ಪರಿಸರ ಸಂರಕ್ಷಣಾ ಯೋಜನೆಗಳು ಜನಸಮುದಾಯಗಳನ್ನು ಒಳಗೊಳ್ಳಲಿ

Date:

ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಗುಣ ಬದಲಾವಣೆ ಸಚಿವಾಲಯ ಏಳನೆಯ ಬಾರಿ ಪಶ್ಚಿಮಘಟ್ಟ ಸೂಕ್ಷ್ಮ ಪ್ರದೇಶ ಘೋಷಣೆಯ ಕರಡು ಅಧಿಸೂಚನೆ ಹೊರಡಿಸಿದೆ. ಮತ್ತೊಮ್ಮೆ ಮಲೆನಾಡಿನಲ್ಲಿ ಅಧಿಸೂಚನೆ ಕುರಿತು ಚರ್ಚೆ ನಡೆಯುತ್ತಿದೆ. ರಾಜ್ಯದ 20668 ಚದರ ಕಿಲೋ ಮೀಟರ್ ಸೇರಿದಂತೆ ಪಶ್ಚಿಮಘಟ್ಟ ಪ್ರದೇಶದ 56,825.7 ಚದರ ಕಿಲೋಮೀಟರ್ ಪ್ರದೇಶವನ್ನು ಸೂಕ್ಷ್ಮ ಪ್ರದೇಶವೆಂದು ಗುರುತಿಸಲಾಗಿದೆ. ಈ ಹಿಂದಿನ ಕರಡು ಅಧಿಸೂಚನೆಗಳಿಗೆ ಆ ಬಾಗದ ಜನರು, ಗ್ರಾಮ ಪಂಚಾಯ್ತಿಗಳೂ ಸೇರಿದಂತೆ ರಾಜ್ಯ ಸರ್ಕಾರವೂ ಆಕ್ಷೇಪಣೆ ಸಲ್ಲಿಸಿತ್ತು. ಆದರೂ ರಾಜ್ಯದ ಸೂಕ್ಷ್ಮ ಪ್ರದೇಶಗಳ ವಿಸ್ತೀರ್ಣದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಜನರ ಆತಂಕಗಳಿಗೂ ಉತ್ತರ ಸಿಕ್ಕಿಲ್ಲ.

- Advertisement -
Screenshot 2026 08 09 11 52 53 07 680d03679600f7af0b4c700c6b270fe7

ಪಶ್ಚಿಮಘಟ್ಟ ಪ್ರದೇಶವು ಜಗತ್ತಿನ ಅಪರೂಪದ ಜೀವವೈವಿಧ್ಯದ ತಾಣಗಳಲ್ಲೊಂದು. ಜೊತೆಗೆ ವಾರ್ಷಿಕವಾಗಿ ಹತ್ತುಸಾವಿರ ಮಿಲಿಮೀಟರ್ ವರೆಗೂ ಮಳೆ ಬೀಳುವ ಈ ಪ್ರದೇಶವು ದಕ್ಷಿಣ ಭಾರತದ ನದಿಗಳ ಉಗಮ ಸ್ಥಾನವೂ ಆಗಿದೆ. ಪಶ್ಚಿಮಘಟ್ಟ ಪ್ರದೇಶವು ಬೃಹತ್ ಜಲವಿದ್ಯುತ್ ಯೋಜನೆಗಳು,ಗಣಿಗಾರಿಕೆ, ಕೈಗಾರಿಕೆಗಳು,ಹೆದ್ದಾರಿಗಳು ಮುಂತಾದ ಉದ್ದೇಶಗಳಿಗಾಗಿ ಅಮೂಲ್ಯ ಕಾಡುಗಳನ್ನು ಕಳೆದುಕೊಂಡಿದೆ. ಏಕಜಾತಿಯ ಅರಣ್ಯ ನೆಡುತೋಪುಗಳು, ಕಾಫಿ ರಬ್ಬರ್ ಮುಂತಾದ ಪ್ಲಾಂಟೇಶನ್ ಗಳು ಮತ್ತು ಕೃಷಿ ವಿಸ್ತರಣೆಗಾಗಿಯೂ ಇಲ್ಲಿನ ಸಹಜ ಅರಣ್ಯ ನಾಶವಾಗಿದೆ. ಅಮೂಲ್ಯವಾದ ಪಶ್ಚಿಮಘಟ್ಟದ ಪರಿಸರ, ಜೀವವೈವಿಧ್ಯವನ್ನು ಸಂರಕ್ಷಿಸುವುದು ತುರ್ತು ಅಗತ್ಯ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಸೆ.23 ‘ಭೀಮ ಸಂಕಲ್ಪ ದಿನ’: ಡಾ ಬಿ ಆರ್...

