ಚಿತ್ರದುರ್ಗ | ದೇಗುಲದಲ್ಲಿ ವೈದಿಕ, ಪುರೋಹಿತ ಶಾಹಿ ಆಚರಣೆ; ಸಿಡಿದೆದ್ದ ಮ್ಯಾಸ ನಾಯಕ ಬುಡಕಟ್ಟು ಸಂರಕ್ಷಣ ಸಮಿತಿ.

Date:

ಗಾದ್ರಿಪಾಲನಾಯಕ ಸ್ವಾಮಿ ಮ್ಯಾಸ ನಾಯಕರ ಆರಾಧ್ಯ ದೈವವಾಗಿದ್ದು, ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಹೋಬಳಿಯ ರಾಮಸಾಗರ ಗ್ರಾಮದ ಗಾದ್ರಿಪಾಲನಾಯಕ ದೇವಸ್ಥಾನದಲ್ಲಿ ಮಾರ್ಚ್ 23 ರಿಂದ 25 ರವರೆಗೆ ಹಮ್ಮಿಕೊಂಡಿರುವ ವೈದಿಕ, ಪುರೋಹಿತ ಶಾಹಿ ಕಾರ್ಯಕ್ರಮಗಳನ್ನು ರದ್ದು ಪಡಿಸಬೇಕು. ಮ್ಯಾಸನಾಯಕ ಬುಡಕಟ್ಟು ಜನಾಂಗದ ಧಾರ್ಮಿಕ ಆಚರಣೆಗಳನ್ನು ಉಳಿಸಿ, ಪಾಲಿಸಬೇಕು’ ಎಂದು ಮ್ಯಾಸ ನಾಯಕ ಬುಡಕಟ್ಟು ಸಂಸ್ಕೃತಿ ಸಂರಕ್ಷಣಾ ಸಮಿತಿ ಒತ್ತಾಯಿಸಿದೆ.

- Advertisement -

ಚಳ್ಳಕೆರೆ ತಾಲೂಕು ತಹಶೀಲ್ದಾರ್ ರೆಹಾನ್ ಪಾಷಾ ಅವರಿಗೆ ಮನವಿ ಸಲ್ಲಿಸಿ, ‘ನಾಯಕನಹಟ್ಟಿ ಹೋಬಳಿಯ ರಾಮಸಾಗರ ಗ್ರಾಮದ ಗಾದ್ರಿಪಾಲನಾಯಕ ಸ್ವಾಮಿಯ ದೇಗುಲದಲ್ಲಿ ಮಾರ್ಚ್ 23ರಿಂದ 25ರ ವರೆಗೆ ವೈದಿಕ ಮತ್ತು ಪುರೋಹಿತ ಶಾಹಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಇವುಗಳಿಗೂ ಮ್ಯಾಸ ನಾಯಕ ಸಂಸ್ಕೃತಿಗೆ ಸಂಬಂಧವಿಲ್ಲ. ಕೂಡಲೇ ಈ ಆಚರಣೆಗಳನ್ನು ರದ್ದುಪಡಿಸಬೇಕು. ಮ್ಯಾಸ ನಾಯಕ ಬುಡಕಟ್ಟು ಜನಾಂಗ ಉಳಿಸಿಕೊಂಡು ಬಂದಿರುವ ಧಾರ್ಮಿಕ ಪರಂಪರೆ, ಸಂಸ್ಕೃತಿಯನ್ನು ಉಳಿಸಿ ಮ್ಯಾಸ ನಾಯಕ ಬುಡಕಟ್ಟು ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗದಂತೆ ಕ್ರಮ ಕೈಗೊಳ್ಳಬೇಕು’ ಎಂದು  ಮ್ಯಾಸಬೇಡ(ಮ್ಯಾಸ ನಾಯಕ) ಬುಡಕಟ್ಟು ಸಂಸ್ಕೃತಿ ಸಂರಕ್ಷಣಾ ಸಮಿತಿಯ ಮುಖಂಡರು ಒತ್ತಾಯಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕತೆ | ಪೌರಶ್ರೀ – ಐಸಾಕ್‌ ಅಸಿಮೋವ್

ಪೌರಶ್ರೀ ಓದುವುದಕ್ಕೂ ಮುನ್ನ- ಒಂದು ಪುಟ್ಟ ಟಿಪ್ಪಣಿ ಈ ಸಹಸ್ರಮಾನದ ಅತ್ಯದ್ಭುತ ವೈಜ್ಞಾನಿಕ ಲೇಖಕ ರಲ್ಲಿ ಒಬ್ಬರು ಅಮೆರಿಕ ಬೋಸ್ಟನ್ ವಿಶ್ವ ವಿದ್ಯಾಲಯ ದಲ್ಲಿ ರಸಾಯನ ಶಾಸ್ತ್ರದ ಪ್ರಾಧ್ಯಾಪಕರಾಗಿದ್ದ ಐಸಾಕ್ ಅಸಿಮೋವ್. ವಿಶ್ವ...

