ಚಿತ್ರದುರ್ಗ | ಅಂಬೇಡ್ಕರ್ ಅವರನ್ನು ಬಹುರೂಪಿಯಾಗಿ ಅರ್ಥೈಸಿಕೊಳ್ಳಬೇಕು: ಕೋಟಿಗಾನಹಳ್ಳಿ ರಾಮಯ್ಯ

Date:

ಅಂಬೇಡ್ಕರ್ ಅವರ ಬದುಕು, ಹೋರಾಟ ಮತ್ತು ಚಿಂತನೆಗಳನ್ನು ವರ್ತಮಾನದ ಸಾಮಾಜಿಕ ಸವಾಲುಗಳ ಹಿನ್ನೆಲೆಯಲ್ಲಿ ಅರ್ಥೈಸಿಕೊಳ್ಳುವ ಅಗತ್ಯವಿದೆ. ಅವರನ್ನು ಏಕಶೀಲ ಆಕೃತಿಗೆ ಸೀಮಿತಗೊಳಿಸದೆ ಬಹುರೂಪಿಯಾಗಿ ನೋಡುವ ಜವಾಬ್ದಾರಿ ಪ್ರಜ್ಞಾವಂತ ಸಮಾಜದ ಮೇಲಿದೆ ಎಂದು ಹಿರಿಯ ಚಿಂತಕ, ಕವಿ ಹಾಗೂ ನಾಟಕಕಾರ ಕೋಟಿಗಾನಹಳ್ಳಿ ರಾಮಯ್ಯ ಅಭಿಪ್ರಾಯಪಟ್ಟರು.

- Advertisement -

ಚಿತ್ರದುರ್ಗ  ನಗರದ ಪತ್ರಿಕಾಭವನದ ಅಂಬೇಡ್ಕರ್ ಸಭಾಂಗಣದಲ್ಲಿ ಶ್ರೀನಿವಾಸರಾಜು ದೊಡ್ಡೇರಿ ಅವರು ಅನುವಾದಿಸಿರುವ, ಆಕಾಶ್ ಸಿಂಗ್ ರಾಥೋಡ್ ರಚನೆಯ ಡಾ. ಬಿ.ಆರ್. ಅಂಬೇಡ್ಕರ್ ಅವರ ಜೀವನ ಕಥನ ‘ಬಾಬಾ ಸಾಹೇಬ್’ ಕೃತಿ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಸಮಾನತೆಯ ಮರೆಯಲ್ಲಿ ಅಸಮಾನತೆಯ ನೆರಳು: ಹಸಿರು ಕನಸುಗಳ ಕಾಲಡಿಯಲ್ಲಿ...

ದೇಶದಲ್ಲಿ ಬಡತನ ಇಳಿಕೆಯಾಗುತ್ತಿದೆ, ಅಭಿವೃದ್ಧಿಯ ಅಂಕಿಅಂಶಗಳು ಏರುತ್ತಿವೆ. ಆದರೆ, ಆರ್ಥಿಕ ಪ್ರಗತಿಯ ನಡುವೆಯೂ ಶ್ರಮಜೀವಿಗಳ ಬದುಕಿನಲ್ಲಿ ಬಡತನ, ಜಾತಿ ತಾರತಮ್ಯ ಮತ್ತು ಅಸಮಾನತೆ ಏಕೆ ಮುಂದುವರಿದಿವೆ? ಅಭಿವೃದ್ಧಿಯ ಫಲ ಸಮಾಜದ ಕಟ್ಟಕಡೆಯ ಮನುಷ್ಯನಿಗೂ...

ಬಾಗಲಕೋಟೆ | ಸಾಕ್ಷರತೆಯಲಿ ಹಿಂದುಳಿದ ಜಿಲ್ಲೆ ʻಅಕ್ಷರ ಕ್ರಾಂತಿಗೆʼ...

