ದಕ್ಷಿಣ ಕನ್ನಡ | ದಂಡ ಹಾಕಿದ್ದಕ್ಕೆ ಆಕ್ರೋಶ; ಪೊಲೀಸ್‌ ಜೀಪ್‌ಗೆ ಬೆಂಕಿ ಹಚ್ಚಲು ಮುಂದಾದ ಆಟೋ ಚಾಲಕ

0
74

ಕಾನೂನು ಬಾಹಿರವಾಗಿ ಆಟೋ ರಿಕ್ಷಾ ಓಡಿಸುತ್ತಿದ್ದ ವ್ಯಕ್ತಿಯೋರ್ವನನ್ನು ಟ್ರಾಫಿಕ್ ಪೊಲೀಸರು ತಡೆದು ದಂಡ ಹಾಕಿದ್ದರು. ಈ ಹಿನ್ನೆಲೆಯಲ್ಲಿ ಆವೇಶಕ್ಕೊಳಗಾದ ಚಾಲಕ ಟ್ರಾಫಿಕ್ ಎಸ್‌ಐ ಹಾಗೂ ಸರ್ಕಾರಿ ‌ವಾಹನಕ್ಕೆ ಮತ್ತು ಆಟೋ ರಿಕ್ಷಾಕ್ಕೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲು ಮುಂದಾದ ಘಟನೆ‌ ದಕ್ಷಿಣ ಕನ್ನಡ ಜಿಲ್ಲೆಯ ಬಿಸಿರೋಡಿನ ‌ಕೈಕಂಬ ಎಂಬಲ್ಲಿ ಸೋಮವಾರ ಬೆಳಗ್ಗೆ ಘಟನೆ ನಡೆದಿದೆ.

ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಲ್ಲದೆ ಸಾರ್ವಜನಿಕವಾಗಿ ಪೆಟ್ರೋಲ್ ಸುರಿದು ಬೆಂಕಿ ಹಾಕಿ ಅನಾಹುತಕ್ಕೆ ಕಾರಣನಾದ ಚಾಲಕನ ವಿರುದ್ಧ ಬಂಟ್ವಾಳ ನಗರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಗೂಡಿನಬಳಿ ನಿವಾಸಿ ಮಹಮ್ಮದ್ ಅನ್ಸಾರ್ ಪ್ರಕರಣದ ಆರೋಪಿಯಾಗಿದ್ದು, ಸದ್ಯ ತಲೆಮರೆಸಿಕೊಂಡಿದ್ದಾನೆ. ಟ್ರಾಫಿಕ್ ಎಸ್‌ಐ ಸುತೇಶ್ ಅವರು ಕೈಕಂಬದಲ್ಲಿ ವಾಹನಗಳ ತಪಾಸಣಾ ಕಾರ್ಯದಲ್ಲಿ ತೊಡಗಿದ್ದ ವೇಳೆ, ಯೂನಿಫಾರ್ಮ್( ಡ್ರೆಸ್ ಕೋಡ್) ಹಾಕದೆ ಮೊಬೈಲ್‌ನಲ್ಲಿ ಮಾತನಾಡಿಕೊಂಡು ರಿಕ್ಷಾ ಓಡಿಸುತ್ತಿದ್ದ ಚಾಲಕನನ್ನು ನಿಲ್ಲಿಸಿ, ಆತನ ಮೇಲೆ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ ಕಾರಣಕ್ಕಾಗಿ ₹2,000 ದಂಡ ಹಾಕಿ ನೋಟಿಸ್ ನೀಡಿದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಈ ಸುದ್ದಿ ಓದಿದ್ದೀರಾ? ಕಲಬುರಗಿ | ವಸತಿ ನಿಲಯದಲ್ಲಿ ಬಾಲಕಿ ಆತ್ಮಹತ್ಯೆ; ವಾರ್ಡನ್‌ ವಿರುದ್ಧ ಪ್ರಕರಣ ದಾಖಲು

ಇದೇ ಕಾರಣದಿಂದ ಸಾರ್ವಜನಿಕವಾಗಿ ಬೀದಿ ರಂಪಾಟ ಮಾಡಿ, ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಅನ್ಸಾರ್ ಬಳಿಕ ರಿಕ್ಷಾವನ್ನು ಪೊಲೀಸರ ಎದುರಿನಲ್ಲಿಯೇ ಸುಟ್ಟುಹಾಕುವುದಾಗಿ ಬೆದರಿಸಿದ. ಬಳಿಕ ಎಸ್‌ಐ ಹಾಗೂ ಜೀಪ್ ಮೇಲೆ ಪೆಟ್ರೋಲ್ ಸುರಿದು ಬೆಂಕಿ ನೀಡಲು ಮುಂದಾದ. ಎಸ್‌ಐ ಅವರು ಆತನ ಮೇಲೆ ದೂರು ನೀಡಿದ್ದು, ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

LEAVE A REPLY

Please enter your comment!
Please enter your name here