ಚಿತ್ತಾಪುರ | ಹಣ, ಮತಚೀಟಿ ಸಹಿತ ಐವರು ಬಿಜೆಪಿ ಕಾರ್ಯಕರ್ತರ ವಶ; ತಪಾಸಣೆ ಬಳಿಕ ಕ್ರಮಕ್ಕೆ ಸೂಚನೆ

Date:

ವಿಧಾನಸಭಾ ಚುನಾವಣೆ ಮತದಾನಕ್ಕೆಂದು ಸ್ಥಾಪಿಸಿರುವ ಮತಗಟ್ಟೆ ಸಂಖ್ಯೆ 83 ಮತ್ತು 84ರ ಸಮೀಪ ಹಣ ಮತ್ತು ಮತಚೀಟಿ ಸಹಿತ ಐವರನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ಚಿತ್ತಾಪುರ ಕ್ಷೇತ್ರದಲ್ಲಿ ನಡೆದಿದೆ.

ಕಲಬುರಗಿ ಜಿಲ್ಲೆಯ ಚಿತ್ತಾಪುರ ವಿಧಾನಸಭಾ ಕ್ಷೇತ್ರದ ಮತಗಟ್ಟೆ ಸಂಖ್ಯೆ 83 ಮತ್ತು 84ರ ಬಳಿ ಮಧ್ಯಾಹ್ನ 1ರ ವೇಳೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಇಶಾ ಪಂತ್ ಅವರು ಮತದಾನ ಕೇಂದ್ರದತ್ತ ತೆರಳುವಾಗ ಬಾಹರಪೇಠದ ಬಸವಣ್ಣ ದೇವಸ್ಥಾನ ಸಮೀಪ‌ ಹಲವರು ನಿಂತಿದ್ದರು. ಎಸ್‌ಪಿ ಅವರ ಕಾರು ನೋಡುತ್ತಿದ್ದಂತೆ ಚದುರಿದ್ದಾರೆ.

ಹಣ ಹಂಚುತ್ತಿರಬೇಕೆಂದು ಭಾವಿಸಿದ ಪೊಲೀಸರು ಓಡುತ್ತಿದ್ದವರನ್ನು ಬೆನ್ನಟ್ಟಿದ್ದರು. ಕೆಲವರು ಬಸವಣ್ಣ ದೇವಸ್ಥಾನದ ಕಲ್ಯಾಣ ಮಂಟಪ ಸೇರಿಕೊಂಡರು ಎಂದು ತಿಳಿದುಬಂದಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

“ಗುಂಪು ಕಟ್ಟಿಕೊಂಡು ನಿಂತಿದ್ದವರನ್ನು ಬೆನ್ನಟ್ಟಿ ಹಿಡಿದು ತಪಾಸಣೆ ಮಾಡಿದಾಗ ಹಣ ಮತ್ತು ಮತಚೀಟಿಗಳು ದೊರೆತಿವೆ. ಕೆಲವರು ಬಯಲಿನಲ್ಲಿ ಗಿಡದ ನೆರಳಿನಲ್ಲಿ ನಿಂತಾಗ ವಶಕ್ಕೆ ಪಡೆದು ತಪಾಸಣೆ ಮಾಡಿದಾಗ ಜೇಬಿನಲ್ಲಿ ಹಣ, ಮತಚೀಟಿ ಪತ್ತೆಯಾಗಿವೆ” ಎಂದು ಪೊಲೀಸರು ತಿಳಿಸಿದ್ದಾರೆ.

ಹಣ ಮತ್ತು ಮತಚೀಟಿ ಇಟ್ಟುಕೊಂಡವರನ್ನು ಎಸ್‌ಪಿ ಇಶಾಪಂತ್‌ ತರಾಟೆಗೆ ತೆಗೆದುಕೊಂಡಿದ್ದು, “ಜಿಲ್ಲಾಡಳಿತ ನ್ಯಾಯಸಮ್ಮತ, ನಿರ್ಭೀತ ಮುಕ್ತ ಮತದಾನಕ್ಕೆ ಪರಿಶ್ರಮ ಪಡುತ್ತಿದೆ. ಮತದಾರರ ಓಲೈಕೆಗೆ ಹಣ ಹಂಚಲು ನಿಮಗೆ ನಾಚಿಕೆಯಾಗುವುದಿಲ್ಲವೇ?” ಎಂದು ಕಿಡಿಕಾರಿದ್ದಾರೆ.