ಮುಳುಗಡೆ ನಗರಿ ಬಾಗಲಕೋಟೆ ಜಿಲ್ಲೆ ಇಂದು ಕಬ್ಬಿನ ಬೆಲೆ ಹೋರಾಟದಲ್ಲಿ ಗೆಲುವು ಸಾಧಿಸಿ ಸಂಭ್ರಮಿಸುತ್ತಿದೆ. ಇದೇ ಸಂಭ್ರಮ ಶಿಕ್ಷಣ ಕ್ಷೇತ್ರದಲ್ಲಿಯೂ ಕಾಣಿಸಿಕೊಳ್ಳಬೇಕಿದೆ. ಆದರೆ, ಸಾಕ್ಷರತೆ, ಶಿಕ್ಷಕರ ಕೊರತೆ ಹಾಗೂ ಡಿಜಿಟಲ್ ಸೌಲಭ್ಯಗಳ ಅಭಾವ...

25ರ ಹರೆಯದಲ್ಲೇ ಬ್ರಿಟಿಷ್ ಸಾಮ್ರಾಜ್ಯಕ್ಕೆ ಸಿಂಹಸ್ವಪ್ನವಾದ ಆದಿವಾಸಿ ಕ್ರಾಂತಿಕಾರಿ...

ಕೇವಲ 25 ವರ್ಷಗಳ ಬದುಕಿನಲ್ಲಿ ಬ್ರಿಟಿಷ್ ಸಾಮ್ರಾಜ್ಯಶಾಹಿ ಆಡಳಿತಕ್ಕೆ ಸವಾಲು ಹಾಕಿ, ಸಾವಿರಾರು ಆದಿವಾಸಿಗಳನ್ನು ಸಂಘಟಿಸಿ, ಭೂಮಿಯ ಹಕ್ಕು ಮತ್ತು ಸ್ವಯಂ ಆಡಳಿತಕ್ಕಾಗಿ ಬೃಹತ್ ಚಳವಳಿಯನ್ನು ಕಟ್ಟಿದ ಬಿರ್ಸಾ ಮುಂಡಾ ಅವರು ಕೇವಲ...

ಕೃತಿಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ‘ಬಾಬಾ ಸಾಹೇಬ್’ ಅಮೂಲ್ಯವಾದ ಕನ್ನಡ ಅವತರಣಿಕೆಯಾಗಿದ್ದು, ವಿದ್ಯಾರ್ಥಿಗಳು ಈ ಕೃತಿಯನ್ನು ಪ್ರಜ್ಞಾಪೂರ್ವಕವಾಗಿ ಓದಬೇಕು. ಅಂಬೇಡ್ಕರ್ ಅವರನ್ನು ಕೇವಲ ಒಂದೇ ಆಯಾಮದಲ್ಲಿ ನೋಡುವ ಪ್ರವೃತ್ತಿಯಿಂದ ಹೊರಬಂದು ಅವರ ಬಹುಮುಖ ವ್ಯಕ್ತಿತ್ವವನ್ನು ಅರಿಯಬೇಕು. ಮುಂಬೈನಿಂದ ಲಂಡನ್‌ವರೆಗಿನ ಅವರ ಪಯಣ, ಹೋರಾಟಗಳು ಹಾಗೂ ಅವರು ಜಗತ್ತಿಗೆ ನೀಡಿದ ಕಾಣ್ಕೆಗಳನ್ನು ಈ ಕೃತಿ ಪರಿಚಯಿಸುತ್ತದೆ. ಅಂಬೇಡ್ಕರ್ ಅವರು ಪ್ರವಾದಿ ಮತ್ತು ವಿಮೋಚಕರಾಗಿ ರೂಪುಗೊಂಡ ಬಗೆಯನ್ನು ಕೃತಿಯಲ್ಲಿ ಕಾಣಬಹುದು ಎಂದರು.