1917ರ ಸೆಪ್ಟೆಂಬರ್ 23ರಂದು ವಡೋದರದ ಆಲದ ಮರದ ಕೆಳಗೆ ಕುಳಿತಿದ್ದ ಯುವ ಅಂಬೇಡ್ಕರ್ ಅವರ ಬಳಿ ಅಧಿಕಾರವಿರಲಿಲ್ಲ, ದೊಡ್ಡ ಸಂಘಟನೆಯಿರಲಿಲ್ಲ. ಆದರೆ ಅನ್ಯಾಯವನ್ನು ಒಪ್ಪಿಕೊಳ್ಳದ ಮನಸ್ಸು ಮತ್ತು ಸಮಾಜವನ್ನು ಬದಲಿಸಬೇಕೆಂಬ ದೃಢ ಸಂಕಲ್ಪವಿತ್ತು....

ಸೌಜನ್ಯ ಪ್ರಕರಣ: ಪ್ರಭಾವಿಗಳ ಜೊತೆ ಲಜ್ಜೆ ಬಿಟ್ಟು ಹೆಜ್ಜೆ...

ತನಿಖಾಧಿಕಾರಿಗಳು ಹಣದ ಆಮಿಷಕ್ಕೆ ಒಳಗಾಗಿದ್ದರೇ ಅಥವಾ ಬಲಾಢ್ಯರ ಒತ್ತಡಕ್ಕೆ ಮಣಿದು ಸಾಕ್ಷ್ಯ ನಾಶ ಮಾಡಿ ಅಪರಾಧಿಗಳ ರಕ್ಷಣೆಗೆ ನಿಂತರೇ ಎಂಬ ಅನುಮಾನ ಸಾಮಾನ್ಯ ಜನರಿಗೂ ಬರುತ್ತಿರುವಾಗ ಕರ್ನಾಟಕದ ಬಹುತೇಕ ಸುದ್ದಿ ಮಾಧ್ಯಮಗಳು ಈ...

ಉತ್ತರ ಪ್ರದೇಶ | ಅಖಿಲೇಶ್ ‘ಧರ್ಮ ರಕ್ಷಣೆ’ಯ ಯುದ್ಧ...

ಉತ್ತರ ಪ್ರದೇಶದ ಯುವಜನತೆಯ (Gen Z) ಅಸಮಾಧಾನ, ನಿರುದ್ಯೋಗ ಸಮಸ್ಯೆ ಮತ್ತು ಬದಲಾಗುತ್ತಿರುವ ಜಾತಿ ಸಮೀಕರಣಗಳು ತಮಗೆ ಪೂರಕವಾಗಿವೆ ಎಂಬುದನ್ನು ಅಖಿಲೇಶ್ ಯಾದವ್ ಅರಿತಿದ್ದಾರೆ. ತಮ್ಮ ಪಕ್ಷ ಕೇವಲ "ಮುಸ್ಲಿಂ ಮತ್ತು ಯಾದವರ...