ಐವರ ಹತ್ತಿರ ಪತ್ತೆಯಾಗಿರುವ ಹಣ, ಮತಚೀಟಿ ವಶಕ್ಕೆ ಪಡೆದಿದ್ದು, ಸ್ಥಳೀಯ ಪೊಲೀಸ್ ಠಾಣೆಯ ಪಿಎಸ್ಐ ನಂದಕುಮಾರ ಅವರನ್ನು ಘಟನಾ ಸ್ಥಳಕ್ಕೆ ಕರೆಯಿಸಿಕೊಂಡು, “ಎಲ್ಲರನ್ನೂ ವಿಡಿಯೋ ರೆಕಾರ್ಡಿಂಗ್ ಮೂಲಕ ತಪಾಸಣೆ ಮಾಡಿ ಎಫ್ಐಆರ್ ದಾಖಲಿಸಿ, ಕ್ರಮ ಕೈಗೊಳ್ಳಬೇಕು” ಎಂದು ಸೂಚಿಸಿದರು.

ಫ್ಲೈಯಿಂಗ್ ಸ್ಕ್ವಾಡ್ ತಂಡದ ಅಧಿಕಾರಿ ಪಂಡಿತ್ ಸಿಂಧೆ ಅವರನ್ನು ಕರೆಯಿಸಿಕೊಂಡು, ಪತ್ತೆಯಾದ ಹಣ, ಮತಚೀಟಿ ಅವರ ವಶಕ್ಕೆ ಒಪ್ಪಿಸಿದ ಪಂತ್ ಅವರು, ಪರಿಶೀಲನೆ ನಡೆಸಿ, ತಪಾಸಣೆ ಮಾಡಿ ಠಾಣೆಗೆ ದೂರು ನೀಡಿ ಪ್ರಕರಣ ದಾಖಲಿಸುವಂತೆ ತಿಳಿಸಿದ್ದಾರೆ.

“ಚುನಾವಣೆಯಲ್ಲಿ ಮತದಾರರಿಗೆ ಆಮಿಷ‌ ಒಡ್ಡುವುದಾಗಲಿ, ಮತ ಗಳಿಕೆಗೆ ಮತದಾರರಿಗೆ ಹಣ ಹಂಚುವುದು ಕಾನೂನು ಪ್ರಕಾರ ಅಪರಾಧ. ವಶಕ್ಕೆ ಪಡೆದ ಐದು ಜನರ ವಿರುದ್ಧ ಯಾವುದೇ ಮುಲಾಜಿಲ್ಲದೆ ಕಾನೂನು ಕ್ರಮ ಜರುಗಿಸುತ್ತೇವೆ” ಎಂದು ಎಸ್.ಪಿ ಇಶಾ ಪಂತ್ ಎಚ್ಚರಿಕೆ ನೀಡಿದ್ದಾರೆ.

“ಜಿಲ್ಲಾ ಕೇಂದ್ರದಿಂದ ನೀವೇ ಆಗಮಿಸಿ ಇಂತಹ ಪ್ರಕರಣ ಪತ್ತೆ ಮಾಡಿದ್ದೀರಿ. ಸ್ಥಳೀಯ ಪೊಲೀಸರ ವೈಫಲ್ಯವಲ್ಲವೇ” ಎನ್ನುವ ಪ್ರಶ್ನೆಗೆ ಉತ್ತರಿಸಿದ ಇಶಾ ಪಂತ್ ಅವರು, “ಸ್ಥಳೀಯ ಪೊಲೀಸ್ ಅಧಿಕಾರಿಗಳು ಚುನಾವಣೆಯ ಕರ್ತವ್ಯದ ನಿಮಿತ್ತ ಎಲ್ಲೆಡೆ ಸಂಚರಿಸಿ ನಿಗಾ ವಹಿಸುವ ಅನಿವಾರ್ಯತೆಯಿದೆ. ಹೀಗಾಗಿ ಜನರು ಮತದಾನ ನಡೆಯುವ ಸಮಯ ಮತ್ತು ಮತಗಟ್ಟೆ ಹತ್ತಿರ ಹಣದ ಸಹಿತ ಮತಚೀಟಿ ಇಟ್ಟುಕೊಂಡು ಮತದಾರರನ್ನು ಓಲೈಸುವ ಕೆಲಸ ಮಾಡುತ್ತಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸುತ್ತೇವೆ” ಎಂದು ಹೇಳಿದ್ದಾರೆ.