ಚಿಂತಕ ರಾಜೇಂದ್ರ ಚೆನ್ನಿ ಮಾತನಾಡಿ, ಪ್ರಬಲ ಸಮುದಾಯಗಳು ಸಮಾಜದಲ್ಲಿ ತಮ್ಮ ಸುಸ್ಥಿತಿಯನ್ನು ಕಾಪಾಡಿಕೊಳ್ಳಲು ಬಯಸುತ್ತವೆ. ಇತಿಹಾಸದುದ್ದಕ್ಕೂ ಇದರ ಪರಿಣಾಮವಾಗಿ ಶೋಷಿತ ಸಮುದಾಯಗಳು ಅನ್ಯಾಯಕ್ಕೆ ಒಳಗಾಗಿವೆ. ಇಂತಹ ಸಂದರ್ಭದಲ್ಲಿ ಅಂಬೇಡ್ಕರ್ ಚಿಂತನೆಗಳು ನಿರಂತರವಾಗಿ ಬೆಳೆಯುವ ಮತ್ತು ಬದಲಾವಣೆಗೆ ಪ್ರೇರಣೆ ನೀಡುವ ಪ್ರಕ್ರಿಯೆಯಾಗಿವೆ. ಈ ಕೃತಿಯನ್ನು ಓದುವ ಪ್ರತಿಯೊಬ್ಬರೂ ತಾವು ಹೇಗೆ ಬದಲಾಗಬೇಕು, ಹೇಗೆ ಪ್ರಜ್ಞಾವಂತರಾಗಬೇಕು ಎಂಬುದನ್ನು ಆತ್ಮವಿಮರ್ಶೆ ಮಾಡಿಕೊಳ್ಳಬೇಕು ಎಂದು ಹೇಳಿದರು.

ಅಂಬೇಡ್ಕರ್ ಕುಟುಂಬದ ಮೂರು ತಲೆಮಾರುಗಳು ಶಿಕ್ಷಣಕ್ಕೆ ಮಹತ್ವ ನೀಡಿದ್ದವು. ಅದರ ಪರಿಣಾಮವಾಗಿಯೇ ಅವರು ತಮ್ಮ ಧ್ಯೇಯವಾಕ್ಯದಲ್ಲಿ ಮೊದಲಿಗೆ ‘ಶಿಕ್ಷಣ’ಕ್ಕೆ ಆದ್ಯತೆ ನೀಡಿದರು. ಸಮಾಜದಲ್ಲಿ ತಮಗೆ ಸ್ಥಾನವಿಲ್ಲ ಎಂಬ ನೋವನ್ನು ಅಂಬೇಡ್ಕರ್ ನಿರಂತರವಾಗಿ ಅನುಭವಿಸಿದ್ದರು. ಈ ನೋವಿನ ವಿರುದ್ಧ ಸಮಾನತೆಯ ಹೋರಾಟ ರೂಪಿಸಿದರು. ಶೋಷಿತ ಸಮುದಾಯದಿಂದ ಬಂದ ಅವರು ವಿಶ್ವಮಟ್ಟದ ಜ್ಞಾನ ಮತ್ತು ವಿದ್ವತ್ತನ್ನು ಗಳಿಸಿದ್ದು ಅವರ ಬಹುದೊಡ್ಡ ಸಾಧನೆ ಎಂದರು.

ಚವಡಾರ್ ಕೆರೆಯಲ್ಲಿ ನೀರು ಕುಡಿಯುವ ಹಕ್ಕಿಗಾಗಿ ನಡೆಸಿದ ಮಹಾಡ್ ಸತ್ಯಾಗ್ರಹವು ಸಾಮಾಜಿಕ ಅಸಮಾನತೆಯ ವಿರುದ್ಧದ ಹೋರಾಟಕ್ಕೆ ಮಹತ್ವದ ತಿರುವು ನೀಡಿತು. ಇದು ಕೇವಲ ನೀರಿನ ಹಕ್ಕಿನ ಹೋರಾಟವಾಗಿರದೆ, ದಲಿತರು ತಮ್ಮ ರಾಜಕೀಯ ಹಕ್ಕು ಮತ್ತು ಸಮಾನತೆಯನ್ನು ಪ್ರತಿಪಾದಿಸಿದ ಐತಿಹಾಸಿಕ ಘಟನೆಯಾಗಿದೆ. ದಲಿತರನ್ನು ಸಮಾಜದಿಂದ ಹೊರಗಿಟ್ಟವರು ಅವರ ಪರವಾಗಿ ಪ್ರತಿನಿಧಿಸುವುದಕ್ಕೆ ಅಂಬೇಡ್ಕರ್ ವಿರೋಧ ವ್ಯಕ್ತಪಡಿಸಿದ್ದರು. ದಲಿತರನ್ನು ದಲಿತರೇ ಪ್ರತಿನಿಧಿಸಬೇಕು ಎಂಬುದು ಅವರ ನಿಲುವಾಗಿತ್ತು ಎಂದು ವಿವರಿಸಿದರು.

