ಚಿಕ್ಕಮಗಳೂರು ಜಿಲ್ಲೆ ಕಳಸ ಪಟ್ಟಣದ ವ್ಯಕ್ತಿಗೆ ಎಪಿಕೆ ಫೈಲ್‌ಮೂಲಕ ಬ್ಯಾಂಕ್ ಖಾತೆಯಲಿದ್ದ ಹಣವನ್ನು ದೋಚಿದ ಸೈಬರ್ ವಂಚಕರು. (69) ವರ್ಷದ ಕರುಣಾಕರ ಎಂಬುವವರ ಮೊಬೈಲ್‌ಗೆ ಅಪರಿಚಿತ ವ್ಯಕ್ತಿಯಿಂದ ಎಪಿಕೆ ಫೈಲ್ ಡೌನ್‌ಲೋಡ್ ಮಾಡಿಸಿ, ಅವರ ಸಂಪೂರ್ಣ ಬ್ಯಾಂಕಿಂಗ್ ನಿಯಂತ್ರಣವನ್ನು ತಮ್ಮ ಕೈಗೆ ತೆಗೆದುಕೊಂಡಿದ್ದಾರೆ. ಅವರ ಗಮನಕ್ಕೆ ಬಾರದಂತೆಯೇ ಕರ್ನಾಟಕ ಬ್ಯಾಂಕ್ ಹಾಗೂ ಕೆನರಾ ಬ್ಯಾಂಕ್ ಖಾತೆಗಳಿಂದ ಕೇವಲ ಎರಡು ದಿನಗಳ ಅಂತರದಲ್ಲಿ ಹಂತ ಹಂತವಾಗಿ ಬರೋಬ್ಬರಿ 1,27,999 ರೂಪಾಯಿ ಹಣವನ್ನು ಲೂಟಿ ಮಾಡಿದ್ದಾರೆ.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು | ಈದ್‌ಮಿಲಾದ್ ಪ್ರಯುಕ್ತ ವಾಹನ ಸಂಚಾರಕ್ಕೆ ವ್ಯವಸ್ಥೆ
ಮೊಬೈಲ್‌ಗೆ ಹಣ ಕಡಿತವಾದ ಸಂದೇಶ ಬಂದ ತಕ್ಷಣ ಆತಂಕಗೊಂಡ ಕರುಣಾಕರ ಅವರು ಕ್ಷಣಮಾತ್ರವೂ ತಡಮಾಡದೆ ಬ್ಯಾಂಕ್ ಅಧಿಕಾರಿಗಳನ್ನು ಸಂಪರ್ಕಿಸಿ ತಮ್ಮ ಖಾತೆಗಳನ್ನು ಡೆಬಿಟ್ ಫ್ರೀಜ್ ಮಾಡಿಸಿದ್ದಾರೆ. ಬಳಿಕ ಸರ್ಕಾರದ ಸೈಬರ್ ಹೆಲ್ಸ್‌ಲೈನ್ 1930ಗೆ ದೂರು ನೀಡಿ, ಚಿಕ್ಕಮಗಳೂರು ಸೈಬರ್ ಕ್ರೈಂ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಸೈಬರ್ ಪೊಲೀಸರು ಐಟಿ ಕಾಯ್ದೆ ಹಾಗೂ ಬಿಎನ್‌ಎಸ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಸಾರ್ವಜನಿಕರಿಗೆ ಅಪರಿಚಿತ ಲಿಂಕ್ ಹಾಗೂ ಎಪಿಕೆ ಫೈಲ್‌ಗಳ ಬಗ್ಗೆ ಎಚ್ಚರದಿಂದಿರುವಂತೆ ಅಧಿಕಾರಿಗಳು ತಿಳಿಸಿದ್ದಾರೆ.




