ಚಿಕ್ಕಮಗಳೂರು | ಬಡ ಮಕ್ಕಳಿಂದ ಶಿಕ್ಷಣವನ್ನು ಕಸಿಯಬೇಡಿ; AIDSO

Date:

KPS- ಮ್ಯಾಗ್ನೆಟ್ ಹೆಸರಿನಲ್ಲಿ ಮುಚ್ಚಲೊರಟಿರುವ ಚಿಕ್ಕಮಗಳೂರಿನ ಇಲೆಹೊಳೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯನ್ನು ಉಳಿಸಲು AIDSO ನೇತೃತ್ವದಲ್ಲಿ ನಡೆದ ಹೋರಾಟದಲ್ಲಿ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಪ್ರತಿಭಟಿಸಿದರು.

- Advertisement -

AIDSO ರಾಜ್ಯ ಖಜಾಂಚಿ ಸುಭಾಷ್ ಬೆಟ್ಟದ ಕೊಪ್ಪ ರವರು ಮಾತನಾಡಿ,”ಸರ್ಕಾರಿ ಶಾಲೆಗಳನ್ನು ಮುಚ್ಚುವ ಮುಖಾಂತರ ಸರ್ಕಾರ ಬಡ  ರೈತ,ಕೂಲಿ ಕಾರ್ಮಿಕರ ಮಕ್ಕಳನ್ನು ಶಿಕ್ಷಣದಿಂದ ವಂಚಿತರನ್ನಾಗಿಸಿ, ಸಾರ್ವಜನಿಕ ಶಿಕ್ಷಣವನ್ನು ಸಂಪೂರ್ಣವಾಗಿ ಖಾಸಗೀಕರಣ ಮಾಡಲೊರಟಿದೆ. ಈ ಇಲೆಹೊಳೆ ಶಾಲೆಯಲ್ಲಿ 17 ಮಕ್ಕಳು ಓದುತ್ತಿದ್ದಾರೆ. ಇಲ್ಲಿನ ಮಕ್ಕಳ ತಂದೆ ತಾಯಂದಿರು ಕಾಫಿ ತೋಟಕ್ಕೆ ಕೆಲಸ ಮಾಡಲು ಹೋಗುತ್ತಾರೆ, ಬೆಳಿಗ್ಗೆ ಕೆಲಸಕ್ಕೆ ಹೋದರೆ ಸಂಜೆ ಬರುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಶಾಲೆ ಮುಚ್ಚಿದರೆ ಹೇಗೆ ಮಕ್ಕಳು ಇನ್ನೊಂದು ಊರಿಗೆ ಹೋಗಿ ಓದಲು ಸಾಧ್ಯ? ಮತ್ತು ಮಕ್ಕಳ ಸುರಕ್ಷತೆಯ ಜವಾಬ್ದಾರಿಯನ್ನು ಯಾರು ತೆಗೆದುಕೊಳ್ಳುತ್ತಾರೆ? ಈ ಊರಿನ ಶಾಲೆ ಮುಚ್ಚಿದರೆ ಇವರ ಭವಿಷ್ಯವೇ ಇಲ್ಲದಂತಾಗುತ್ತದೆ. ಹಾಗಾಗಿ ಈ ಶಾಲೆ ಉಳಿಯಲೇ ಬೇಕು ಎಂದು ಆಗ್ರಹಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಸ್ವತಂತ್ರ ಸಾಂವಿಧಾನಿಕ ಸಂಸ್ಥೆಗಳ ಮೇಲಿನ ನಂಬಿಕೆಯನ್ನು ಕಸಿದುಕೊಳ್ಳುತ್ತಿರುವ ಚುನಾವಣಾ...

ನ್ಯಾಯಾಲಯ ಮತ್ತು ಚುನಾವಣಾ ಆಯೋಗಗಳ 'ಸ್ವತಂತ್ರತೆ' ಎಂಬ ಮುಖವಾಡವೇ ಈಗ ಸರ್ಕಾರಕ್ಕೆ ರಕ್ಷಣಾ ಕವಚವಾಗಿ ಕೆಲಸ ಮಾಡುತ್ತಿದೆ. ಹೀಗಾಗಿ ಇವತ್ತು ವಿರೋಧ ಪಕ್ಷಗಳ ಆಕ್ರೋಶವೆಲ್ಲವೂ ಸಾಂವಿಧಾನಿಕ ಸಂಸ್ಥೆಗಳ ಕಡೆಗೆ ತಿರುಗಿದೆ. ಸರ್ಕಾರ ತೀರಾ...