ಅಂಬೇಡ್ಕರ್ ಕೇವಲ ಒಂದು ಜಾತಿಯ ನಾಯಕನಲ್ಲ, ಎಲ್ಲ ವರ್ಗಗಳ ಹಕ್ಕುಗಳಿಗಾಗಿ ಹೋರಾಡಿದ ನಾಯಕರಾಗಿದ್ದರು. ಇಂದು ಭಾರತ ಸೇರಿದಂತೆ ಜಗತ್ತಿನ ಹಲವು ರಾಷ್ಟ್ರಗಳಲ್ಲಿ ಮೂಲಭೂತವಾದ, ಹಿಂಸೆ ಮತ್ತು ಕ್ರೌರ್ಯ ಹೆಚ್ಚುತ್ತಿರುವ ಸಂದರ್ಭದಲ್ಲಿ ಅದಕ್ಕೆ ಉತ್ತರ ನೀಡಬಲ್ಲ ಶಕ್ತಿ ಅಂಬೇಡ್ಕರ್ ಅವರ ಬದುಕು ಮತ್ತು ಚಿಂತನೆಗಳಲ್ಲಿದೆ. ನಮ್ಮ ಬೌದ್ಧಿಕ ಸಂಕೋಲೆಗಳನ್ನು ಕಳಚಿಕೊಂಡು ಅವರ ವಿಚಾರಗಳನ್ನು ಅರ್ಥಮಾಡಿಕೊಳ್ಳಬೇಕು. ಇಂತಹ ಕೃತಿಗಳ ಮೂಲಕ ಅಂಬೇಡ್ಕರ್ ಚಿಂತನೆಗಳನ್ನು ಶೋಷಿತರು, ರೈತರು, ಮಹಿಳೆಯರು ಮತ್ತು ಕಾರ್ಮಿಕರಿಗೆ ತಲುಪಿಸಬೇಕು ಎಂದು ಕರೆ ನೀಡಿದರು.

ಪ್ರಾಧ್ಯಾಪಕ ಬಿ.ಎಲ್. ರಾಜು ಮಾತನಾಡಿ, ಅಂಬೇಡ್ಕರ್ ಅವರ ಜೀವನ ಚರಿತ್ರೆಯನ್ನು ಹಲವು ದಶಕಗಳಿಂದ ವಿವಿಧ ಕೃತಿಗಳ ಮೂಲಕ ಅಧ್ಯಯನ ಮಾಡಲಾಗುತ್ತಿದೆ. ಆದರೆ ಆಕಾಶ್ ಸಿಂಗ್ ರಾಥೋಡ್ ಅವರು ತಮ್ಮ ಸಂಶೋಧನೆಯ ಮೂಲಕ ಈವರೆಗೆ ಪ್ರಚಲಿತದಲ್ಲಿದ್ದ ಹಲವು ವಿಚಾರಗಳನ್ನು ಮರುಪರಿಶೀಲನೆಗೆ ಒಳಪಡಿಸಿದ್ದಾರೆ. ಅಂಬೇಡ್ಕರ್ ಅವರ ಹೆಸರು, ವ್ಯಕ್ತಿತ್ವ, ಶಿಕ್ಷಣ, ಚಿಂತನೆಗಳ ಬೆಳವಣಿಗೆ ಹಾಗೂ ಜೀವನದಲ್ಲಿ ಎದುರಿಸಿದ ಅವಮಾನಗಳ ಕುರಿತು ದಾಖಲೆಗಳ ಆಧಾರದಲ್ಲಿ ವಿಶ್ಲೇಷಿಸಿದ್ದಾರೆ ಎಂದರು.

ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಅಂಬೇಡ್ಕರ್ ಅವರ ಆಲೋಚನಾ ಕ್ರಮ ರೂಪುಗೊಂಡ ಬಗೆ, ಅವರು ಎದುರಿಸಿದ ಸಾಮಾಜಿಕ ಅವಮಾನಗಳನ್ನು ಮೀರಿ ವಿಶ್ವಮಟ್ಟದ ನಾಯಕನಾಗಿ ಬೆಳೆದ ಹಾದಿಯನ್ನು ಕೃತಿ ವಿವರಿಸುತ್ತದೆ. ಶ್ರೀನಿವಾಸ ದೊಡ್ಡೇರಿ ಅವರು ಈ ಕೃತಿಯನ್ನು ಕನ್ನಡದ ನೆಲಕ್ಕೆ ತಕ್ಕಂತೆ ಅನುವಾದಿಸಿರುವುದು ಮಹತ್ವದ ಸಾಧನೆ. ಕೃತಿಯನ್ನು ಓದುವಾಗ ಅಂಬೇಡ್ಕರ್ ಅವರ ವ್ಯಕ್ತಿತ್ವ ನಿರ್ಮಾಣದ ಪ್ರಕ್ರಿಯೆ ನಮ್ಮ ಕಣ್ಣಮುಂದೆ ತೆರೆದುಕೊಳ್ಳುತ್ತದೆ. ಅವರನ್ನು ‘ಆಧುನಿಕ ಭಾರತದ ನಿರ್ಮಾತೃ’ ಹಾಗೂ ‘ಭಾರತದ ವಿಮೋಚನಾ ಚಿಂತಕ’ ಎಂದು ಗುರುತಿಸಬೇಕು. ಅಂಬೇಡ್ಕರ್ ಶೋಷಿತ ಸಮುದಾಯಗಳಿಗೆ ನಿರಂತರ ಪ್ರೇರಣೆಯ ಶಕ್ತಿಯಾಗಿದ್ದಾರೆ ಎಂದು ಹೇಳಿದರು.

ಲೇಖಕ ಹಾಗೂ ಅನುವಾದಕ ಶ್ರೀನಿವಾಸ ದೊಡ್ಡೇರಿ ಮಾತನಾಡಿ, ಈ ಕೃತಿಯ ಅನುವಾದಕ್ಕೆ ಕೋಟಿಗಾನಹಳ್ಳಿ ರಾಮಯ್ಯ ಅವರ ಪುಸ್ತಕಗಳು, ರಾಜೇಂದ್ರ ಚೆನ್ನಿ ಅವರ ‘ದೊಡ್ಡ ಮರ’ ಕಥೆಗಳು ಸೇರಿದಂತೆ ಹಲವು ಕಥೆ, ಕವನ, ಲೇಖನಗಳು ಮತ್ತು ಭಾಷಣಗಳು ಸ್ಫೂರ್ತಿಯಾಗಿವೆ. ಅನುವಾದ ಮತ್ತು ಸಂಪಾದಕತ್ವ ಸಮಾಜದ ಚಿಂತನೆಗೆ ಮಹತ್ವದ ಕೊಡುಗೆ ನೀಡುತ್ತವೆ. ಮುಂದಿನ ದಿನಗಳಲ್ಲಿ ಬಾಬಾ ಸಾಹೇಬರ ಬದುಕು ಮತ್ತು ಚಿಂತನೆಗಳನ್ನು ಇನ್ನಷ್ಟು ತರ್ಕಬದ್ಧವಾಗಿ ಕನ್ನಡಕ್ಕೆ ತರುವ ಅಗತ್ಯವಿದೆ ಎಂದರು.