ಪಶ್ಚಿಮಘಟ್ಟ ಪ್ರದೇಶದಲ್ಲಿ ಪಾರಂಪರಿಕವಾಗಿ ಕೃಷಿ ಮಾಡಿಕೊಂಡು ಬದುಕುತ್ತಿರುವ ಜನಸಮುದಾಯಗಳೂ ಇವೆ. ಅಲ್ಲಿಯದೇ ಆದ ಕೃಷಿ ಪದ್ದತಿಗಳು ಅಭಿವೃದ್ಧಿ ಹೊಂದಿವೆ. ಪಶ್ಚಿಮಘಟ್ಟ ಪ್ರದೇಶದಲ್ಲಿ ಕೈಗೊಂಡ ಅಭಿವೃದ್ಧಿ ಯೋಜನೆಗಳಿಂದಾಗಿ ಪರಿಸರ ನಾಶವಾಗಿರುವ ಜೊತೆಗೆ ಅಲ್ಲಿನ ಜನರೂ ತೊಂದರೆಗೊಳಗಾಗಿದ್ದಾರೆ. ಬದುಕು ಕಳೆದುಕೊಂಡು ನಿರ್ವಸಿತರಾಗಿದ್ದಾರೆ.ಕೆಲವು ಯೋಜನೆಗಳಿಂದ ಸಂತ್ರಸ್ತರಾದವರಿಗೆ ಈಗಲೂ ಸರಿಯಾದ ಪರಿಹಾರ ಪುನರ್ವಸತಿಗಳು ಸಿಕ್ಕಿಲ್ಲ. ವಸಾಹತುಶಾಹಿ ಕಾಲದಿಂದಲೂ ಅರಣ್ಯ ಸಂಪನ್ಮೂಲಗಳಮೇಲಿನ ಹಿಡಿತಕ್ಕಾಗಿ ಸ್ಥಳೀಯ ಜನರನ್ನು ಕಾಡಿನಿಂದ ಪ್ರತ್ಯೇಕಿಸುವ ಪ್ರಯತ್ನಗಳು ನಡೆಯುತ್ತಲೇ ಬಂದಿವೆ. ಅರಣ್ಯ ಮತ್ತು ಪರಿಸರ ಸಂರಕ್ಷಣೆಯ ಪ್ರಯತ್ನಗಳು ಆರಂಭವಾದ ನಂತರವೂ ಸ್ಥಳೀಯ ಜನರನ್ನು ಕಾಡಿನ ಶತ್ರುಗಳು ಎಂಬಂತೆ ನೋಡಲಾಗುತ್ತಿದೆ. ಸ್ಥಳೀಯ ಜನರನ್ನು ಹೊರಗಿಟ್ಟು ಪರಿಸರ ಸಂರಕ್ಷಣಾ ಯೋಜನೆಗಳನ್ನು ರೂಪಿಸಲಾಗುತ್ತಿದೆ.
ಭಾರತ ಕಂಡ ಅಪ್ರತಿಮ ಪರಿಸರ ವಿಜ್ಞಾನಿ ಮಾಧವ ಗಾಡ್ಗೀಳರು ಪರಿಸರ ಸಂರಕ್ಷಣೆ ಯ ಬಗೆಗೆ ಭಿನ್ನ ದೃಷ್ಟಿಕೋನ ಹೊಂದಿದ್ದರು. ಪರಿಸರ ಸಂರಕ್ಷಣಾ ಯೋಜನೆಗಳಲ್ಲಿ ಜನರನ್ನು ಒಳಗೊಳ್ಳಬೇಕೆಂದು ಪ್ರತಿಪಾದಿಸುತ್ತಿದ್ದರು. ಅವರ ಅಧ್ಯಕ್ಷತೆಯ ಸಮಿತಿಯು ಸಲ್ಲಿಸಿರುವ ವರದಿಯಲ್ಲಿ ಜನರನ್ನು ಒಳಗೊಳ್ಳುವ ಹಲವಾರು ಸಲಹೆಗಳು ಇದ್ದವು. ಅವರ ವರದಿಯು ಅಂಗೀಕಾರವಾಗಲಿಲ್ಲ. ಬಹುಷಃ ಸಾಂಪ್ರದಾಯಿಕ ಸಂರಕ್ಷಣಾವಾದಿಗಳ ವಿರೋಧವೂ ಅವರ ವರದಿಗೆ ಇದ್ದಿರಬಹುದು. ನಂತರ ಪಶ್ಚಿಮಘಟ್ಟಗಳ ಸೂಕ್ಷ್ಮ ಪ್ರದೇಶ ಘೋಷಣೆಯೇ ಪ್ರಾಮುಖ್ಯತೆ ಪಡೆದು ಗಾಡ್ಗೀಳರ ಜನರನ್ನು ಒಳಗೊಳ್ಳುವ ಸಲಹೆಗಳು ಹಿನ್ನಲೆಗೆ ಸರಿದಿವೆ. ಅರಣ್ಯ ಸಂರಕ್ಷಣೆಯ ಜವಾಬ್ದಾರಿ ಹೊತ್ತಿರುವ ಅರಣ್ಯ ಇಲಾಖೆ ಮತ್ತು ಸ್ಥಳೀಯ ಜನರ ನಡುವೆ ಸಂಘರ್ಷ ಹೆಚ್ಚಾಗುತ್ತಲೇ ಇದೆ. ಗಾಡ್ಗೀಳ್ ವರದಿ ಅಂಗೀಕಾರವಾಗದಿದ್ದರೂ ಪರಿಸರ ಸಂರಕ್ಷಣೆಯಲ್ಲಿ ಅವರ ದೃಷ್ಟಿಕೋನ ಮತ್ತು ಸಲಹೆಗಳನ್ನು ಅಳವಡಿಸಿಕೊಂಡಿದ್ದರೆ ಸಂಘರ್ಷ ಕಡಿಮೆಮಾಡಲು ಮತ್ತು ಸಂರಕ್ಷಣೆಯನ್ನು ಪರಿಣಾಮಕಾರಿಯಾಗಿಸಲು ಸಾದ್ಯವಿತ್ತು. ಆದರೆ ಹಾಗಾಗುತ್ತಿಲ್ಲ. ಅರಣ್ಯ ಇಲಾಖೆ ಮತ್ತು ನೀತಿನಿರೂಪಣೆಯಲ್ಲಿ ಪಾತ್ರ ವಹಿಸುವ ಸಂರಕ್ಷಣಾ ಕ್ಷೇತ್ರದ ತಜ್ಞರು ಈಗಲೂ ಜನರನ್ನು ಹೊರಗಿಡುವ ಸಂರಕ್ಷಣಾ ನೀತಿಯಲ್ಲೇ ನಂಬಿಕೆ ಇಟ್ಟಿದ್ದಾರೆ.

