  | ‘ಎಎಪಿ’ಗೆ ಅಳಿವು-ಉಳಿವಿನ ಕದನ; ಹಳೆಯ...

ಮುಂದಿನ ವರ್ಷದ ಆರಂಭದಲ್ಲಿ, ಅಂದರೆ 2027ರ ಫೆಬ್ರವರಿಯಲ್ಲಿ ನಡೆಯಲಿರುವ ಪಂಜಾಬ್ ವಿಧಾನಸಭಾ ಚುನಾವಣೆಯು ಆಡಳಿತಾರೂಢ ಆಮ್ ಆದ್ಮಿ ಪಕ್ಷದ (ಎಎಪಿ ) ಪಾಲಿಗೆ ಅಕ್ಷರಶಃ 'ಸಾವು-ಬದುಕಿನ' ಪ್ರಶ್ನೆಯಾಗಿ ಪರಿಣಮಿಸಿದೆ. ರಾಷ್ಟ್ರ ರಾಜಕಾರಣದಲ್ಲಿ ತನ್ನ...

‘ಬಿಸ್ಲೆರಿ’ ವಿರುದ್ಧದ ಕ್ರಮಕ್ಕೂ ನೀರು ಮಾರುಕಟ್ಟಗೆ ‘ಅಂಬಾನಿ’ ಪ್ರವೇಶಕ್ಕೂ...

ಭಾರತದ ಪ್ಯಾಕೇಜ್ಡ್ ಕುಡಿಯುವ ನೀರಿನ ಮಾರುಕಟ್ಟೆಯಲ್ಲಿ ಸುಮಾರು 35ರಿಂದ 36%ರಷ್ಟು ಮಾರುಕಟ್ಟೆ ಪಾಲನ್ನು ಬಿಸ್ಲೆರಿ ಹೊಂದಿದೆ. ಬಿಸ್ಲೆರಿ ನೀರಿನ ಸಂಸ್ಥೆ ‘ಬಿಸ್ಲೆರಿ ಇಂಟರ್‌ನ್ಯಾಷನಲ್ ಪ್ರೈವೇಟ್ ಲಿಮಿಟೆಡ್’ ವಿರುದ್ಧ ಭಾರತೀಯ ಆಹಾರ ಸುರಕ್ಷತೆ ಮತ್ತು...

ಎರಡು ದನಗಳನ್ನು ಕಾಲು ಮತ್ತು ಕುತ್ತಿಗೆಗೆ ಹಗ್ಗ ಕಟ್ಟಿ ಹಿಂಸಾತ್ಮಕವಾಗಿ ಕಾರಿನೊಳಗೆ ತುಂಬಿಸಿರುವುದು ಪತ್ತೆಯಾಗಿದೆ. ದನಗಳನ್ನು ಕಳ್ಳತನ ಮಾಡಿ ಮಾಂಸ ಮಾಡುವ ಉದ್ದೇಶದಿಂದ ಸಾಗಿಸಲಾಗುತ್ತಿತ್ತು ಎಂದು ಪೊಲೀಸರು ಶಂಕಿಸಿದ್ದಾರೆ. ಈ ಕುರಿತು ಜುಲೈ 7ರಂದು ಬೆಳಗಿನ ಜಾವ 4:30ಕ್ಕೆ ಪ್ರಕರಣ ದಾಖಲಿಸಿ ಆರೋಪಿಗಳ ಪತ್ತೆಗೆ ತನಿಖೆ ಆರಂಭಿಸಲಾಗಿತ್ತು.

ತನಿಖೆ ಮುಂದುವರಿಸಿದ ಪೊಲೀಸರು ಆಗಸ್ಟ್ 25ರಂದು ಪ್ರಕರಣದ ಪ್ರಮುಖ ಆರೋಪಿಯಾಗಿರುವ ಸೈಯದ್ ಇಮ್ರಾನ್ ಅಲಿಯಾಸ್ ಅಕ್ಲಾ, ಸೈಯದ್ ರಫೀಕ್ ಅವರ ಪುತ್ರ, 30 ವರ್ಷ, ಟಿಪ್ಪು ನಗರ, ಶಿವಮೊಗ್ಗ ಜಿಲ್ಲೆ ಎಂಬಾತನನ್ನು ಬಂಧಿಸಿದ್ದಾರೆ. ವಿಚಾರಣೆ ಪೂರ್ಣಗೊಳಿಸಿದ ಬಳಿಕ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಸೆಪ್ಟೆಂಬರ್ 5, 2026ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು | ಸೈಬರ್ ಪ್ರಕರಣ; ಲಕ್ಷಾಂತರ ಹಣ ದೋಚಿದ ವಂಚಕರು 

ಪ್ರಕರಣದ ಇತರೆ ಆರೋಪಿಗಳು ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗಾಗಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಬಳ್ಳಾಪುರ | ಹಾಲುಣಿಸುವ ತಾಯಂದಿರಿಗೆ ಉಚಿತ ಪೌಷ್ಟಿಕಾಂಶ ವಿತರಣೆ ಯೋಜನೆಗೆ ಸಚಿವ ಯು.ಟಿ. ಖಾದರ್ ಚಾಲನೆ

ತಾಯಿ ಮತ್ತು ಮಗುವಿನ ಆರೋಗ್ಯವನ್ನು ಬಲಪಡಿಸುವ ಉದ್ದೇಶದಿಂದ ಶ್ರೀ ಸತ್ಯಸಾಯಿ ಅನ್ನಪೂರ್ಣ...

ಕೋಲಾರ | ಬೇಡಿಕೆ ಈಡೇರಿಸುವವರೆಗೆ ಕಂಪನಿಗಳಿಗೆ ಕೋಳಿ ಪೂರೈಕೆ ಸ್ಥಗಿತ: ಸಾಕಾಣಿಕೆದಾರರ ನಿರ್ಧಾರ

ಕೋಳಿ ಸಾಕಾಣಿಕೆ ವೆಚ್ಚಕ್ಕೆ ಸರ್ಕಾರ ಪರಿಷ್ಕರಿಸಿರುವ ದರವನ್ನು ಖಾಸಗಿ ಕಂಪನಿಗಳು ಜಾರಿಗೊಳಿಸುವವರೆಗೆ...

ಚಿಂತಾಮಣಿ | ಮುರುಗಮಲ್ಲ ದರ್ಗಾ ನಮ್ಮ ಜಿಲ್ಲೆಯ ಸೌಹಾರ್ದತೆಗೆ ಸಾಕ್ಷಿ : ಜಿ.ಪಂ.ಸಿಇಒ ಡಾ.ವೈ.ನವೀನ್ ಭಟ್

ಹಿಂದೂ-ಮುಸ್ಲಿಮರ ಭಾವೈಕ್ಯತೆಯ ಸಂಕೇತವಾಗಿರುವ ಚಿಕ್ಕಬಳ್ಳಾಪುರ ಜಿಲ್ಲೆಯ ಪ್ರಸಿದ್ಧ ಪವಿತ್ರ ಯಾತ್ರಾ ಸ್ಥಳ...