ಚಿಕ್ಕಮಗಳೂರು | ಜಿಂಕೆ ಬೇಟೆ: ಆರೋಪ ಬಂಧನ 

Date:

ಕಡೂರು ತಾಲೂಕು ದೇವದಾನ ಗ್ರಾಮದ ತೋಟದಲ್ಲಿ ಉರುಳು ಹಾಕಿ ಜಿಂಕೆಯನ್ನು ಬೇಟೆಯಾಡಿದ ಆರೋಪದಡಿ ಕುಂಬರಗೋಡಿನ ಪರಮೇಶ್ ಗೌಡ ಎಂಬಾತನನ್ನು ಅರಣ್ಯ ಇಲಾಖೆ ಸಿಬ್ಬಂದಿ ಬಂಧಿಸಿದ್ದು, ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಇನ್ನು ಮೂವರು ತಪ್ಪಿಸಿಕೊಂಡಿದ್ದಾರೆ. 

- Advertisement -

ಪರಾರಿಯಾದವರನ್ನು ಕುಂಬರಗೋಡಿನ ಪೃಥ್ವಿರಾಜ್, ಕವಿಶೇಕ್ ಹಾಗೂ ವಿನಯ್ ಅಲಿಯಾಸ್ ಶಂಭು ಎಂದು ಗುರುತಿಸಲಾಗಿದೆ. ಪರಮೇಶ್ ಗೌಡನ ಮನೆಯಲ್ಲಿ ಜಿಂಕೆ ಮಾಂಸ ತಯಾರಿಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಅರಣ್ಯ ಇಲಾಖೆ ಸಿಬ್ಬಂದಿ ದಾಳಿ ನಡೆಸಿ ಜಿಂಕೆ ಮಾಂಸವನ್ನು ವಶಕ್ಕೆ ಪಡೆದಿದ್ದಾರೆ. 

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಸಮಾನತೆಯ ಮರೆಯಲ್ಲಿ ಅಸಮಾನತೆಯ ನೆರಳು: ಹಸಿರು ಕನಸುಗಳ ಕಾಲಡಿಯಲ್ಲಿ...

ದೇಶದಲ್ಲಿ ಬಡತನ ಇಳಿಕೆಯಾಗುತ್ತಿದೆ, ಅಭಿವೃದ್ಧಿಯ ಅಂಕಿಅಂಶಗಳು ಏರುತ್ತಿವೆ. ಆದರೆ, ಆರ್ಥಿಕ ಪ್ರಗತಿಯ ನಡುವೆಯೂ ಶ್ರಮಜೀವಿಗಳ ಬದುಕಿನಲ್ಲಿ ಬಡತನ, ಜಾತಿ ತಾರತಮ್ಯ ಮತ್ತು ಅಸಮಾನತೆ ಏಕೆ ಮುಂದುವರಿದಿವೆ? ಅಭಿವೃದ್ಧಿಯ ಫಲ ಸಮಾಜದ ಕಟ್ಟಕಡೆಯ ಮನುಷ್ಯನಿಗೂ...

ಬಾಗಲಕೋಟೆ | ಸಾಕ್ಷರತೆಯಲಿ ಹಿಂದುಳಿದ ಜಿಲ್ಲೆ ʻಅಕ್ಷರ ಕ್ರಾಂತಿಗೆʼ...

ಮುಳುಗಡೆ ನಗರಿ ಬಾಗಲಕೋಟೆ ಜಿಲ್ಲೆ ಇಂದು ಕಬ್ಬಿನ ಬೆಲೆ ಹೋರಾಟದಲ್ಲಿ ಗೆಲುವು ಸಾಧಿಸಿ ಸಂಭ್ರಮಿಸುತ್ತಿದೆ. ಇದೇ ಸಂಭ್ರಮ ಶಿಕ್ಷಣ ಕ್ಷೇತ್ರದಲ್ಲಿಯೂ ಕಾಣಿಸಿಕೊಳ್ಳಬೇಕಿದೆ. ಆದರೆ, ಸಾಕ್ಷರತೆ, ಶಿಕ್ಷಕರ ಕೊರತೆ ಹಾಗೂ ಡಿಜಿಟಲ್ ಸೌಲಭ್ಯಗಳ ಅಭಾವ...

25ರ ಹರೆಯದಲ್ಲೇ ಬ್ರಿಟಿಷ್ ಸಾಮ್ರಾಜ್ಯಕ್ಕೆ ಸಿಂಹಸ್ವಪ್ನವಾದ ಆದಿವಾಸಿ ಕ್ರಾಂತಿಕಾರಿ...