ಕಾರ್ಯಕ್ರಮದಲ್ಲಿ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದ ಆರ್. ಮಮತಾ, ರಮಾಬಾಯಿ ಮಹಿಳಾ ಒಕ್ಕೂಟದ ವಿಜಯಶ್ರೀ, ಆಕೃತಿ ಪ್ರಕಾಶನದ ಗುರುಪ್ರಸಾದ್, ವಿನ್ಯಾಸಕ ವಿಷ್ಣುಕುಮಾರ್, ಚಿಂತಕರಾದ ಯಾದವರೆಡ್ಡಿ, ಹಿರಿಯ ದಲಿತ ಹೋರಾಟಗಾರ ಹಾಗೂ ಚಿಂತಕ ಸಿ.ಕೆ. ಮಹೇಶ್ವರಪ್ಪ, ಅಂಬೇಡ್ಕರ್ ವಿಚಾರ ವೇದಿಕೆಯ ಡಾ. ವೇದಾಂತ್ ಎಳಂಜಿ, ಕೆ. ಸಿದ್ದೇಶ್, ಪ್ರಕಾಶ್ ಯಾದಲಗಟ್ಟಿ, ಶಿವಶಂಕರ್ ಸೀಗೆಹಟ್ಟಿ, ಮೋದೂರು ತೇಜ, ವಿಶ್ವಾನಂದ್, ಪ್ರಕಾಶ್, ರಮೇಶ್, ಸಿದ್ದಪ್ಪ, ರಾಜು, ಸೀನಪ್ಪ, ಭೀಮರಾಜು, ಕಿರಣ್, ಹನುಮಂತ, ಅನಿಲ್ ಜಂಬೆ, ಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿತ್ರದುರ್ಗದಲ್ಲಿ ಅ.26ರಂದು ವಾಲ್ಮೀಕಿ ಜಯಂತಿ: ಸರಳ ಆಚರಣೆಗೆ ಜಿಲ್ಲಾಡಳಿತ ಸಿದ್ಧತೆ

ಆಗ್ನೇಯ ಪದವೀಧರರ ಕ್ಷೇತ್ರದ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ, ಚಿತ್ರದುರ್ಗ...

ಚಿತ್ರದುರ್ಗ | ಮದ್ಯಮುಕ್ತ ಕರ್ನಾಟಕಕ್ಕೆ ಮಠಾಧೀಶರ ಒಗ್ಗಟ್ಟು: ಹಂತ ಹಂತವಾಗಿ ನಿಷೇಧಕ್ಕೆ ಆಗ್ರಹ

ರಾಜ್ಯದಲ್ಲಿ ಸಂಪೂರ್ಣ ಮದ್ಯನಿಷೇಧವನ್ನು ಹಂತ ಹಂತವಾಗಿ ಜಾರಿಗೊಳಿಸಬೇಕು, ಮದ್ಯಪಾನದಿಂದ ಸಂಕಷ್ಟಕ್ಕೆ ಸಿಲುಕುವ...

ಮೈಸೂರು ದಸರಾ ಜಂಬೂ ಸವಾರಿಯಲ್ಲಿ ಚಿತ್ರದುರ್ಗದ ‘ಖಾಸ ಬೇಡರ ಪಡೆ’ ಕಲರವ

ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಜಂಬೂ ಸವಾರಿಯಲ್ಲಿ ಈ ಬಾರಿ ಕೋಟೆನಾಡು...

ಹಿರಿಯೂರು ಉಪಚುನಾವಣೆ ಗೆಲುವಿಗೆ ಪ್ರತಿಯೊಬ್ಬ ಕಾರ್ಯಕರ್ತರೂ ಜವಾಬ್ದಾರಿ ವಹಿಸಬೇಕು : ಬಿ. ಕೆ. ಹರಿಪ್ರಸಾದ್

ಹಿರಿಯೂರು ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ಗೆಲುವು ಪಕ್ಷದ ಪ್ರತಿಯೊಬ್ಬ ಮುಖಂಡರು ಹಾಗೂ...