ಶಿವಮೊಗ್ಗ | ದಾಖಲೆಗಳಲ್ಲಿ ಪೂರ್ಣ, ವಾಸ್ತವದಲ್ಲಿ ನೆನೆಗುದಿಗೆ...

ಶಿವಮೊಗ್ಗ ತಾಲೂಕಿನ ಕಾಚಿನಕಟ್ಟೆ ಗ್ರಾಮದಲ್ಲಿ ಸಮುದಾಯ ಭವನದ ಅಪೂರ್ಣ ಕಾಮಗಾರಿ ಆದರೆ ಶಿವಮೊಗ್ಗ ನಿರ್ಮಿತಿ ಕೇಂದ್ರ ದಾಖಲೆ ಪ್ರಕಾರ ಕಾಮಗಾರಿ ಸಂಪೂರ್ಣವಾಗಿದೆ ಎಂದು ದಾಖಲೆಗಳಲ್ಲಿ. ಈ ಸಂಬಂಧ ಲಂಚಮುಕ್ತ ಕರ್ನಾಟಕ ಮತ್ತು KRS ಪಕ್ಷದ...

ವಿಜಯಪುರ | ಹೆಚ್ಚುತ್ತಿರುವ ಬೀದಿ ನಾಯಿಗಳ ಹಾವಳಿ: 9...

ಬೀದಿ ನಾಯಿ ನಿಯಂತ್ರಣಕ್ಕೆ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಿ, ಬೀದಿ ನಾಯಿಗಳ ಹಾವಳಿ ಹೆಚ್ಚಿರುವ ಪ್ರದೇಶಗಳನ್ನು ಗುರುತಿಸಿ ನಿಯಂತ್ರಣ ಕ್ರಮ ಕೈಗೊಳ್ಳಬೇಕು. ಶಾಲೆ, ಆಸ್ಪತ್ರೆ,...

ಈ ವೇಳೆ ಮಾತನಾಡಿದ ಸಮಿತಿಯ ಅಧ್ಯಕ್ಷ ಡಾ. ಗೆರೆಗಲ್ ಪಾಪಯ್ಯ “ಕರ್ನಾಟಕದ ಬಳ್ಳಾರಿ, ವಿಜಯನಗರ, ಚಿತ್ರದುರ್ಗ, ದಾವಣಗೆರೆ ಜಿಲ್ಲೆಗಳಲ್ಲಿ ಮ್ಯಾಸ ಬೇಡ ಬುಡಕಟ್ಟು ಜನರು ಹೆಚ್ಚಾಗಿ ನೆಲೆಸಿದ್ದಾರೆ. ಶ್ರೀ ಗಾದ್ರಿಪಾಲನಾಯಕ ದೇವರು ಮ್ಯಾಸ ನಾಯಕರ ಆರಾಧ್ಯ ದೈವ.‌  ಮ್ಯಾಸ ನಾಯಕರ ಸಂಸ್ಕೃತಿಯು ವಿಶೇಷವಾಗಿ ದೇವರ ಎತ್ತುಗಳೆಂದು ಹಸು ಮತ್ತು ಹೋರಿ ಕರುಗಳನ್ನು ಪೂಜಿಸುತ್ತ ಬಂದಿದೆ. ಇತ್ತೀಚಿನ ದಿನಗಳಲ್ಲಿ ಪುರೋಹಿತಶಾಹಿ ವರ್ಗ ನಮ್ಮ ಹಟ್ಟಿಗಳಿಗೆ ಪ್ರವೇಶಿಸಿ ಧಾರ್ಮಿಕ ಆಕ್ರಮಣ ಮಾಡಿ ವೈದಿಕ ಮತ್ತು ಪುರೋಹಿತಶಾಹಿ ಧರ್ಮದ ಆಚರಣೆಗಳನ್ನು ಹೇರುವ ಹುನ್ನಾರ ನಡೆಸಿದ್ದಾರೆ” ಎಂದು ಕಿಡಿಕಾರಿದರು.