ರಾಜಕೀಯದಲ್ಲಿ ಮಹಿಳೆಯರ ಮೇಲೆ ಗಂಡಾಳ್ವಿಕೆಯ ಸಾಂಸ್ಕೃತಿಕ ರಾಜಕಾರಣ

ರಾಜಕೀಯದ ಮೇಲೆ ಪುರುಷ ಪ್ರಧಾನ ಹಿಡಿತ ಹೇಗೆ ನಿರ್ಮಾಣವಾಯಿತು? ರಾಜಕೀಯವೆಂದರೆ, ಜನರ ಬದುಕಿನ ಮೇಲೆ ನಿರ್ಧಾರ ತೆಗೆದುಕೊಳ್ಳುವ ಸಾರ್ವಜನಿಕ ಕ್ಷೇತ್ರ. ಆದರೆ ಶತಮಾನಗಳ ಕಾಲ ನಮ್ಮ ಸಾಮಾಜಿಕ ಮತ್ತು ಸಾಂಸ್ಕೃತಿಕ ವ್ಯವಸ್ಥೆ ಅದನ್ನು...

ಸಾಫ್ಟ್‌ವೇರ್ ಕೈಗೊಂಬೆಯಾದ ಚುನಾವಣಾ ವ್ಯವಸ್ಥೆ: ದೆಹಲಿಯಿಂದಲೇ ಇಡೀ ದೇಶದ...

ತಂತ್ರಜ್ಞಾನವು ಚುನಾವಣಾ ಪ್ರಕ್ರಿಯೆಯನ್ನು ಸುಲಭ ಮತ್ತು ಪಾರದರ್ಶಕಗೊಳಿಸಲು ಇರಬೇಕೇ ವಿನಃ, ಪ್ರಜಾಪ್ರಭುತ್ವವನ್ನು ಉಸಿರುಗಟ್ಟಿಸಲು ಅಲ್ಲ. ಒಬ್ಬ ಐಟಿ ಅಧಿಕಾರಿಯ ವಿವೇಚನಾರಹಿತ ನಿರ್ಧಾರಗಳು ಹಾಗೂ ಅದಕ್ಕೆ ಕುಮ್ಮಕ್ಕು ನೀಡುತ್ತಿರುವ ಸಾಂಸ್ಥಿಕ ಮೌನವು ಇಡೀ ಚುನಾವಣಾ...

ಚಿಕ್ಕಮಗಳೂರು ಬೆಟ್ಟ ಗುಡ್ಡಗಳಿಂದ ಕೂಡಿದ ಪ್ರದೇಶ, ಮಳೆಗಾಲದಲ್ಲಿ ತುಂಬಾ ಮಳೆ ಬೀಳುತ್ತದೆ. ಐದಾರು ಕಿಲೋಮೀಟರ್ ನಡೆದುಕೊಂಡು ಹೋಗಿ ಶಾಲೆಗೆ ಹೋಗುವುದು ತುಂಬಾ ಕಷ್ಟಕರವಾದ ಪರಿಸ್ಥಿತಿ. 12ನೇ ತರಗತಿಯ ಚಿಕ್ಕ ಮಕ್ಕಳು ಬಹಳ ಸಮಸ್ಯೆಗಳನ್ನು ಅನುಭವಿಸುತ್ತಾರೆ ಈ ಹಿನ್ನೆಲೆಯಲ್ಲಿ ಕೆಪಿಎಸ್ ಮ್ಯಾಗ್ನೆಟ್ ಯೋಜನೆಯನ್ನು ಹಿಂಪಡೆಯಬೇಕೆಂದು ಆಗ್ರಹಿಸಿದರು.

ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು | ಕೆರೆಯಲ್ಲಿ ಸಾವಿರಾರು ಮೀನುಗಳ ಸಾವು 

ರಾಜ್ಯದ 21 ಸಾವಿರಕ್ಕೂ ಅಧಿಕ ಸರ್ಕಾರಿ ಶಾಲೆಗಳ ಕಟ್ಟಡಗಳು ಒಂದಲ್ಲ ಒಂದು ದುರಸ್ತಿಗೆ ವರ್ಷಗಳಿಂದ ಕಾಯುತ್ತಿವೆ. 3,500 ಸಾವಿರಕ್ಕೂ ಅಧಿಕ ಶಾಲೆಗಳಲ್ಲಿ ಬಳಕೆಗೆ ಯೋಗ್ಯ ಶೌಚಾಲಯದ ವ್ಯವಸ್ಥೆ ಇಲ್ಲ. ಶೌಚಾಲಯವಿಲ್ಲದ ಕಾರಣ ಅನೇಕ ವಿದ್ಯಾರ್ಥಿಗಳು ಅದರಲ್ಲೂ ವಿದ್ಯಾರ್ಥಿನಿಯರು ಎದುರಿಸುವ ಸಮಸ್ಯೆಗಳು ಶಿಕ್ಷಣ ನೀತಿ ರೂಪಿಸುತ್ತಿರುವ ಸರ್ಕಾರದ ಕಣ್ಣಿಗೆ ಕಾಣುತ್ತಿಲ್ಲವೇ..? ಎಂದೂ ಪ್ರಶ್ನಿಸಿದರು ಹಾಗೂ 1,000ಕ್ಕೂ ಅಧಿಕ ಶಾಲೆಗಳಲ್ಲಿ  ವಿದ್ಯುತ್ ಸೌಲಭ್ಯವಿಲ್ಲ ಅನೇಕ ಶಾಲೆಗಳಿಗೆ ಕುಡಿಯುವ ನೀರಿನ ಸೌಲಭ್ಯವಿಲ್ಲ ಎಂದು ಪ್ರಶ್ನಿಸಿದರು. ಈ ಪ್ರತಿಭಟನೆಯಲ್ಲಿ  ಜಿಲ್ಲಾ ಸಂಚಾಲಕರಾದ ಚೈತ್ರ , ಕಾರ್ಯಕರ್ತರಾದ ಸುಷ್ಮಾ , ಅಭಿಷೇಕ್,ಗ್ರಾಮಸ್ಥರಾದ ದೇವರಾಜು,ದಿನೇಶ್,ಕಲ್ಲೇಶ್, ಕೃಷ್ಣ, ಸಿದ್ದೇಶ್ ಹಾಗೂ ಶಾಲೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | ಬ್ಯಾಟರಿ, ಕಾಪರ್ ವೈರ್‌ ಕಳವು: ಆರೋಪಿಗೆ 3 ತಿಂಗಳ ಸಜೆ 25,000 ರೂ. ದಂಡ

ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಬೊಮ್ಮಕಟ್ಟೆ ವನ್ಯ ವೃಕ್ಷೋದ್ಯಾನವನದ ರಸ್ತೆ ಸಮೀಪ ಕೆ.ಇ.ಬಿ....

ಶಿವಮೊಗ್ಗ | ಚಲಿಸುತ್ತಿದ್ದ ಬಸ್‌ನಲ್ಲಿ ಬೆಂಕಿ: ಚಾಲಕನ ಸಮಯಪ್ರಜ್ಞೆಯಿಂದ ತಪ್ಪಿದ ಅನಾಹುತ

ಚಲಿಸುತ್ತಿದ್ದ ಖಾಸಗಿ ಬಸ್‌ನಲ್ಲಿ ದಿಢೀರ್ ಬೆಂಕಿ ಕಾಣಿಸಿಕೊಂಡು, ಚಾಲಕನ ಸಮಯಪ್ರಜ್ಞೆಯಿಂದಾಗಿ ಭಾರಿ...

ಸಾಗರ | ʻಮೀಶೋ ಲಕ್ಕಿ ಡ್ರಾʼ ಆಮಿಷವೊಡ್ಡಿ ಮಹಿಳೆಗೆ ರೂ.23 ಲಕ್ಷ ವಂಚನೆ

ಆನ್‌ಲೈನ್ ಶಾಪಿಂಗ್ ವೇದಿಕೆ ಮೀಶೋ ಹೆಸರಿನಲ್ಲಿ ಲಕ್ಕಿ ಡ್ರಾ ಆಮಿಷವೊಡ್ಡಿ ಸಾಗರದ...

ಶಿವಮೊಗ್ಗ | ಶರಾವತಿ ಸಂತ್ರಸ್ತರ ಸಮಸ್ಯೆ ಪರಿಹಾರಕ್ಕೆ ಶೀಘ್ರವೇ ಕೇಂದ್ರಕ್ಕೆ ಪ್ರಸ್ತಾವನೆ: ಮಧು ಬಂಗಾರಪ್ಪ

ಶರಾವತಿ ಮುಳುಗಡೆ ಸಂತ್ರಸ್ತರ ಅರಣ್ಯ ಭೂಮಿಯನ್ನು ಡಿ-ನೋಟಿಫೈ ಮಾಡಲು ಕೇಂದ್ರ ಸರ್ಕಾರದ...