Screenshot 2026 08 09 11 51 34 38 680d03679600f7af0b4c700c6b270fe7

ಈಗ ಕೇಂದ್ರ ಪರಿಸರ,ಅರಣ್ಯ ಮತ್ತು ಹವಾಗುಣ ಬದಲಾವಣೆ ಸಚಿವಾಲಯ ಹೊರಡಿಸಿರುವ ಅಧಿಸೂಚನೆಯು ಸೂಕ್ಷ್ಮ ಪ್ರದೇಶಗಳನ್ನು ಗುರುತಿಸುತ್ತದೆ ಮತ್ತು ಸೂಕ್ಷ್ಮ ಪ್ರದೇಶದಲ್ಲಿ ಪರಿಸರಕ್ಕೆ ಮಾರಕವಾದ ಹಲವು ಚಟುವಟಿಕೆಗಳನ್ನು ನಿಷೇಧಿಸುತ್ತದೆ. ಅದು ಕೃಷಿ ಚಟುವಟಿಕೆ ಮತ್ತು ಜನರ ದೈನಂದಿನ ಜೀವನದ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಪರಿಸರವಾದಿಗಳು ಪ್ರತಿಪಾದಿಸುತ್ತಿದ್ದಾರೆ. ಸೂಕ್ಷ್ಮ ಪ್ರದೇಶವೆಂದು ಗುರುತಿಸಲ್ಪಡುವ ಜಾಗಗಳಲ್ಲಿ ಹಲವಾರು ದಶಕಗಳಿಂದ ಕೃಷಿ ಮಾಡುತ್ತಿರುವ ಸಾವಿರಾರು ರೈತ ಕುಟುಂಬಗಳಿಗೆ ಹಕ್ಕುಪತ್ರ ಸಿಕ್ಕಿಲ್ಲ. ವಾಸವಾಗಿರುವ ಮನೆಗಳಿಗೂ ಹಕ್ಕುಪತ್ರವಿಲ್ಲ. ಅದಕ್ಕೆ ಕಠಿಣ ಅರಣ್ಯ ಕಾನೂನುಗಳು, ಸುಪ್ರೀಂ ಕೋರ್ಟ್ ಆದೇಶಗಳು, ಅರಣ್ಯ ಮತ್ತು ಕಂದಾಯ ಇಲಾಖೆ ನಡುವಿನ ಗೊಂದಲಗಳು ಹೀಗೆ ಹಲವಾರು ಕಾರಣಗಳಿವೆ. ಅರ್ಜಿ ನಮೂನೆ 50,53, 57 ಮತ್ತು ಮನೆಗಳಿಗಾಗಿ 94c ಯಲ್ಲಿ ಅರ್ಜಿ ಸಲ್ಲಿಸಿ ಮಂಜೂರಾತಿಗಾಗಿ ಕಾದಿರುವ ಕುಟುಂಬಗಳು ಸೂಕ್ಷ್ಮ ಪ್ರದೇಶ ಘೋಷಣೆಯಿಂದ ಭೂಮಿ ಮತ್ತು ಮನೆಯ ಮೇಲಿನ ತಮ್ಮ ಹಕ್ಕು ದೊರೆಯುವುದಿಲ್ಲವೆಂಬ ಆತಂಕದಲ್ಲಿವೆ. ಅಭಿವೃದ್ಧಿ ಯೋಜನೆಗಳಿಂದ ಸಂತ್ರಸ್ತರಾಗಿ ಮತ್ತೆ ಬದುಕು ಕಟ್ಟಿಕೊಂಡಿರುವ ಹಲವಾರು ಕುಟುಂಬಗಳೂ ಇವೆ. ಇದಕ್ಕೆ ಸ್ಪಷ್ಟ ಉತ್ತರ ದೊರೆಯುತ್ತಿಲ್ಲ. ಈಗಾಗಲೇ ಅರಣ್ಯ ಇಲಾಖೆ ಹಳ್ಳಿಗಳ ರಸ್ತೆ ದುರಸ್ತಿ ವಿದ್ಯುತ್ ಲೈನ್ ಮುಂತಾದ ಕೆಲಸಗಳಿಗೆ ಆಕ್ಷೇಪಣೆ ಮಾಡುತ್ತಿರುತ್ತದೆ. ಅಂತಹ ಸಮಸ್ಯೆಗಳನ್ನು ಕಾನೂನಾತ್ಮಕವಾಗಿ ಸರಿಪಡಿಸುತ್ತಿಲ್ಲ. ಜನಪ್ರತಿನಿದಿಗಳು ಮದ್ಯಪ್ರವೇಶಿಸಿ ಹೊಂದಾಣಿಕೆ ಮೂಲಕ ನಿರ್ವಹಿಸಲಾಗುತ್ತಿದೆ. ಸೂಕ್ಷ್ಮ ಪ್ರದೇಶವೆಂದು ಘೋಷಣೆಯಾದಲ್ಲಿ ಈ ಕಾಮಗಾರಿಗಳಿಗೆ ತೊಂದರೆಯಾಗಲಿದೆ.