1001709609
ಮ್ಯಾಸನಾಯಕ ಬುಡಕಟ್ಟು ಸಂರಕ್ಷಣ ಸಮಿತಿಯಿಂದ ತಹಶೀಲ್ದಾರ್ ಗೆ ಮನವಿ

“ಮ್ಯಾಸ ನಾಯಕ ಸಂಸ್ಕೃತಿಯು ತನ್ನದೇ ಆದ ವಿಶಿಷ್ಟವಾದ ನಂಬಿಕೆ ಆಚರಣೆ, ಧಾರ್ಮಿಕ ವಿಧಿ, ವಿಧಾನಗಳನ್ನು ಇಂದಿಗೂ ಜೀವಂತವಾಗಿ ಇಟ್ಟುಕೊಂಡಿದೆ. ಆದರೆ ವೈದಿಕರು ಯಜ್ಞ ಯಾಗಾದಿಗಳನ್ನು ನಮ್ಮ ಮೇಲೆ ಹೇರುವ ಮೂಲಕ ನಮ್ಮ ಸಂಸ್ಕೃತಿಗೆ ದಕ್ಕೆ ತರುತ್ತಿದ್ದಾರೆ.  ಈಗ ಹಮ್ಮಿಕೊಂಡಿರುವ ಕಾರ್ಯಕ್ರಮದಿಂದಾಗಿ ದೇವರ ಪಾವಿತ್ರತೆಯನ್ನು ಕೆಡಿಸಿ, ಬುಡಕಟ್ಟು ಜನರ ನಂಬಿಕೆ, ಶ್ರದ್ಧೆ, ಆರಾಧನೆಗೆ ಚ್ಯುತಿ ತರುವಂತಿದೆ. ಇದು ಧಾರ್ಮಿಕ ಮತ್ತು ಸಾಂಸ್ಕೃತಿಕ ಸ್ವಾತಂತ್ರ್ಯದ ಮೂಲಭೂತ ಹಕ್ಕಿನ ಉಲ್ಲಂಘನೆಯಾಗಿದೆ” ಎಂದು ಆರೋಪಿಸಿದರು.

“ಮ್ಯಾಸ ನಾಯಕ ಬುಡಕಟ್ಟು ಜನಾಂಗದಲ್ಲಿ ಹೊರಗಿನಿಂದ ಪುರೋಹಿತರನ್ನು ಕರೆಸಿ ದೇವರ ಪೂಜೆ ಮಾಡುವ ಪದ್ಧತಿ ಇರುವುದಿಲ್ಲ. ಆದ್ದರಿಂದ ಮೂರು ದಿನಗಳು ಆಯೋಜಿಸಿರುವ ವೈದಿಕ ಮತ್ತು ಪುರೋಹಿತಶಾಹಿ ಧಾರ್ಮಿಕ ಆಚರಣೆಯಲ್ಲಿ ಜರುಗುವ ಕಾರ್ಯಕ್ರಮಗಳನ್ನು ನಿಲ್ಲಿಸಿ, ನಮ್ಮ ಬುಡಕಟ್ಟು ಸಮುದಾಯದ ಧಾರ್ಮಿಕ ಸಂಪ್ರದಾಯಗಳನ್ನು ಆಚರಿಸುವ ಮೂಲಕ ಬುಡಕಟ್ಟು ಸಂಸ್ಕೃತಿ ಕಾಪಾಡಬೇಕು” ಎಂದು ಮನವಿ ಮಾಡಿದ್ದಾರೆ.