ಕೇವಲ 25 ವರ್ಷಗಳ ಬದುಕಿನಲ್ಲಿ ಬ್ರಿಟಿಷ್ ಸಾಮ್ರಾಜ್ಯಶಾಹಿ ಆಡಳಿತಕ್ಕೆ ಸವಾಲು ಹಾಕಿ, ಸಾವಿರಾರು ಆದಿವಾಸಿಗಳನ್ನು ಸಂಘಟಿಸಿ, ಭೂಮಿಯ ಹಕ್ಕು ಮತ್ತು ಸ್ವಯಂ ಆಡಳಿತಕ್ಕಾಗಿ ಬೃಹತ್ ಚಳವಳಿಯನ್ನು ಕಟ್ಟಿದ ಬಿರ್ಸಾ ಮುಂಡಾ ಅವರು ಕೇವಲ...

ವಿಚಾರಣೆ ವೇಳೆ ನಾಲ್ವರು ಸೇರಿ ಉರುಳು ಹಾಕಿ ಜಿಂಕೆಯನ್ನು ಬೇಟೆಯಾಡಿರುವ ವಿಷಯ ಬೆಳಕಿಗೆ ಬಂದಿದೆ ಎಂದು ತಿಳಿದುಬಂದಿದೆ. ಬಳಿಕ ಶ್ವಾನದಳದೊಂದಿಗೆ ಕುಂಬರಗೋಡಿನಲ್ಲಿ ಪರಿಶೀಲನೆ ನಡೆಸಿದ ಅರಣ್ಯ ಇಲಾಖೆ ಸಿಬ್ಬಂದಿಗೆ ಪೃಥ್ವಿರಾಜ್ ಮನೆಯ ಹಿಂಭಾಗದಲ್ಲಿರುವ ತೊಟ್ಟಿಲಗುಂಡಿಯಲ್ಲಿ ಬೇಟೆಯಾಡಿದ ಜಿಂಕೆಯ ಚರ್ಮ, ಕಾಲು ಹಾಗೂ ಇತರ ಭಾಗಗಳು ಪತ್ತೆಯಾಗಿವೆ. ಪರಾರಿಯಾಗಿರುವ ಆರೋಪಿಗಳ ಪತ್ತೆಗಾಗಿ ಅರಣ್ಯ ಇಲಾಖೆ ಸಿಬ್ಬಂದಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು | ₹58 ಲಕ್ಷ ದರೋಡೆ: ಆರೋಪಿಗಳ ಬಂಧನ 

ಈ ಕಾರ್ಯಾಚರಣೆಯಲ್ಲಿ ಎಸಿಎಫ್ ಮೋಹನ್ ಕುಮಾರ್, ಪ್ರಭಾರ ಆರ್‌ಎಫ್‌ಒ ವಿದ್ಯಾಶ್ರೀ, ರಜಿತ್, ಶಿವಕುಮಾರ್, ಶಿವಶಂಕರ್, ದೀಕ್ಷಿತ್, ನಾಗರಾಜ್ ಹಾಗೂ ಯೋಗಾನಂದಮೂರ್ತಿ ಉಪಸ್ಥಿತರಿದ್ದರು.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೆಳಗಾವಿ | ಇ-ಸ್ವತ್ತು ದಾಖಲೆ ನಿಯಮ ಸರಳೀಕರಣ; ತ್ವರಿತ ಸ್ಪಂದನೆಗೆ ಸೂಚನೆ

ಗ್ರಾಮೀಣ ಪ್ರದೇಶದ ಆಸ್ತಿ ಮಾಲೀಕರು ಇ-ಸ್ವತ್ತು ದಾಖಲೆ ಪಡೆಯಲು ಎದುರಿಸುತ್ತಿರುವ ತೊಡಕುಗಳನ್ನು...

ಧಾರವಾಡ | ಮಾನ್ಯಾ ಹತ್ಯೆ ಪ್ರಕರಣ: ತ್ವರಿತ ನ್ಯಾಯಕ್ಕೆ ಚೇತನ್ ಅಹಿಂಸಾ ಆಗ್ರಹ

ಅಂತರ್ಜಾತಿ ವಿವಾಹದ ಕಾರಣಕ್ಕೆ ನಡೆದ ಮಾನ್ಯಾ ಪಾಟೀಲ್ ಅವರ ಮರ್ಯಾದೆಗೇಡು ಹತ್ಯೆ...

ಕಾರವಾರ | ಮುಗ್ಧ ಮಗುವಿನ ಮೇಲೆ ದೌರ್ಜನ್ಯ; ಆರೋಪಿಗೆ ಕಠಿಣ ಶಿಕ್ಷೆಯಾಗಲಿ

ಕಾರವಾರ: ಹತ್ತು ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ...

ರಾಯಚೂರು | ಮಕ್ಕಳಿಗೆ ಓದು–ಬರಹ ಬರುವುದಿಲ್ಲ ಎನ್ನುವ ಮೊದಲು ಶಿಕ್ಷಕರ ಕೊರತೆ ನೀಗಿಸಿ; ಹಫೀಜುಲ್ಲಾ

ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇದೆ. ಮಕ್ಕಳಿಗೆ ಓದಲು, ಬರೆಯಲು ಬರುತ್ತಿಲ್ಲ...