ಹವಾಗುಣ ಬದಲಾವಣೆಯ ಪರಿಣಾಮದಿಂದಾಗಿ ಈಗಾಗಲೇ ಆ ಪ್ರದೇಶದ ಕೃಷಿ ಸಂಕಷ್ಟದಲ್ಲಿದೆ. ಸೂಕ್ಷ್ಮ ಪ್ರದೇಶ ಘೋಷಣೆ ಕೃಷಿಯಲ್ಲಿ ಬಳಸುವ ರಾಸಾಯನಿಕಗಳ ಮೇಲೆ ನಿಯಂತ್ರಣ ಹೇರುವುದರಿಂದ ಕೃಷಿ ಮಾಡುವುದೇ ದುಸ್ತರವಾಗಲಿದೆ ಎಂಬುದು ಸ್ಥಳೀಯರ ಆತಂಕವಾಗಿದೆ. ಸೂಕ್ಷ್ಮ ಪ್ರದೇಶ ಘೋಷಣೆಯಿಂದ ತಮ್ಮ ಬದುಕು ನಾಶವಾಗಬುದೆಂಬ ಬೀತಿಯಲ್ಲಿರುವ ಸ್ಥಳೀಯ ರೈತರು ,ಕೃಷಿ ಕಾರ್ಮಿಕರ ಅದರಲ್ಲೂ ಮುಖ್ಯವಾಗಿ ಜಮೀನಿಗೆ ಮನೆಗೆ ಹಕ್ಕುಪತ್ರವಿಲ್ಲದ ಜನರ ಆತಂಕವನ್ನು ಪರಿಹರಿಸುವುದು ಸರ್ಕಾರಗಳ ಜವಾಬ್ದಾರಿಯಾಗಿದೆ. ಕಾನೂನಿನ ತೊಡಕುಗಳನ್ನು ನಿವಾರಿಸಿ, ಸಗುವಳಿ ಮಾಡಿರುವ ಭೂಮಿಗೆ ವಾಸಿಸುತ್ತಿರುವ ಮನೆಗೆ ಹಕ್ಕುಪತ್ರವಿಲ್ಲದ ಎಲ್ಲಾ ಅರ್ಹರನ್ನು ಗುರುತಿಸಿ ಹಕ್ಕುಪತ್ರ ನೀಡಬೇಕಿದೆ. ಪರಿಸರ ಸಂರಕ್ಷಣಾ ಯೋಜನೆಗಳಲ್ಲಿ ಜನರನ್ನು ಒಳಗೊಳ್ಳಲು, ಪರಿಹಾರಗಳನ್ನು ಒದಗಿಸಲು ದಾಖಲೆಗಳು ಮೂಲಭೂತ ಅಗತ್ಯ.

ಪಶ್ಚಿಮಘಟ್ಟ ಸೂಕ್ಷ್ಮ ಪ್ರದೇಶಗಳಲ್ಲಿ ಪರಿಸರನಾಶ ಮಾಡುವ ದೊಡ್ಡ ಯೋಜನೆಗಳು ಜಾರಿಯಾಗದಂತೆ ನಿಯಂತ್ರಿಸಲು ಸೂಕ್ಷ್ಮ ಪ್ರದೇಶ ಘೋಷಣೆಯ ಅಗತ್ಯವಿದೆ ಎಂಬುದು ಪರಿಸರವಾದಿಗಳ ಅಭಿಪ್ರಾಯ. ಆದರೆ ಈಗ ಇರುವ ಅರಣ್ಯ ಸಂರಕ್ಷಣಾ ಕಾನೂನುಗಳ ಮೂಲಕವೇ ಪರಿಸರನಾಶದ ಯೋಜನೆಗಳನ್ನು ತಡೆಯಲು ಸಾದ್ಯವಿದೆ ಅದಕ್ಕೆ ಬೇಕಿರುವುದು ಇನ್ನಷ್ಟು ಕಠಿಣ ಕಾನೂನುಗಳಲ್ಲ ರಾಜಕೀಯ ಇಚ್ಚಾಶಕ್ತಿ ಎಂಬ ಅಭಿಪ್ರಾಯವೂ ಇದೆ.ಅಲ್ಲದೇ ರಾಜಕೀಯ ನಾಯಕತ್ವ ಇಚ್ಚಿಸಿದಲ್ಲಿ ಸಂರಕ್ಷಿತ ಪ್ರದೇಶಗಳಲ್ಲಿಯೂ ಕಾನೂನುಗಳನ್ನು ಉಲ್ಲಂಗಿಸಿ ಅಥವಾ ಒಳದಾರಿಗಳನ್ನು ಹುಡುಕಿ ಪರಿಸರನಾಶದ ಯೋಜನೆಗಳನ್ನು ಜಾರಿ ಮಾಡಿರುವ ಉದಾಹರಣೆಗಳೂ ಇವೆ.

ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು | ಆ. 6ರಿಂದ 9ವರೆಗೆ  ವಿದ್ಯುತ್ ವ್ಯತ್ಯಾಯ 