ಈ ಬಗ್ಗೆ ಈದಿನ ಡಾಟ್ ಕಾಮ್ ನೊಂದಿಗೆ ಮಾತನಾಡಿದ ವಕೀಲ ಬೋರ ನಾಯಕ,”ಮಾರ್ಚ್ 23 ರಿಂದ 25 ರವರೆಗೆ ದೇಗುಲದಲ್ಲಿ ಕಳಶ ಸ್ಥಾಪನೆ ಕಾರ್ಯಕ್ರಮವಿದ್ದು ದೇವರ ಎತ್ತುಗಳ ಮೆರವಣಿಗೆ, ಮಣೇವು ಮುಂತಾದ ಬಡಕಟ್ಟು ಸಂಸ್ಕೃತಿಯ  ಕಾರ್ಯಕ್ರಮಗಳಿವೆ.‌ ಆದರೆ ಹಿಂದಿನಿಂದಲೂ ನಡೆದುಕೊಂಡ ಬಂದ ಪದ್ಧತಿಯಂತೆ ಮ್ಯಾಸನಾಯಕರಲ್ಲಿ ಕಿಲಾರರು ಸೇರಿದಂತೆ ಏಳೆಂಟು ಬೆಡಗುಗಳಿದ್ದು, ಇವರು ವರ್ಷಪೂರ್ತಿ ದೇವರ ಸೇವೆ, ಸಂಸ್ಕೃತಿಯ ಕಾಯಕದಲ್ಲಿ ತೊಡಗಿರುತ್ತಾರೆ. ಈಗ ದಿಢೀರನೆ ಕಳಶ ಸ್ಥಾಪನೆ ಕಾರ್ಯಕ್ರಮದಲ್ಲಿ ವೈದಿಕ ಪರಂಪರೆಯ ಹೊರಗಿನವರನ್ನು ಕರೆಸಿ ಯಾಗ ಯಜ್ಞಗಳನ್ನು ನಡೆಸಿ ಅವರ ಕೈಯಿಂದ ಕಳಶ ಸ್ಥಾಪನೆ ಮಾಡಿಸುವುದು, ಮ್ಯಾಸನಾಯಕ ಬುಡಕಟ್ಟು ಸಂಸ್ಕೃತಿಯ ಮೇಲೆ ಆಕ್ರಮಣ ಮಾಡಿ ಬೇರೆ ಸಂಸ್ಕೃತಿಯನ್ನು ಹೇರಿದಂತಾಗುತ್ತದೆ. ಇದನ್ನು ನಿಲ್ಲಿಸಿ, ಮ್ಯಾಸ ನಾಯಕ ಸಂಸ್ಕೃತಿಯವರೇ ಕಳಶ ಸ್ಥಾಪನೆ ಸೇರಿದಂತೆ ಎಲ್ಲವನ್ನು ನೆರವೇರಿಸಬೇಕು” ಎಂದು ಒತ್ತಾಯಿಸಿದರು.

ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಕೆಲಸದ ವೇಳೆ ನರೇಗಾ ಕಾರ್ಮಿಕ ಸಾವು, ದಿನ ಕಳೆದರೂ ಗಮನಹರಿಸದ ಅಧಿಕಾರಿಗಳು.

ತಹಶೀಲ್ದಾರರಿಗೆ ಮನವಿ ಸಲ್ಲಿಸುವ ವೇಳೆ ವಕೀಲ ಬಿ ಬೋರನಾಯಕ, ಓಬಣ್ಣ, ಪ್ರಹ್ಲಾದ್, ಮಂಜುನಾಥ ಸೇರಿದಂತೆ ಹಲವರು ಹಾಜರಿದ್ದರು.

IMG 20250205 WA0034
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿತ್ರದುರ್ಗ | ನೀರು ಮತ್ತು ನೈರ್ಮಲ್ಯ ವಿಭಾಗದ 80 ಕಾಮಗಾರಿಗಳಲ್ಲಿ 28 ಕಡತ ಮಾತ್ರ ಲಭ್ಯ!

ಚಿತ್ರದುರ್ಗ ಜಿಲ್ಲೆಗೆ 2023-24 ಮತ್ತು 2024-25ನೇ ಸಾಲಿನಲ್ಲಿ ಕುಡಿಯುವ ನೀರು ಹಾಗೂ...

ಚಿತ್ರದುರ್ಗ |ಮಾರಾಟಕ್ಕಿರುವ ಎತ್ತುಗಳನ್ನು ಕೊಳ್ಳುವವರು ದಿಕ್ಕಿಲ್ಲ; ರೈತರ ಪರದಾಟ

ಮಧ್ಯ ಕರ್ನಾಟಕದಲ್ಲಿ ಬರಗಾಲದ ಪರಿಸ್ಥಿತಿ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದೆ. ಚಿತ್ರದುರ್ಗ ಜಿಲ್ಲೆಯ...

ಹಿರಿಯ ಕಾದಂಬರಿಕಾರ್ತಿ ಸಿ.ಎನ್. ಮುಕ್ತಾ ನಿಧನ

ಪ್ರಸಿದ್ಧ ಕಾದಂಬರಿಕಾರ್ತಿ ಹಾಗೂ ಜನಪ್ರಿಯ ಲೇಖಕಿ ಸಿ.ಎನ್. ಮುಕ್ತಾ (77) ಅವರು...

ಹಿರಿಯೂರು | ಬೈ-ಎಲೆಕ್ಷನ್ ಪೈಪೋಟಿ: ಮೈತ್ರಿಕೂಟದಲ್ಲಿ ಟಿಕೆಟ್ ಕಸರತ್ತು!

ಸಚಿವ ಹಾಗೂ ಹಿರಿಯೂರು ಶಾಸಕ ಡಿ ಸುಧಾಕರ್ ಅವರ ನಿಧನದಿಂದ ಎದುರಾಗಿರುವ...