ಈ ಸುದ್ದಿ ಓದಿದ್ದೀರಾ? ಕಲಬುರಗಿ | ಬಿಜೆಪಿ ಡೇಟಾ ಕಾಲ್ ಸೆಂಟರ್ ಮೇಲೆ ಪೊಲೀಸರ ದಾಳಿ

“ತಪಾಸಣೆ ಬಳಿಕ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿ ನೀಡುವ ದೂರು ಆಧರಿಸಿ ನ್ಯಾಯಾಲಯದ ಅನುಮತಿ ಪಡೆದುಕೊಂಡು ಠಾಣಾಧಿಕಾರಿಯು ಎಫ್ಐಆರ್ ದಾಖಲಿಸುತ್ತಾರೆ” ಎಂದು ಹೇಳಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಇಶಾ ಪಂತ್ ಅವರು ವಶಕ್ಕೆ ಪಡೆದಿರುವ ಐದು ಮಂದಿ ಬಿಜೆಪಿ ಕಾರ್ಯಕರ್ತರು ಎಂದು ಪೊಲೀಸರು ತಿಳಿಸಿದ್ದಾರೆ.

ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಕಾರ್ಯಕರ್ತರು ಮತದಾರರಿಗೆ ಹಣ ಹಂಚಲು ಲಕೋಟೆಯಲ್ಲಿ(ಎನ್ವಲಪ್ ಕವರ್)‌ ಹಣ ಹಾಕಿ ಜೇಬಿನಲ್ಲಿ ಇಟ್ಟುಕೊಂಡಿದ್ದನ್ನು ಕಾಂಗ್ರೆಸ್‌ ಕಾರ್ಯಕರ್ತರು ಪತ್ತೆ ಹಚ್ಚಿದ್ದು, ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿತ್ರದುರ್ಗ | ಯಡಿಯೂರಪ್ಪ ಕಾರಣದಿಂದ ನನ್ನ ಮಗನಿಗೆ ಟಿಕೆಟ್ ತಪ್ಪಿದೆ: ಶಾಸಕ ಚಂದ್ರಪ್ಪ

ರಘು ಚಂದನ್‌ಗೆ ಬಿಜೆಪಿ ಟಿಕೆಟ್ ತಪ್ಪಿದ ಹಿನ್ನಲೆ ಶಾಸಕ ಎಂ ಚಂದ್ರಪ್ಪ...

ಧಾರವಾಡ | ‘ದಿಂಗಾಲೇಶ್ವರ ಸ್ವಾಮೀಜಿ ನೀಡಿದ ಹೇಳಿಕೆಗೂ, ಮುರುಘಾಮಠಕ್ಕೂ ಯಾವುದೇ ಸಂಬಂಧವಿಲ್ಲ’

ಮಾರ್ಚ್ 27ರಂದು ಹುಬ್ಬಳ್ಳಿ ಮೂರುಸಾವಿರ ಮಠದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ...

ಬೆಂಗಳೂರು | ಐಟಿ, ಬಿಟಿ ಕಂಪನಿಗಳಿಗೆ ಸಮರ್ಪಕ ನೀರು ಪೂರೈಕೆಗೆ ಬದ್ಧ: ಜಲಮಂಡಳಿ ಅಧ್ಯಕ್ಷ

“ಬೆಂಗಳೂರಿನ ಇತರೆ ಪ್ರದೇಶಗಳಂತೆಯೇ, ನಗರದ ಹೊರವಲಯದಲ್ಲಿರುವ ಐಟಿ-ಬಿಟಿ ಕಂಪನಿಗಳಿಗೂ ನೀರಿನ ಕೊರತೆಯಾಗದಂತೆ...