ಪಶ್ಚಿಮಘಟ್ಟಗಳ ಪರಿಸರ ರಕ್ಷಣೆ ಆಗಬೇಕಿದೆ. ಅಂತೆಯೇ ಅಲ್ಲಿಯೇ ಬದುಕು ಕಟ್ಟಿಕೊಂಡಿರುವ ಜನರ ಬದುಕೂ ಉಳಿಯಬೇಕಿದೆ. ಅದಕ್ಕಾಗಿ ಪರಿಸರ ಸಂರಕ್ಷಣೆ ಯಲ್ಲಿರುವ ನಿಜವಾದ ತೊಡಕುಗಳನ್ನು ಗುರುತಿಸಿ, ಜನರನ್ನು ಹೊರಗಿಡುವ ನೀತಿಯನ್ನು ಬಿಟ್ಟು ಜನರನ್ನು ಒಳಗೊಳ್ಳುವ, ಪರಿಸರ ಸಂರಕ್ಷಣೆಯ ಲಾಭ ಸ್ಥಳೀಯ ಜನರಿಗೆ ದೊರಕುವ, ಸಮಗ್ರ ಪರಿಸರ ಸಂರಕ್ಷಣಾ ನೀತಿ ಜಾರಿಮಾಡಬೇಕಿದೆ. ಆ ಗುರಿಯ ಸಾದನೆಗಾಗಿ ಅರಣ್ಯ ಇಲಾಖೆ, ಸ್ಥಳೀಯ ಜನರು, ಜನಪರ ಸಂಘಟನೆಗಳು ಮತ್ತು ಪರಿಸರ ಸಂಘಟನೆಗಳು ಒಟ್ಟಾಗಿ ಕೆಲಸ ಮಾಡಬೇಕಿದೆ. ಜನರ ಬದುಕಿನ ಆದಾರವಾದ ಕೃಷಿ ಮತ್ತು ಪರಿಸರ ಸಂರಕ್ಷಣೆ ವಿರುದ್ಧ ಸಂಗತಿಗಳಲ್ಲ ಪರಸ್ಪರ ಪೂರಕ ಸಂಗತಿಗಳು ಎಂಬ ತಿಳಿವಿನೊಂದಿಗೆ ಮುಂದುವರಿಯಬೇಕಿದೆ. ರಾಜ್ಯ ಸರ್ಕಾರವು ಸೂಕ್ಷ್ಮ ಪ್ರದೇಶ ಘೋಷಣೆಗೆ ಆಕ್ಷೇಪಣೆ ಸಲ್ಲಿಸುವುದಷ್ಟೇ ಅಲ್ಲದೇ ಸ್ಥಳೀಯ ಜನಸಮುದಾಯಗಳನ್ನು ಒಳಗೊಳ್ಳುವ ಪರಿಸರ ಸಂರಕ್ಷಣಾ ನೀತಿ ಜಾರಿಗೊಳಿಸುವಂತೆ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಗುಣ ಬದಲಾವಣೆ ಸಚಿವಾಲಯ ಮತ್ತು ಕೇಂದ್ರ ಸರ್ಕಾರವನ್ನು ಒತ್ತಾಯಿಸಬೇಕಿದೆ.

ಗುರುಮೂರ್ತಿ ಜೋಗಿಬೈಲು.
ಶೃಂಗೇರಿ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕಾರವಾರ | ಪೌರಕಾರ್ಮಿಕರ ಸೇವೆ ಶ್ಲಾಘನೀಯ: ಪೌರಾಯುಕ್ತ ಜಗದೀಶ್ ಹುಲಗಜ್ಜೆ

ಕಾರವಾರ: ನಗರದ ಸ್ವಚ್ಛತೆ ಹಾಗೂ ಸಾರ್ವಜನಿಕರ ಆರೋಗ್ಯ ಕಾಪಾಡುವಲ್ಲಿ ಪೌರಕಾರ್ಮಿಕರ ಸೇವೆ...

ಗದಗ |  ಹೊಳೆಆಲೂರ-ಇಟಗಿ ಗ್ರಾಮಕ್ಕೆ ಬಸ್ ಚಾಲನೆ

ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ರೋಣ ವಿಭಾಗದ ಘಟಕದಿಂದ ಹೊಳೆಆಲೂರ-ಇಟಗಿ...

ಗದಗ | ಸಹಕಾರಿ ಸಂಘದ ವಾರ್ಷಿಕ ಸಭೆ

ಗದಗ ಪಟ್ಟಣದಲ್ಲಿ ಕಳೆದ ೨೦ ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಸರಕಾರಿ ಪ್ರೌಢ ಶಾಲಾ...